Drishyam 3 Karnataka Box Office: ಕರ್ನಾಟಕದ ಬಾಕ್ಸಾಫೀಸ್‌ಗೆ ಕಿಕ್ ಕೊಟ್ಟ 'ದೃಶ್ಯಂ 3'; 3 ದಿನಗಳಲ್ಲಿ ಗಳಿಸಿದ್ದಿಷ್ಟು!
ಈ ವರ್ಷದ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿರೋ 'ದೃಶ್ಯಂ 3' ರಿಲೀಸ್ ಆಗಿದೆ. ಭಾಷೆ ಭೇದವನ್ನು ಮರೆತು ಈ ಸಿನಿಮಾ ನೋಡುವುದಕ್ಕೆ ಪ್ರೇಕ್ಷಕರು ತುದಿಗಾಲಲ್ಲಿ ನಿಂತಿದ್ದರು. ಆದರೆ, ಸಿನಿಮಾ ಆ ನಿರೀಕ್ಷೆಯನ್ನು ಕಾಪಾಡಿಕೊಳ್ಳುವಲ್ಲಿ ಸ್ವಲ್ಪ ಮಟ್ಟಿಗೆ ಹಿಂದೆ ಬಿದ್ದಿದೆ. ಮೊದಲ ದಿನವೇ ಜೀತು ಜೋಸೆಫ್ ಚಿತ್ರಕಥೆ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಅಲ್ಲಿಂದ ಬಾಕ್ಸಾಫೀಸ್ ಕಲೆಕ್ಷನ್‌ನಲ್ಲೂ ಹಿಂದೆ ಬಿದ್ದಿದೆ.
ಆದರೆ, ಕರ್ನಾಟಕದ ಪರಿಸ್ಥಿತಿ ಬೇರೆನೇ ಇದೆ. 'ದೃಶ್ಯಂ 3' ಕರ್ನಾಟಕದಲ್ಲಿ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಮೊದಲ ದಿನಕ್ಕಿಂತ ಮೂರು ಮತ್ತು ನಾಲ್ಕನೇ ದಿನ ಕಲೆಕ್ಷನ್‌ನಲ್ಲಿ ಏರಿಕೆಯಾಗಿದೆ. ಅದರಲ್ಲೂ ಬೆಂಗಳೂರಿನಲ್ಲಿ ಈ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಮೋಹನ್‌ಲಾಲ್, ಮೀನಾ ಸಿನಿಮಾಗೆ ಮಸ್ತ್ ರೆಸ್ಪಾನ್ಸ್ ಸಿಕ್ಕಿದೆ. ಹೀಗಾಗಿ ಈ ಎರಡು ದಿನಗಳಲ್ಲಿ ಸಿನಿಮಾದ ಕಲೆಕ್ಷನ್ 2 ಕೋಟಿ ದಾಟಿದೆ ಎಂದು ವಿತರಕರ ವಲಯ ಹೇಳುತ್ತಿದೆ.

'ದೃಶ್ಯಂ 3' ಕರ್ನಾಟಕದಲ್ಲಿ ಕನ್ನಡಕ್ಕೆ ಡಬ್ ಮಾಡಿ ರಿಲೀಸ್ ಮಾಡಲಾಗಿದೆ. ಆದರೆ, ಕನ್ನಡ ವರ್ಷನ್‌ಗೆ ಅಷ್ಟೊಂದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿಲ್ಲ. ಎಲ್ಲಾ ಕಡೆ ಮಲಯಾಳಂ ವರ್ಷನ್ ಅನ್ನೇ ವೀಕ್ಷಣೆ ಮಾಡುತ್ತಿದ್ದಾರೆ. ಹೀಗಿದ್ದರೂ ಸಿನಿಮಾ ಕಲೆಕ್ಷನ್‌ನಲ್ಲಿ ಏರಿಕೆ ಕಂಡಿದೆ. ಹಾಗಿದ್ದರೆ, ಕಳೆದ ನಾಲ್ಕು ದಿನಗಳಲ್ಲಿ 'ದೃಶ್ಯಂ 3' ಬಾಕ್ಸಾಫೀಸ್ ಕಲೆಕ್ಷನ್ ಹೇಗಿದೆ? ಕರ್ನಾಟಕದಲ್ಲಿ ಈ ಸಿನಿಮಾ ಕಲೆಕ್ಷನ್ ಎಷ್ಟು ತಿಳಿಯುವುದಕ್ಕೆ ಮುಂದೆ ಓದಿ.
'ದೃಶ್ಯಂ 3' 3ನೇ ದಿನದ ಕಲೆಕ್ಷನ್
ಮಲಯಾಳಂ ಸೂಪರ್‌ಸ್ಟಾರ್ ಮೋಹನ್‌ಲಾಲ್, ಮೀನಾ ನಟಿಸಿರುವ 'ದೃಶ್ಯಂ 3'ಗೆ ಕರ್ನಾಟಕದಲ್ಲಿ ದೊಡ್ಡ ಫ್ಯಾನ್ ಫಾಲೋಯಿಂಗ್ ಇದೆ. ಹೀಗಾಗಿ ವೀಕೆಂಡ್‌ನಲ್ಲಿ ಈ ಸಿನಿಮಾಗೆ ಒಳ್ಳೆಯ ರೆಸ್ಪಾನ್ಸ್ ಸಿಗುತ್ತಿದೆ. ಕರ್ನಾಟಕದ ವಿತರಕರ ವಲಯಕ್ಕೆ ಸಿಕ್ಕಿರೋ ಲೆಕ್ಕದ ಪ್ರಕಾರ, 'ದೃಶ್ಯಂ 3' 3ನೇ ದಿನ 2.50 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಬೆಂಗಳೂರಿನಲ್ಲಿ ಅತೀ ಹೆಚ್ಚು ಕಲೆಕ್ಷನ್ ಆಗಿದೆ.
4 ದಿನಗಳ ಒಟ್ಟು ಕಲೆಕ್ಷನ್ ಎಷ್ಟು?
'ದೃಶ್ಯಂ 3' ಕರ್ನಾಟಕದಲ್ಲಿ ಮೊದಲ ದಿನದಿಂದ ಏರಿಕೆಯಾಗುತ್ತಲೇ ಇದೆ. ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದರೂ ಈ ಸಿನಿಮಾಗೆ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ. ಬೆಂಗಳೂರು, ಮೈಸೂರು ಹಾಗೂ ಮಂಗಳೂರು ಏರಿಯಾಗಳಲ್ಲಿ ಕಲೆಕ್ಷನ್ ಉತ್ತಮವಾಗಿದೆ. ಈ ಮೂರು ಏರಿಯಾಗಳಿಂದ 3 ದಿನಕ್ಕೆ ಸುಮಾರು 6.10 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ ಎಂದು ಹೇಳಲಾಗುತ್ತಿದೆ.
'ದೃಶ್ಯಂ 3' ಕರ್ನಾಟಕ ಕಲೆಕ್ಷನ್?
1ನೇ ದಿನ ₹1.60 ಕೋಟಿ
2ನೇ ದಿನ ₹2 ಕೋಟಿ
3ನೇ ದಿನ ₹2.50 ಕೋಟಿ
ಒಟ್ಟು ₹6.10 ಕೋಟಿ

ಭಾನುವಾರದ ಕಲೆಕ್ಷನ್ ಕಥೆಯೇನು?
ಮೋಹನ್‌ಲಾಲ್ 'ದೃಶ್ಯಂ 3' ಭಾನುವಾರವೂ ಉತ್ತಮ ಕಲೆಕ್ಷನ್ ಮಾಡು ಭರವಸೆ ಕರ್ನಾಟಕದ ವಿತರಕರ ವಲಯದ್ದು, ಈ ದಿನ (ಮೇ 24) ಕೂಡ ಕರ್ನಾಟಕದಲ್ಲಿ 2.50 ಕೋಟಿ ರೂಪಾಯಿ ಕಲೆಕ್ಷನ್ ಆಗುತ್ತೆ ಎನ್ನಲಾಗಿದೆ.
3 ದಿನಗಳ ಒಟ್ಟು ಕಲೆಕ್ಷನ್ ಎಷ್ಟು?
ಸ್ಯಾಕ್ನಿಲ್ಕ್ ಪ್ರಕಾರ, 'ದೃಶ್ಯಂ 3' ಭಾರತದಾದ್ಯಂತ 3ನೇ ದಿನ 13.7 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಈ ಮೂಲಕ ವಿಶ್ವದಾದ್ಯಂತ 117.17 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದಂತಾಗಿದೆ. ಭಾನುವಾರದ ಕಲೆಕ್ಷನ್ ಸೇರಿದರೆ, 140 ರಿಂದ 150 ಕೋಟಿ ರೂಪಾಯಿ ಕಲೆಕ್ಷನ್ ಆಗಬಹುದೆಂಬ ನಿರೀಕ್ಷೆಯಿದೆ. 'ದೃಶ್ಯಂ 3' ಕಲೆಕ್ಷನ್ ನೂರು ಕೋಟಿ ದಾಟುತ್ತಿದ್ದಂತೆ ಮೋಹನ್‌ಲಾಲ್ ಜನರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com ಬೇರೆ ಮೂಲಗಳು ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications
