ಈ ಚಿತ್ರಮಂದಿರದ ದಾಖಲೆಗಳನ್ನೆಲ್ಲ ಮುರಿದ 'ಕಾಂತಾರ ಚಾಪ್ಟರ್ 1'; ಇಲ್ಲಿವರೆಗೂ ಸಿನಿಮಾ ನೋಡಿದವರೆಷ್ಟು?

'ಸು ಫ್ರಮ್ ಸೋ' ಬಳಿಕ 'ಕಾಂತಾರ ಚಾಪ್ಟರ್ 1' ಕರ್ನಾಟಕದ ಚಿತ್ರಮಂದಿರಗಳಲ್ಲಿ ಹೊಸ ಹೊಸ ದಾಖಲೆಗಳನ್ನು ಸೃಷ್ಟಿಸುತ್ತಿದೆ. ಕಳೆದ ಮೂರು ವರ್ಷಗಳಿಂದ ಇಂತಹ ಸಿನಿಮಾಗಳು ಬಾರದೇ ಚಿತ್ರಮಂದಿರದ ಮಾಲೀಕ ಕಂಗಾಲಾಗಿ ಹೋಗಿದ್ದರು. ಕೆಲವು ಚಿತ್ರಮಂದಿರಗಳು ಬಾಗಿಲಿಗೆ ಜಡಿದಿದ್ದವು. ಇನ್ನು ಕೆಲ ಥಿಯೇಟರ್‌ಗಳು ಪರ್ಮನೆಂಟ್ ಆಗಿ ಕ್ಲೋಸ್ ಆಗಿಬಿಟ್ಟವು. ಇಲ್ಲಿಗೆ ಕನ್ನಡ ಚಿತ್ರರಂಗದ ಕಥೆ ಮುಗೀತು ಅಂತ ಸಿನಿಮಾ ಮಂದಿನೇ ಭವಿಷ್ಯ ನುಡಿದಿದ್ದರು.

ಇನ್ನೇನು ಚಿತ್ರರಂಗ ಸದ್ಯಕ್ಕೆ ಚೇತರಿಸಿಕೊಳ್ಳುವುದಿಲ್ಲ ಎಂದು ಭವಿಷ್ಯ ನುಡಿದವರ ಬಾಯಿ ಮುಚ್ಚಿಸಿದ್ದು ಈ ಎರಡು ಸಿನಿಮಾಗಳು. ಅದರಲ್ಲೂ 'ಕಾಂತಾರ ಚಾಪ್ಟರ್ 1' ಕರ್ನಾಟಕದ ಹಲವು ಚಿತ್ರಮಂದಿರಗಳಲ್ಲಿ ಅದೂವರೆಗೂ ಇದ್ದ ದಾಖಲೆಗಳನ್ನು ಮುರಿದು ಹಾಕಿದೆ. ಅಂತಹ ಚಿತ್ರಮಂದಿರಗಳಲ್ಲೊಂದು ಮಂಡ್ಯ ಗುರುಶ್ರೀ ಚಿತ್ರಮಂದಿರ. ಇದೂವರೆಗೆ ಈ ಚಿತ್ರಮಂದಿರದಲ್ಲಿದ್ದ ಎಲ್ಲಾ ದಾಖಲೆಗಳನ್ನು ಉಡೀಸ್ ಮಾಡಿದೆ.

Mandya Gurushree Theatre Sets All-Time Record with Kantara Chapter 1 Box Office Collection

ಮಂಡ್ಯ ಜಿಲ್ಲೆಯಲ್ಲಿ ರಿಷಬ್ ಶೆಟ್ಟಿಯ 'ಕಾಂತಾರ ಚಾಪ್ಟರ್ 1'ಕ್ಕೆ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಬಿಡುಗಡೆಯಾದ ಸ್ಕ್ರೀನ್‌ಗಳಲ್ಲೆಲ್ಲಾ ಈ ಸಿನಿಮಾಗೆ ಅದ್ಭುತ ಪ್ರತಿಕ್ರಿಯೆ ಸಿಕ್ಕಿದೆ. ಅದರಲ್ಲೂ ಗುರುಶ್ರೀ ಚಿತ್ರಮಂದಿರ ಕಳೆದ ಒಂದು ವಾರದಲ್ಲಿ ದಾಖಲೆ ಕಲೆಕ್ಷನ್ ಮಾಡಿದೆ. ಅತೀ ಹೆಚ್ಚು ಮಂದಿ ಈ ಚಿತ್ರಮಂದಿರಕ್ಕೆ ಬಂದು 'ಕಾಂತಾರ ಚಾಪ್ಟರ್ 1' ಸಿನಿಮಾವನ್ನು ನೋಡಿದ್ದಾರೆ. ಹಾಗಿದ್ದರೆ, ಈ ಥಿಯೇಟರ್‌ನಿಂದ ಆದ ಕಲೆಕ್ಷನ್ ಏಷ್ಟು? ಎಷ್ಟು ಮಂದಿ ಸಿನಿಮಾ ನೋಡಿದ್ದಾರೆ? ತಿಳಿಯುವುದಕ್ಕೆ ಮುಂದೆ ಓದಿ.

ಗುರುಶ್ರೀಯಲ್ಲಿ ಕಾಂತಾರ ನೋಡಿದ ಜನರೆಷ್ಟು?

ಕರ್ನಾಟಕದಾದ್ಯಂತ 'ಕಾಂತಾರ ಚಾಪ್ಟರ್ 1' ಸಿನಿಮಾಗೆ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಗುರುಶ್ರೀ ಚಿತ್ರಮಂದಿರದಲ್ಲಿ ಮೊದಲ ವಾರ (8 ದಿನಕ್ಕೆ) ಸುಮಾರು 30,815 ಮಂದಿ ಈ ಸಿನಿಮಾ ನೋಡಿದ್ದಾರೆ. ಇನ್ನು 2ನೇ ವಾರ, ಅಂದರೆ ಅಕ್ಟೋಬರ್ 13ರವರೆಗೆ ಸುಮಾರು 10,576 ಮಂದಿ ಸಿನಿಮಾ ನೋಡಿದ್ದಾರೆ. 'ಕಾಂತಾರ ಚಾಪ್ಟರ್ 1' ಲೈಫ್‌ಟೈಮ್‌ನಲ್ಲಿ ಸುಮಾರು 1 ಲಕ್ಷ ಮಂದಿ ಸಿನಿಮಾ ನೋಡುಬಹುದೆಂದು ಅಂದಾಜು ಹಾಕಿದ್ದಾರೆ ಗುರುಶ್ರೀ ಚಿತ್ರಮಂದಿರ ಮಾಲೀಕರು.

"ಮಂಡ್ಯದಲ್ಲಿ ಎರಡು ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಅದರಲ್ಲಿ ನಮ್ಮ ಗುರುಶ್ರೀ ಕೂಡ ಒಂದು. ನಾನು ಮೊದಲ ವಾರದ ಕಲೆಕ್ಷನ್ ಅಷ್ಟೇ ಹೇಳುತ್ತಿದ್ದೇನೆ. ಕಾಂತಾರ ಚಾಪ್ಟರ್ 1 ನಮ್ಮ ಚಿತ್ರಮಂದಿರಲ್ಲಿ ಅತೀ ಹೆಚ್ಚು ಕಲೆಕ್ಷನ್ ಆಗಿದೆ. ಅದು ಬಿಟ್ಟರೆ ಕೆಜಿಎಫ್ 2, ಕಾಂತಾರ, ಕೆಜಿಎಫ್ ಇದೆ." ಎಂದು ಗುರುಶ್ರೀ ಚಿತ್ರಮಂದಿರದ ಮಾಲೀಕರಾದ ಶಶಿಕಾಂತ್ ಹೇಳುತ್ತಾರೆ.

ಗುರುಶ್ರೀ ಚಿತ್ರಮಂದಿರದ ಕಲೆಕ್ಷನ್ ಎಷ್ಟು?

ಗುರುಶ್ರೀ ಮಂಡ್ಯ ಜಿಲ್ಲೆಯಲ್ಲೇ ದೊಡ್ಡ ಚಿತ್ರಮಂದಿರ. 1150 ಸೀಟುಗಳಿರುವ ಈ ಚಿತ್ರಮಂದಿರದಲ್ಲಿ 'ಕಾಂತಾರ ಚಾಪ್ಟರ್ 1' ಮೊದಲ ವಾರ ಬಹುತೇಕ ತುಂಬಿದ ಪ್ರದರ್ಶನ ಕಂಡಿದೆ. ಇನ್ನು ಎರಡನೇ ವಾರ ಕೂಡ ಶೇ.70 ರಿಂದ ಶೇ.80ರಷ್ಟು ಆಕ್ಯೂಪೆನ್ಸಿ ಇದೆ. ಸುಮಾರು 12 ದಿನಗಳಲ್ಲಿ ಚಿತ್ರಮಂದಿರದಲ್ಲಿ ಸುಮಾರು 67 ಲಕ್ಷ ರೂಪಾಯಿ ಕಲೆಕ್ಷನ್ ಆಗಿದೆ. ಚಿತ್ರಮಂದಿರ ಮಾಲೀಕರು ಫಿಲ್ಮಿಬೀಟ್‌ಗೆ ನೀಡಿರುವ ಮಾಹಿತಿ ಪ್ರಕಾರ ಈ ಸಿನಿಮಾ ಲೈಫ್‌ಟೈಮ್ ಕಲೆಕ್ಷನ್ ಒಂದು ಕೋಟಿ ಆಗಬಹುದೆಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Mandya Gurushree Theatre Sets All-Time Record with Kantara Chapter 1 Box Office Collection

ಗುರುಶ್ರೀಯಲ್ಲಿ ಕಾಂತಾರ ದಾಖಲೆ

ಗುರುಶ್ರೀ ಚಿತ್ರಮಂದಿರ ಅಪ್ಪಟ ಕನ್ನಡ ಸೆಂಟರ್. ಇಲ್ಲಿ ಕನ್ನಡದ ಸಿನಿಮಾಗಳು ಮೊದಲ ವಾರ ದಾಖಲೆ ಕಲೆಕ್ಷನ್ ಮಾಡಿವೆ. ಪುನೀತ್ ರಾಜ್‌ಕುಮಾರ್ ನಟನೆಯ 'ರಾಜಕುಮಾರ', ದರ್ಶನ್ ನಟನೆಯ 'ಕಾಟೇರ', 'ಕ್ರಾಂತಿ', ಯಶ್ ನಟನೆಯ 'ಕೆಜಿಎಫ್ ಚಾಪ್ಟರ್ 1', 'ಕೆಜಿಎಫ್ ಚಾಪ್ಟರ್ 2' ದಾಖಲೆ ಲೆಕ್ಕದಲ್ಲಿ ಕಲೆಕ್ಷನ್ ಮಾಡಿದ್ದವು. ಈಗ ಈ ಎಲ್ಲಾ ಸಿನಿಮಾಗಳ ದಾಖಲೆಯನ್ನು 'ಕಾಂತಾರ ಚಾಪ್ಟರ್ 1' ಮುರಿದಿದೆ. ಮಂಡ್ಯ ಗುರುಶ್ರೀ ಚಿತ್ರಮಂದಿರದಲ್ಲಿ ಒಂದು ವಾರ ಅತೀ ಹೆಚ್ಚು ಗಳಿಕೆ ಕಂಡಿರುವ ಸಿನಿಮಾಗಳ ಲಿಸ್ಟ್ ಇಲ್ಲಿದೆ.

ರಾಜಕುಮಾರ ₹22 ಲಕ್ಷ
ಕಾಟೇರ ₹26 ಲಕ್ಷ
ಕ್ರಾಂತಿ ₹22 ಲಕ್ಷ
ಕೆಜಿಎಫ್ 1 ₹37 ಲಕ್ಷ
ಕೆಜಿಎಫ್ 2 ₹41 ಲಕ್ಷ
ಕಾಂತಾರ ಚಾಪ್ಟರ್ 1 ₹44 ಲಕ್ಷ

More from Filmibeat

English summary
Mandya Gurushree Theatre has set a new record by registering its highest-ever collection with Rishab Shetty movie Kantara Chapter 1.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X