ಮೊದಲ ದಿನ 'ಮ್ಯಾಕ್ಸ್'ಗಿಂತ ಶೇ.25ರಷ್ಟು ಅಧಿಕ ಕಲೆಕ್ಷನ್ ಮಾಡಿದ 'ಮಾರ್ಕ್'; ಕಲೆಕ್ಷನ್ ಎಷ್ಟು?
ಕಿಚ್ಚ ಸುದೀಪ್‌ಗೆ ಲಕ್ಕಿ ಡೇಟ್ ಸಿಕ್ಕಿಬಿಟ್ಟಿದೆ. ಕಳೆದ ವರ್ಷ ಡಿಸೆಂಬರ್ 25 ಕ್ರಿಸ್‌ಮಸ್‌ಗೆ ತೆರೆಕಂಡಿದ್ದ 'ಮ್ಯಾಕ್ಸ್' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿತ್ತು. ಸುದೀಪ್ ವೃತ್ತಿ ಬದುಕಿನಲ್ಲಿ ಅದ್ಭುತ ಕಲೆಕ್ಷನ್ ಕಂಡ ಸಿನಿಮಾ ಎನಿಸಿಕೊಂಡಿತ್ತು. ಈಗ 'ಮಾರ್ಕ್' ಕೂಡ ಈ ವರ್ಷ ಡಿಸೆಂಬರ್ 25ಕ್ಕೆ ಅದ್ಧೂರಿಯಾಗಿ ರಿಲೀಸ್ ಆಗಿದೆ. ಹೀಗಾಗಿ 'ಮಾರ್ಕ್' ಮೊದಲ ದಿನದ ಕಲೆಕ್ಷನ್ ಬಗ್ಗೆ ಇಡೀ ಸ್ಯಾಂಡಲ್‌ವುಡ್ ಕಣ್ಣಿಟ್ಟಿತ್ತು.
ಟ್ರೇಡ್ ಎಕ್ಸ್‌ಪರ್ಟ್‌ಗಳು 'ಮಾರ್ಕ್' ಸಿನಿಮಾ ಕಲೆಕ್ಷನ್ ₹8 ಕೋಟಿ ಎಂದು ಅಂದಾಜು ಹಾಕಿದ್ದರು. ಆದರೆ, ಕರ್ನಾಟಕದ ವಿತರಕರ ವಲಯದಿಂದ ಸಿಕ್ಕಿದ ಅಂಕಿ-ಅಂಶಗಳೇ ಬೇರೆ ಆಗಿತ್ತು. ಹೀಗಾಗಿ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಸಿನಿಮಾ ಮೊದಲ ದಿನ ಕಲೆಕ್ಷನ್ ಎಷ್ಟಾಯ್ತು? ಅನ್ನೋ ಗೊಂದಲಕ್ಕೆ ಬಿದ್ದಿದ್ದರು. ಕೊನೆಗೂ ನಿರ್ಮಾಣ ಹಾಗೂ ವಿತರಣಾ ಸಂಸ್ಥೆಗಳಿಂದ ಮೊದಲ ದಿನದ ಅಧಿಕೃತ ಕಲೆಕ್ಷನ್ ರಿಪೋರ್ಟ್ ಹೊರಬಿದ್ದಿದೆ.

ಸುದೀಪ್ ಮಾಸ್ ಲುಕ್, ಹಾಡುಗಳು, ಡೈಲಾಗ್ 'ಮಾರ್ಕ್' ಸಿನಿಮಾದ ಹೈಲೈಟ್ ಆಗಿತ್ತು. ಪಕ್ಕಾ ಔಟ್ ಅಂಡ್ ಔಟ್ ಕಮರ್ಷಿಯಲ್ ಸಿನಿಮಾ ಆಗಿದ್ದು, ಒಂದೊಳ್ಳೆ ಓಪನಿಂಗ್ ಪಡೆದುಕೊಳ್ಳುತ್ತೆ ಅನ್ನೋದು ಕನ್ಫರ್ಮ್ ಆಗಿತ್ತು. ಆದರೆ, ಅಸಲಿ ಕಲೆಕ್ಷನ್ ಎಷ್ಟು ಅನ್ನೋದು ಅಧಿಕೃತ ಆಗಿರಲಿಲ್ಲ. ನಿರ್ಮಾಣ ಸಂಸ್ಥೆ ಹೇಳಿದಂತೆ 'ಮ್ಯಾಕ್ಸ್'ಗಿಂತಲೂ 'ಮಾರ್ಕ್' ಶೇ.25ರಷ್ಟು ಅಧಿಕ ಕಲೆಕ್ಷನ್ ಮಾಡಿದೆ ಎಂದು ಹೇಳಿದೆ. ಹಾಗಿದ್ದರೆ, ನಿರ್ಮಾಣ ಸಂಸ್ಥೆ ಕೊಟ್ಟ ಲೆಕ್ಕವೇನು? ಟ್ರೇಡ್ ಎಕ್ಸ್‌ಪರ್ಟ್‌ಗಳ ಲೆಕ್ಕವೇನು? ಕರ್ನಾಟಕದ ವಿತರಕ ವಲಯದಲ್ಲಿ ಹರಿದಾಡುತ್ತಿರುವ ಅಂಕಿ-ಅಂಶಗಳೆಷ್ಟು? ತಿಳಿಯುವುದಕ್ಕೆ ಮುಂದೆ ಓದಿ.
'ಮಾರ್ಕ್' ನಿರ್ಮಾಣ ಸಂಸ್ಥೆ ಕೊಟ್ಟ ಲೆಕ್ಕವೇನು?
ಕಿಚ್ಚ ಸುದೀಪ್ ಸಿನಿಮಾ ಫಸ್ಟ್ ಡೇ ಶೋ ಭರ್ಜರಿ ಕಲೆಕ್ಷನ್ ಆಗುತ್ತೆ ಅನ್ನೋದರಲ್ಲಿ ಅನುಮಾನವಿರಲಿಲ್ಲ. ಯಾಕಂದ್ರೆ, 'ಮಾರ್ಕ್' ಫ್ಯಾನ್ಸ್ ಶೋಗೆ ಅತ್ಯದ್ಭುತ ರೆಸ್ಪಾನ್ಸ್ ಸಿಕ್ಕಿತ್ತು. ಹೀಗಾಗಿ ಮೊದಲ ದಿನ ಕಲೆಕ್ಷನ್ ದಾಖಲೆ ಲೆವೆಲ್‌ನಲ್ಲಿ ಇರುತ್ತೆ ಎಂದು ಗೆಸ್ ಮಾಡಿದ್ದರು. ನಿರೀಕ್ಷೆ ಮಾಡಿದಂತೆ 'ಮಾರ್ಕ್' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡಿದೆ. ನಿರ್ಮಾಣ ಸಂಸ್ಥೆ ಹಾಗೂ ವಿತರಣಾ ಸಂಸ್ಥೆ ಯ ಅಧಿಕೃತ ಮಾಹಿತಿ ಪ್ರಕಾರ 'ಮಾರ್ಕ್' ಫಸ್ಟ್ ಡೇ ಕಲೆಕ್ಷನ್ ₹15.9 ಕೋಟಿ ರೂಪಾಯಿ (Gross). ಇದು ದಾಖಲೆ ಕಲೆಕ್ಷನ್ ಎಂದೇ ಹೇಳಲಾಗುತ್ತಿದೆ.
'ಮ್ಯಾಕ್ಸ್'ಗಿಂತ 'ಮಾರ್ಕ್' ಶೇ.25ರಷ್ಟು ಅಧಿಕ
ವಿತರಣಾ ಸಂಸ್ಥೆ ನೀಡಿದ ಮಾಹಿತಿ ಪ್ರಕಾರ 'ಮಾರ್ಕ್' ಸಿನಿಮಾ 'ಮ್ಯಾಕ್ಸ್'ಗಿಂತ ಶೇಕಡಾ 25ರಷ್ಟು ಅಧಿಕ ಆಗಿದೆ. ಸ್ಯಾಕ್ನಿಲ್ಕ್ ಪ್ರಕಾರ 'ಮ್ಯಾಕ್ಸ್' ಮೊದಲ ದಿನ ₹8.7 ಕೋಟಿ ಕಲೆಕ್ಷನ್ ಆಗಿತ್ತು. ಅದೇ 'ಮಾರ್ಕ್' ₹15.9 ಕೋಟಿ ಕಲೆಕ್ಷನ್ ಮಾಡಿದ್ದು ಕಿಚ್ಚನ ಸಿನಿಮಾ ಮತ್ತೆ ಗೆದ್ದಿದೆ. ಹೀಗಾಗಿ ಬಾಕ್ಸಾಫೀಸ್‌ನಲ್ಲಿ ಮತ್ತೆ ಕಿಚ್ಚ ಗೆದ್ದಂತೆ ಆಗಿದೆ. ಹಾಗೇ ಕ್ರಿಸ್‌ಮಸ್ ಕಿಚ್ಚನಿಗೆ ಲಕ್ಕಿ ಅಂತ ಸಾಬೀತಾಗಿದೆ.

ವೀಕೆಂಡ್ ಮೇಲೆ ಲೆಕ್ಕಾಚಾರವೇನು?
'ಮಾರ್ಕ್' ಎರಡನೇ ದಿನವೂ ಒಳ್ಳೆಯ ಕಲೆಕ್ಷನ್ ಆಗಿದೆ ಎಂದು ಹೇಳಲಾಗುತ್ತಿದೆ. ಇಂದು (ಡಿಸೆಂಬರ್ 26) ಈ ಸಿನಿಮಾ ಶೋಗಳು ಕಡಿಮೆ ಆಗಿದ್ದರಿಂದ ಕಲೆಕ್ಷನ್ ಆಗಲಿದೆ. ಒಂದು ಅಂದಾಜಿನ ಪ್ರಕಾರ ₹4 ರಿಂದ ₹5 ಕೋಟಿ ಕಲೆಕ್ಷನ್ ಆಗಬಹುದೆಂದು ನಿರೀಕ್ಷೆ ಮಾಡಲಾಗಿದೆ. ಹಾಗೇ ವೀಕೆಂಡ್‌ನಲ್ಲಿ ಭರ್ಜರಿ ಕಲೆಕ್ಷನ್ ಆಗಬಹುದೆಂಬ ನಿರೀಕ್ಷೆಯಿದೆ. ಇನ್ನು ಶನಿವಾರ ಹಾಗೂ ಭಾನುವಾರ ಈ ಎರಡು ದಿನವೂ ₹5 ರಿಂದ ₹6 ಕೋಟಿವರೆಗೂ ಕಲೆಕ್ಷನ್ ಆಗಬಹುದೆಂಬ ನಿರೀಕ್ಷೆಯಿದೆ. ಒಂದು ಅಂದಾಜಿನ ಪ್ರಕಾರ, ₹28 ರಿಂದ ₹30 ಕೋಟಿ ಆಗಬಹುದೆಂಬ ನಿರೀಕ್ಷೆಯಿದೆ.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು ಬೇರೆ ಮೂಲಗಳು, https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications











