Drishyam 3 Box Office Day 2:2ನೇ ದಿನ ಶೇ.30ರಷ್ಟು ಇಳಿಕೆ ಕಂಡ 'ದೃಶ್ಯಂ 3'; ಯಾಕೀಗಾಯ್ತು?

ಮೋಹನ್‌ಲಾಲ್ ಹಾಗೂ ನಿರ್ದೇಶಕ ಜೀತು ಜೋಸೆಫ್ ಕಾಂಬಿನೇಷನ್‌ನ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ 'ದೃಶ್ಯಂ 3'. ಇದು ಮೇ 21ರಂದು ವಿಶ್ವದಾದ್ಯಂತ ರಿಲೀಸ್ ಆಗಿದೆ. ತನ್ನದೇ ಫ್ಯಾನ್ ಫಾಲೋವಿಂಗ್ ಹೊಂದಿರೋ 'ದೃಶ್ಯಂ'ನ 3ನೇ ಸೀಕ್ವೆಲ್ ಇದು. ಕಳೆದ ಎರಡೂ ಸೀಕ್ವೆಲ್‌ಗಳಲ್ಲಿ ಮೋಹನ್‌ಲಾಲ್ ಹಾಗೂ ಜೀತು ಜೋಸೆಫ್ ಪ್ರೇಕ್ಷಕರಿಗೆ ಥ್ರಿಲ್ ಕೊಟ್ಟಿದ್ದರು.

ಹೀಗಾಗಿ ಮೂರನೇ ಸೀಕ್ವೆಲ್‌ ಮೇಲೂ ಅದೇ ನಿರೀಕ್ಷೆಯಿತ್ತು. ಆದರೆ, ಸಿನಿಮಾ ನೋಡಿದ ಬಹುತೇಕ ಮಂದಿಗೆ 'ದೃಶ್ಯಂ 3' ನಿರಾಶೆ ಮೂಡಿಸಿದೆ. ಜೇತು ಜೋಸೆಫ್ 3ನೇ ಸೀಕ್ವೆಲ್‌ನಲ್ಲಿ ಪ್ರೇಕ್ಷಕರಿಗೆ ಥ್ರಿಲ್ ಕೊಡುವಲ್ಲಿ ಹಿಂದೆ ಬಿದ್ದಿದ್ದಾರೆ. ಹೀಗಾಗಿ ಬಾಕ್ಸಾಫೀಸ್‌ ಮೇಲೆ ಇದು ಪರಿಣಾಮ ಬೀರಬಹುದೆಂಬ ನಿರೀಕ್ಷೆಯಿತ್ತು. ಅದರಂತೆ, 2ನೇ ದಿನ 'ದೃಶ್ಯಂ 3' ಕಲೆಕ್ಷನ್‌ನಲ್ಲಿ ಡ್ರಾಪ್ ಕಂಡಿದೆ.

Mohanlal Meena film Drishyam 3 witnessed drop in Day 2 Box Office here is collection report

'ದೃಶ್ಯಂ 3' ಮಲಯಾಳಂ ಭಾಷೆಯಲ್ಲಷ್ಟೇ ಅಲ್ಲ. ಕನ್ನಡಕ್ಕೂ ಡಬ್ ಮಾಡಿ ರಿಲೀಸ್ ಮಾಡಲಾಗಿತ್ತು. ಹೀಗಾಗಿ ಕರ್ನಾಟಕದಲ್ಲೂ ಬಾಕ್ಸಾಫೀಸ್‌ ಕಲೆಕ್ಷನ್ ಮೇಲೆ ನಿರೀಕ್ಷೆಯಿತ್ತು. ಆದರೆ, ಸ್ಯಾಕ್ನಿಲ್ಕ್ ಅಂಕಿ ಅಂಶಗಳ ಪ್ರಕಾರ 'ದೃಶ್ಯಂ 3' ಶೇ.30ರಷ್ಟು ಇಳಿಕೆ ಕಂಡಿದೆ. ಹಾಗಿದ್ದರೆ, 2ನೇ ದಿನ ಕಲೆಕ್ಷನ್ ಎಷ್ಟು? ಬಾಕ್ಸಾಫೀಸ್‌ ಕಲೆಕ್ಷನ್ ಆಗಿದ್ದು ಏನನ್ನು ಸೂಚಿಸುತ್ತೆ? ವೀಕೆಂಡ್‌ನಲ್ಲಿ ರಿಕವರಿ ಆಗಬಹುದೇ? ತಿಳಿಯುವುದಕ್ಕೆ ಮುಂದೆ ಓದಿ.

3ನೇ ದಿನ 'ದೃಶ್ಯಂ 3' ಕಲೆಕ್ಷನ್ ಎಷ್ಟು?

ಮೋಹನ್‌ಲಾಲ್ ಇದ್ಮೇಲೆ ಸಿನಿಮಾ ಕಲೆಕ್ಷನ್‌ ಮೇಲೆ ಅಷ್ಟೊಂದು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಆದರೆ, 'ದೃಶ್ಯಂ 3' ಕಲೆಕ್ಷನ್‌ಗೂ ಮೀರಿದ ನಿರೀಕ್ಷೆ. ಈ ಸಿನಿಮಾದ ಫಾಲೋವರ್ಸ್‌ ಕುತೂಹಲದಿಂದ ತಾವೂ ನಿರೀಕ್ಷೆಯನ್ನೂ ಮಾಡದ ಥ್ರಿಲ್, ಸಸ್ಪೆನ್ಸ್, ಟ್ವಿಸ್ಟ್ ಸಿಗುತ್ತೆ ಎಂಬ ಆಸೆಯಿಟ್ಟುಕೊಂಡಿದ್ದರು. ಅದು 3ನೇ ಸೀಕ್ವೆಲ್‌ನಲ್ಲಿ ಸಿಕ್ಕಿಲ್ಲ. ಹೀಗಾಗಿ 2ನೇ ದಿನ ಪ್ರೇಕ್ಷಕರನ್ನು ಸೆಳೆಯುವಲ್ಲಿ ಸ್ವಲ್ಪ ಹಿಂದೆ ಬಿದ್ದಿದೆ. ಸ್ಯಾಕ್ನಿಲ್ಕ್ ಪ್ರಕಾರ 2ನೇ ದಿನ ಬಾಕ್ಸಾಫೀಸ್‌ನಲ್ಲಿ 11.05 ಕೋಟಿ ರೂಪಾಯಿ (Net) ಕಲೆಕ್ಷನ್ ಮಾಡಿದೆ.

Also Read
Drishyam 3 Box Office Day 1: 'ದೃಶ್ಯಂ 3'ಗೆ ನೆಗೆಟಿವ್ ರೆಸ್ಪಾನ್ಸ್.. ಆದ್ರೂ ಕಲೆಕ್ಷನ್ ಕಮ್ಮಿ ಏನಿಲ್ಲ!
Drishyam 3 Box Office Day 1: 'ದೃಶ್ಯಂ 3'ಗೆ ನೆಗೆಟಿವ್ ರೆಸ್ಪಾನ್ಸ್.. ಆದ್ರೂ ಕಲೆಕ್ಷನ್ ಕಮ್ಮಿ ಏನಿಲ್ಲ!

'ದೃಶ್ಯಂ 3' ಓವರ್‌ಸೀಸ್ ಕಲೆಕ್ಷನ್

ಓವರ್‌ಸೀಸ್‌ ಬಾಕ್ಸಾಫೀಸ್‌ನಲ್ಲಿ 'ದೃಶ್ಯಂ 3' ಒಳ್ಳೆಯ ಕಲೆಕ್ಷನ್ ಮಾಡಿದೆ. ಮೊದಲ ದಿನ 45 ಕೋಟಿ ರೂಪಾಯಿ (Gross) ಕಲೆಕ್ಷನ್ ಮಾಡಿದ್ದ ಸಿನಿಮಾ, 2ನೇ ದಿನ 20 ಕೋಟಿ ರೂಪಾಯಿ (Gross) ಗಳಿಸಿದೆ. ಎರಡು ದಿನಗಳಲ್ಲಿ ಸುಮಾರು 65 ಕೋಟಿ ರೂಪಾಯಿ ವಿದೇಶದಿಂದಲೇ ಬಂದಿದೆ. ವೀಕೆಂಡ್‌ನಲ್ಲಿ ಕಲೆಕ್ಷನ್ ಇನ್ನೂ ಏರಿಕೆಯಾಗುವ ಸಾಧ್ಯತೆಯಿದೆ. ಓವರ್‌ಸೀಸ್ ಬಾಕ್ಸಾಫೀಸ್‌ನಲ್ಲಿಯೇ 100 ಕೋಟಿ ರೂ. ಕಲೆಕ್ಷನ್ ಆದರೂ ಆಗಬಹುದು.

Mohanlal Meena film Drishyam 3 witnessed drop in Day 2 Box Office here is collection report

ಕರ್ನಾಟಕದ ಕಲೆಕ್ಷನ್ ಎಷ್ಟು?

ಮಲಯಾಳಂ ಸಿನಿಮಾಗಳು ಬೆಂಗಳೂರಿನಲ್ಲಿ ಮಾರ್ಕೆಟ್ ಅನ್ನು ಹುಡುಕಿಕೊಂಡಿವೆ. ಮಲಯಾಳಿಗಳು ಮುಗಿಬಿದ್ದು 'ದೃಶ್ಯಂ 3' ಸಿನಿಮಾವನ್ನು ನೋಡುತ್ತಿದ್ದಾರೆ. ಕರ್ನಾಟಕದ ವಿತರಕರ ಪ್ರಕಾರ 'ದೃಶ್ಯಂ 3' 2ನೇ ದಿನ 75 ಲಕ್ಷದಿಂದ 1 ಕೋಟಿ ರೂಪಾಯಿವರೆಗೂ ಕಲೆಕ್ಷನ್ ಮಾಡಿರಬಹುದೆಂದು ಹೇಳುತ್ತಿದ್ದಾರೆ. ಹಾಗಿದ್ದರೆ, ಕರ್ನಾಟಕದಲ್ಲಿ ಈ ಎರಡು ದಿನಗಳಲ್ಲಿ ಹೆಚ್ಚು ಕಡಿಮೆ 2 ಕೋಟಿ ರೂಪಾಯಿವರೆಗೂ ಕಲೆಕ್ಷನ್ ಆಗಿದೆ.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com ಬೇರೆ ಮೂಲಗಳು ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

English summary
Mohanlal, Meena and director Jethu Joseph film Drishyam 3 Day 2 Box Office collection report. Here is Karnataka collection.
Read more about: mohanlal boxoffice report
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X