Mark Box Office Day 4: 4ನೇ ದಿನ ಬಾಕ್ಸಾಫೀಸ್‌ನಲ್ಲಿ ಏರಿಕೆ ಕಂಡ 'ಮಾರ್ಕ್'; ವೀಕೆಂಡ್‌ನಲ್ಲಿ ಕಿಚ್ಚನ ಸಿನಿಮಾ ಗಳಿಸಿದ್ದೆಷ್ಟು?

ಕಿಚ್ಚ ಸುದೀಪ್ ನಟನೆಯ 'ಮಾರ್ಕ್' ಸಿನಿಮಾ ರಿಲೀಸ್ ಆಗಿದೆ ಇಂದಿಗೆ (ಡಿಸೆಂಬರ್ 29) 5ನೇ ದಿನ. ಕಿಚ್ಚನ ಲಕ್ಕಿ ಡೇಟ್ ಕ್ರಿಸ್‌ಮಸ್‌ಗೆ 'ಮಾರ್ಕ್' ಅದ್ಧೂರಿಯಾಗಿ ರಿಲೀಸ್ ಆಗಿತ್ತು. ಹಬ್ಬ ಹಾಗೂ ಹೊಸ ವರ್ಷದ ರಜೆಯ ಮೂಡ್‌ನಲ್ಲಿರುವ ಪ್ರೇಕ್ಷಕರಿಗೆ ಪಕ್ಕಾ ಮಾಸ್ ಹಾಗೂ ಕಮರ್ಷಿಯಲ್ ಎಂಟರ್‌ಟೈನರ್ ಸಿನಿಮಾ ಕೊಡುವ ಪ್ಲ್ಯಾನ್ ಮಾಡಿದ್ದರು. ಕೇವಲ ಆರು ತಿಂಗಳಲ್ಲಿ ಈ ಸಿನಿಮಾವನ್ನು ನಿರ್ಮಾಣ ಮಾಡಿ, ರಿಲೀಸ್ ಮಾಡಿದ್ದು ವಿಶಿಷ್ಟ ಪ್ರಯತ್ನ.

ಕೇವಲ ಆರು ತಿಂಗಳಲ್ಲಿ ಸಿನಿಮಾ ಮುಗಿಸಿರುವ 'ಮಾರ್ಕ್' ಕಲೆಕ್ಷನ್ ಮೇಲೆ ಇಡೀ ಚಿತ್ರರಂಗ ಕಣ್ಣಿಟ್ಟಿತ್ತು. ಒಂದು ವೇಳೆ 'ಮಾರ್ಕ್' ಬಾಕ್ಸಾಫೀಸ್‌ನಲ್ಲಿ ದಾಖಲೆಗಳನ್ನು ಬರೆದರೆ, ಈ ಸಿನಿಮಾ ಗೆದ್ದಂತೆ. ಅಲ್ಲದೆ 'ಮಾರ್ಕ್' ಕನ್ನಡ ಚಿತ್ರರಂಗಕ್ಕೆ ಮಾದರಿಯಾಗುತ್ತೆ. ಕಿಚ್ಚ ಸುದೀಪ್ ಸಿನಿಮಾ ಮೊದಲ ದಿನ ಭರ್ಜರಿ ₹15.9 ಕೋಟಿ (ನಿರ್ಮಾಣ ಸಂಸ್ಥೆಯ ಅಧಿಕೃತ ಅಂಕಿ-ಅಂಶ) ಕಲೆಕ್ಷನ್ ಮಾಡಿತ್ತು. ನಂತರದ ದಿನಗಳಲ್ಲಿ ಕಲೆಕ್ಷನ್ ಸ್ಟಡಿಯಾಗಿದೆ.

Kichcha Sudeep Movie Mark day 4 and week end box office collection report

ಸುದೀಪ್ ಸಿನಿಮಾ ವರ್ಷದ ಕೊನೆಯಲ್ಲಿ ದಾಖಲೆ ಕಲೆಕ್ಷನ್ ಮಾಡುತ್ತವೆಂಬ ನಿರೀಕ್ಷೆಯಿದೆ. ಇನ್ನೂ ಹೊಸ ವರ್ಷದ ಸಂಭ್ರಮದಲ್ಲಿರುವ ಜನರು ಥಿಯೇಟರ್‌ಗೆ ಬಂದು ಸಿನಿಮಾ ನೋಡುತ್ತಾರೆಂಬ ಲೆಕ್ಕಾಚಾರ ಹಾಕಲಾಗಿದೆ. ಅಲ್ಲದೆ ಸಂಕ್ರಾಂತಿವರೆಗೂ ಬಿಗ್ ಸಿನಿಮಾಗಳು ಇಲ್ಲದೆ ಇರೋದ್ರಿಂದ ಅಲ್ಲಿವರೆಗೂ 'ಮಾರ್ಕ್'ಗೆ ಅನುಕೂಲ. ಹಾಗಿದ್ದರೆ, 4ನೇ ದಿನ 'ಮಾರ್ಕ್' ಗಳಿಸಿದ್ದೆಷ್ಟು? ವೀಕೆಂಡ್‌ನಲ್ಲಿ 'ಮಾರ್ಕ್' ಕಲೆಕ್ಷನ್ ಎಷ್ಟಾಯ್ತು? ತಿಳಿಯುವುದಕ್ಕೆ ಮುಂದೆ ಓದಿ.

4ನೇ ದಿನ 'ಮಾರ್ಕ್' ಕಲೆಕ್ಷನ್

2025ರ ಕೊನೆಯಲ್ಲಿ ಬಿಡುಗಡೆಗೊಂಡ ಕನ್ನಡದ ಸಿನಿಮಾಗಳಲ್ಲಿ 'ಮಾರ್ಕ್' ಕೂಡ ಒಂದು. ಹೀಗಾಗಿ ವರ್ಷದ ಕೊನೆಯಲ್ಲಿ 'ಮಾರ್ಕ್' ಬ್ಲಾಕ್‌ ಬಸ್ಟರ್ ಲಿಸ್ಟ್ ಸೇರುತ್ತಾ? ಅನ್ನೋ ಲೆಕ್ಕಾಚಾರಗಳು ಶುರುವಾಗಿವೆ. ಅದರಲ್ಲೂ 4ನೇ ದಿನ 'ಮಾರ್ಕ್' ಕಲೆಕ್ಷನ್ ಸ್ಟಡಿಯಾಗಿದೆ. ಸ್ಯಾಕ್ನಿಲ್ಕ್ ವರದಿ ಪ್ರಕಾರ, 'ಮಾರ್ಕ್' ನಾಲ್ಕನೇ ದಿನ ₹3.50 ಕೋಟಿ ಕಲೆಕ್ಷನ್ ಮಾಡಿದೆ. 3ನೇ ದಿನಕ್ಕೆ ಹೋಲಿಕೆ ಮಾಡಿದರೆ, 4ನೇ ದಿನ ₹30 ಲಕ್ಷ ಅಧಿಕ ಕಲೆಕ್ಷನ್ ಮಾಡಿದೆ.

ವೀಕೆಂಡ್ ಕಲೆಕ್ಷನ್ ಎಷ್ಟು?

'ಮಾರ್ಕ್' ಕಲೆಕ್ಷನ್ ಬಾಕ್ಸಾಫೀಸ್‌ನಲ್ಲಿ ಡಿಸೆಂಟ್ ಆಗಿದೆ. ಆದರೆ, ಟ್ರೇಡ್‌ ಎಕ್ಸ್‌ಪರ್ಟ್‌ಗಳು ವೀಕೆಂಡ್‌ನಲ್ಲಿ ದೊಡ್ಡ ಮಟ್ಟದಲ್ಲಿ ಕಲೆಕ್ಷನ್ ಆಗಬಹುದೆಂದು ನಿರೀಕ್ಷೆ ಮಾಡಿದ್ದರು. ಆದರೆ, ವೀಕೆಂಡ್‌ನಲ್ಲಿ ಕಲೆಕ್ಷನ್ ಸ್ಟಡಿಯಾಗಿ ಇದ್ದರೂ, ಇನ್ನು ಹೆಚ್ಚು ಕಲೆಕ್ಷನ್ ಮಾಡಬಹುದಿತ್ತೆಂಬ ಮಾತುಗಳು ಚಿತ್ರರಂಗದಲ್ಲಿ ಕೇಳಿ ಬರುತ್ತಿದೆ. ಹಾಗಿದ್ದರೆ, ಕಳೆದ 4 ದಿನಗಳಲ್ಲಿ 'ಮಾರ್ಕ್' ಸಿನಿಮಾ ಗಳಿಸಿದ್ದೆಷ್ಟು? ಯಾವ್ಯಾವ ದಿನ ಎಷ್ಟೆಷ್ಟು ಕಲೆಕ್ಷನ್ ಆಗಿದೆ? ಆ ಡಿಟೈಲ್ಸ್ ಇಲ್ಲಿದೆ.

1ನೇ ದಿನ ₹15.9 ಕೋಟಿ (ನಿರ್ಮಾಣ ಸಂಸ್ಥೆ)
2ನೇ ದಿನ ₹3.2 ಕೋಟಿ (ಸ್ಯಾಕ್ನಿಲ್ಕ್)
3ನೇ ದಿನ ₹3.2 ಕೋಟಿ (ಸ್ಯಾಕ್ನಿಲ್ಕ್)
4ನೇ ದಿನ ₹3.5 ಕೋಟಿ (ಸ್ಯಾಕ್ನಿಲ್ಕ್)
ಒಟ್ಟು ₹25.08 ಕೋಟಿ (ಸ್ಯಾಕ್ನಿಲ್ಕ್)

Kichcha Sudeep Movie Mark day 4 and week end box office collection report
ಸೋಮವಾರದ ಕಲೆಕ್ಷನ್ ಲೆಕ್ಕಾಚಾರವೇನು?

ಕಿಚ್ಚ ಸುದೀಪ್ 'ಮಾರ್ಕ್' ಸಿನಿಮಾಗೆ ಅಸಲಿ ಪರೀಕ್ಷೆ ಎದುರಾಗೋದು ಸೋಮವಾರ. ಮೊದಲ ಸೋಮವಾರ 'ಮಾರ್ಕ್' ಬಾಕ್ಸಾಫೀಸ್‌ನಲ್ಲಿ ಗೆದ್ದರೆ, ಇನ್ನೊಂದು ವಾರ ಸೇಫ್ ಆದಂತೆ. ಸೋಮವಾರ ಸಹಜವಾಗಿ ವರ್ಕ್‌ ಡೇ. ಹೀಗಾಗಿ ಜನರು ಥಿಯೇಟರ್‌ಗೆ ಮುಖ ಮಾಡುವುದು ಕಷ್ಟ. ಒಂದು ವೇಳೆ ಸಿನಿಮಾ ಕ್ರೇಜ್ ಹುಟ್ಟಾಕಿದ್ದರೆ, ಸೋಮವಾರ ಅನ್ನೋದನ್ನೂ ಲೆಕ್ಕಿಸದೆ ಸಿನಿಮಾ ನೋಡುತ್ತಾರೆ. 'ಮಾರ್ಕ್'ಗೂ ಕೂಡ ಇದೇ ರೀತಿ ಪ್ರತಿಕ್ರಿಯೆ ಪ್ರೇಕ್ಷಕರಿಂದ ಸಿಗುತ್ತಾ? ಅನ್ನೋದನ್ನು ನೋಡಬೇಕಿದೆ.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು ಬೇರೆ ಮೂಲಗಳು, https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

More from Filmibeat

English summary
Kichcha Sudeep Movie Mark day 4 and week end box office collection report.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X