Mark Box Office Day 8: ಹೊಸ ವರ್ಷದಲ್ಲಿ ಮತ್ತೆ ಕೋಟಿ ದಾಟಿದ 'ಮಾರ್ಕ್'; 8ನೇ ದಿನದ ಕಲೆಕ್ಷನ್ ಇಷ್ಟು!
ಕಿಚ್ಚ ಸುದೀಪ್ 'ಮ್ಯಾಕ್ಸ್' ಸ್ಟ್ರ್ಯಾಟಜಿಯನ್ನೇ ಇಟ್ಟುಕೊಂಡು 'ಮಾರ್ಕ್' ರಿಲೀಸ್ ಮಾಡಿದ್ದರು. ಡಿಸೆಂಬರ್ 25 ಕ್ರಿಸ್‌ಮಸ್ ಹಬ್ಬಕ್ಕೆ ಅದ್ದೂರಿಯಾಗಿ ಬಿಡುಗಡೆಯಾಗಿತ್ತು. ಕನ್ನಡ ಹಾಗೂ ತಮಿಳು ಎರಡು ಭಾಷೆಯಲ್ಲಿ ಈ ಸಿನಿಮಾ ರಿಲೀಸ್ ಆಗಿದ್ದರೂ, ಕನ್ನಡ ವರ್ಷನ್ ಕಲೆಕ್ಷನ್ ವಿಚಾರದಲ್ಲಿ ಪ್ರಮುಖವಾಗಿತ್ತು. 'ಮಾರ್ಕ್' ರಿಲೀಸ್ ಆಗಿ ಒಂದು ವಾರ ಮುಗಿದಿದ್ದು, ಕಲೆಕ್ಷನ್ ಲೆಕ್ಕಾಚಾರ ದೊಡ್ಡದಾಗಿಯೇ ಇದೆ.
ಸುದೀಪ್ ಸಿನಿಮಾವನ್ನು ಕೇವಲ ಆರು ತಿಂಗಳಲ್ಲಿ ಶೂಟಿಂಗ್ ಮಾಡಿ ರಿಲೀಸ್ ಮಾಡಿರೋದು ವಿಶೇಷ. ಹೀಗಾಗಿ ಸಿನಿಮಾ ಬಾಕ್ಸಾಫೀಸ್‌ನಲ್ಲಿ ದೊಡ್ಡ ಮಟ್ಟಕ್ಕೆ ಯಶಸ್ಸು ಕಂಡರೆ, ಉಳಿದ ಹೀರೋಗಳು ಕೂಡ ವರ್ಷಕ್ಕೆ ಎರಡು ಸಿನಿಮಾ ಮಾಡಬಹುದೆಂಬ ಆಸೆ ಕನ್ನಡ ಚಿತ್ರರಂಗದ್ದು. ಹೀಗಾಗಿ 'ಮಾರ್ಕ್' ಮೇಲೆ ಸಿನಿಮಾ ಮಂದಿ ಕಣ್ಣಿಟ್ಟು ಕೂತಿದ್ದಾರೆ.

'ಮಾರ್ಕ್' ಫಸ್ಟ್ ಡೇ ಭರ್ಜರಿ ಕಲೆಕ್ಷನ್ ಮಾಡಿತ್ತು. ವರ್ಕಿಂಗ್ ಡೇಸ್‌ನಲ್ಲೂ ಈ ಸಿನಿಮಾ ಕಲೆಕ್ಷನ್ ಉತ್ತಮವಾಗಿಯೇ ಇದೆ. ಸ್ಯಾಕ್ನಿಲ್ಕ್ ಅಂಕಿ-ಅಂಶಗಳ ಪ್ರಕಾರ ಮಧ್ಯೆ ಒಂದೆರಡು ದಿನ ಕಲೆಕ್ಷನ್ ಲಕ್ಷಕ್ಕೆ ಇಳಿದಿತ್ತು. ಆದರೆ, ಹೊಸ ವರ್ಷದಂದು 'ಮಾರ್ಕ್' ಬಾಕ್ಸಾಫೀಸ್ ಕಲೆಕ್ಷನ್‌ನಲ್ಲಿ ಮತ್ತೆ ಏರಿಕೆಯಾಗಿದೆ. ಆ ಕಲೆಕ್ಷನ್ ರಿಪೋರ್ಟ್ ಇದೆ.
'ಮಾರ್ಕ್' 8ನೇ ದಿನದ ಕಲೆಕ್ಷನ್
'ಮಾರ್ಕ್' ಮಾಸ್-ಆಕ್ಷನ್ ಸಿನಿಮಾ. ಹೀಗಾಗಿ ಥಿಯೇಟರ್‌ಗೆ ಸಾಮಾನ್ಯವಾಗಿ ಆಡಿಯನ್ಸ್ ಬಂದೇ ಬರುತ್ತಾರೆ ಅನ್ನೋದು ಗೊತ್ತಿತ್ತು. ಸಿನಿಮಾ ದಾಖಲೆ ಮಟ್ಟದಲ್ಲಿ ಕಲೆಕ್ಷನ್ ಮಾಡುತ್ತೋ ಇಲ್ಲವೋ ಡಿಸೆಂಟ್ ಕಲೆಕ್ಷನ್ ಅಂತೂ ಆಗೇ ಆಗುತ್ತೆಂಬ ನಿರೀಕ್ಷೆಯಿತ್ತು. ಅದಕ್ಕೆ ಒಂದು ವಾರದಲ್ಲಿ ಒಳ್ಳೆಯ ಗಳಿಕೆಯನ್ನೇ ಮಾಡಿದೆ. ಸ್ಯಾಕ್ನಿಲ್ಕ್ ಪ್ರಕಾರ ಈ ಸಿನಿಮಾ 8ನೇ ದಿನದಂದು ಶೇ.100ರಷ್ಟು ಏರಿಕೆಯಾಗಿದೆ. 8ನೇ ದಿನ ಈ ಸಿನಿಮಾದ ಕಲೆಕ್ಷನ್ ₹1.75 ಕೋಟಿ ಆಗಿದೆ.
8 ದಿನಗಳ ಒಟ್ಟು ಕಲೆಕ್ಷನ್
'ಮಾರ್ಕ್' 8 ದಿನಗಳ ಬಾಕ್ಸಾಫೀಸ್ ಪರ್ಫಾಮೆನ್ಸ್ ಕೂಡ ಉತ್ತಮವಾಗಿದೆ. ಚಿತ್ರತಂಡವೇ ಮಾಹಿತಿ ನೀಡಿದ್ದರ ಪ್ರಕಾರ, ಮೊದಲ ದಿನ ಈ ಸಿನಿಮಾದ ಕಲೆಕ್ಷನ್ ₹15.9 ಕೋಟಿ ಕಲೆಕ್ಷನ್ ಆಗಿತ್ತು. ನಂತರ ದಿನಗಳಲ್ಲಿ ಈ ಸಿನಿಮಾದ ಕಲೆಕ್ಷನ್ ಇಳಿಮುಖವಾಗುತ್ತಾ ಮುಂದೆ ಸಾಗಿತ್ತು. ಈ ಎಂಟು ದಿನಗಳಲ್ಲಿ 'ಮಾರ್ಕ್' ಗಳಿಸಿದ ಒಟ್ಟು ಕಲೆಕ್ಷನ್ ಹೀಗಿದೆ.
1ನೇ ದಿನ ₹15.9 ಕೋಟಿ (ನಿರ್ಮಾಣ ಸಂಸ್ಥೆ)
2ನೇ ದಿನ ₹3.2 ಕೋಟಿ (ಸ್ಯಾಕ್ನಿಲ್ಕ್)
3ನೇ ದಿನ ₹3.2 ಕೋಟಿ (ಸ್ಯಾಕ್ನಿಲ್ಕ್)
4ನೇ ದಿನ ₹3.5 ಕೋಟಿ (ಸ್ಯಾಕ್ನಿಲ್ಕ್)
5ನೇ ದಿನ ₹1.15 ಕೋಟಿ (ಸ್ಯಾಕ್ನಿಲ್ಕ್)
6ನೇ ದಿನ ₹0.9 ಕೋಟಿ (ಸ್ಯಾಕ್ನಿಲ್ಕ್)
7ನೇ ದಿನ ₹0.8 ಕೋಟಿ (ಸ್ಯಾಕ್ನಿಲ್ಕ್)
8ನೇ ದಿನ ₹1.75 ಕೋಟಿ (ಸ್ಯಾಕ್ನಿಲ್ಕ್)
ಒಟ್ಟು ₹30.4 ಕೋಟಿ

ಹೊಸ ವರ್ಷದಂದು ಕಲೆಕ್ಷನ್‌ನಲ್ಲಿ ಚೇತರಿಕೆ
'ಮಾರ್ಕ್' ಒಂದು ಅಂದಾಜಿನ ಪ್ರಕಾರ ಕಳೆದ 8 ದಿನಗಳಲ್ಲಿ ₹30 ಕೋಟಿ ಆಸುಪಾಸಿನಲ್ಲಿ ಕಲೆಕ್ಷನ್ ಮಾಡಿದೆ. ಸ್ಯಾಕ್ನಿಲ್ಕ್ ವರದಿ ಪ್ರಕಾರ, ₹23 ಕೋಟಿ ಕಲೆಕ್ಷನ್ ಮಾಡಿದೆ. ಇನ್ನು ವಿತರಕರ ವಲಯದಲ್ಲಿ ಕಲೆಕ್ಷನ್ ರಿಪೋರ್ಟ್ ₹25 ಕೋಟಿ ಆಗಿರಬಹುದೆಂಬ ಲೆಕ್ಕಾಚಾರವಿದೆ. ಇನ್ನು ಹೊಸ ವರ್ಷದಂದು ಬಾಕ್ಸಾಫೀಸ್‌ನಲ್ಲಿ ಏರಿಕೆ ಕಂಡಿದ್ದರಿಂದ 'ಮಾರ್ಕ್' 2ನೇ ವೀಕೆಂಡ್‌ನಲ್ಲಿ ಇನ್ನಷ್ಟು ಕಲೆಕ್ಷನ್ ಮಾಡಬಹುದೆಂಬ ನಿರೀಕ್ಷೆಯಿದೆ.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು ಬೇರೆ ಮೂಲಗಳು, https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications








