Thudarum Box Office Day 2: ಕನ್ನಡ ಸಿನಿಮಾ ಓಡ್ತಿಲ್ಲ.. ಕರ್ನಾಟಕದಲ್ಲಿ ಮೋಹನ್‌ಲಾಲ್‌ ಭರ್ಜರಿ ಕಲೆಕ್ಷನ್

ಮಲಯಾಳಂ ಸೂಪರ್‌ಸ್ಟಾರ್ ಮೋಹನ್‌ಲಾಲ್ ಮತ್ತೊಂದು ಸಿನಿಮಾ ಥಿಯೇಟರ್‌ಗೆ ಲಗ್ಗೆ ಇಟ್ಟಿದೆ. ಅದುವೇ 'ಥುಡರುಮ್'. ಈ ಸಿನಿಮಾವನ್ನು ಏಪ್ರಿಲ್ 25ರಂದು ಎರಡು ಭಾಷೆಗಳಲ್ಲಿ ಬಿಡುಗಡೆ ಮಾಡಲಾಗಿದೆ. ಮಲಯಾಳಂ ಹಾಗೂ ತೆಲುಗು ಭಾಷೆಯಲ್ಲಿ ಈ ಸಿನಿಮಾ ರಿಲೀಸ್ ಆಗಿದ್ದು, ಸಿಕ್ಕಾಪಟ್ಟೆ ಕ್ರೇಜ್ ಹುಟ್ಟಾಗಿದೆ. ಜನರು ಮುಗಿಬಿದ್ದು ಈ ರೇವೆಂಜ್ ಡ್ರಾಮಾವನ್ನು ತೆರೆಮೇಲೆ ನೋಡುವುದಕ್ಕೆ ಮುನ್ನುಗ್ಗುತ್ತಿದ್ದಾರೆ.

ಮೋಹನ್‌ಲಾಲ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರೆ, ಇವರೊಂದಿಗೆ ಶೋಭನಾ ಹಾಗೂ ಅರ್ಜುನ್ ಅಶೋಕನ್ ಮತ್ತೆರಡು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾಗೆ ಮೊದಲ ದಿನವೇ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಅದು ಎರಡನೇ ದಿನವೂ ಮುಂದುವರೆದಿದೆ. ದಕ್ಷಿಣ ಭಾರತದಲ್ಲಿ ಮೋಹನ್‌ಲಾಲ್ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸುತ್ತಿದೆ. ಹಾಗಂತ ಇದು ಕೇರಳದಲ್ಲಿ ಅಷ್ಟೇ ಅಲ್ಲ. ಕರ್ನಾಟಕದ ಚಿತ್ರಮಂದಿರಗಳು ಕೂಡ ಹೌಸ್‌ಫುಲ್ ಆಗಿರುವುದು ವಿಶೇಷ.

Mohanlal Shobana starrer Thudarum movie Karnataka Box Office Collection Day 2 Report

ಕರ್ನಾಟಕದಲ್ಲಿ ಕನ್ನಡ ಸಿನಿಮಾ ಓಡುತ್ತಿಲ್ಲ ಅಂತ ಸಿನಿಮಾ ಮಂದಿ ತಲೆ ಕೆಡಿಸಿಕೊಂಡಿ ಕೂತಿದ್ದಾರೆ. ಕಳೆದ ಎರಡು ವರ್ಷಗಳಿಂದ ಕನ್ನಡದ ಒಂದೇ ಒಂದು ಸಿನಿಮಾ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿಲ್ಲ. ಅದರಲ್ಲಿ ಒಂದೆರಡು ಸಿನಿಮಾಗಳು ಕರ್ನಾಟಕಕ್ಕಷ್ಟೇ ಸೀಮಿತವಾಗಿ ಬಿಟ್ಟಿತು. ಇಷ್ಟು ಕರ್ನಾಟಕದಲ್ಲಿ ತೆಲುಗು, ತಮಿಳು ಸಿನಿಮಾಗಳು ರಾಜ್ಯಬಾರ ಮಾಡುತ್ತಿದ್ದವು. ಈಗ ಸಾಲಿಗೆ ಮಲಯಾಳಂ ಸಿನಿಮಾ ಕೂಡ ಸೇರಿಕೊಂಡಿದೆ. ಹಾಗಿದ್ದರೆ, ಎರಡು ದಿನಗಳಲ್ಲಿ 'ಥುಡರುಮ್' ಸಿನಿಮಾದ ಬಾಕ್ಸಾಫೀಸ್‌ ಕಲೆಕ್ಷನ್ ಎಷ್ಟು? ಕರ್ನಾಟಕದ ವಿತರಕರು ಕೊಡುತ್ತಿರುವ ಲೆಕ್ಕ ಎಷ್ಟು? ತಿಳಿಯುವುದಕ್ಕೆ ಮುಂದೆ ಓದಿ.

'ಥುಡರುಮ್' ಎರಡನೇ ದಿನದ ಕಲೆಕ್ಷನ್?

ಮೋಹನ್‌ಲಾಲ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಈ ಸಿನಿಮಾವನ್ನು ತರುಣ್ ಮೂರ್ತಿ ನಿರ್ದೇಶನ ಮಾಡಿದ್ದಾರೆ. ಕೆ.ಆರ್ ಸುನೀಲ್ ಹಾಗೂ ತರುಣ್ ಮೂರ್ತಿ ಹೆಣೆದ ಈ ರಿವೇಂಜ್ ಡ್ರಾಮಾ ಪ್ರೇಕ್ಷಕರನ್ನು ಸೆಳೆಯುತ್ತಿದೆ. ಮೊದಲ ದಿನ ಒಳ್ಳೆಯ ಓಪನಿಂಗ್ ಪಡೆದುಕೊಂಡ ಸಿನಿಮಾಗೆ 2ನೇ ದಿನವೂ ಸೂಪರ್ ಓಪನಿಂಗ್ ಸಿಕ್ಕಿದೆ. ಸ್ಯಾಕ್ನಿಲ್ಕ್ ವರದಿ ಪ್ರಕಾರ ಎರಡನೇ ದಿನವೂ ಸಿನಿಮಾದ ಕಲೆಕ್ಷನ್ ಜೋರಾಗಿದೆ. ಭಾರತದಾದ್ಯಂತ 2ನೇ ದಿನ 8.96 ಕೋಟಿ ಕಲೆಕ್ಷನ್ ಮಾಡಿದೆ ಎಂದು ವರದಿ ಮಾಡಿದೆ.

Mohanlal Shobana starrer Thudarum movie Karnataka Box Office Collection Day 2 Report

ಕರ್ನಾಟಕದಲ್ಲಿ ಹೇಗಿದೆ ರೆಸ್ಪಾನ್ಸ್?

'ಎಲ್‌ 2' ಬಳಿಕ ಮೋಹನ್‌ಲಾಲ್‌ ಸಿನಿಮಾ ನಟಿಸಿದ ಮತ್ತೊಂದು ಸಿನಿಮಾ ಕರ್ನಾಟಕದ ಬಾಕ್ಸಾಫೀಸ್‌ನಲ್ಲಿ ಅಬ್ಬರಿಸುತ್ತಿದೆ. ಕರ್ನಾಟಕದ ವಿತರಕರ ಪ್ರಕಾರ 'ಥುಡರುಮ್‌'ಗೆ ಸೂಪರ್‌ ರೆಸ್ಪಾನ್ಸ್ ಸಿಕ್ಕಿದೆ. ಬೆಂಗಳೂರಿನಲ್ಲಿ 113 ಸ್ಕ್ರೀನ್, ಮೈಸೂರು ಭಾಗದಲ್ಲಿ 11 ಸ್ಕ್ರೀನ್ ಹಾಗೂ ಮಂಗಳೂರು ಭಾಗದಲ್ಲಿ 29 ಸ್ಕ್ರೀನ್ ರಿಲೀಸ್ ಆಗಿದೆ. ಕರ್ನಾಟಕದಲ್ಲಿ ಮೊದಲ ದಿನ 1.69 ಕೋಟಿ ರೂಪಾಯಿ ಕಲೆಕ್ಷನ್ ಆಗಿದ್ದರೆ, ಎರಡನೇ ದಿನ 3.80 ರಿಂದ 4 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ ಎನ್ನುತ್ತಾರೆ ವಿತರಕರು. ಎರಡು ದಿನಗಳಲ್ಲಿ ಒಟ್ಟು 5.49 ಕೋಟಿ ರೂಪಾಯಿವರೆಗೂ ಸಿನಿಮಾದ ಕಲೆಕ್ಷನ್ ಆಗಿದೆ ಎಂದು ಲೆಕ್ಕ ಕೊಡುತ್ತಿದ್ದಾರೆ. ಇದರಲ್ಲಿ ಬೆಂಗಳೂರಿನಲ್ಲಿ ಶೇ.70ರಷ್ಟು ಅಂದರೆ, 3.8 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ ಎನ್ನಲಾಗಿದೆ.

2 ದಿನಗಳ ಒಟ್ಟು ಕಲೆಕ್ಷನ್ ಎಷ್ಟು?

'ಥುಡರುಮ್' ಸಿನಿಮಾಗೆ ದಕ್ಷಿಣ ಭಾರತದಲ್ಲಿ ಪ್ರತಿಕ್ರಿಯೆ ಚೆನ್ನಾಗಿದೆ. ಸ್ಯಾಕ್ನಿಲ್ಕ್ ಪ್ರಕಾರ ಮೊದಲ ದಿನ ಈ ಸಿನಿಮಾ 5.24 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಅದೇ 2ನೇ ದಿನ 8.96 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಕೇರಳ ಹಾಗೂ ಕರ್ನಾಟಕದಲ್ಲಿ ಮೋಹನ್‌ಲಾಲ್ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಒಟ್ಟು ಎರಡು ದಿನಗಳಲ್ಲಿ ಭಾರತದಾದ್ಯಂತ ಮಲಯಾಳಂ ಹಾಗೂ ತೆಲುಗು ಅವತರಣಿಕೆಗಳಿಂದ 14.2 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು ಸ್ಯಾಕ್ನಿಲ್ಕ್ ವರದಿ ಮಾಡಿದೆ.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

More from Filmibeat

English summary
Mohanlal, Shobana starrer Thudarum movie Karnataka Box Office Collection Day 2 Report;
Read more about: mohanlal malayalam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X