Akhanda 2 Box Office Day 5: 5 ದಿನಗಳಲ್ಲಿ 'ಅಖಂಡ 2' ಕರ್ನಾಟಕದಲ್ಲಿ ಗಳಿಸಿದ್ದೆಷ್ಟು? ಹಿಟ್ or ಫ್ಲಾಪ್?
ಟಾಲಿವುಡ್‌ನ ನಟಸಿಂಹ ನಂದಮೂರಿ ಬಾಲಕೃಷ್ಣ ಹಾಗೂ ನಿರ್ದೇಶಕ ಬೋಯಪಾಟಿ ಶ್ರೀನು ಕಾಂಬಿನೇಷನ್‌ನಲ್ಲಿ ಮೂಡಿಬಂದಿರುವ ಸಿನಿಮಾ 'ಅಖಂಡ 2'. ಈ ಹಿಂದೆ ಇದೇ ಜೋಡಿಯ 'ಅಖಂಡ 2' ಬಾಕ್ಲ್‌ಬಸ್ಟರ್ ಲಿಸ್ಟ್ ಸೇರಿತ್ತು. ಕರ್ನಾಟಕದಲ್ಲಿ ಒಳ್ಳೆಯ ಬ್ಯುಸಿನೆಸ್ ಮಾಡಿತ್ತು. ಹೀಗಾಗಿ ಇದೇ ಜೋಡಿ ಮತ್ತೊಮ್ಮೆ 'ಅಖಂಡ 2' ಮೂಲಕ ಅಖಾಡಕ್ಕೆ ಇಳಿದಿದ್ದಾರೆ.
ಈ ಸಿನಿಮಾವನ್ನು 14 ರೀಲ್ಸ್ ಪ್ಲಸ್ ಬ್ಯಾನರ್ ಮೂಲಕ ರಾಮ್ ಆಚಂಟ ಮತ್ತು ಗೋಪಿಚಂದ್ ಆಚಂಟ ನಿರ್ಮಾಣ ಮಾಡಿದ್ದಾರೆ. ಬಾಲಕೃಷ್ಣ ಪುತ್ರಿ ತೇಜಸ್ವಿನಿ ನಂದಮೂರಿ ಈ ಸಿನಿಮಾವನ್ನು ಅರ್ಪಿಸಿರೋದು ಮತ್ತೊಂದು ವಿಶೇಷ. ಬಾಲಯ್ಯ ಜೊತೆಗೆ ಸಂಯುಕ್ತಾ ಮೆನನ್, ಆದಿ ಪಿನಿಸೆಟ್ಟಿ, ಹರ್ಷಾಲಿ ಮಲ್ಹೋತ್ರಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಎಸ್. ಥಮನ್ ಈ ಸಿನಿಮಾ ಟ್ಯೂನ್ ಹಾಗೂ ಹಿನ್ನೆಲೆ ಸಂಗೀತ ನೀಡಿದ್ದು ವಿಶೇಷ.

ಡಿಸೆಂಬರ್ 5ಕ್ಕೆ ರಿಲೀಸ್ ಆಗಬೇಕಿದ್ದ 'ಅಖಂಡ 2' ಹಣಕಾಸು ಸಮಸ್ಯೆಯಿಂದ ಒಂದು ವಾರ ಮುಂದೆ (ಡಿಸೆಂಬರ್ 12)ರಿಲೀಸ್ ಆಗಿತ್ತು. ಇಲ್ಲಿಂದ ಬಾಕ್ಸಾಫೀಸ್ ಜರ್ನಿ ಶುರುವಾಗಿತ್ತು. ಕಳೆದ ಐದು ದಿನಗಳಲ್ಲಿ ಬಾಲಕೃಷ್ಣ ನಟಿಸಿರುವ 'ಅಖಂಡ 2' ಕಲೆಕ್ಷನ್ ಹೇಗಿದೆ? ಕರ್ನಾಟಕದ ಬಾಕ್ಸಾಫೀಸ್‌ನಲ್ಲಿ ಎಷ್ಟು ಕಲೆಕ್ಷನ್ ಆಗಿದೆ? ತಿಳಿಯುವುದಕ್ಕೆ ಮುಂದೆ ಓದಿ.
'ಅಖಂಡ 2' 5ನೇ ದಿನದ ಕಲೆಕ್ಷನ್
ಬಾಲಕೃಷ್ಣ ಸಿನಿಮಾ 'ಅಖಂಡ 2'ಗೆ ರಿಲೀಸ್‌ಗೂ ಮುನ್ನ ಒಳ್ಳೆಯ ಕ್ರೇಜ್ ಇತ್ತು. ತೆಲುಗು ಮಾಧ್ಯಮಗಳ ಪ್ರಕಾರ, ಪ್ರೀ ರಿಲೀಸ್ ಬ್ಯುಸಿನೆಸ್ ₹103 ಕೋಟಿ ಆಗಿದೆ. ಅಲ್ಲದೆ ಭಾರತದ ಬಾಕ್ಸಾಫೀಸ್‌ನಲ್ಲಿ ಮೊದಲ ಮೂರು ದಿನ ಒಳ್ಳೆಯ ಕಲೆಕ್ಷನ್ ಮಾಡಿತ್ತು. ಆದರೆ, ಸೋಮವಾರದಿಂದ ಶೇ.65ರಷ್ಟು ಕಲೆಕ್ಷನ್ ಡ್ರಾಪ್ ಆಗಿದೆ. ಇನ್ನು ಸ್ಯಾಕ್ನಿಲ್ಕ್ ಪ್ರಕಾರ, ಈ ಸಿನಿಮಾ 5ನೇ ದಿನ ₹4.25 ಕೋಟಿ ಕಲೆಕ್ಷನ್ ಮಾಡಿದೆ. ಒಟ್ಟು 5 ದಿನಗಳಲ್ಲಿ ₹70.6 ಕೋಟಿ ಕಲೆಕ್ಷನ್ ಆಗಿದೆ.
