Mark Box Office Day 3: ಬಾಕ್ಸಾಫೀಸ್‌ನಲ್ಲಿ 3ನೇ ದಿನ ಅಬ್ಬರಿಸಿತೇ 'ಮಾರ್ಕ್'? ₹25 ಕೋಟಿ ಕ್ಲಬ್ ಸೇರಿತೇ?

ಕಿಚ್ಚ ಸುದೀಪ್ ಅಭಿನಯದ 'ಮಾರ್ಕ್' ಸಿನಿಮಾ ಕ್ರಿಸ್‌ಮಸ್‌ಗೆ ರಿಲೀಸ್ ಆಗಿದೆ. ಬ್ಯಾಕ್ ಟು ಬ್ಯಾಕ್ ರಜೆಯ ಮೂಡ್‌ನಲ್ಲಿರುವ ಪ್ರೇಕ್ಷಕರಿಗೆ ಭರಪೂರ ಮನರಂಜನೆ ನೀಡುವುದಕ್ಕೆ ಕಿಚ್ಚ ಸುದೀಪ್ ಅಖಾಡಕ್ಕೆ ಇಳಿದಿದ್ದಾರೆ. ಕಳೆದ ವರ್ಷ ಇದೇ ಸಮಯದಲ್ಲಿ 'ಮ್ಯಾಕ್ಸ್' ಕಿಚ್ಚನ ಕೈ ಹಿಡಿದಿತ್ತು. ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಕೋಟಿ ಲೆಕ್ಕದಲ್ಲಿ ದೋಚಿತ್ತು. ಈಗ 'ಮಾರ್ಕ್' ಕೂಡ ಅದೇ ಅಷ್ಟೇ ಯಶಸ್ಸು ಕೊಡಬಹುದೆಂಬ ನಿರೀಕ್ಷೆಯಲ್ಲಿದ್ದಾರೆ.

ಮೊದಲ ದಿನ 'ಮಾರ್ಕ್' ಕಲೆಕ್ಷನ್ ಜೋರಾಗಿತ್ತು. ನಿರ್ಮಾಣ ಸಂಸ್ಥೆ ಕೊಟ್ಟ ಲೆಕ್ಕ ₹15.9 ಕೋಟಿ ಆಗಿತ್ತು. 'ಮ್ಯಾಕ್ಸ್‌'ಗೆ ಹೋಲಿಕೆ ಮಾಡಿದರೆ, ಈ ಸಿನಿಮಾ ಶೇ. 25ರಷ್ಟು ಹೆಚ್ಚು ಕಲೆಕ್ಷನ್ ಮಾಡಿದೆ ಎಂದಿತ್ತು. ಆದರೆ, ಎರಡನೇ ದಿನದಿಂದ ಸಿನಿಮಾ ಕಲೆಕ್ಷನ್‌ನಲ್ಲಿ ಡ್ರಾಪ್ ಆಗಿದೆ. ಸಹಜವಾಗಿ ಎರಡನೇ ದಿನ ಇಳಿಕೆಯಾಗುತ್ತೆ. ಆದರೆ, ಮತ್ತೆ ವೀಕೆಂಡ್‌ನಲ್ಲಿ ಏರಿಕೆಯಾಗುತ್ತೆ.

Kichcha Sudeep Movie Mark day 3 box office collection report

2025 ಕೊನೆಯಲ್ಲಿ ಕನ್ನಡ ಚಿತ್ರರಂಗಕ್ಕೆ 'ಮಾರ್ಕ್' ಲಾಭದಾಯಕವಾಗುತ್ತಾ? ಅನ್ನೋ ನಿರೀಕ್ಷೆಯಲ್ಲಿ ಚಿತ್ರರಂಗವಿದೆ. ವೀಕೆಂಡ್‌ನಲ್ಲಿ 'ಮಾರ್ಕ್' ಕಲೆಕ್ಷನ್ ಎಷ್ಟಾಗುತ್ತೆ ಅನ್ನೋದರ ಮೇಲೆ ಬಾಕ್ಸಾಫೀಸ್ ಕಲೆಕ್ಷನ್ ನಿರ್ಧಾರ ಆಗಿದೆ. ಹಾಗಿದ್ದರೆ, 'ಮಾರ್ಕ್' 3ನೇ ದಿನ ಬಾಕ್ಸಾಫೀಸ್‌ನಲ್ಲಿ ಗಳಿಸಿದ್ದೆಷ್ಟು? ಮೂರು ದಿನಗಳ ಒಟ್ಟು ಕಲೆಕ್ಷನ್ ಎಷ್ಟು? ವೀಕೆಂಡ್‌ನಲ್ಲಿ ದಾಖಲೆ ಬರೆಯುತ್ತಾ? ತಿಳಿಯುವುದಕ್ಕೆ ಮುಂದೆ ಓದಿ.


'ಮಾರ್ಕ್' 3ನೇ ದಿನದ ಕಲೆಕ್ಷನ್

ರಜೆಯ ಮೂಡ್‌ನಲ್ಲಿರುವ ಪ್ರೇಕ್ಷಕರಿಗೆ ಮನರಂಜನೆ ನೀಡುವುದಕ್ಕೆ 'ಮಾರ್ಕ್' ಥಿಯೇಟರ್‌ಗೆ ಲಗ್ಗೆ ಇಟ್ಟಿದೆ. ಮೊದಲ ದಿನ ₹15.9 ಕೋಟಿ ಗಳಿಸಿದರೇ, ಎರಡನೇ ದಿನ ₹3.20 ಕೋಟಿ ಕಲೆಕ್ಷನ್ ಆಗಿತ್ತು. ಸ್ಯಾಕ್ನಿಲ್ಕ್ ಪ್ರಕಾರ 3ನೇ ದಿನ ₹3.25 ಕೋಟಿ ಕಲೆಕ್ಷನ್ ಮಾಡಿದೆ ಎಂದು ವರದಿ ಮಾಡಿದೆ. ಹೀಗಾಗಿ ಎರಡನೇ ದಿನಕ್ಕೂ ಮೂರನೇ ದಿನಕ್ಕೂ ಹೆಚ್ಚಿನ ವ್ಯತ್ಯಾಸವೇನಿಲ್ಲ. ಇನ್ನು ಭಾನುವಾರದ ಕಲೆಕ್ಷನ್ ಮೇಲೆ ನಿರ್ಧಾರ ಆಗಿದೆ.

'ಮಾರ್ಕ್' 3 ದಿನಗಳ ಕಲೆಕ್ಷನ್ ಎಷ್ಟು?

'ಮಾರ್ಕ್' ಕಲೆಕ್ಷನ್ 3ನೇ ದಿನ ಏರಿಕೆಯಾಗಿದೆ. ಶನಿವಾರ ಜನರು ಥಿಯೇಟರ್‌ ಕಡೆಗೆ ಮುಖ ಮಾಡುತ್ತಿದ್ದಾರೆ. ಸಂಜೆಯ ಶೋಗಳು ಹೌಸ್‌ಫುಲ್ ಆಗಿತ್ತು. ಹೀಗಾಗಿ ಭಾನುವಾರದ ಕಲೆಕ್ಷನ್‌ನಲ್ಲಿ ಏರಿಕೆಯಾಗಬಹುದೆಂದು ಟ್ರೇಡ್ ಎಕ್ಸ್‌ಪರ್ಟ್‌ಗಳು ಲೆಕ್ಕಾಚಾರ ಹಾಕಿದ್ದಾರೆ. ಕರ್ನಾಟಕದ ವಿತರಕರ ಪ್ರಕಾರ, 'ಮಾರ್ಕ್' ಸಿನಿಮಾ ₹2.70 ಕೋಟಿ ಆಗಿದೆ. ಹೀಗಾಗಿ 'ಮಾರ್ಕ್' ಬಾಕ್ಸಾಫೀಸ್‌ ಕಲೆಕ್ಷನ್‌ನಲ್ಲಿ ವ್ಯತ್ಯಾಸ ಕಾಣಬಹುದು. ಒಟ್ಟು 3 ದಿನಗಳ ಕಲೆಕ್ಷನ್ ಹೀಗಿದೆ.

1ನೇ ದಿನ ₹15.9 ಕೋಟಿ (ನಿರ್ಮಾಣ ಸಂಸ್ಥೆ ಲೆಕ್ಕ)
2ನೇ ದಿನ ₹3.20 ಕೋಟಿ (ಸ್ಯಾಕ್ನಿಲ್ಕ್)
3ನೇ ದಿನ ₹3.25 ಕೋಟಿ (ಸ್ಯಾಕ್ನಿಲ್ಕ್)
ಒಟ್ಟು ₹22.35 ಕೋಟಿ

Kichcha Sudeep Movie Mark day 3 box office collection report

ಭಾನುವಾರ ಲೆಕ್ಕಾಚಾರವೇನು?

'ಮಾರ್ಕ್' ಮೊದಲ ಮೂರು ದಿನ ಉತ್ತಮ ಕಲೆಕ್ಷನ್ ಮಾಡಿದೆ. ಹಾಗೇ ನಾಲ್ಕನೇ ದಿನವಾದ ಭಾನುವಾರ ಕೂಡ ಅದ್ಧೂರಿ ಕಲೆಕ್ಷನ್ ಮಾಡಬೇಕಿದೆ. ಟ್ರೇಡ್ ಎಕ್ಸ್‌ಪರ್ಟ್‌ಗಳ ಪ್ರಕಾರ ಭಾನುವಾರ ₹5 ರಿಂದ ₹6 ಕೋಟಿ ರೂಪಾಯಿ ಕಲೆಕ್ಷನ್ ಆಗುವ ಸಾಧ್ಯತೆಯಿದೆ. ಈ ಮಟ್ಟಿಗೆ ಕಲೆಕ್ಷನ್ ಆದರೆ, ₹26 ರಿಂದ ₹28 ಕೋಟಿ ರೂಪಾಯಿ ಕಲೆಕ್ಷನ್ ಆಗುವ ಸಾಧ್ಯತೆಯಿದೆ.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು ಬೇರೆ ಮೂಲಗಳು, https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

More from Filmibeat

English summary
Kichcha Sudeep Movie Mark day 3 box office collection report.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X