Junior Day 6 Box Office: ಪವರ್‌ಸ್ಟಾರ್ ಎಂಟ್ರಿಗೆ ಥಂಡಾ ಹೊಡೆಯುತ್ತಾ 'ಜೂನಿಯರ್'? 6ನೇ ದಿನ ಗಳಿಸಿದ್ದೆಷ್ಟು?
ಗಾಲಿ ಜನಾರ್ಧನ ರೆಡ್ಡಿ ಮಗನ ಸಿನಿಮಾಗೆ ಯುವಕರು ಮೆಚ್ಚುಗೆ ಸೂಚಿಸಿದ್ದಾರೆ. ಕಿರೀಟಿಯ ಆಕ್ಷನ್, ಸ್ಟಂಟ್ಸ್, ಡ್ಯಾನ್ಸ್‌ಗೆ ಮರುಳಾಗದವರೇ ಇಲ್ಲ. ಮೂರು ವರ್ಷಗಳ ಕಾಲ 'ಜೂನಿಯರ್' ಸಿನಿಮಾಗಾಗಿ ಕಷ್ಟ ಪಟ್ಟಿದ್ದ ತಂಡ ಕೊನೆಗೂ ಪ್ರೇಕ್ಷಕರ ಮನಸ್ಸು ಗೆದ್ದಿದ್ದಾರೆ. ಹಾಗಂತ ದೊಡ್ಡ ಸಕ್ಸಸ್ ಏನೂ ಅಲ್ಲ. ಆದರೆ, ಚೊಚ್ಚಲ ಸಿನಿಮಾದಲ್ಲಿಯೇ ಕಿರೀಟಿ ಸೌಂಡ್ ಮಾಡುತ್ತಿರೋದಂತೂ ನಿಜ.
'ಜೂನಿಯರ್' ದೊಡ್ಡ ಮಟ್ಟದ ಸಕ್ಸಸ್ ಏನೂ ಅಲ್ಲ. ಕಿರೀಟಿಗೆ ಬೆಂಬಲವಾಗಿ ಕ್ರೇಜಿಸ್ಟಾರ್ ರವಿಚಂದ್ರನ್, ಸುಧಾರಾಣಿ, ಶ್ರೀಲೀಲಾ ಸೇರಿದಂತೆ ಪ್ರಮುಖ ಪಾತ್ರಗಳಲ್ಲಿ ಸಾಕಷ್ಟು ಮಂದಿ ಕಲಾವಿದರು ನಟಿಸಿದ್ದಾರೆ. ಮೊದಲ ಮೂರು ದಿನ 'ಜೂನಿಯರ್' ಜೋರಾಗಿಯೇ ಕಲೆಕ್ಷನ್ ಮಾಡಿದೆ. ಆದರೆ, ಸ್ಯಾಕ್ನಿಲ್ಕ್ ಪ್ರಕಾರ ಚೊಚ್ಚಲ ಸಿನಿಮಾದ ಹೀರೋ ಈ ಮಟ್ಟಿಗೆ ಕಲೆಕ್ಷನ್ ಮಾಡಿದ್ದು ಯಾವುದೇ ಯುವ ಹೀರೋಗೂ ಕಮ್ಮಿಯಿಲ್ಲ.

'ಜೂನಿಯರ್' ಮೊದಲ ಆರು ದಿನ ಉತ್ತಮ ಕಲೆಕ್ಷನ್ ಮಾಡಿದೆ. ಅಬ್ಬರದ ಪ್ರಚಾರ ಮಾಡದೇ ಈ ಸಿನಿಮಾವನ್ನು ಬಿಡುಗಡೆ ಮಾಡಲಾಗಿತ್ತು. ಅದಕ್ಕೆ ಸಿಕ್ಕಿರೋ ರೆಸ್ಪಾನ್ಸ್ ಹೀಗಿದೆ. ಸೋಮವಾರ, ಮಂಗಳವಾರದ ಬಳಿಕ ಸಿನಿಮಾದ ಕಲೆಕ್ಷನ್ ಹೇಗಿದೆ? ಪವನ್ ಕಲ್ಯಾಣ್ 'ಹರಿ ಹರ ವೀರಮಲ್ಲು' ಅವತಾರವೆತ್ತಿ ಅಖಾಡಕ್ಕೆ ಇಳಿದ ಬಳಿಕ ಜೂನಿಯರ್ ಕಥೆಯೇನು? ತಿಳಿಯುವುದಕ್ಕೆ ಮುಂದೆ ಓದಿ.
'ಜೂನಿಯರ್' 6ನೇ ದಿನದ ಕಲೆಕ್ಷನ್ ಎಷ್ಟು?
ಕಿರೀಟಿ ಈಗಾಗಲೇ ಪ್ರೇಕ್ಷಕರಿಂದ ಭೇಷ್ ಎನಿಸಿಕೊಂಡಿದ್ದಾಗಿದೆ. ಸಿನಿಮಾಗೆ ಹಾಕಿದ ಬಂಡವಾಳಕ್ಕೆ ಹೋಲಿಸಿದರೆ, ಗಳಿಕೆಯಲ್ಲಿ ಹಿಂದೆ ಬಿದ್ದಿದ್ದರೂ ಪರ್ಫಾಮೆನ್ಸ್‌ನಲ್ಲಿ ಒಳ್ಳೆಯ ಮಾರ್ಕ್ಸ್ ಅನ್ನೇ ಪಡೆದುಕೊಂಡಿದ್ದಾರೆ. ಸ್ಯಾಕ್ನಿಲ್ಕ್.ಕಾಮ್ ಪ್ರಕಾರ, ಈ ಸಿನಿಮಾ ಆರನೇ ದಿನ ಕೊಂಚ ಇಳಿಕೆ ಕಂಡಿದೆ. ತೆಲುಗು ಹಾಗೂ ಕನ್ನಡ ಎರಡೂ ಭಾಷೆಯಿಂದ ಜೂನಿಯರ್ ₹60 ಲಕ್ಷ ರೂಪಾಯಿ ಕಲೆಕ್ಷನ್ ಮಾಡಿದೆ. 5ನೇ ದಿನಕ್ಕೆ ಹೋಲಿಕೆ ಮಾಡಿದರೆ, ಅಂತಹ ದೊಡ್ಡ ಮಟ್ಟಕ್ಕೆ ಇಳಿಕೆಯಾಗಿಲ್ಲ.
6 ದಿನಗಳ ಒಟ್ಟು ಕಲೆಕ್ಷನ್ ಎಷ್ಟು?
ಜೂನಿಯರ್ ಸಿನಿಮಾವನ್ನು ಎರಡು ಭಾಷೆಗಳಲ್ಲಿ ಬಿಡುಗಡೆ ಮಾಡಲಾಗಿತ್ತು. ಕನ್ನಡ ಹಾಗೂ ತೆಲುಗು ಎರಡೂ ಭಾಷೆಯಲ್ಲಿಯೂ ಈ ಸಿನಿಮಾ ರಿಲೀಸ್ ಆಗಿದ್ದರಿಂದ ಬೃಹತ್ ಮೊತ್ತ ಕಲೆ ಹಾಕಬಹುದೆಂಬ ನಿರೀಕ್ಷೆಯಿತ್ತು. ಎಲ್ಲಕ್ಕಿಂತ ಹೆಚ್ಚಾಗಿ ತೆಲುಗು ನಿರ್ಮಾಣ ಸಂಸ್ಥೆ ಹಣ ಹಾಕಿದ್ದರಿಂದ ತೆಲುಗಿನಲ್ಲಿ ದೊಡ್ಡ ಮಟ್ಟಕ್ಕೆ ಕಲೆಕ್ಷನ್ ಆಗಿ ಎಂದು ನಿರೀಕ್ಷೆ ಮಾಡಲಾಗಿತ್ತು. ಆದರೆ, ಅದು ಸುಳ್ಳಾಗಿದೆ. ಆರು ದಿನಗಳ ಒಟ್ಟು ಕಲೆಕ್ಷನ್ ₹7.65 ಕೋಟಿ ಎಂದು ಸ್ಯಾಕ್ನಿಲ್ಕ್ ವರದಿ ಮಾಡಿದೆ.
ಮೊದಲನೇ ದಿನ ₹1.5 ಕೋಟಿ (ತೆಲುಗು+ಕನ್ನಡ)
ಎರಡನೇ ದಿನ ₹1.8 ಕೋಟಿ (ತೆಲುಗು+ಕನ್ನಡ)
ಮೂರನೇ ದಿನ ₹2.2 ಕೋಟಿ (ತೆಲುಗು+ಕನ್ನಡ)
ನಾಲ್ಕನೇ ದಿನ ₹0.87 ಕೋಟಿ (ತೆಲುಗು+ಕನ್ನಡ)
ಐದನೇ ದಿನ ₹0.68 ಕೋಟಿ (ತೆಲುಗು+ಕನ್ನಡ)
ಆರನೇ ದಿನ ₹0.60 ಕೋಟಿ (ತೆಲುಗು+ಕನ್ನಡ)
ಒಟ್ಟು ₹7.65 ಕೋಟಿ (ತೆಲುಗು+ಕನ್ನಡ)
ಪವನ್ ಎಂಟ್ರಿ ಆದ್ಮೇಲೆ ಏನು ಗತಿ?
ಪವನ್ ಕಲ್ಯಾಣ್ ಸಿನಿಮಾ 'ಹರಿ ಹರ ವೀರಮಲ್ಲು' ಸಿನಿಮಾ ಥಿಯೇಟರ್‌ಗೆ ಲಗ್ಗೆ ಇಡುತ್ತಿದೆ. ಈ ಸಿನಿಮಾ ಚಿತ್ರಮಂದಿರಕ್ಕೆ ಲಗ್ಗೆ ಇಟ್ಟ ಬಳಿಕ ಜೂನಿಯರ್ ಸಿನಿಮಾ ಕಥೆಯೇನು? ಎನ್ನುವ ಪ್ರಶ್ನೆಯಿದೆ. ಯಾಕಂದ್ರೆ, ಕನ್ನಡಕ್ಕಿಂತ ತೆಲುಗಿನಲ್ಲಿ ಹೆಚ್ಚು ಕಲೆಕ್ಷನ್ ಆಗಿದೆ. ಹೀಗಾಗಿ 'ಜೂನಿಯರ್' ತೆಲುಗು ವರ್ಷನ್‌ಗೆ ದೊಡ್ಡ ಪೆಟ್ಟುಬೀಳುವ ಸಾಧ್ಯತೆಯಿದೆ.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications











