ಬೆಂಗಳೂರು ಹುಡುಗೀರು ಡಾ*ಗರ್ ಎಂದಿದ್ದ ಈ ಸಿನಿಮಾ 7 ದಿನದಲ್ಲಿ ₹100 ಕೋಟಿ ಕಲೆಕ್ಷನ್: ಕರ್ನಾಟಕದಲ್ಲೆಷ್ಟು?

ಇತ್ತೀಚೆಗೆ ಮಲಯಾಳಂ ಸಿನಿಮಾಗಳು ದೇಶಾದ್ಯಂತ ಗಮನ ಸೆಳೆಯುತ್ತಿವೆ. ವಿಭಿನ್ನ-ವಿಚಿತ್ರ ಕಂಟೆಂಟ್‌ನಿಂದ ಸಿನಿ ಪ್ರಿಯರಿಗೆ ಇಷ್ಟ ಆಗುತ್ತಿವೆ. ಇನ್ನು ಭಾಷೆ ಮರೆತು ಸಿನಿಮಾಗಳನ್ನು ನೋಡುವವರಿಗಂತೂ ಮಲಯಾಳಂ ಸಿನಿಮಾಗಳೇ ಬೇಕು. ಹೊಸ ಸಿನಿಮಾ ಯಾವಾಗ ರಿಲೀಸ್ ಆಗುತ್ತೆ ಅಂತ ಕಾಯುತ್ತಾ ಕೂರುವವರಿಗೇನು ಕಮ್ಮಿಯಿಲ್ಲ. ಅದರಲ್ಲೂ ಬೆಂಗಳೂರಿನಲ್ಲಿ ಮಲಯಾಳಂ ಸಿನಿಮಾಗಳನ್ನು ನೋಡುವವರ ಸಂಖ್ಯೆಯೀಗ ದುಪ್ಪಟ್ಟಾಗಿದೆ.

ಇಂತಹ ಸಮಯದಲ್ಲೇ 'ಲೋಕಾ' ಎನ್ನುವ ಮಲಯಾಳಂ ಸಿನಿಮಾವೊಂದು ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಕೇರಳದಲ್ಲಿ ಈ ಸಿನಿಮಾ ಕ್ರೇಜ್ ನೋಡಿ ಫಿಲ್ಮ್‌ ಮೇಕರ್ಸ್ ತಲೆಕೆಡಿಸಿಕೊಂಡಿದ್ದಾರೆ. ಯಾಕಂದ್ರೆ ಸಿನಿಮಾ ರಿಲೀಸ್ ಆದ ಕೇವಲ 7 ದಿನಗಳಲ್ಲಿ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ 100 ಕೋಟಿ ಕ್ಲಬ್ ಸೇರಿದೆ. ಅದೂ ಮಹಿಳಾ ಪ್ರಧಾನ ಸಿನಿಮಾವೊಂದು ಈ ಮಟ್ಟಿಗೆ ಸದ್ದು ಮಾಡಿದ್ದು ಎಲ್ಲರ ಅಚ್ಚರಿಗೆ ಕಾರಣವಾಗಿದೆ.

Kalyani Priyadarshan Malayalam movie Lokah Chapter 1 Chandra day 6 Karnataka box office collection report

ಕರ್ನಾಟಕದಲ್ಲೂ 'ಲೋಕಾ' ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಮಲ್ಟಿಪ್ಲೆಕ್ಸ್‌ನಲ್ಲಿ ಈ ಸಿನಿಮಾ ಒಳ್ಳೆಯ ಕಲೆಕ್ಷನ್ ಮಾಡುತ್ತಿದೆ. ಆದರೆ, ಇತ್ತೀಚೆಗೆ ಇದೇ ಸಿನಿಮಾದಲ್ಲಿ ಬೆಂಗಳೂರು ಹುಡುಗಿಯರು 'ಡ*ಗಾರ್' ಅನ್ನೋ ಡೈಲಾಗ್ ವಿವಾದವನ್ನು ಹುಟ್ಟಾಕಿತ್ತು. ಸೋಶಿಯಲ್ ಮೀಡಿಯಾಗಳಲ್ಲಿ ವಿರೋಧ ವ್ಯಕ್ತವಾಗುತ್ತಿದ್ದಂತೆ ಚಿತ್ರತಂಡ ಬಹಿರಂಗವಾಗಿ ಕ್ಷಮೆಯನ್ನು ಕೇಳಿತ್ತು. ಹೀಗಿದ್ದರೂ ಕರ್ನಾಟಕದಲ್ಲಿ ಈ ಸಿನಿಮಾ ಎಷ್ಟು ಕಲೆಕ್ಷನ್ ಮಾಡಿದೆ ಗೊತ್ತೇ? ತಿಳಿಯೋದಕ್ಕೆ ಮುಂದೆ ಓದಿ.

'ಲೋಕಾ' ಇದು ರೆಗ್ಯೂಲರ್ ಸಿನಿಮಾ ಅಲ್ಲ. ಇದೊಂದು ಲೇಡಿ ಸೂಪರ್ ಹೀರೋ ಸಿನಿಮಾ. ಭಾರತೀಯ ಚಿತ್ರರಂಗ ಕಂಡ ಅದ್ಭುತ ನಟ ಪ್ರಿಯಾದರ್ಶನ್ ಅವರ ಪುತ್ರಿ ಕಲ್ಯಾಣಿ ಪ್ರಿಯಾದರ್ಶನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾ ಮೇಕಿಂಗ್, ಕಥೆ, ಆಕ್ಟಿಂಗ್ ಎಲ್ಲದರಲ್ಲೂ ಸಿನಿಮಾ ಡಿಸ್ಟಿಂಕ್ಷನ್‌ನಲ್ಲಿ ಪಾಸ್ ಆಗಿದೆ. 6 ದಿನಗಳಲ್ಲಿ ₹100 ಕ್ಲಬ್ ಸೇರಿ ಅಚ್ಚರಿ ಮೂಡಿಸಿದೆ. ಯಾವ್ಯಾವ ದಿನ ಎಷ್ಟೆಷ್ಟು ಕಲೆಕ್ಷನ್ ಮಾಡಿದೆ ಅನ್ನೋದನ್ನು ನೋಡುವುದಾರೇ,

6 ದಿನಗಳಲ್ಲಿ 'ಲೋಕಾ' ಗಳಿಸಿದ್ದೆಷ್ಟು?

ಲೋಕಾ ಸಿನಿಮಾವನ್ನು ದುಲ್ಖರ್ ಸಲ್ಮಾನ್ ನಿರ್ಮಾಣ ಮಾಡಿದ್ದಾರೆ. ಈ ಸಿನಿಮಾ ಬಿಡುಗಡೆಗೂ ಮುನ್ನ ಇಷ್ಟೊಂದು ಕೆಲಕ್ಷನ್ ಮಾಡಬಹುದೆಂಬ ನಿರೀಕ್ಷೆ ಕಾಡ ಯಾರಿಗೂ ಇರಲಿಲ್ಲ. ಅದರಲ್ಲೂ ಕರ್ನಾಟಕದಲ್ಲಿ ಮಲಯಾಳಂ ಸಿನಿಮಾಗೆ ಸಿಕ್ಕಿರುವ ರೆಸ್ಪಾನ್ಸ್ ನೋಡಿ ಚಿತ್ರರಂಗವೇ ಶಾಕ್ ಆಗಿದೆ. ಬಹುತೇಕ ಮಲ್ಟಿಪ್ಲೆಕ್ಸ್‌ನಲ್ಲಿ ಈ ಸಿನಿಮಾಗೆ ಒಳ್ಳೆಯ ರೆಸ್ಪಾನ್ಸ್ ಸಿಗುತ್ತಿದೆ. ಈ ಆರು ದಿನಗಳಲ್ಲಿ ಕರ್ನಾಟಕದಲ್ಲಿ ಈ ಸಿನಿಮಾದ ಗಳಿಕೆ ವಿತರಕರ ವಲಯದ ಮೂಲಗಳಿಂದ ಹೊರ ಬಿದ್ದಿದೆ.

'ಲೋಕಾ' ಕರ್ನಾಟಕ ಕಲೆಕ್ಷನ್ (ಅಂದಾಜು)

ಮೊದಲ ದಿನ ₹25 ಲಕ್ಷ
2ನೇ ದಿನ ₹30 ಲಕ್ಷ
3ನೇ ದಿನ ₹65 ಲಕ್ಷ
4ನೇ ದಿನ ₹77 ಲಕ್ಷ
5ನೇ ದಿನ ₹45 ಲಕ್ಷ
6ನೇ ದಿನ ₹45 ಲಕ್ಷ
ಒಟ್ಟು ₹2.87 ಕೋಟಿ

7ನೇ ದಿನಕ್ಕೆ 100 ಕೋಟಿ

ಮಲಯಾಳಂ ಸಿನಿಮಾ 'ಲೋಕಾ' ರಿಲೀಸ್ ಆಗಿ ಇಂದಿಗೆ (ಸೆಪ್ಟೆಂಬರ್ 3) 7 ದಿನಕ್ಕೆ ಕಾಲಿಟ್ಟಿದೆ. ಮಲಯಾಳಂ ಸೇರಿದಂತೆ ತಮಿಳು, ತೆಲುಗು ಭಾಷೆಗಳಲ್ಲಿ ಈ ಸಿನಿಮಾ ಬಿಡುಗಡೆಯಾಗಿದೆ. ಮಲಯಾಳಂ ವರ್ಷನ್‌ಗೆ ಅತೀ ದೊಡ್ಡ ಮಟ್ಟಕ್ಕೆ ರೆಸ್ಪಾನ್ಸ್ ಸಿಕ್ಕಿದೆ. ಸ್ಯಾಕ್ನಿಲ್ಕ್ ಪ್ರಕಾರ, ಈ ಸಿನಿಮಾ ವಿಶ್ವದಾದ್ಯಂತ ಆರು ದಿನಗಳಲ್ಲಿ ₹93.75 ಕೋಟಿ ಕಲೆಕ್ಷನ್ ಮಾಡಿದೆ. ಈಗಿರುವ ಕ್ರೇಜ್ ನೋಡಿದರೆ, 7ನೇ ದಿನ ಅಂದರೆ, ಇಂದು 100 ಕೋಟಿ ಕ್ಲಬ್‌ಗೆ ಎಂಟ್ರಿ ಕೊಡುತ್ತೆ ಎಂದು ಟ್ರೇಡ್ ಎಕ್ಸ್‌ಪರ್ಟ್‌ಗಳು ಲೆಕ್ಕ ಹಾಕಿದ್ದಾರೆ.

Kalyani Priyadarshan Malayalam movie Lokah Chapter 1 Chandra day 6 Karnataka box office collection report

ಇತಿಹಾಸ ಸೃಷ್ಟಿಸಿದ ಸಿನಿಮಾ

ಕೇರಳದಲ್ಲಿ 'ಲೋಕಾ' ಕ್ರೇಜ್ ಸಿಕ್ಕಾಪಟ್ಟೆ ಇದೆ. ಯುವಕರನ್ನು ಹೆಚ್ಚಾಗಿ ಸೆಳೆಯುತ್ತಿರುವ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಚಿಂದಿ ಕಲೆಕ್ಷನ್ ಮಾಡುತ್ತಿದೆ. ಕಲ್ಯಾಣಿ ಪ್ರಿಯಾದರ್ಶನ್ ಪ್ರಮುಖ ಪಾತ್ರದ್ಲಲಿ ನಟಿಸಿರುವ ಈ ಸಿನಿಮಾ ಈಗಾಗಲೇ ಎರಡು ದಾಖಲೆಗಳನ್ನು ಬರೆದಿದೆ. ಮೊದಲನೆಯದು, 'ಲೋಕಾ' ದಕ್ಷಿಣ ಭಾರತದಲ್ಲಿಯೇ ₹100 ಕೋಟಿ ಕ್ಲಬ್ ಸೇರಿದ ಮೊದಲ ಮಹಿಳಾ ಪ್ರಧಾನ ಸಿನಿಮಾ ಎನಿಸಿಕೊಂಡಿದೆ. ಎರಡನೇಯದು ಮಲಯಾಳ ಚಿತ್ರರಂಗದಲ್ಲಿ ವೇಗವಾಗಿ 100 ಕೋಟಿ ತಲುಪಿದ ಮೂರನೇ ಸಿನಿಮಾ ಎನಿಸಿಕೊಂಡಿದೆ.

ಹುಡುಗೀರಿಗೆ 'ಡಗಾರ್' ಎಂದ ಸಿನಿಮಾ

ಈ ಮಲಯಾಳಂ ಸಿನಿಮಾದಲ್ಲಿ ಬಳಸಲಾದ ಒಂದು ಡೈಲಾಗ್ ವಿವಾದವನ್ನು ಹುಟ್ಟಾಕಿತ್ತು. ಬೆಂಗಳೂರಿನಲ್ಲಿ ಚಿತ್ರೀಕರಣ ಮಾಡಿರುವ ಈ ಸಿನಿಮಾದಲ್ಲಿ ಕೆಲವು ಕನ್ನಡ ಪದಗಳು ಇವೆ. ಒಂದು ಸನ್ನಿವೇಶದಲ್ಲಿ "ಬೆಂಗಳೂರು ಹುಡುಗೀರು ಡ'ಗಾರ್‌ಗಳು" ಎಂದು ಡೈಲಾಗ್ ಹೇಳಲಾಗಿತ್ತು. ಈ ದೃಶ್ಯಕ್ಕೆ ಸೋಶಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟ್ಟೆ ವಿರೋಧ ವ್ಯಕ್ತವಾಗಿತ್ತು. ಇದು ಗೊತ್ತಾಗುತ್ತಿದ್ದಂತೆ ಚಿತ್ರರಂಗ ಕ್ಷಮೆ ಕೇಳಿದೆ.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

More from Filmibeat

English summary
Lokah Chapter 1: Chandra Day 6 Karnataka Box Office Collection Report | Kalyani Priyadarshan Malayalam Movie;
Read more about: boxoffice report movies
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X