Hit 3 Box Office Prediction:ನಾನಿ ಶ್ರೀನಿಧಿ ಶೆಟ್ಟಿ ಜೋಡಿ 'ಹಿಟ್' ಆಗುತ್ತಾ? ಏನಿದೆ ಮೊದಲ ದಿನದ ಲೆಕ್ಕಾಚಾರ?

ಮೇ ತಿಂಗಳ ಮೊದಲ ದಿನವೇ ಟಾಲಿವುಡ್‌ನ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ 'ಹಿಟ್ 3' ರಿಲೀಸ್ ಆಗಿದೆ. ತೆಲುಗಿನಲ್ಲಿ ಈಗಾಗಳೇ ಹಿಟ್‌ ಸೀರಿಸ್‌ನ ಎರಡೂ ಅವತರಣಿಕೆಗಳು ಬ್ಲಾಕ್ ಬಸ್ಟರ್ ಲಿಸ್ಟ್ ಸೇರಿವೆ. 'ಹಿಟ್ 1' ಹಾಗೂ 'ಹಿಟ್ 2' ಎರಡೂ ಸಿನಿಮಾಗಳಿಗೂ ಮೆಚ್ಚುಗೆ ವ್ಯಕ್ತವಾಗಿತ್ತು. ಇದೇ ಯಶಸ್ಸಿನ ಬೆನ್ನಲ್ಲೇ 'ಹಿಟ್ 3' ಕೂಡ ರಿಲೀಸ್ ಆಗಿದೆ. ಈ ಕಾರಣಕ್ಕೆ ನ್ಯಾಚುರಲ್ ಸ್ಟಾರ್ ನಾನಿ ನಟಿಸಿದ 'ಹಿಟ್ 3' ಮೇಲೆ ನಿರೀಕ್ಷೆಗಳು ದುಪ್ಪಟ್ಟಾಗಿವೆ.

ತೆಲುಗಿನ ನ್ಯಾಚುರಲ್ ಸ್ಟಾರ್ ನಾನಿ ಜೊತೆ ಕನ್ನಡದ ನಟಿ 'ಕೆಜಿಎಫ್' ಖ್ಯಾತಿಯ ಶ್ರೀನಿಧಿ ಶೆಟ್ಟಿ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. 'ಕೆಜಿಎಫ್ 2' ರಿಲೀಸ್ ಆಗಿ ಸುಮಾರು ಮೂರು ವರ್ಷಗಳ ಬಳಿಕ ಶ್ರೀನಿಧಿ ಶೆಟ್ಟಿಯ ಸಿನಿಮಾ ರಿಲೀಸ್ ಆಗುತ್ತಿದೆ. ಹೀಗಾಗಿ ಪ್ಯಾನ್ ಇಂಡಿಯಾ ನಟಿಗೆ 'ಹಿಟ್ 3' ಮತ್ತದೇ ಬ್ಲಾಕ್ ಬಸ್ಟರ್ ಸಿನಿಮಾ ಕೊಡುತ್ತಾ? ಅನ್ನೋದನ್ನು ಕನ್ನಡಿಗರು ಎದುರು ನೋಡುತ್ತಿದ್ದಾರೆ.

Nani and Srinidhi Shetty starrer Hit 3 film box office day prediction report

'ಹಿಟ್ 3' ಈಗಾಗಲೇ ಟ್ರೈಲರ್ ಮೂಲಕ ಸಿನಿಪ್ರಿಯರಿಗೆ ಕಿಕ್ ಕೊಟ್ಟಿದೆ. ಹಾಗೇ ಸಿನಿಮಾ ಟೀಮ್‌ಗೆ ಬಾಕ್ಸಾಫೀಸ್‌ನಲ್ಲಿ ಕಿಕ್ ಕೊಡುತ್ತಾ? ಈಗಾಗಲೇ ಟ್ರೇಡ್ ಎಕ್ಸ್‌ಪರ್ಟ್‌ಗಳು ತೆಲುಗು ನಟ ನಾನಿ ಹಾಗೂ ಶ್ರೀನಿಧಿ ಶೆಟ್ಟಿ ಸಿನಿಮಾ ಮೊದಲ ದಿನ ಎಷ್ಟು ಕಲೆಕ್ಷನ್ ಮಾಡಬಹುದೆಂದು ಲೆಕ್ಕಾಚಾರ ಹಾಕುವುದಕ್ಕೆ ಶುರು ಮಾಡಿದ್ದಾರೆ. ಹಾಗಿದ್ದರೆ. ಅಡ್ವಾನ್ಸ್ ಬುಕಿಂಗ್‌ ಸೇರಿದಂತೆ ಮೊದಲ ದಿನ ಈ ಸಿನಿಮಾ ಎಷ್ಟು ಕಲೆಕ್ಷನ್ ಮಾಡಬಹುದು? ಟ್ರೇಡ್ ಎಕ್ಸ್‌ಪರ್ಟ್‌ಗಳು ಏನಂತಾರೆ? ತಿಳಿಯುವುದಕ್ಕೆ ಮುಂದೆ ಓದಿ.

ಯುಎಸ್‌ನಲ್ಲಿ ಭರ್ಜರಿ ರೆಸ್ಪಾನ್ಸ್

ತೆಲುಗು ಸಿನಿಮಾದ ಸಕ್ಸಸ್ ಯುಎಸ್‌ ಬಾಕ್ಸಾಫೀಸ್‌ ಮೇಲೆ ನಿರ್ಧಾರ ಆಗಿರುತ್ತೆ. ಭಾರತಕ್ಕಿಂತಲೂ ಮೊದಲು ಅಮೆರಿಕದಲ್ಲಿ ಪ್ರೀಮಿಯರ್ ಆಗುತ್ತೆ. ಅಲ್ಲಿ ಸಿಗುವ ರೆಸ್ಪಾನ್ಸ್ ಸಿನಿಮಾದ ಭವಿಷ್ಯವನ್ನು ನಿರ್ಧರಿಸುತ್ತೆ. ನ್ಯಾಚುರಲ್ ಸ್ಟಾರ್ ನಾನಿ, ಶ್ರೀನಿಧಿ ಶೆಟ್ಟಿ ನಟಿಸಿದ 'ಹಿಟ್ 3' ಸಿನಿಮಾಗೆ ಯುಎಸ್‌ನಲ್ಲಿ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಅದರಲ್ಲೂ ಅಡ್ವಾನ್ಸ್ ಬುಕಿಂಗ್‌ನಲ್ಲಿ ಈ ವರ್ಷದ ಎರಡನೇ ದೊಡ್ಡ ಸಿನಿಮಾ ಅಂತ ಎನಿಸಿಕೊಂಡಿದೆ. ವೆಂಕಿ ವೆಂಕಿ ಬಾಕ್ಸಾಫೀಸ್‌ ಪ್ರಕಾರ, ಯುಎಸ್‌ನಲ್ಲಿ ಅಡ್ವಾನ್ಸ್ ಬುಕಿಂಗ್ ಸೇಲ್ಸ್ 4,15,976 ಡಾಲರ್ ಆಗಿದೆ. ಸುಮಾರು 435 ಲೋಕೇಶ್‌ನಗಳಿಂದ 21,500 ಟಿಕೆಟ್‌ಗಳು ಸೇಲ್ ಆಗಿವೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ. ಅಂದರೆ, ಭಾರತದ ರೂಪಾಯಿಗೆ ಲೆಕ್ಕ ಹಾಕಿದಾಗ ಅಂದಾಜು 3.52 ಕೋಟಿ ಕಲೆಕ್ಷನ್ ಆಗಿದೆ.

ಮೊದಲ ದಿನದ ಲೆಕ್ಕಾಚಾರವೇನು?

ನ್ಯಾಚುರಲ್ ಸ್ಟಾರ್ ನಾನಿ ವೃತ್ತಿ ಬದುಕಿನ ಬೆಸ್ಟ್ ಸಿನಿಮಾ ಆಗಬಹುದು ಎಂದು ಲೆಕ್ಕಾಚಾರ ಹಾಕಲಾಗುತ್ತಿದೆ. ತೆಲಂಗಾಣ ಹಾಗೂ ಆಂಧ್ರ ಪ್ರದೇಶದಲ್ಲಿ ಈ ಸಿನಿಮಾದ ಅಡ್ವಾನ್ಸ್ ಬುಕಿಂಗ್ ಉತ್ತಮವಾಗಿದೆ. ಅದರಲ್ಲೂ ಹೈದರಾಬಾದ್‌ ಬಹುತೇಕ ಸೆಂಟರ್‌ಗಳಲ್ಲಿ ಟಿಕೆಟ್‌ಗಳು ಸೋಲ್ಡ್ ಔಟ್ ಆಗಿವೆ. ಹೀಗಾಗಿ ಕೆಲವು ಟ್ರೇಡ್ ಎಕ್ಸ್‌ಪರ್ಟ್‌ಗಳ ಪ್ರಕಾರ ಈ ಸಿನಿಮಾ ಮೊದಲ ದಿನ 25 ಕೋಟಿಯಿಂದ 30 ಕೋಟಿ ರೂಪಾಯಿವರೆಗೂ ಕಲೆಕ್ಷನ್ ಆಗಬಹುದು ಎಂದು ಲೆಕ್ಕ ಹಾಕಿದ್ದಾರೆ.

Nani and Srinidhi Shetty starrer Hit 3 film box office day prediction report

ಒಳ್ಳೆಯ ಓಪನಿಂಗ್ ನಿರೀಕ್ಷೆ

ನ್ಯಾಚುರಲ್ ಸ್ಟಾರ್ ನಾನಿ ನಟಿಸಿದ 'ಹಿಟ್ 3' ಸೀಕ್ವೆಲ್ ಆಗಿರುವುದರಿಂದ ಈ ಸಿನಿಮಾಗೆ ಅದರದ್ದೇ ಫ್ಯಾನ್ ಫಾಲೋವಿಂಗ್ ಇದೆ. ಸಸ್ಪೆನ್ಸ್, ಕ್ರೈಂ ಥ್ರಿಲ್ಲರ್ ಸಿನಿಮಾ ಆಗಿದ್ದರಿಂದ ಬಾಕ್ಸಾಫೀಸ್‌ನಲ್ಲಿ ಒಂದೊಳ್ಳೆ ಓಪನಿಂಗ್ ತೆಗೆದುಕೊಳ್ಳಬಹುದೆಂಬ ನಿರೀಕ್ಷೆಯಿದೆ. ಇನ್ನು ಸ್ಯಾಕ್ನಿಲ್ಕ್ ಪ್ರಕಾರ ಮೊದಲ ದಿನದ ಬೆಳಗ್ಗೆಯ ಕಲೆಕ್ಷನ್ 3.92 ಕೋಟಿ ರೂಪಾಯಿ ಎಂದು ಹೇಳಿದೆ. ಈ ಸಂಖ್ಯೆ ಇನ್ನೂ ಅಪ್‌ಡೇಟ್ ಆಗಬೇಕಿತ್ತು. ಈ ದಿನ ಕೊನೆಯಲ್ಲಿ ಮೊದಲ ದಿನದ ಅಂದಾಜು ಕಲೆಕ್ಷನ್ ಗೊತ್ತಾಗಬಹುದು.

ಪ್ಯಾನ್ ಇಂಡಿಯಾ ರಿಲೀಸ್

'ಹಿಟ್ 3' ಸಿನಿಮಾವನ್ನು ಪ್ಯಾನ್ ಇಂಡಿಯಾ ರಿಲೀಸ್ ಮಾಡಲಾಗಿದೆ. ತೆಲುಗು ಸೇರಿದಂತೆ ಕನ್ನಡ, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಬಿಡುಗಡೆ ಮಾಡಲಾಗಿದೆ. ಹೀಗಾಗಿ ದೇಶಾದ್ಯಂತ ದೊಡ್ಡ ಮಟ್ಟದಲ್ಲಿ ಸಿನಿಮಾ ರಿಲೀಸ್ ಆಗಬಹುದೆಂದು ನಿರೀಕ್ಷೆಯನ್ನು ಮಾಡಲಾಗಿದೆ. ಕನ್ನಡದ ನಟಿ ಶ್ರೀನಿಧಿ ಶೆಟ್ಟಿ ನಟಿಸಿರುವುದರಿಂದ ಈ ಸಿನಿಮಾಗೆ ಕರ್ನಾಟಕದಲ್ಲಿ ರೆಸ್ಪಾನ್ಸ್ ಹೇಗಿರುತ್ತೆ ಅನ್ನೋದನ್ನು ನೋಡಬೇಕಿದೆ.

More from Filmibeat

English summary
Nani and Srinidhi Shetty starrer Hit 3 film box office day prediction report;
Read more about: nani tollywood srinidhi shetty
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X