ಕರ್ನಾಟಕದ ಕಲೆಕ್ಷನ್ ಎಷ್ಟು?
ಬಾಲಕೃಷ್ಣ ಸಿನಿಮಾ ಕರ್ನಾಟಕದಲ್ಲಿಯೂ ಒಳ್ಳೆಯ ಕಲೆಕ್ಷನ್ ಮಾಡುತ್ತವೆ. ಅದಕ್ಕೆ 'ಅಖಂಡ' ಬಳಿಕ ತೆರೆಕಂಡ ಸಿನಿಮಾಗಳೇ ಸಾಕ್ಷಿ. ಹೀಗಾಗಿ 'ಅಖಂಡ 2' ಬಗ್ಗೆನೂ ನಿರೀಕ್ಷೆಯಿತ್ತು. ಇದು ದೊಡ್ಡ ಮಟ್ಟದಲ್ಲಿ ಕಲೆಕ್ಷನ್ ಮಾಡದೇ ಹೋದರೂ, ರಾಜ್ಯದಲ್ಲಿ ಡಿಸೆಂಟ್ ಕಲೆಕ್ಷನ್ ಆಗಿದೆ. ಸ್ಯಾಕ್ನಿಲ್ಕ್ ಹಾಗೂ ಕರ್ನಾಟಕದ ವಿತರಕರ ಲೆಕ್ಕಾಚಾರ ಬೇರೆ ಇದ್ದು ಐದು ದಿನಗಳ ಒಟ್ಟು ಕಲೆಕ್ಷನ್ ಹೀಗಿದೆ.
'ಅಖಂಡ 2' ಕರ್ನಾಟಕ ಕಲೆಕ್ಷನ್
ದಿನ ಸ್ಯಾಕ್ನಿಲ್ಕ್ ವಿತರಕರು (ಕರ್ನಾಟಕ)
1ನೇ ದಿನ ₹3.65 ಕೋಟಿ ₹1.2 ಕೋಟಿ
2ನೇ ದಿನ ₹2.22 ಕೋಟಿ ₹1.5 ಕೋಟಿ
3ನೇ ದಿನ ₹2.06 ಕೋಟಿ ₹1.0 ಕೋಟಿ
4ನೇ ದಿನ ₹0.60 ಕೋಟಿ ₹0.40 ಕೋಟಿ
5ನೇ ದಿನ ₹0.50 ಕೋಟಿ ₹0.30 ಕೋಟಿ
ಒಟ್ಟು ₹9.03 ಕೋಟಿ ₹5.40 ಕೋಟಿ

'ಅಖಂಡ 2' ಕಲೆಕ್ಷನ್ ಡ್ರಾಪ್
ಬಾಲಕೃಷ್ಣ ಸಿನಿಮಾ 'ಅಖಂಡ 2' 4ನೇ ದಿನದಿಂದ ಬಾಕ್ಸಾಫೀಸ್‌ನಲ್ಲಿ ಡ್ರಾಪ್ ಕಂಡಿದೆ. ಬಿಡುಗಡೆಗೂ ಮುನ್ನ ₹103 ಕೋಟಿ ವ್ಯಾಪಾರ ಆಗಿದ್ದರೆ, ನಿರ್ಮಾಪಕರು ಸೇಫ್ ಆಗುವುದಕ್ಕೆ ಇನ್ನೂ ₹104 ಕೋಟಿ ಬೇಕಿದೆ. ಸದ್ಯ ಭಾರತದ ಬಾಕ್ಸಾಫೀಸ್‌ನಲ್ಲಿ ₹83 ಕೋಟಿ (Gross) ಗಳಿಸಿದ್ದರೆ, ವಿಶ್ವದಾದ್ಯಂತ ಈ ಸಿನಿಮಾ ₹11 ಕೋಟಿ ಕಲೆಕ್ಷನ್ ಮಾಡಿದೆ. ಎಲ್ಲಾ ಸೇರಿದರೆ, ಒಟ್ಟು ₹94 ಕೋಟಿ ಕಲೆಕ್ಷನ್ ಆಗಿದೆ ಎಂದು ವರದಿಯಾಗಿದೆ. ಹೀಗಾಗಿ ಥಿಯೇಟರ್‌ಗಳಿಂದ ಇನ್ನೂ ₹35 ಕೋಟಿ ಬರುತ್ತಾ? ಅನ್ನೋದು ನೋಡಬೇಕಿದೆ.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು ಬೇರೆ ಮೂಲಗಳು, https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications











