Love Mocktail 3 Box Office Day 5:5ನೇ ದಿನ ಬಾಕ್ಸಾಫೀಸ್‌ನಲ್ಲಿ ಪಾಸ್; ಸೋಮವಾರ ಪರೀಕ್ಷೆ ಗೆದ್ದ 'ಲವ್ ಮಾಕ್ಟೇಲ್ 3'

ಯಾವುದೇ ಸಿನಿಮಾ ಆಗಿರಬಹುದು, ಮೊದಲ ಮೂರು-ನಾಲ್ಕು ದಿನ ಬಾಕ್ಸಾಫೀಸ್‌ನಲ್ಲಿ ಒಳ್ಳೆಯ ಕಲೆಕ್ಷನ್ ಆಗುತ್ತೆ. ಆದರೆ, ಮೊದಲ ಸೋಮವಾರದ ಸಿನಿಮಾದ ಅಸಲಿ ತಾಕತ್ತೇನು ಅಂತ ಹೇಳುತ್ತೆ. ವೀಕ್ ಡೇಸ್‌ನ ಮೊದಲ ದಿನ ಜನರು ಥಿಯೇಟರ್‌ಗೆ ನುಗ್ಗಿದರೆ, ಆ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಹೆಚ್ಚು ದಿನ ಉಳಿಯುತ್ತೆ ಅನ್ನೋದು ಸಿನಿಮಾ ಮಂದಿಯ ನಂಬಿಕೆ. ಅದು ಬಹಳಷ್ಟು ಸಂದರ್ಭಗಳಲ್ಲಿ ನಿಜವಾಗಿದೆ ಕೂಡ.

'ಲವ್ ಮಾಕ್ಟೇಲ್ 3' ಮೇಲೂ ಕೂಡ ಇದೇ ನಿರೀಕ್ಷೆಯಿತ್ತು. ಸೋಮವಾರದ ಪರೀಕ್ಷೆಯಲ್ಲಿ ಡಾರ್ಲಿಂಗ್ ಕೃಷ್ಣ ಸಿನಿಮಾ ಗೆದ್ದರೆ, ಬಾಕ್ಸಾಫೀಸ್‌ನಲ್ಲಿ ಒಳ್ಳೆಯ ಗಳಿಕೆ ಮಾಡೋದು ಕನ್ಫರ್ಮ್ ಅಂತ ಲೆಕ್ಕಾಚಾರ ಹಾಕಿದ್ದರು. ಅದರಂತೆ, ಬಾಕ್ಸಾಫೀಸ್‌ನಲ್ಲಿ ಸೋಮವಾರದ ಪರೀಕ್ಷೆಯನ್ನು ಗೆದ್ದಾಗಿದೆ. ಟ್ರೇಡ್ ಎಕ್ಸ್‌ಪರ್ಟ್‌ಗಳ ಪ್ರಕಾರ 'ಲವ್ ಮಾಕ್ಟೇಲ್ 3' ಸೋಮವಾರ ಉತ್ತಮ ಕಲೆಕ್ಷನ್ ಅನ್ನೇ ಮಾಡಿದೆ.

Love Mocktail 3 Day 5 Box Office Collection report Darling Krishna passed Monday test

ಡಾರ್ಲಿಂಗ್ ಕೃಷ್ಣ ನಿರ್ದೇಶಿಸಿ, ನಿರ್ಮಿಸಿ, ನಟಿಸಿರುವ ಈ ಸಿನಿಮಾಗೆ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಫ್ಯಾಮಿಲಿ ಆಡಿಯನ್ಸ್ ಈ ಸಿನಿಮಾ ನೋಡುವುದಕ್ಕೆ ಹೆಜ್ಜೆ ಆಸಕ್ತಿ ತೋರುತ್ತಿದ್ದಾರೆ. ಹೀಗಾಗಿ ಬಾಕ್ಸಾಫೀಸ್‌ನಲ್ಲಿ ಉತ್ತಮ ಗಳಿಕೆ ಕಂಡಿದೆ. ಹಾಗಿದ್ದರೆ, 'ಲವ್ ಮಾಕ್ಟೇಲ್ 3' 5ನೇ ದಿನ ಬಾಕ್ಸಾಫೀಸ್‌ನಲ್ಲಿ ಗಳಿಸಿದ್ದು ಎಷ್ಟು? ಸೋಮವಾರದ ಪರೀಕ್ಷೆ ಗೆಲ್ಲೋಕೆ ಕಾರಣಗಳೇನು? ಅಂತ ನೋಡುವುದಾರೇ,

'ಲವ್ ಮಾಕ್ಟೇಲ್ 3' 5ನೇ ದಿನದ ಕಲೆಕ್ಷನ್

ಡಾರ್ಲಿಂಗ್ ಕೃಷ್ಣ ನಿರ್ದೇಶನದಲ್ಲಿ ಮತ್ತೆ ಗೆದ್ದಿದ್ದಾರೆ. ಸತತ ಮೂರು ಸೀಕ್ವೆಲ್ ಅನ್ನು ಗೆಲ್ಲಿಸಿದ ಹೆಗ್ಗಳಿಕೆ ಇವರ ಮೇಲಿದೆ. 'ಲವ್ ಮಾಕ್ಟೇಲ್ 3' ಡಾರ್ಲಿಂಗ್ ಕೃಷ್ಣ ಹಾಗೂ ಅವರ ತಂಡಕ್ಕೆ ಸೂಪರ್ ಸಕ್ಸಸ್ ತಂದು ಕೊಟ್ಟಿದೆ. ಬಾಕ್ಸಾಫೀಸ್‌ ಲೆಕ್ಕಾಚಾರಗಳನ್ನು ನೀಡುವ ಸ್ಯಾಕ್ನಿಲ್ಕ್ ಈ ಸಿನಿಮಾದ 5ನೇ ದಿನದ ಕಲೆಕ್ಷನ್ ಅನ್ನು ರಿವೀಲ್ ಮಾಡಿದೆ. ಇದರ ವರದಿ ಪ್ರಕಾರ, ಮೊದಲ ಸೋಮವಾರ ಸುಮಾರು 75 ಲಕ್ಷ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು ಹೇಳಿದೆ.

ವಿತರಕರ ವಲಯದ ಲೆಕ್ಕಾಚಾರವೇನು?

'ಲವ್ ಮಾಕ್ಟೇಲ್ 3' ಸಿನಿಮಾ ಬಗ್ಗೆ ಕರ್ನಾಟಕದ ವಿತರಕರ ವಲಯದಲ್ಲಿ ಬೇರೆನೇ ಲೆಕ್ಕಾಚಾರವಿದೆ. ಇಲ್ಲಿನ ಲೆಕ್ಕಾಚಾರಗಳ ಪ್ರಕಾರ, 'ಲವ್ ಮಾಕ್ಟೇಲ್ 3' ಮೊದಲ ಸೋಮವಾರ ಅಂದರೆ, ಐದನೇ ದಿನ 1 ಕೋಟಿಗೂ ಅಧಿಕ ಕಲೆಕ್ಷನ್ ಆಗಿದೆ. ಹೀಗಾಗಿ ಸ್ಕ್ರೀನ್‌ಗಳ ಸಂಖ್ಯೆ ಕೂಡ ಹೆಚ್ಚಾಗುವ ಸಾಧ್ಯತೆಯಿದೆ. ಕೆವಿಎನ್ ಪ್ರೊಡಕ್ಷನ್‌ಗೆ ಈ ವರ್ಷದ ಮೊದಲ ಗೆಲುವು ಸಿಕ್ಕಿದ್ದು, 'ಧುರಂಧರ್ 2' ವಿರುದ್ಧ ಇನ್ನಷ್ಟು ಪ್ರಮೋಟ್ ಮಾಡುವ ಸಾಧ್ಯತೆಯಿದೆ.

Love Mocktail 3 Day 5 Box Office Collection report Darling Krishna passed Monday test

5 ದಿನಗಳ ಒಟ್ಟು ಕಲೆಕ್ಷನ್ ಎಷ್ಟು?

'ಲವ್ ಮಾಕ್ಟೇಲ್ 3' ಸಿನಿಮಾವನ್ನು ಜನರು ಮೆಚ್ಚಿಕೊಂಡಿದ್ದಾಗಿದೆ. ಮೊದಲ ನಾಲ್ಕು ದಿನ ಸಿನಿಮಾ ಕಲೆಕ್ಷನ್ ನಿರೀಕ್ಷೆ ಮಾಡಿದಷ್ಟು ಆಗಿದೆ. ವೀಕೆಂಡ್‌ನಲ್ಲಿ ಸಿನಿಮಾ ಬಹುತೇಕ ಹೌಸ್‌ಫುಲ್ ಆಗಿದೆ. ಹೀಗಾಗಿ ಸಿನಿಮಾ ₹10 ಕೋಟಿ ಕ್ಲಬ್ ಸೇರುವ ಸನಿಹದಲ್ಲಿದೆ. ಕರ್ನಾಟಕದ ವಿತರಕರ ವಲಯದಲ್ಲಿ ಸಿಕ್ಕಿರುವ ಲೆಕ್ಕಾಚಾರದ ಪ್ರಕಾರೆ, ಈ 5 ದಿನಗಳ ಒಟ್ಟು ಕಲೆಕ್ಷನ್ ಹೀಗಿದೆ.

5 ದಿನಗಳ 'ಲವ್ ಮಾಕ್ಟೇಲ್ 3' ಕಲೆಕ್ಷನ್ (ವಿತರಕರ ವಲಯದ ಲೆಕ್ಕ)

ಮೊದಲ ದಿನ ₹2 ಕೋಟಿ (ಅಂದಾಜು)
2ನೇ ದಿನ ₹1.5 ಕೋಟಿ (ಅಂದಾಜು)
3ನೇ ದಿನ ₹2.5 ಕೋಟಿ (ಅಂದಾಜು)
4ನೇ ದಿನ ₹2 ಕೋಟಿ (ಅಂದಾಜು)
5ನೇ ದಿನ ₹1 ಕೋಟಿ (ಅಂದಾಜು)
ಒಟ್ಟು ₹9 ಕೋಟಿ (Net)

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com ಬೇರೆ ಮೂಲಗಳು ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

English summary
Love Mocktail 3 Day 5 Box Office Collection report Darling Krishna passed Monday test.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X