ರೀ-ರಿಲೀಸ್‌ ಆದ ಮೊದಲ ದಿನವೇ 'ಸಲಾರ್' ಹಿಂದಿಕ್ಕಿದ 'ಖಲೇಜಾ'; ಬಾಕ್ಸಾಫೀಸ್‌ನಲ್ಲಿ ಮಹೇಶ್ ಬಾಬು ದರ್ಬಾರ್

ಟಾಲಿವುಡ್‌ ಸೂಪರ್‌ಸ್ಟಾರ್ ಮಹೇಶ್ ಬಾಬು ನಟಿಸಿದ ಈ ಸಿನಿಮಾ 15 ವರ್ಷಗಳ ಹಿಂದೆ ರಿಲೀಸ್ ಆಗಿತ್ತು. ಆಗ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಹೇಳಿಕೊಳ್ಳುವಂತಹ ಸದ್ದು ಮಾಡಲಿಲ್ಲ. ಮಹೇಶ್ ಬಾಬು, ಅನುಷ್ಕಾ ಶೆಟ್ಟಿ, ಪ್ರಕಾಶ್ ರಾಜ್ ಅಂತಹ ದಿಗ್ಗಜರು ನಟಿಸಿದ್ದರೂ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಮಕಾಡೆ ಮಲಗಿತ್ತು. ಸುಮಾರು ₹25 ಕೋಟಿಗೂ ಅಧಿಕ ನಷ್ಟ ಆಗಿತ್ತು. ಹೀಗಿದ್ದರೂ ನಿನ್ನೆ (ಮೇ 30) ಮತ್ತೆ ಮರು ಬಿಡುಗಡೆ ಮಾಡಲಾಗಿದೆ. ಆ ಸಿನಿಮಾವೇ 'ಖಲೇಜಾ'.

'ಖಲೇಜಾ' ಸಿನಿಮಾವನ್ನು ಮರು ಬಿಡುಗಡೆ ಮಾಡಲಾಗಿದೆ. 15 ವರ್ಷಗಳ ಹಿಂದಿನ ಸಿನಿಮಾವನ್ನು ಆಧುನೀಕರಣ ಗೊಳಿಸಲಾಗಿದೆ. 4K ವರ್ಷನ್‌ನಲ್ಲಿ ರಿಲೀಸ್ ಆಗಿರುವ ಈ ಸಿನಿಮಾ ಮೊದಲ ದಿನವೇ ಬಾಕ್ಸಾಫೀಸ್‌ನಲ್ಲಿ ಸೆನ್ಸೇಷನ್ ಸೃಷ್ಟಿಸಿದೆ. ಹಾಗಂತ ಕೇವಲ ಆಂಧ್ರ ಪ್ರದೇಶ, ತೆಲಂಗಾಣ ಅಷ್ಟೇ ಅಲ್ಲ. ವಿದೇಶದಲ್ಲಿಯೂ ಈ ಸಿನಿಮಾ ಮಸ್ತ್ ರೆಸ್ಪಾನ್ಸ್ ಸಿಕ್ಕಿದೆ. ಇದು ಸಿನಿಮಾ ಮಂದಿಯ ಅಚ್ಚರಿಗೆ ಕಾರಣವಾಗಿದೆ.

Mahesh Babu Anushka Shetty starrer Khaleja Re Release Day 1 Box office collection report

ಟಾಲಿವುಡ್‌ನಲ್ಲೀಗ ಸೂಪರ್‌ಸ್ಟಾರ್ ಸಿನಿಮಾಗಳನ್ನು ರೀ-ರಿಲೀಸ್ ಮಾಡುವ ಪರ್ವ ಶುರುವಾಗಿದೆ. ಕೆಲವು ಸಿನಿಮಾಗಳಿಗೆ ಇಲ್ಲಿ ಮಸ್ತ್ ರೆಸ್ಪಾನ್ಸ್ ಕೂಡ ಸಿಕ್ಕಿತ್ತು. ಈ ಬೆನ್ನಲ್ಲೇ ಮಹೇಶ್ ಬಾಬು ಹಾಗೂ ಅನುಷ್ಕಾ ಶೆಟ್ಟಿ ನಟಿಸಿದ 'ಖಲೇಜಾ' ಸಿನಿಮಾ ಕೂಡ ಸೇರಿದೆ. ತೆಲುಗಿನ ಸ್ಟಾರ್ ಡೈರೆಕ್ಟರ್ ತ್ರಿವಿಕ್ರಮ್ ಈ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದರು. ಹಾಗಿದ್ದರೆ, ಮರು ಬಿಡುಗಡೆಯಾಗಿರುವ ಈ ಆಕ್ಷನ್-ಕಾಮಿಡಿ ಸಿನಿಮಾದ ಮೊದಲ ದಿನ ಬಾಕ್ಸಾಫೀಸ್‌ನಲ್ಲಿ ಗಳಿಸಿದ್ದೆಷ್ಟು? ತಿಳಿಯುವುದಕ್ಕೆ ಮುಂದೆ ಓದಿ.

ಅಡ್ವಾನ್ಸ್ ಬುಕಿಂಗ್‌ನಿಂದ ಬಂದಿದ್ದೆಷ್ಟು?

ಮಹೇಶ್ ಬಾಬು, ಅನುಷ್ಕಾ ಶೆಟ್ಟಿಯ 'ಖಲೇಜಾ' ಸಿನಿಮಾವನ್ನು ನೋಡಿ ಫ್ಯಾನ್ಸ್ ಎಂಜಾಯ್ ಮಾಡಿದ್ದಾರೆ. ಟ್ರೇಡ್ ಟ್ರ್ಯಾಕರ್ ಸ್ಯಾಕ್ನಿಲ್ಕ್ ಪ್ರಕಾರ ಮಹೇಶ್ ಬಾಬು ಸಿನಿಮಾಗೆ ಆಂಧ್ರ ಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳಲ್ಲಿ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ನೈಟ್ ಶೋಗಳನ್ನು (ಮೇ 29) ಸೇರಿ ಮೊದಲ ದಿನ ಅಡ್ವಾನ್ಸ್ ಬುಕಿಂಗ್ ಅಂತಾಗಿದ್ದು ಬರೋಬ್ಬರು ₹3.50 ಕೋಟಿ ರೂಪಾಯಿ ಎಂದು ವರದಿಯಾಗಿದೆ. ಇತ್ತೀಚೆಗೆ ತೆಲುಗಿನಲ್ಲಿ ರೀ-ರಿಲೀಸ್ ಆದ ಸಿನಿಮಾಗಳ ಪೈಕಿ ಅತೀ ಹೆಚ್ಚು ಗಳಿಕೆ ಕಂಡ ಸಿನಿಮಾ ಎನಿಸಿಕೊಂಡಿದೆ.

ಮೊದಲ ದಿನ ಎಲ್ಲೆಲ್ಲಿ ಎಷ್ಟೆಷ್ಟು ಕಲೆಕ್ಷನ್?

'ಖಲೇಜಾ' ಸಿನಿಮಾ ಮೊದಲ ಸಿನಿಮಾ ದಕ್ಷಿಣ ಭಾರತ ಹಾಗೂ ವಿದೇಶದಲ್ಲಿ ಅದ್ಭುತ ಕಲೆಕ್ಷನ್ ಮಾಡಿದೆ. ಫಿಲ್ಮಿಬೀಟ್ ತೆಲುಗು ವರದಿ ಮಾಡಿರುವ ಪ್ರಕಾರ, 'ಖಲೇಜಾ' ಸಿನಿಮಾ ತೆಲುಗು ರಾಜ್ಯಗಳಿಂದ ಸುಮಾರು 3 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ. ಹಾಗೇ ಕರ್ನಾಟಕದಲ್ಲಿ ಈ ಸಿನಿಮಾ 1 ಕೋಟಿ ರೂಪಾಯಿಗೂ ಅಧಿಕ ಗಳಿಸಿದ್ದು, ಇನ್ನು ವಿದೇಶದಿಂದ ಸುಮಾರು 2 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಆಗಿದೆ ಎನ್ನಲಾಗಿದೆ. ಮೊದಲ ದಿನ ಒಟ್ಟು 6 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ ಎಂದು ವರದಿಯಾಗಿದೆ.

'ಸಲಾರ್' ಹಿಂದಿಕ್ಕಿದ 'ಖಲೇಜಾ'

ಇತ್ತೀಚೆಗೆ ಪ್ರಭಾಸ್, ಪ್ರಶಾಂತ್ ನೀಲ್ ಕಾಂಬಿನೇಷನ್‌ನಲ್ಲಿ ಬಂದಿದ್ದ ಸಲಾರ್ ಸಿನಿಮಾ ಕೂಡ ರೀ-ರಿಲೀಸ್ ಆಗಿತ್ತು. ಈ ಸಿನಿಮಾ 3 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಆಗಿತ್ತು. ಈಗ 'ಖಲೇಜಾ' ಆ ದಾಖಲೆಯನ್ನು ಮುರಿದಿದೆ. ಮೊದಲ ದಿನ ಕೇವಲ ಡೊಮೆಸ್ಟಿಕ್ ಕಲೆಕ್ಷನ್ 3.50 ಕೋಟಿ ರೂಪಾಯಿ ಆಗಿದ್ದು, ಮೊದಲ ದಿನ ಈ ಸಿನಿಮಾ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ವೀಕೆಂಡ್‌ನಲ್ಲಿ ಇನ್ನೂ ದೊಡ್ಡ ಕಲೆಕ್ಷನ್ ಆಗುವ ಸಾಧ್ಯತೆಯಿದೆ.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

More from Filmibeat

English summary
Mahesh Babu, Anushka Shetty starrer Khaleja Re Release Day 1 Box office collection report.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X