Mark Box Office Day 2: ಫಸ್ಟ್ ಡೇ ದಾಖಲೆ ಗಳಿಕೆ.. 2ನೇ ದಿನ 'ಮಾರ್ಕ್' ಕಲೆಕ್ಷನ್ ಎಷ್ಟಾಯ್ತು?
ಕಿಚ್ಚ ಸುದೀಪ್ ಸಿನಿಮಾ 'ಮಾರ್ಕ್' ಮೊದಲ ದಿನ ಭರ್ಜರಿ ಕಲೆಕ್ಷನ್ ಆಗಿತ್ತು. ನಿರೀಕ್ಷೆ ಮಾಡಿದಂತೆ ಕ್ರಿಸ್‌ಮಸ್ ರಜೆ ಉತ್ತಮ ಗಳಿಕೆಗೆ ಮಾಡುವಲ್ಲಿ ಸಹಾಯಕಾರಿ ಆಗಿತ್ತು. ಕಿಚ್ಚನ ಮಾಸ್ ಲುಕ್ ಹಾಗೂ ವಿಜಯ್ ಕಾರ್ತಿಕೇಯ ನಿರ್ದೇಶನ ಪ್ರೇಕ್ಷಕರನ್ನು ಥಿಯೇಟರ್ ಹತ್ತಿರ ಸೆಳೆದಿತ್ತು. ಇನ್ನೊಂದು ಕಡೆ ಡಿಸೆಂಬರ್ ತಿಂಗಳು ಕನ್ನಡ ಚಿತ್ರರಂಗಕ್ಕೆ ಲಕ್ಕಿ. ಈ ತಿಂಗಳಲ್ಲಿ ರಿಲೀಸ್ ಆದ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ದಾಖಲೆ ಬರೆದಿವೆ. ಹೊಸ ಇತಿಹಾಸವನ್ನು ಸೃಷ್ಟಿಸಿದೆ. ಈಗ 'ಮಾರ್ಕ್' ಕೂಡ ಅದೇ ಸಾಲಿಗೆ ಸೇರುತ್ತಾ? ಅನ್ನೋದು ಲೆಕ್ಕಾಚಾರದಲ್ಲಿ ಸಿನಿಮಾ ಮಂದಿ ಇದ್ದಾರೆ.
ಕಳೆದ ವರ್ಷ ಇದೇ ದಿನ ರಿಲೀಸ್ ಆಗಿದ್ದ 'ಮ್ಯಾಕ್ಸ್' ಕಿಚ್ಚನಿಗೆ ಯಶಸ್ಸು ತಂದುಕೊಟ್ಟಿತ್ತು. ಆದ್ರೀಗ 'ಮಾರ್ಕ್' ಸರದಿ. ಡಿಸೆಂಬರ್ 25ರಂದು ಕ್ರಿಸ್‌ಮಸ್‌ಗೆ ತೆರೆಕಂಡಿರೋ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಹೊಸ ದಾಖಲೆ ಸೃಷ್ಟಿಸುವತ್ತ ಮುನ್ನಡೆಯುತ್ತಿದೆ. ಫಸ್ಟ್ ಡೇ 'ಮಾರ್ಕ್' ಭರವಸೆಯನ್ನು ಮೂಡಿಸಿದೆ. ಅದೇ 2ನೇ ದಿನವೂ ಅದೇ ಕಲೆಕ್ಷನ್ ಮುಂದುವರೆದಿದೆಯಾ? ಈ ಪ್ರಶ್ನೆಗೆ ಉತ್ತರ ಸಿಕ್ಕಿದೆ.

ಅಷ್ಟಕ್ಕೂ ಫಸ್ಟ್ ಡೇ 'ಮಾರ್ಕ್' ಬಾಕ್ಸಾಫೀಸ್ ಕಲೆಕ್ಷನ್ ಬಗ್ಗೆ ಬೇರೆ ಬೇರೆ ಮೂಲಗಳಿಂದ ಹಲವು ವರದಿಗಳು ಬಂದಿದ್ದವು. ಸ್ಯಾಕ್ನಿಲ್ಕ್, ಕರ್ನಾಟಕದ ವಿತರಕರ ವಲಯ ಹಾಗೂ ನಿರ್ಮಾಣ ಸಂಸ್ಥೆಯಿಂದ ಒಂದೊಂದು ಲೆಕ್ಕಗಳು ಸಿಕ್ಕಿದ್ದವು. ಇನ್ನು 2ನೇ ದಿನ 'ಮಾರ್ಕ್' ಕಲೆಕ್ಷನ್ ಹೇಗಿದೆ? ಮೊದಲ ದಿನದಷ್ಟೇ ಕಲೆಕ್ಷನ್ ಆಗಿದೆಯಾ? ಕಲೆಕ್ಷನ್‌ನಲ್ಲಿ ಡ್ರಾಪ್ ಆಗಿದೆಯಾ? ತಿಳಿಯುವುದಕ್ಕೆ ಮುಂದೆ ಓದಿ.
'ಮಾರ್ಕ್' 2ನೇ ದಿನದ ಕಲೆಕ್ಷನ್ ಎಷ್ಟು?
ಕಿಚ್ಚ ಸುದೀಪ್ ಸಿನಿಮಾ 'ಮಾರ್ಕ್' ಕಲೆಕ್ಷನ್ ಮೇಲೆ ಸಿನಿಮಾ ಮಂದಿ ಕಣ್ಣಿಟ್ಟಿದ್ದಾರೆ. 'ಮ್ಯಾಕ್ಸ್' ಮೆಗಾ ಸಕ್ಸಸ್ ಬಳಿಕ 'ಮಾರ್ಕ್' ಕೂಡ ಮೊದಲ ದಿನ ಭರ್ಜರಿ ಗಳಿಕೆ ಮಾಡಿದೆ. ನಿರ್ಮಾಣ ಸಂಸ್ಥೆ ಮಾಹಿತಿ ಪ್ರಕಾರ, 'ಮಾರ್ಕ್' ಮೊದಲ ದಿನ ₹15.9 ಕೋಟಿ ಕಲೆಕ್ಷನ್ ಮಾಡಿತ್ತು. ಇನ್ನು ಸ್ಯಾಕ್ನಿಲ್ಕ್ ವರದಿ ಪ್ರಕಾರ 2ನೇ ದಿನ ₹3.50 ಕೋಟಿ ಕಲೆಕ್ಷನ್ ಮಾಡಿದೆ. ಆದರೆ, ಇದು ಆರಂಭಿಕ ಅಂದಾಜು ಲೆಕ್ಕ ಅಷ್ಟೇ ಎಂದು ವರದಿ ಮಾಡಿದೆ. ಇನ್ನು ಕರ್ನಾಟಕದ ವಿತರಕರ ವಲಯದಲ್ಲಿ ₹3.90 ಕೋಟಿ ಎಂದು ಚರ್ಚೆಯಾಗುತ್ತಿದೆ.
ಯಾವ್ಯಾವ ಏರಿಯಾಗಳಲ್ಲಿ ಹೇಗಿದೆ ಕಲೆಕ್ಷನ್?
'ಮಾರ್ಕ್' ಮೊದಲ ದಿನದ ಬಾಕ್ಸಾಫೀಸ್ ಕಲೆಕ್ಷನ್ ಕಂಡು ಥಿಯೇಟರ್ ಮಾಲೀಕರು ಖುಷಿಯಾಗಿದ್ದರು. ಮೊದಲ ದಿನ ಶೋಗಳ ಸಂಖ್ಯೆ ಸಾಮಾನ್ಯವಾಗಿ ಹೆಚ್ಚಿರುತ್ತೆ. ಆದರೆ, ಎರಡನೇ ದಿನಕ್ಕೆ ಅದು ಕಡಿಮೆಯಾಗುತ್ತೆ. ಹೀಗಾಗಿ ಕಲೆಕ್ಷನ್ ಸಾಮಾನ್ಯವಾಗಿ ಕಮ್ಮಿಯಾಗುತ್ತೆ. ಹೀಗಾಗಿ 2ನೇ ದಿನ ಶೇ.50ರಷ್ಟು ಡ್ರಾಪ್ ಆಗಿದೆ. ವೀಕೆಂಡ್‌ನಲ್ಲಿ ಮತ್ತೆ ಏರಿಕೆ ಆಗುವ ನಿರೀಕ್ಷೆಯಿದೆ. ಕರ್ನಾಟಕದ ವಿತರಕರ ಪ್ರಕಾರ ಎಲ್ಲೆಲ್ಲಿ ಎಷ್ಟೆಷ್ಟು ಕಲೆಕ್ಷನ್ ಆಗಿದೆ ಎಂದು ನೋಡುವುದಾರೇ,
ಬೆಂಗಳೂರು, ಕೋಲಾರ, ತುಮಕೂರು ಶೇ.60
ಮಂಡ್ಯ, ಮೈಸೂರು, ಚಾಮರಾಜನಗರ, ಹಾಸನ ಶೇ.13
ಚಿತ್ರದುರ್ಗ-ದಾವಣಗೆರೆ ಶೇ.7
ಹುಬ್ಬಳ್ಳಿ ಶೇ.10
ಶಿವಮೊಗ್ಗ-ದಕ್ಷಿಣ ಕನ್ನಡ ಶೇ.7
ಹೈದರಾಬಾದ್ ಕರ್ನಾಟಕ ಶೇ.3
ವೀಕೆಂಡ್ ಕಲೆಕ್ಷನ್ ಮೇಲೆ ಕಣ್ಣು
'ಮಾರ್ಕ್' ಸಿನಿಮಾ 2ನೇ ದಿನ ವರ್ಕಿಂಗ್ ಡೇ ಆಗಿದ್ದರಿಂದ ಕಲೆಕ್ಷನ್‌ನಲ್ಲಿ ಡ್ರಾಪ್ ಆಗಿದೆ. ಆದರೆ, ಇಂದಿನಿಂದ ವೀಕೆಂಡ್ ಆರಂಭ ಆಗುತ್ತೆ. ಹೀಗಾಗಿ ಶನಿವಾರ ಹಾಗೂ ಭಾನುವಾರ ಈ ಎರಡೂ ದಿನ ದೊಡ್ಡ ಮಟ್ಟದಲ್ಲಿ ಸಿನಿಮಾದ ಕಲೆಕ್ಷನ್ ಆಗುತ್ತೆ ಎಂದು ನಿರೀಕ್ಷೆ ಮಾಡಲಾಗಿದೆ. ಒಂದು ಅಂದಾಜಿನ ಪ್ರಕಾರ 'ಮಾರ್ಕ್' ಮೊದಲ ನಾಲ್ಕು ದಿನಗಳಲ್ಲಿ 25 ರಿಂದ 30 ಕೋಟಿ ರೂಪಾಯಿ ಕಲೆಕ್ಷನ್ ಆಗುವ ಸಾಧ್ಯತೆಯಿದೆ.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು ಬೇರೆ ಮೂಲಗಳು, https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications











