Junior Day 8 Box Office: 'ಜೂನಿಯರ್' ಬಳಿ 8ನೇ ದಿನವೂ ಅದೇ ಜೋಷ್ ಇದೆಯಾ? ಬಾಕ್ಸಾಫೀಸ್‌ನಲ್ಲಿ ಏನಾಗಿದೆ?

ಕಳೆದ ವಾರ ಸೈಲೆಂಟ್ ಆಗಿದ್ದ ಸ್ಯಾಂಡಲ್‌ವುಡ್‌ಗೆ ಸ್ವಲ್ಪ ಬೂಸ್ಟ್ ಕೊಟ್ಟಿದ್ದು ಎರಡು ಸಿನಿಮಾಗಳು. ಒಂದು ಯುವ ರಾಜ್‌ಕುಮಾರ್ ಅಭಿನಯದ 'ಎಕ್ಕ'. ಇನ್ನೊಂದು ಕಿರೀಟಿ ನಟನೆಯ 'ಜೂನಿಯರ್'. ಈ ಎರಡೂ ಸಿನಿಮಾಗಳು ಸಿನಿಪ್ರಿಯರನ್ನು ಥಿಯೇಟರ್‌ ಕಡೆಗೆ ಕರೆದುಕೊಂಡು ಬರುವುದಕ್ಕೆ ಒಂದು ಹೆಜ್ಜೆ ಮುಂದಿಟ್ಟಿದ್ದವು. ಗಾಲಿ ಜನಾರ್ಧನ ರೆಡ್ಡಿಯ ಪುತ್ರ ಕಿರೀಟಿ ಇದೇ ಮೊದಲ ಬಾರಿಗೆ ಬೆಳ್ಳಿ ಪರದೆ ಮೇಲೆ 'ಜೂನಿಯರ್' ಆಗಿ ಕಾಣಿಸಿಕೊಂಡಿದ್ದು, ಹೊಸ ಪರ್ವಕ್ಕೆ ನಾಂದಿ ಹಾಡಿದೆ.

ಪರ್ಫೆಮೆನ್ಸ್ ಬಗ್ಗೆ ನಿರೀಕ್ಷೆ ಇರದ ಪ್ರೇಕ್ಷಕರಿಗೆ ಕಿರೀಟಿ ಅಚ್ಚರಿ ಮೂಡಿಸಿದ್ದರು. ಡ್ಯಾನ್ಸ್, ಸ್ಟಂಟ್‌ಗಳಿಂದ ಕನ್ನಡಕ್ಕೊಬ್ಬ ಸ್ಟಾರ್ ನಟ ಸಿಕ್ಕೇಬಿಟ್ಟ ಅಂತ ಸಿನಿಮಾ ಮಂದಿನೂ ನಿಟ್ಟುಸಿರು ಬಿಟ್ಟಿದ್ದರು. ಪ್ರೇಕ್ಷಕರಿಗಂತೂ ಕಿರೀಟಿ ಥೇಟ್ ಅಪ್ಪು ರೀತಿಯೇ ಕಂಡಿದ್ದರು. ಹೀರೋ ಆಗಿ ಪುನೀತ್ ರಾಜ್‌ಕುಮಾರ್ ಜಬರ್ದಸ್ತ್ ಎಂಟ್ರಿ ಕೊಟ್ಟ ರೀತಿಯೇ ಕಿರೀಟಿ ಎಂಟ್ರಿ ಆಗಿದೆ. ಸಿನಿಮಾ ನೋಡಿದವರು ಮನಸಾರೆ ಹೊಗಳಿದ್ದಾರೆ.

Kireeti Reddy debut movie Junior day 8 Kannada and Telugu Box Office collection report

ಹಾಗಂದ ಮಾತ್ರಕ್ಕೆ ಬಾಕ್ಸಾಫೀಸ್‌ನಲ್ಲಿ ದೊಡ್ಡ ಮಟ್ಟಕ್ಕೆ ಯಶಸ್ಸು ಕಂಡಿದೆ ಅಂತ ಹೇಳುವುದಕ್ಕೆ ಆಗುವುದಿಲ್ಲ. ಕಿರೀಟಿಯ ಚೊಚ್ಚಲ ಸಿನಿಮಾ 'ಜೂನಿಯರ್' ಕನ್ನಡ ಹಾಗೂ ತೆಲುಗು ಎರಡು ಭಾಷೆಗಳಲ್ಲಿ ರಿಲೀಸ್ ಆಗಿತ್ತು. ಎರಡೂ ಭಾಷೆಗಳಲ್ಲೂ ಹೊಸ ಪ್ರತಿಭೆಗೆ ಸಿಗಬೇಕಾದ ರೆಸ್ಪಾನ್ಸ್ ಸಿಕ್ಕಿದೆ. ಮೊದಲ 7 ದಿನಗಳು ಸ್ಟಡಿಯಾಗಿದ್ದ ಬಾಕ್ಸಾಫೀಸ್‌ ಕಲೆಕ್ಷನ್ 8ನೇ ದಿನ ಎರಡೂ ಭಾಷೆಗಳಲ್ಲಿ ಗಣನೀಯವಾಗಿ ಕುಸಿದಿದೆ. ಹಾಗಿದ್ದರೆ, 8ನೇ ದಿನ 'ಜೂನಿಯರ್' ಬಾಕ್ಸಾಫೀಸ್ ಕಲೆಕ್ಷನ್ ಎಷ್ಟು? ತಿಳಿಯುವುದಕ್ಕೆ ಮುಂದೆ ಓದಿ.

'ಜೂನಿಯರ್' 8ನೇ ದಿನ ಗಳಿಸಿದ್ದೆಷ್ಟು?

ಜನಾರ್ಧನ ರೆಡ್ಡಿ ಪುತ್ರನ ಸಿನಿಮಾ 'ಜೂನಿಯರ್' 8ನೇ ದಿನ ಶೇ. 50ಕ್ಕೂ ಅಧಿಕ ಡ್ರಾಪ್ ಕಂಡಿದೆ. ಸ್ಯಾಕ್ನಿಲ್ಕ್.ಕಾಮ್ ಪ್ರಕಾರ, 8ನೇ ದಿನ ಎರಡೂ ಭಾಷೆಗಳಲ್ಲೂ ಸಿನಿಮಾ ಡ್ರಾಪ್ ಆಗಿದೆ. ಇಷ್ಟು ದಿನ ತೆಲುಗು ಭಾಷೆಯಲ್ಲಿ ಹೆಚ್ಚು ಕಲೆಕ್ಷನ್ ಮಾಡುತ್ತಿತ್ತು. ಆದರೆ, 8ನೇ ದಿನ ತೆಲುಗಿನಲ್ಲಿ ಕೇವಲ 7 ಲಕ್ಷ ರೂಪಾಯಿ, ಕನ್ನಡದಲ್ಲಿ 8 ಲಕ್ಷ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು ಸ್ಯಾಕ್ನಿಲ್ಕ್ ವರದಿ ಮಾಡಿದೆ. ಅದೇ 7ನೇ ದಿನ ಎರಡೂ ಭಾಷೆಯಿಂದ 40 ಲಕ್ಷ ರೂಪಾಯಿ ಹತ್ತಿರ ಕಲೆಕ್ಷನ್ ಮಾಡಿತ್ತು.

Kireeti Reddy debut movie Junior day 8 Kannada and Telugu Box Office collection report

'ಜೂನಿಯರ್' ಡ್ರಾಪ್‌ಗೆ ಕಾರಣವೇನು?

ಕಿರೀಟಿ ಸಿನಿಮಾ 'ಜೂನಿಯರ್' ಒಂದೇ ದಿನ ಈ ಮಟ್ಟಿಗೆ ಡ್ರಾಪ್ ಆಗುವುದಕ್ಕೆ ಎರಡು ಕಾರಣವಿದೆ. ತೆಲುಗಿನಲ್ಲಿ ಇನ್ನೇನು ಒಳ್ಳೆಯ ಟಾಕ್ ಬರುವಾಗಲೇ ಪವನ್ ಕಲ್ಯಾಣ್ ನಟಿಸಿದ 'ಹರಿ ಹರ ವೀರಮಲ್ಲು' ಸಿನಿಮಾ ರಿಲೀಸ್ ಆಗಿತ್ತು. ಸಹಜವಾಗಿ ತೆಲುಗು ಮಂದಿ ಪವನ್‌ ಕಲ್ಯಾಣ್ ಸಿನಿಮಾ ಕಡೆಗೆ ಮುಖ ಮಾಡಿದ್ದಾರೆ. ಇನ್ನು ಕನ್ನಡದಲ್ಲಿ ರಾಜ್ ಬಿ ಶೆಟ್ಟಿ ನಿರ್ಮಾಣದ 'ಸು ಫ್ರಮ್ ಸೋ'ಗೆ ರಿಲೀಸ್ ಆಗಿದ್ದು, ಉತ್ತಮ ಮೌತ್‌ಟಾಕ್ ಸಿಕ್ಕಿದ್ದರಿಂದ ಕನ್ನಡಿಗರು ಹೊಸ ಸಿನಿಮಾ ಕಡೆಗೆ ಒಲವು ತೋರಿದ್ದರು.

₹10 ಕೋಟಿ ಕ್ಲಬ್ ಸೇರಿತೇ 'ಜೂನಿಯರ್'?

ಕಿರೀಟಿ ಬಿಟ್ಟು ಸಿನಿಮಾದಲ್ಲಿ ಹೆಚ್ಚು ಗಮನ ಸೆಳೆದವರು ಅಂದರೆ, ಅದು ಕ್ರೇಜಿಸ್ಟಾರ್ ರವಿಚಂದ್ರನ್. 'ಜೂನಿಯರ್' ಸಿನಿಮಾದಲ್ಲಿ ಕಿರೀಟಿ ತಂದೆಯ ಪಾತ್ರದಲ್ಲಿ ನಟಿಸಿದ್ದು, ಪ್ರೇಕ್ಷಕರ ಕಣ್ಣುಗಳಲ್ಲಿ ನೀರು ಬರುವಷ್ಟು ಸಹಜವಾಗಿ ನಟಿಸಿದ್ದಾರೆ. ಇನ್ನು ಈ ಸಿನಿಮಾ 8 ದಿನಗಳಲ್ಲಿ ತೆಲುಗು ಹಾಗೂ ಕನ್ನಡ ಎರಡೂ ಭಾಷೆ ಸೇರಿ ವಿಶ್ವದಾದ್ಯಂತ 10.1 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು ಸ್ಯಾಕ್ನಿಲ್ಕ್ ವರದಿ ಮಾಡಿದೆ.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

More from Filmibeat

English summary
Kireeti Reddy debut movie Junior day 8 Kannada and Telugu Box Office collection report:
Read more about: janardhan reddy movie
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X