16 ದಿನಗಳಲ್ಲಿ ₹150 ಕೋಟಿ ಗಳಿಸಲು 'ಮಹಾವತಾರ್ ನರಸಿಂಹ' ಸಿನಿಮಾದ ಎಷ್ಟು ಲಕ್ಷ ಟಿಕೆಟ್‌ಗಳು ಸೇಲ್ ಆಯ್ತು ಗೊತ್ತೇ?

ಜುಲೈ ತಿಂಗಳ ಬಾಕ್ಸಾಫೀಸ್‌ನಲ್ಲಿ ಎರಡು ಸಿನಿಮಾಗಳು ಅಚ್ಚರಿ ಮೂಡಿಸಿದ್ದವು. ಅವುಗಳಲ್ಲಿ ಒಂದು ರಾಜ್ ಬಿ ಶೆಟ್ಟಿ ನಿರ್ಮಾಣ 'ಸು ಫ್ರಮ್ ಸೋ'. ಇನ್ನೊಂದು ಹೊಂಬಾಳೆ ಸಹ ನಿರ್ಮಾಣ ಮಾಡಿದ 'ಮಹಾವತಾರ್ ನರಸಿಂಹ'. ಈ ಎರಡೂ ಸಿನಿಮಾಗಳು ಈ ಮಟ್ಟಿಗೆ ಸದ್ದು ಮಾಡುತ್ತವೆ ಅನ್ನೋದನ್ನು ನಿರೀಕ್ಷೆ ಕೂಡ ಮಾಡಿರಲಿಲ್ಲ. ಆದರೆ, ಬಾಕ್ಸಾಫೀಸ್‌ನಲ್ಲಿ ಈ ಎರಡೂ ಸಿನಿಮಾಗಳ ಕಲೆಕ್ಷನ್ ಕ್ರೇಜಿ ಆಗಿವೆ. ಅದರಲ್ಲೂ ಮೂರನೇ ವೀಕೆಂಡ್‌ನಲ್ಲಿ ಕಲೆಕ್ಷನ್ ಮತ್ತಷ್ಟು ಏರಿಕೆಯಾಗಿದೆ.

'ಮಹಾವತಾರ್ ನರಸಿಂಹ' ಇದೊಂದು ಆನಿಮೇಷನ್ ಪೌರಾಣಿಕ ಸಿನಿಮಾ. ಹಿರಣ್ಯ ಕಶ್ಯಪು, ನರಸಿಂಹ ಹಾಗೂ ಭಕ್ತ ಪ್ರಹ್ಲಾದನ ಕಥೆಗೆ ಕಾರ್ಟೂನ್ ಟಚ್ ಕೊಟ್ಟು ತೆರೆಮೇಲೆ ತಂದಿರುವ ಈ ಸಿನಿಮಾಗೆ ಪ್ರೇಕ್ಷಕರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಮೊದಲೆರಡು ವಾರ ಭರ್ಜರಿ ಕಲೆಕ್ಷನ್ ಮಾಡಿದ್ದ ಈ ಸಿನಿಮಾ ಮೂರನೇ ವಾರದಲ್ಲೂ ಉತ್ತಮ ಗಳಿಕೆ ಕಂಡಿದೆ. ಅದರಲ್ಲೂ ಮೂರನೇ ಶನಿವಾರ ಈ ಸಿನಿಮಾ ಕ್ರೇಜಿ ಕಲೆಕ್ಷನ್ ಆಗಿದೆ.

Mahavatar Narsimha movie tickets pre-sale box office collection report day-wise until the 16th day

ಈಗಾಗಲೇ 150 ಕೋಟಿ ಕ್ಲಬ್ ಸೇರಿರುವ 'ಮಹಾವತಾರ್ ನರಸಿಂಹ' ನಿನ್ನೆ, ಅಂದರೆ ಶನಿವಾರ (ಆಗಸ್ಟ್ 9) ಬಾಕ್ಸಾಫೀಸ್‌ನಲ್ಲಿ ಶೇ. 141ರಷ್ಟು ಜಿಗಿತ ಕಂಡಿದೆ. ನಿನ್ನೆ ಒಂದೇ ದಿನ ಭಾರತದಾದ್ಯಂತ ಈ ಸಿನಿಮಾದ ಐದು ಲಕ್ಷಕ್ಕೂ ಅಧಿಕ ಟಿಕೆಟ್‌ಗಳು ಸೇಲ್ ಆಗಿವೆ. ಹಾಗಿದ್ದರೆ, 'ಮಹಾವತಾರ್ ನರಸಿಂಹ' 16ನೇ ದಿನ ಬಾಕ್ಸಾಫೀಸ್‌ನಲ್ಲಿ ಗಳಿಸಿದ್ದು ಎಷ್ಟು? ಪ್ರತಿ ದಿನ ಈ ಸಿನಿಮಾದ ಎಷ್ಟು ಟಿಕೆಟ್‌ಗಳು ಸೇಲ್ ಆಗಿವೆ? ತಿಳಿಯುವುದಕ್ಕೆ ಮುಂದೆ ಓದಿ.

ಅತೀ ಹೆಚ್ಚು ಟಿಕೆಟ್ ಸೇಲ್ ಆದ 3ನೇ ಸಿನಿಮಾ

ಹೊಂಬಾಳೆ ಫಿಲ್ಮ್ಸ್ ಸಹ ನಿರ್ಮಾಣ ಮಾಡಿದ 'ಮಹಾವತಾರ್ ನರಸಿಂಹ' ಸಿನಿಮಾ ಟಿಕೆಟ್‌ಗಳು ದಾಖಲೆ ಮಟ್ಟದಲ್ಲಿ ಸೇಲ್ ಆಗಿವೆ. ಬುಕ್‌ ಮೈ ಶೋನಲ್ಲಿ ಇಲ್ಲಿವರೆಗೂ ಸುಮಾರು 42 ಲಕ್ಷಕ್ಕೂ ಅಧಿಕ ಟಿಕೆಟ್‌ಗಳು ಸೇಲ್ ಆಗಿವೆ. ಅದರಲ್ಲೂ 16ನೇ ದಿನ ಭಾರತದಾದ್ಯಂತ ಈ ಸಿನಿಮಾ ನೋಡುವುದಕ್ಕೆ ಬುಕ್ ಮೈ ಶೋನಲ್ಲಿ 5.87 ಲಕ್ಷ ಟಿಕೆಟ್‌ಗಳು ಸೇಲ್ ಆಗಿವೆ. ಮೂರನೇ ವೀಕೆಂಡ್‌ನಲ್ಲಿ ಆನಿಮೇಷನ್ ಸಿನಿಮಾವೊಂದು ಇಷ್ಟೊಂದು ಟಿಕೆಟ್‌ಗಳನ್ನು ಸೇಲ್ ಮಾಡಿದ್ದು ಇದೇ ಮೊದಲು.

ಯಾವ್ಯಾವ ದಿನ ಎಷ್ಟು ಟಿಕೆಟ್ ಸೇಲ್

'ಮಹಾವತಾರ್ ನರಸಿಂಹ' ರಿಲೀಸ್ ಆದ ದಿನದಿಂದ ಬುಕ್‌ ಮೈ ಶೋ ದಾಖಲೆ ಮಟ್ಟದಲ್ಲಿ ಟಿಕೆಟ್‌ಗಳನ್ನು ಸೇಲ್ ಮಾಡುತ್ತಿದೆ. ಪ್ರತಿ ದಿನವೂ ಈ ಟಿಕೆಟ್ ಖರೀದಿಸುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಮೊದಲ ದಿನ 28 ಸಾವಿರ ಟಿಕೆಟ್‌ಗಳು ಸೇಲ್ ಆದರೆ, 16ನೇ ದಿನ 5.87 ಲಕ್ಷ ಟಿಕೆಟ್‌ಗಳು ಖರೀದಿಯಾಗಿದೆ. ಹಿಂದಿ, ತೆಲುಗು ಹಾಗೂ ಕನ್ನಡ ಭಾಷೆಯಲ್ಲಿ ಹೆಚ್ಚು ಟಿಕೆಟ್‌ಗಳು ಸೇಲ್ ಆಗಿರೋದು ವಿಶೇಷ. ಒಟ್ಟ ಯಾವ್ಯಾವ ದಿನ ಎಷ್ಟೆಷ್ಟು ಟಿಕೆಟ್‌ಗಳು ಸೇಲ್ ಆಗಿವೆ ಅಂತ ನೋಡುವುದಾರೇ,

16 ದಿನಗಳ ಟಿಕೆಟ್ ಮಾರಾಟ (ಬುಕ್ ಮೈ ಶೋ)

Pre Sales- 28K
Fri- 87.01K
Sat- 209.54K
Sun- 232.85K
Mon- 182.66K
Tue- 231.85K
Wed- 203.87K
Thu- 249.71K
2nd Fri- 334.91K
2nd Sat- 499.54K
2nd Sun- 388.24K
2nd Mon- 205.61K
2nd Tue- 209.65K
2nd Wed- 159.63K
2nd Thu- 166.72K

3rd Fri- 265.06K
3rd Sat- 587.46K

ಒಟ್ಟು- 42,41,850

Mahavatar Narsimha movie tickets pre-sale box office collection report day-wise until the 16th day

16 ದಿನಗಳ ಕಲೆಕ್ಷನ್ ಎಷ್ಟು?

'ಮಹಾವತಾರ್ ನರಸಿಂಹ' ಸಿನಿಮಾ 16ನೇ ದಿನ 27 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ. ಹಾಗೇ ಈ 16 ದಿನಗಳಲ್ಲಿ ವಿಶ್ವದಾದ್ಯಂತ 175 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆಯೆಂದು ಎಂದು ನಿರ್ಮಾಣ ಸಂಸ್ಥೆಯ ಮೂಲಗಳು ತಿಳಿಸಿವೆ. ಅದೇ ಇನ್ನೊಂದು ಕಡೆ ಸ್ಯಾಕ್ನಿಲ್ಕ್ ಪ್ರಕಾರ ಈ ಸಿನಿಮಾ ಭಾರತದಲ್ಲಿ 16ನೇ ದಿನ 19.50 ಕೋಟಿ ಕಲೆಕ್ಷನ್ ಮಾಡಿದೆ, 16 ದಿನಗಳಲ್ಲಿ 145 ಕೋಟಿ ರೂಪಾಯಿ ಗಳಿಸಿದೆ ಎಂದು ವರದಿಯಾಗಿದೆ.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

More from Filmibeat

English summary
Animation movie Mahavatar Narsimha tickets pre-sale and box office collection report day-wise until the 16th day.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X