Junior Vs Ekka Box Office:'ಜೂನಿಯರ್'-'ಎಕ್ಕ' ಈ ಎರಡು ಸಿನಿಮಾಗಳಲ್ಲಿ ಬಾಕ್ಸಾಫೀಸ್‌ನಲ್ಲಿ ಗೆದ್ದಿದ್ಯಾರು?
ಸತತ ಸೋಲಿನಿಂದ ಬಳಲಿ ಬೆಂಡಾಗಿದ್ದ ಸ್ಯಾಂಡಲ್‌ವುಡ್‌ಗೆ ಯುವ ರಾಜ್‌ಕುಮಾರ್ ಹಾಗೂ ಕಿರೀಟಿ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದರು. ಥಿಯೇಟರ್‌ಗಳಲ್ಲಿ ಒಂದ್ಕಡೆ 'ಎಕ್ಕ' ಹಾಗೂ ಇನ್ನೊಂದು 'ಜೂನಿಯರ್' ಪ್ರದರ್ಶನ ಕಾಣುತ್ತಿದೆ. ಈ ವರ್ಷದ ದ್ವಿತಿಯಾರ್ಧದಲ್ಲಿ ಇಬ್ಬರು ಯುವ ನಟರ ಸಿನಿಮಾಗಳು ಅಖಾಡಕ್ಕೆ ಇಳಿದಿದ್ದರು. ಈ ಎರಡೂ ಸಿನಿಮಾಗಳನ್ನು ನೋಡಿದವರು ಒಂದಿಷ್ಟು ಪಾಸಿಟಿವ್ ಹಾಗೂ ನೆಗೆಟಿವ್ ಅಂಶಗಳನ್ನು ಪಟ್ಟಿ ಮಾಡಿದ್ದರು.
ಈಗ ತನ್ನದೇ ಒಂದಿಷ್ಟು ಸಾಧಕ ಬಾಧಕಗಳನ್ನು ಹೊತ್ತು ಚಿತ್ರಮಂದಿರಕ್ಕೆ ಲಗ್ಗೆ ಇಟ್ಟಿದ್ದ ಈ ಎರಡೂ ಸಿನಿಮಾಗಳು ಮೊದಲ ವೀಕೆಂಡ್ ಅನ್ನು ಯಶಸ್ವಿಯಾಗಿ ಮುಗಿಸಿವೆ. ಮೊದಲ ಮೂರು ದಿನಗಳಲ್ಲಿ 'ಎಕ್ಕ' ಹಾಗೂ 'ಜೂನಿಯರ್' ಸಿನಿಮಾಗಳು ಪ್ರೇಕ್ಷಕರನ್ನು ಸೆಳೆಯುವಲ್ಲಿ ಎಷ್ಟು ಯಶಸ್ವಿಯಾಗಿವೆ. ಯುವ ರಾಜ್‌ಕುಮಾರ್ ಹಾಗೂ ಕಿರೀಟಿ ಇಬ್ಬರಲ್ಲಿ ವೀಕೆಂಡ್ ಗೆದ್ದವರು ಯಾರು?

ಜನಾರ್ಧನ ರೆಡ್ಡಿಯ ಪುತ್ರ ಕಿರೀಟಿಯ ಚೊಚ್ಚಲ ಸಿನಿಮಾ 'ಜೂನಿಯರ್'ನಲ್ಲಿ ದೊಡ್ಡ ಸ್ಟಾರ್‌ಕಾಸ್ಟ್ ಇದೆ. ಇತ್ತ ಯುವ ರಾಜ್‌ಕುಮಾರ್ ಎರಡನೇ ಸಿನಿಮಾದ 'ಎಕ್ಕ'ದ ಬೆನ್ನೆಲುಬಾಗಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರ ಪಿಆರ್‌ಕೆ, ಕೆಆರ್‌ಜಿ ಸ್ಟುಡಿಯೋ, ಜಯಣ್ಣ ಫಿಲ್ಮ್ಸ್ ಅಂತಹ ದೊಡ್ಡ ನಿರ್ಮಾಣ ಸಂಸ್ಥೆಗಳೇ ಇದ್ದವು. ಸೋಲಿನ ಕಹಿಯನ್ನು ಉಂಟು ನಿತ್ರಾಣವಾಗಿರುವ ಕನ್ನಡ ಚಿತ್ರರಂಗಕ್ಕೆ ಈ ಯುವ ನಟರು ಹುರುಪು ತುಂಬಿದರೇ? ತಮ್ಮನ್ನು ತಾವೇ ಕಾಂಪಿಟೇಷನ್‌ಗೆ ಒಗ್ಗಿಕೊಂಡು ಅಖಾಡಕ್ಕೆ ಇಳಿದವರಲ್ಲಿ ಗೆದ್ದವರು ಯಾರು? ಬಾಕ್ಸಾಫೀಸ್ ಕಲೆಕ್ಷನ್ ಹೇಗಿದೆ? ತಿಳಿಯುವುದಕ್ಕೆ ಮುಂದೆ ಓದಿ.
'ಎಕ್ಕ' 3ನೇ ದಿನದ ಕಲೆಕ್ಷನ್
ಯುವ ರಾಜ್‌ಕುಮಾರ್ 'ಎಕ್ಕ' ಮೊದಲ ದಿನ ಭರ್ಜರಿ ಓಪನಿಂಗ್ ಸಿಕ್ಕಿತ್ತು. ಎರಡನೇ ದಿನ ಬಾಕ್ಸಾಫೀಸ್ ಕಲೆಕ್ಷನ್‌ನಲ್ಲಿ ಇಳಿಕೆ ಕಂಡಿತ್ತು. ಇಲ್ಲಿಗೆ ಈ ಸಿನಿಮಾ ಕಥೆನೂ ಅಷ್ಟಕ್ಕಷ್ಟೇ ಅಂದುಕೊಂಡವರಿಗೆ ಮೂರನೇ ದಿನ ಅಂದರೆ, ನಿನ್ನೆ (ಜುಲೈ 20) ಖಡಕ್ ಉತ್ತರ ಕೊಟ್ಟಿದೆ. ಬಾಕ್ಸಾಫೀಸ್‌ನಲ್ಲಿ ರಿಲೀಸ್ ಆದಲ್ಲಿಂದ ಅತೀ ಹೆಚ್ಚು ಮಾಡಿದೆ. 'ಎಕ್ಕ' 3ನೇ ದಿನ ಸ್ಯಾಕ್ನಿಲ್ಕ್ ವರದಿಯಲ್ಲಿ 2.39 ಕೋಟಿ ರೂಪಾಯಿ ಎಂದು ಹೇಳಿದೆ. ಆದರೆ, ವಿತರಕರ ಲೆಕ್ಕದಲ್ಲಿ ಈ ಸಿನಿಮಾ ಗಳಿದ್ದು 1.50 ಕೋಟಿ ರೂಪಾಯಿ. ಇಬ್ಬರ ಲೆಕ್ಕಾಚಾರದಲ್ಲಿ ಒಂದು ಕೋಟಿಯ ಅಂತರ ಕಾಣುತ್ತಿದೆ.

'ಎಕ್ಕ' ಮೂರು ದಿನಗಳ ಲೆಕ್ಕಾಚಾರವೇನು?
ಯುವ ರಾಜ್‌ಕುಮಾರ್‌ಗೆ 'ಎಕ್ಕ' ಸಿನಿಮಾ ಮಾಸ್ ಇಮೇಜ್ ಕೊಟ್ಟಿದೆ. ಹಾಡುಗಳು, ಡೈಲಾಗ್, ಕಾಸ್ಟ್ಯೂಮ್ ಲೋಕಲ್ ಹುಡುಗನಂತೆ ಬಿಂಬಿಸಿವೆ. ಜೊತೆ ಬ್ಯಾಂಗಲ್ ಬಂಗಾರಿ ಸಾಂಗ್ ಸೂಪರ್ ಹಿಟ್ ಆಗಿದೆ. ಈ ಹಾಡು ಹಾಗೂ ಟ್ರೈಲರ್ ಪ್ರೇಕ್ಷಕರನ್ನು ವೀಕೆಂಡ್‌ನಲ್ಲಿ ಚಿತ್ರಮಂದಿರದವರೆಗೂ ಸೆಳೆದಿದೆ. ಹೀಗಾಗಿ ಮೊದಲ ಮೂರು ದಿನಗಳ ಕಲೆಕ್ಷನ್ ಉತ್ತಮವಾಗಿದೆ. ಸ್ಯಾಕ್ನಿಲ್ಕ್ ರಿಪೋರ್ಟ್ ಪ್ರಕಾರ, ಮೊದಲ ದಿನ ₹1.45 ಕೋಟಿ, ಎರಡನೇ ದಿನ ₹1.82 ಕೋಟಿ, ಮೂರನೇ ದಿನ ₹2.39 ಕೋಟಿ ಕಲೆಕ್ಷನ್ ಆಗಿದ್ದು, ಒಟ್ಟು ₹6.42 ಕೋಟಿ ಗಳಿಕೆ ಮಾಡಿದೆ. ವಿತರಕರ ವಲಯದಲ್ಲಿ ಹರಿದಾಡುತ್ತಿರುವ 3ನೇ ದಿನ ಪ್ರಮುಖ ಚಿತ್ರಮಂದಿರಗಳ ಕಲೆಕ್ಷನ್ ಲಿಸ್ಟ್ ಹೀಗಿದೆ.
'ಎಕ್ಕ' ಥಿಯೇಟರ್ ಕಲೆಕ್ಷನ್
ಸಂತೋಷ್ ₹13 ಲಕ್ಷ (ಬೆಂಗಳೂರು)
ವೀರೇಶ್ ₹14 ಲಕ್ಷ (ಬೆಂಗಳೂರು)
ಸಿದ್ಧಲಿಂಗೇಶ್ವರ ₹10 ಲಕ್ಷ (ಬೆಂಗಳೂರು)
ಬಾಲಾಜಿ, ತಾವರೆಕೆರೆ ₹10 ಲಕ್ಷ (ಬೆಂಗಳೂರು)
ಸಂಗಮ್ ₹10 ಲಕ್ಷ (ಮೈಸೂರು)
ಗಾಯತ್ರಿ ₹10 ಲಕ್ಷ (ಮೈಸೂರು)
ಗುರುಶ್ರೀ ₹7 ಲಕ್ಷ (ಮಂಡ್ಯ)
ಗಾಯತ್ರಿ ₹4 ಲಕ್ಷ (ತುಮಕೂರು)
ಎಸ್‌ಬಿಜಿ ₹4 ಲಕ್ಷ (ಹಾಸನ್)
ಅಶೋಕ ₹11 ಲಕ್ಷ (ದಾವಣಗೆರೆ)
'ಜೂನಿಯರ್' ಕಲೆಕ್ಷನ್ ಹೇಗಿದೆ?
ಯುವ ರಾಜ್‌ಕುಮಾರ್ 'ಎಕ್ಕ' ಸಿನಿಮಾಗೆ ಹೋಲಿಕೆ ಮಾಡಿದರೆ, 'ಜೂನಿಯರ್' ಕಲೆಕ್ಷನ್‌ನಲ್ಲಿ ಹಿಂದೆ ಬಿದ್ದಿದೆ. ಸ್ಯಾಕ್ನಿಲ್ಕ್ ರಿಪೋರ್ಟ್ ಪ್ರಕಾರ, ಮೊದಲ ದಿನ ₹1.50 ಕೋಟಿ, ಎರಡನೇ ದಿನ ₹1.80 ಕೋಟಿ, ಮೂರನೇ ದಿನ ₹2.30 ಕೋಟಿ ಕಲೆಕ್ಷನ್ ಮಾಡಿದೆ. ಇದು ಕನ್ನಡ ಹಾಗೂ ತೆಲುಗು ಎರಡೂ ಭಾಷೆಯ ಕಲೆಕ್ಷನ್ ಆಗಿದೆ. ಒಟ್ಟು ₹5.6 ಕೋಟಿ ಕಲೆಕ್ಷನ್ ಆಗಿದೆ ನ್ನಲಾಗಿದೆ. ಆದರೆ, ಕರ್ನಾಟಕದ ವಿತರಕರ ಲೆಕ್ಕ ಬೇರೆನೇ ಇದೆ. ಹೀಗಾಗಿ 'ಎಕ್ಕ' ಕಲೆಕ್ಷನ್‌ಗಿಂತ 'ಜೂನಿಯರ್' ಹಿಂದೆ ಉಳಿದಿದೆ. ಆದರೂ ಚೊಚ್ಚಲ ಸಿನಿಮಾದಲ್ಲಿಯೇ ಈ ಮಟ್ಟಿಗೆ ಸದ್ದು ಮಾಡಿದ್ದು ಒಂದು ರೀತಿ ಗೆಲುವೇ ಎನ್ನಬಹುದು.
ಜೂನಿಯರ್ ಕಲೆಕ್ಷನ್ (ಕರ್ನಾಟಕ)
ಮೊದಲನೇ ದಿನ ₹30 ಲಕ್ಷ
ಎರಡನೇ ದಿನ ₹51 ಲಕ್ಷ
ಮೂರನೇ ದಿನ ₹77ಲಕ್ಷ
ಒಟ್ಟು ₹1.58 ಕೋಟಿ
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications











