HIT 3 Box Office Day 7:'ಕೆಜಿಎಫ್' ಸುಂದರಿ ಶ್ರೀನಿಧಿ ಶೆಟ್ಟಿಯ ಸಿನಿಮಾ 'ಹಿಟ್ 3' ಕರ್ನಾಟಕದಲ್ಲಿ ಗಳಿಸಿದ್ದೆಷ್ಟು?

ನ್ಯಾಚುಲರ್ ಸ್ಟಾರ್ ನಾನಿ, 'ಕೆಜಿಎಫ್' ಬ್ಯೂಟಿ ಶ್ರೀನಿಧಿ ಶೆಟ್ಟಿ ನಟನೆಯ 'ಹಿಟ್ 3'ಗೆ ಬಾಕ್ಸಾಫೀಸ್‌ನಲ್ಲಿ ಸೂಪರ್ ರೆಸ್ಪಾನ್ಸ್ ಸಿಕ್ಕಿದೆ. ತೆಲುಗಿನ ಸ್ಟಾರ್ ನಟ ನಾನಿ ತನ್ನ ಖಾತೆಯಲ್ಲಿ ಮತ್ತೊಂದು ಹಿಟ್ ಸಿನಿಮಾವನ್ನು ದಾಖಲು ಮಾಡಿದ್ದಾರೆ. ಒಂದು ವಾರದ ಹಿಂದೆ ಈ ಸಿನಿಮಾ ವಿಶ್ಯದಾದ್ಯಂತ ಬಿಡುಗಡೆಯಾಗಿತ್ತು. ಮೇ 1 ರಂದು ರಿಲೀಸ್ ಆಗಿದ್ದ ಸಿನಿಮಾ ಯಶಸ್ವಿಯಾಗಿ ಏಳು ದಿನಗಳನ್ನು ಪೂರೈಸಿ ಎಂಟನೇ ದಿನಕ್ಕೆ ಕಾಲಿಟ್ಟಿದೆ.

'ಹಿಟ್'ನ ಮೂರನೇ ಸೀರಿಸ್‌ಗೆ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೇವಲ ಆಂಧ್ರ, ತೆಲಂಗಾಣ ಅಷ್ಟೇ ಅಲ್ಲ, ಕರ್ನಾಟಕದಲ್ಲಿಯೂ ಸಿನಿಮಾ ಸೂಪರ್ ಕಲೆಕ್ಷನ್ ಮಾಡಿದೆ. ವಿಶ್ವದಾದ್ಯಂತ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ 100 ಕೋಟಿ ಕ್ಲಬ್ ಸೇರುವ ಸನಿಹದಲ್ಲಿದೆ. ಸುಮಾರು 1000ಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ ತೆರೆಕಂಡಿದ್ದ ಸಿನಿಮಾ ವೀಕೆಂಡ್‌ನಲ್ಲಿ ದಿಢೀರನೇ ಚೇತರಿಕೆ ಕಂಡಿತ್ತು.

Nani Srinidhi Shetty starrer HIT 3 movie day 7 Karnataka box office collection report

ಇನ್ನು ಕರ್ನಾಟಕದಲ್ಲಿ ಐಪಿಎಲ್‌ಗೆ ಹೆದರಿ ಕನ್ನಡ ಸಿನಿಮಾಗಳನ್ನು ರಿಲೀಸ್ ಮಾಡುತ್ತಿಲ್ಲ. ಇದೇ ಸಮಯದಲ್ಲಿ ಪರಭಾಷೆಯ ಸಿನಿಮಾಗಳು ಎಂಟ್ರಿ ಕೊಟ್ಟು ಕೋಟಿ ಕೋಟಿ ಲೂಟಿ ಮಾಡಿಕೊಂಡು ಹೋಗುತ್ತಿವೆ. ಅದರಲ್ಲಿ ನಾನಿ, ಶ್ರೀನಿಧಿ ಶೆಟ್ಟಿ ನಟನೆಯ 'ಹಿಟ್ 3' ಕೂಡ ಒಂದು. ಈ ಸಿನಿಮಾ ಕರ್ನಾಟಕದ ಬಾಕ್ಸಾಫೀಸ್‌ನಲ್ಲಿ ಗಳಿಸಿದ್ದೆಷ್ಟು? ಭಾರತದಾದ್ಯಂತ ಈ ಸಿನಿಮಾದ ಕಲೆಕ್ಷನ್ ಏನು? ಎನ್ನುವುದನ್ನು ತಿಳಿಯುವುದಕ್ಕೆ ಮುಂದೆ ಓದಿ.

8ನೇ ದಿನದ ಕಲೆಕ್ಷನ್ ಎಷ್ಟು?

ನಾನಿ, ಶ್ರೀನಿಧಿ ಶೆಟ್ಟಿಯ 'ಹಿಟ್ 3' ಸಿನಿಮಾಗೆ ಒಂದೊಳ್ಳೆ ಓಪನಿಂಗ್ ಸಿಕ್ಕಿತ್ತು. ಕೇವಲ 7 ದಿನಗಳಲ್ಲಿ ಬಾಕ್ಸಾಫೀಸ್‌ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡಿದೆ. ಇನ್ನೂ ವೀಕ್‌ ಡೇಸ್‌ನಲ್ಲಿ ಕಲೆಕ್ಷನ್ ಚೆನ್ನಾಗಿಯೇ ಇದೆ. ಬಾಕ್ಸಾಫೀಸ್‌ ಕಲೆಕ್ಷನ್ ಅನ್ನು ಲೆಕ್ಕ ಹಾಕುವ ಸ್ಯಾಕ್ನಿಲ್ಕ್ 'ಹಿಟ್ 3' 7ನೇ ದಿನ ಭಾರತದಲ್ಲಿ ಗಳಿಸಿದ ಕಲೆಕ್ಷನ್ ಅನ್ನು ವರದಿ ಮಾಡಿದೆ. ಇದರ ಪ್ರಕಾರ, 'ಹಿಟ್ 3' 7ನೇ ದಿನ 2 ಭಾರತದಾದ್ಯಂತ 2.01 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.

Nani Srinidhi Shetty starrer HIT 3 movie day 7 Karnataka box office collection report

ಕರ್ನಾಟಕದ ಕಲೆಕ್ಷನ್ ಏನು?

ತೆಲುಗು ಸಿನಿಮಾಗಳು ಕರ್ನಾಟಕದಲ್ಲಿ ಒಳ್ಳೆಯ ಕಲೆಕ್ಷನ್ ಮಾಡುತ್ತವೆ. ಅದರಲ್ಲೂ ನಾನಿ ಸಿನಿಮಾಗೆ ಬೆಂಗಳೂರಿನಲ್ಲಿ ಬೇಡಿಕೆಯಿದೆ. ಸಿನಿಮಾ ಮಂದಿ ಅವರ ಸಿನಿಮಾಗಳನ್ನು ಇಷ್ಟ ಪಟ್ಟು ನೋಡುತ್ತಾರೆ. ಕರ್ನಾಟಕದ ವಿತರಕರ ಪ್ರಕಾರ, 'ಹಿಟ್ 3' ರಾಜ್ಯದಲ್ಲಿ ಪ್ರಾಫಿಟ್ ತಂದು ಕೊಟ್ಟಿದೆ. ಅವರ ಅಂದಾಜು ಲೆಕ್ಕದ ಪ್ರಕಾರ, 'ಹಿಟ್ 3' 5.24 ಕೋಟಿ ಕಲೆಕ್ಷನ್ ಆಗಿದೆ. ಕಳೆದ ಏಳು ದಿನಗಳಲ್ಲಿ ಗಳಿಸಿಕೆ ಕಲೆಕ್ಷನ್ ಹೀಗಿದೆ.

ಮೊದಲನೇ ದಿನ ₹2.8 ಕೋಟಿ

2ನೇ ದಿನ ₹59 ಲಕ್ಷ
3ನೇ ದಿನ ₹65 ಲಕ್ಷ
4ನೇ ದಿನ ₹70 ಲಕ್ಷ
5ನೇ ದಿನ ₹19 ಲಕ್ಷ
6ನೇ ದಿನ ₹17 ಲಕ್ಷ
7ನೇ ದಿನ ₹14 ಲಕ್ಷ
ಒಟ್ಟು ₹5.24 ಕೋಟಿ

ಎಲ್ಲೆಲ್ಲಿ ಹೇಗಿದೆ ಕಲೆಕ್ಷನ್?

ವಿಶ್ವದಾದ್ಯಂತ 'ಹಿಟ್ 3' ಕಲೆಕ್ಷನ್ ₹74 ಕೋಟಿ
ಆಂಧ್ರ ಪ್ರದೇಶ & ತೆಲಂಗಾಣ ₹43.5 ಕೋಟಿ
ಓವರ್‌ಸೀಸ್ ₹16.55 ಕೋಟಿ
ಕರ್ನಾಟಕ & ಇತರೆ ₹6.85 ಕೋಟಿ

ಪ್ರಿ-ರಿಲೀಸ್ ಬ್ಯುಸಿನೆಸ್

'ಹಿಟ್ 3' ಪ್ರಿ-ರಿಲೀಸ್ ಬ್ಯುಸಿನೆಸ್ ಹೀಗಿದೆ. ಆಂಧ್ರ ಪ್ರದೇಶ/ತೆಲಂಗಾಣದಿಂದ ₹33.4 ಕೋಟಿ, ರೆಸ್ಟ್ ಆಫ್ ಇಂಡಿಯಾ ₹5.5ಕೋಟಿ ಹಾಗೂ ಓವರ್‌ಸೀಸ್ ₹10 ಕೋಟಿ ಕಲೆಕ್ಷನ್ ಆಗಿದೆ. 1000 ಸ್ಕ್ರೀನ್‌ನಲ್ಲಿ ತೆರೆಕಂಡಿರುವ ಈ ಸಿನಿಮಾ ಎರಡನೇ ವೀಕೆಂಡ್‌ ಮೇಲೆ ಕಣ್ಣಿಟ್ಟಿದೆ. ನಾನಿ ಈ ಹಿಂದೆ ನಟಿಸಿದ 'ದಸರಾ' ಸಿನಿಮಾ ₹38.4 ಕೋಟಿ, 'ಸರಿಪೋದಾ ಶನಿವಾರಂ' 20.4 ಕೋಟಿ ಕಲೆಕ್ಷನ್ ಆಗಿತ್ತು. ಈಗ ಈ ಸಿನಿಮಾ ₹74 ಕೋಟಿ ಕಲೆಕ್ಷನ್ ಮಾಡಿದ್ದು, 100 ಕೋಟಿಯ ಸನಿಹದಲ್ಲಿದೆ.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

More from Filmibeat

English summary
Nani, Srinidhi Shetty starrer HIT 3 movie day 7 Karnataka box office collection report;
Read more about: nani srinidhi shetty box office
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X