Mark Box Office Prediction:'ಮಾರ್ಕ್' ಫಸ್ಟ್ ಡೇ ಕಲೆಕ್ಷನ್ ಎಷ್ಟಾಗಬಹುದು? 'ಮ್ಯಾಕ್ಸ್' ದಾಖಲೆ ಬ್ರೇಕ್ ಮಾಡುತ್ತಾ?

ಪ್ರೇಕ್ಷಕರು ಕ್ರಿಸ್‌ಮಸ್ ಹಾಗೂ ಹೊಸ ವರ್ಷದ ಸಂಭ್ರಮದಲ್ಲಿದ್ದಾರೆ. ಮಕ್ಕಳಿಗೆ ರಜೆ ಇರೋದ್ರಿಂದ ಕುಟುಂಬ ಸಮೇತ ಕನ್ನಡದ ಎರಡು ಸಿನಿಮಾಗಳನ್ನು ನೋಡುವುದಕ್ಕೆ ಥಿಯೇಟರ್‌ಗೆ ಬರುವುದಕ್ಕೆ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ಕನ್ನಡದ ಎರಡು ಸಿನಿಮಾಗಳು '45' ಹಾಗೂ 'ಮಾರ್ಕ್' ಥಿಯೇಟರ್‌ನಲ್ಲಿ ಅಬ್ಬರಿಸುವುದಕ್ಕೆ ರೆಡಿಯಾಗಿದೆ.

ಎರಡೂ ಸಿನಿಮಾಗಳೂ ಕಾಂಪಿಟೇಷನ್‌ಗೆ ಬಿದ್ದು ರಿಲೀಸ್ ಆಗಿವೆ. ಕಿಚ್ಚ ಸುದೀಪ್ 'ಮ್ಯಾಕ್ಸ್' ಸಿನಿಮಾ ಬಳಿಕ ಮತ್ತೆ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾ ಕಿಚ್ಚನ ಲುಕ್, ಗೆಟಪ್, ಮ್ಯಾನರಿಸಂ ಕೂಡ ಬದಲಾಗಿದ್ದು, ಮಾಸ್ ಅಭಿಮಾನಿಗಳು ಹಬ್ಬ ಅನ್ನೋ ಮುನ್ಸೂಚನೆಯನ್ನು ಕೊಟ್ಟಿದೆ. ಹೀಗಾಗಿ ಫಸ್ಟ್ ಡೇ ಕಲೆಕ್ಷನ್ ಬಗ್ಗೆ ಟ್ರೇಡ್ ಎಕ್ಸ್‌ಪರ್ಟ್‌ಗಳು ಈಗಾಗಲೇ ಲೆಕ್ಕಾಚಾರಗಳನ್ನು ಹಾಕುವುದಕ್ಕೆ ಶುರು ಮಾಡಿದ್ದಾರೆ.

Kichcha Sudeep starrer Mark movie Karnataka Box Office prediction report

'ಮ್ಯಾಕ್ಸ್' ಜೊತೆ 'ಮಾರ್ಕ್' ಅನ್ನು ಹೋಲಿಕೆ ಮಾಡುವುದಕ್ಕೆ ಶುರು ಮಾಡಿದ್ದಾರೆ. ಎರಡೂ ಸಿನಿಮಾಗಳನ್ನೂ ವಿಜಯ್ ಕಾರ್ತಿಕೇಯ ಅವರೇ ನಿರ್ದೇಶನ ಮಾಡಿರುವುದರಿಂದ ಸಿನಿಮಾ ಮೇಲೆ ಹೋಪ್ ಇದೆ. ಹಾಗಿದ್ದರೆ, ಟ್ರೇಡ್ ಎಕ್ಸ್‌ಪರ್ಟ್‌ಗಳ ಪ್ರಕಾರ 'ಮಾರ್ಕ್' ಮೊದಲ ದಿನ ಎಷ್ಟು ಕಲೆಕ್ಷನ್ ಮಾಡಬಹುದು? ಅನ್ನೋದನ್ನು ಲೆಕ್ಕ ಹಾಕಿದ್ದಾರೆ. ಅದನ್ನು ತಿಳಿಯುವುದಕ್ಕೆ ಮುಂದೆ ಓದಿ.

'ಮಾರ್ಕ್' ಎಷ್ಟು ಸ್ಕ್ರೀನ್‌ಗಳಲ್ಲಿ ರಿಲೀಸ್

ಕ್ರಿಸ್‌ಮಸ್ ರಜೆ ಇರುವುದರಿಂದ ನಾಳೆ (ಡಿಸೆಂಬರ್ 25) ಜನರು ಥಿಯೇಟರ್‌ಗಳಿಗೆ ನುಗ್ಗುತ್ತಾರೆ. ಕಿಚ್ಚ ಸುದೀಪ್ ಅಂತಹ ಸ್ಟಾರ್ ಸಿನಿಮಾಗಳು ಫಸ್ಟ್ ಡೇ ಒಳ್ಳೆಯ ಕಲೆಕ್ಷನ್ ಮಾಡುತ್ತವೆ. ಹೀಗಾಗಿ ಅವರ ಅಭಿಮಾನಿಗಳಿಗಾಗಿ ಬೆಳಗ್ಗೆ ಆರು ಗಂಟೆಗೆ ವಿಶೇಷ ಶೋ ಅನ್ನು ಅರೇಂಜ್ ಮಾಡಲಾಗಿದೆ. 'ಮಾರ್ಕ್' ಸಿನಿಮಾದ ಬಹುತೇಕ ಫ್ಯಾನ್ಸ್ ಶೋ ಹೌಸ್‌ಫುಲ್ ಆಗಿದೆ. ಇನ್ನು ಈ ಸಿನಿಮಾ ಕರ್ನಾಟಕದಾದ್ಯಂತ ಮಲ್ಟಿಪ್ಲೆಕ್ಸ್ ಹಾಗೂ ಸಿಂಗಲ್‌ ಸ್ಕ್ರೀನ್ ಸೇರಿ 330ಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ ರಿಲೀಸ್ ಮಾಡಲಾಗುತ್ತಿದೆ. ಹೀಗಾಗಿ ಉತ್ತಮ ಗಳಿಕೆ ಆಗುತ್ತೆ ಎಂದೇ ಭಾವಿಸಲಾಗಿದೆ.

'ಮಾರ್ಕ್' ಫಸ್ಟ್ ಡೇ ಪ್ರಿಡಿಕ್ಷನ್ ಎಷ್ಟು?

ಟ್ರೇಡ್ ಎಕ್ಸ್‌ಪರ್ಟ್‌ಗಳು 'ಮಾರ್ಕ್' ಸಿನಿಮಾದ ಕಲೆಕ್ಷನ್ ಮೇಲೆ ಕಣ್ಣಿಟ್ಟಿದ್ದಾರೆ. ಇನ್ನು ಕರ್ನಾಟಕದ ವಿತರಕ ವಲಯ ಅಂದಾಜು ಹಾಕಿರುವ ಪ್ರಕಾರ ಈ ಸಿನಿಮಾ ಮೊದಲ ದಿನ ₹8 ರಿಂದ ₹10 ಕೋಟಿ (Net) ರೂಪಾಯಿ ಕಲೆಕ್ಷನ್ ಆಗಲಿದೆ. ಹಾಗೇ ಈ ₹8-₹10 ಕೋಟಿ ಕಲೆಕ್ಷನ್‌ನಲ್ಲಿ ಯಾವ್ಯಾವ ಏರಿಯಾಗಳಲ್ಲಿ ಎಷ್ಟೆಷ್ಟು ಕಲೆಕ್ಷನ್ ಆಗುತ್ತೆ? ಅನ್ನೋದರ ಒಂದು ಅಂದಾಜು ಹಾಕಿದ್ದಾರೆ. ಅದು ಹೀಗಿದೆ.

ಬೆಂಗಳೂರು, ಕೋಲಾರ, ತುಮಕೂರು 59%
ಮಂಡ್ಯ, ಮೈಸೂರು, ಕೂರ್ಗ್, ಹಾಸನ್ 14%
ಚಿತ್ರದುರ್ಗ, ದಾವಣಗೆರೆ 7%
ಹುಬ್ಬಳ್ಳಿ 8%
ಶಿವಮೊಗ್ಗ-ದಕ್ಷಿಣ ಕನ್ನಡ 8%
ಹೈದರಾಬಾದ್ ಕರ್ನಾಟಕ 4%

Kichcha Sudeep starrer Mark movie Karnataka Box Office prediction report
'ಮ್ಯಾಕ್ಸ್' Vs 'ಮಾರ್ಕ್' ಕಲೆಕ್ಷನ್

ಅಂದ್ಹಾಗೆ ಕಿಚ್ಚ ಸುದೀಪ್‌ಗೆ ಕಳೆದ ವರ್ಷ ಸಖತ್ ಸಕ್ಸಸ್ ಕೊಟ್ಟಿದ್ದ ಸಿನಿಮಾ 'ಮ್ಯಾಕ್ಸ್' ಕೂಡ ಹೆಚ್ಚು ಕಡಿಮೆ ಇಷ್ಟೇ ಕಲೆಕ್ಷನ್ ಆಗಿತ್ತು. ಸ್ಯಾಕ್ನಿಲ್ಕ್ ವರದಿ ಮಾಡಿದ್ದಂತೆ ಮೊದಲ ದಿನ ₹8.7 ಕೋಟಿ (Net) ವರದಿಯಾಗಿತ್ತು. ಇದೇ ವರದಿಯ ಪ್ರಕಾರ ಈ ಸಿನಿಮಾ ಲೈಫ್ ಟೈಮ್ ಕಲೆಕ್ಷನ್ ₹57.3 ಕೋಟಿ (Gross) ಕಲೆಕ್ಷನ್ ಆಗಿತ್ತು.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು ಬೇರೆ ಮೂಲಗಳು, https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

More from Filmibeat

English summary
Kichcha Sudeep starrer Mark movie Karnataka Box Office prediction report.
Read more about: sudeep boxoffice report karnataka
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X