Drishyam 3 Box Office Day 1: 'ದೃಶ್ಯಂ 3'ಗೆ ನೆಗೆಟಿವ್ ರೆಸ್ಪಾನ್ಸ್.. ಆದ್ರೂ ಕಲೆಕ್ಷನ್ ಕಮ್ಮಿ ಏನಿಲ್ಲ!
2026ರ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಮೋಹನ್‌ಲಾಲ್ ಅವರ 'ದೃಶ್ಯಂ 3' ಕೂಡ ಒಂದಾಗಿತ್ತು. ಕಳೆದ ಎರಡು ಪಾರ್ಟ್‌ಗಳು ಪ್ರೇಕ್ಷಕರಿಗೆ ಸಿಕ್ಕಾಪಟ್ಟೆ ಇಷ್ಟ ಆಗಿದ್ದವು. ಜಾರ್ಜ್ ಕುಟ್ಟಿಯ ಚಾಣಾಕ್ಷತವನ್ನು ತೆರೆಮೇಲೆ ನೋಡಿ ಥ್ರಿಲ್ ಆಗಿದ್ದರು. ಇನ್ನೇನು ಸಿನಿಮಾ ಮುಗಿದೇ ಹೋಯ್ತು ಅನ್ನುವಾಗಲೇ ನಿರ್ದೇಶಕ ಜೀತು ಜೋಸೆಫ್ 'ದೃಶ್ಯಂ 3'ಗೆ ಮುನ್ನುಡಿ ಬರೆದಿದ್ದರು. ಮೋಹನ್‌ಲಾಲ್ ಕೂಡ ಗ್ರೀನ್ ಸಿಗ್ನಲ್ ಕೊಟ್ಟಿದ್ದರು.
'ದೃಶ್ಯಂ' ಅಂದರೆ ಮೋಹನ್‌ಲಾಲ್ ಅನ್ನುವಷ್ಟು ಈ ಮಲಯಾಳಂ ಸೂಪರ್‌ಸ್ಟಾರ್ ಆವರಿಸಿಕೊಂಡಿದ್ದಾರೆ. ದೇಶಾದ್ಯಂತ ಈ ಸೀಕ್ವೆಲ್‌ಗಳು ಪ್ರೇಕ್ಷಕರಿಗೆ ಕಿಕ್ ಕೊಟ್ಟಿದ್ದವು. ಹೀಗಾಗಿ 'ದೃಶ್ಯಂ 3' ಸಾಕಷ್ಟು ನಿರೀಕ್ಷೆಗಳೊಂದಿಗೆ ರಿಲೀಸ್ ಆಗಿತ್ತು. ಆದರೆ, ಸೋಶಿಯಲ್ ಮೀಡಿಯಾಗಳಲ್ಲಿ ಈ ಸಿನಿಮಾ ಬಗ್ಗೆ ನೆಗೆಟಿವ್ ಕಾಮೆಂಟ್‌ಗಳು ಹೆಚ್ಚಾಗಿ ಕಂಡಿವೆ. ಜೀತು ಜೋಸೆಫ್ ಸ್ಕ್ರೀನ್‌ಪ್ಲೇಯಲ್ಲಿ ಹೊಸತೇನು ಇಲ್ಲ ಅಂತ ಪ್ರೇಕ್ಷಕರಿಗೆ ಅನಿಸಿದೆ.

ಫಸ್ಟ್‌ಡೇ ಫಸ್ಟ್ ಶೋಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದರೂ 'ದೃಶ್ಯಂ 3' ಗಳಿಕೆಯಲ್ಲೇನು ಹಿಂದೆ ಬಿದ್ದಿಲ್ಲ. ಮೊದಲ ದಿನವೇ ಬಾಕ್ಸಾಫೀಸ್‌ನಲ್ಲಿ ಚಿಂದಿ ಉಡಾಯಿಸಿದೆ. ಕೇರಳದಲ್ಲಂತೂ ಈ ಸಿನಿಮಾದ ಕಲೆಕ್ಷನ್ ಉತ್ತಮವಾಗಿದೆ. ಹಾಗಿದ್ದರೆ, ಮೊದಲ ದಿನ ಈ ಸಿನಿಮಾದ ಕಲೆಕ್ಷನ್ ಎಷ್ಟು? ಅದರಲ್ಲೂ ಕರ್ನಾಟಕದಲ್ಲಿ ಎಷ್ಟು ಕಲೆಕ್ಷನ್ ಆಗಿದೆ? ಅನ್ನೋದನ್ನು ತಿಳಿಯುವುದಕ್ಕೆ ಮುಂದೆ ಓದಿ.
'ದೃಶ್ಯಂ 3' ಡೇ 1 ಕಲೆಕ್ಷನ್
'ದೃಶ್ಯಂ 3'ಗೆ ನೆಗೆಟಿವ್ ರೆಸ್ಪಾನ್ಸ್ ಬಂದಿದ್ದರೂ ಪ್ರೇಕ್ಷಕರು ಮೋಹನ್‌ಲಾಲ್ ಪರ್ಫಾಮೆನ್ಸ್‌ಗೆ ಬಹುಪರಾಕ್ ಹೇಳಿದ್ದಾರೆ. ಇಡೀ ಸಿನಿಮಾವನ್ನು ಮೋಹನ್‌ಲಾಲ್ ತಮ್ಮ ಭುಜದ ಮೇಲೆ ಹೊತ್ತುಕೊಂಡು ಸಾಗಿದ್ದಾರೆ. ಹೀಗಾಗಿ ಕೇರಳದಲ್ಲಿ ಸಿನಿಮಾ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಬಾಕ್ಸಾಫೀಸ್ ಕಲೆಕ್ಷನ್ ಅನ್ನು ಟ್ರ್ಯಾಕ್ ಮಾಡುವ Sacnilk ವರದಿ ಮಾಡಿರುವಂತೆ ಭಾರತದಲ್ಲಿ ಬರೋಬ್ಬರು 15.85 ಕೋಟಿ ರೂಪಾಯಿ (Net) ಕಲೆಕ್ಷನ್ ಆಗಿದೆ.
ವಿದೇಶದಲ್ಲೂ 'ದೃಶ್ಯಂ 3' ಅಬ್ಬರ
ಹಲವು ಬಾಕ್ಸಾಫೀಸ್ ವರದಿಗಳ ಪ್ರಕಾರ 'ದೃಶ್ಯಂ 3'ಗೆ ಮೊದಲ ದಿನ ಭಾರತಕ್ಕಿಂತ ವಿದೇಶದಲ್ಲಿ ಉತ್ತಮ ಕಲೆಕ್ಷನ್ ಆಗಿದೆ. ಮೊದಲ ದಿನವೇ ವಿದೇಶದಿಂದ 25 ಕೋಟಿ ರೂಪಾಯಿ (Gross) ಕಲೆಕ್ಷನ್ ಆಗಿರಬಹುದೆಂದು ಲೆಕ್ಕ ಹಾಕಲಾಗಿದೆ. ಭಾರತ ಹಾಗೂ ಓವರ್‌ಸೀಸನ್ ಮಾರ್ಕೆಟ್‌ನಿಂದ ಆದ ಗಳಿಕೆ 43 ಕೋಟಿ ರೂಪಾಯಿ ಎಂದು ವರದಿಯಾಗಿದೆ. ಇದು ಮಲಯಾಳಂ ಸಿನಿಮಾಗೆ ಸಿಕ್ಕಿರೋ ಅತೀ ದೊಡ್ಡ ರೆಸ್ಪಾನ್ಸ್.

ಕರ್ನಾಟಕದಲ್ಲಿ ಎಷ್ಟು?
ಮಲಯಾಳಂ ಸಿನಿಮಾಗಳು ಇತ್ತೀಚೆಗೆ ಕರ್ನಾಟಕದಲ್ಲಿ ಉತ್ತಮ ಕಲೆಕ್ಷನ್ ಮಾಡುತ್ತಿವೆ. ಅದರಲ್ಲೂ ಬೆಂಗಳೂರು, ಮಂಗಳೂರು ಹಾಗೂ ಮೈಸೂರು ಭಾಗಗಳಲ್ಲಿ ಉತ್ತಮ ಕಲೆಕ್ಷನ್ ಆಗುತ್ತಿವೆ. 'ದೃಶ್ಯಂ 3'ಗೂ ಅದೇ ರೀತಿ ರೆಸ್ಪಾನ್ಸ್ ಸಿಕ್ಕಿದೆ. ಕರ್ನಾಟಕದ ವಿತರಕರ ವಲಯಕ್ಕೆ ಸಿಕ್ಕಿರೋ ಲೆಕ್ಕದ ಪ್ರಕಾರ ಮೊದಲ ದಿನ ಈ ಸಿನಿಮಾ ಬರೋಬ್ಬರಿ 1.25 ಕೋಟಿ ಕಲೆಕ್ಷನ್ ಮಾಡಿದೆ. ಅದರಲ್ಲಿ ಮಲಯಾಳಂ ವರ್ಷನ್‌ನಿಂದಲೇ ಹೆಚ್ಚು ಕಲೆಕ್ಷನ್ ಆಗಿದೆ. ಒಟ್ನಲ್ಲಿ ಮೊದಲ ದಿನ 'ದೃಶ್ಯಂ 3' ಕಲೆಕ್ಷನ್ ಭರ್ಜರಿ ಅಂತಲೇ ಹೇಳ್ಬಹುದು.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com ಬೇರೆ ಮೂಲಗಳು ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications
