Lo Naveena Box Office: ನವೀನ್ ಸಜ್ಜು ಹೀರೋ ಆದ 'ಲೋ ನವೀನ' ಕಲೆಕ್ಷನ್ ಎಷ್ಟು ಗೊತ್ತೇ? ಕೇಳಿದ್ರೆ ಅಚ್ಚರಿ ಆಗುತ್ತೆ?

ಇತ್ತೀಚೆಗೆ ಕನ್ನಡದ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಿಲ್ಲ. ಇನ್ನೇನು 2026ರ ಫಸ್ಟ್ ಹಾಫ್ ಮುಗಿದೇ ಹೋಯ್ತು. ಬೆರಳೆಣಿಕೆಯಷ್ಟು ಸಿನಿಮಾಗಳು ಮಾತ್ರ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಿದೆ. ಕೆಲವೇ ಕೆಲವು ಸ್ಟಾರ್ ಸಿನಿಮಾಗಳಿಗೆ ಸಕ್ಸಸ್ ಸಿಕ್ಕಿದೆ ಅಷ್ಟೇ. ಈ ವರ್ಷನೂ ಸ್ಯಾಂಡಲ್‌ವುಡ್ ಶೋಚನೀಯ ಸ್ಥಿತಿಯಲ್ಲಿಯೇ ಇದೆ. ಇನ್ನು ಅದೇ ಟೈಮ್‌ನಲ್ಲಿ ಐಪಿಎಲ್‌ ಶುರುವಾಗಿದ್ದು, ದೊಡ್ಡ ಹಿನ್ನಡೆಯಾಗಿತ್ತು.

ಪ್ರೇಮ್, ಧ್ರುವ ಸರ್ಜಾ ಅಂತಹ ದಿಗ್ಗಜರ ಸಿನಿಮಾನೂ ಬಾಕ್ಸಾಫೀಸ್‌ನಲ್ಲಿ ಮೋಡಿ ಮಾಡುವಲ್ಲಿ ಸೋಲ್ತು. ಪ್ಯಾನ್ ಇಂಡಿಯಾ ರಿಲೀಸ್ ಆಗುತ್ತೆ ಅಂದ್ಕೊಂಡಿದ್ದವರಿಗೂ ನಿರಾಸೆ ಆಯ್ತು. ಆದರೆ, ಕಳೆದ ವಾರ ಯಾವುದೇ ರೀತಿಯ ಪ್ರಚಾರ ಮಾಡದೇ ರಿಲೀಸ್ ಸ್ಮಾಲ್ ಬಜೆಟ್ ಸಿನಿಮಾವೊಂದು ರಿಲೀಸ್ ಆಗಿತ್ತು. ಅದರ ಕಲೆಕ್ಷನ್ ಬಗ್ಗೆ ವಿತರಕರ ವಲಯದಲ್ಲಿ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ.

Naveen Sajju movie Lo Naveena doing good Mandya region here is 5 days box office collection

ಅಷ್ಟಕ್ಕೂ ಆ ಸಿನಿಮಾದ ಹೆಸರು 'ಲೋ ನವೀನ'. ಗಾಯಕ ನವೀನ್ ಸಜ್ಜು ಹೀರೋ ಆಗಿ ನಟಿಸಿರುವ 'ಲೋ ನವೀನ' ಸಿನಿಮಾ ಮಂದಿಗೆ ಸರ್ಪ್ರೈಸ್ ಕೊಟ್ಟಿದೆ. ಮಂಡ್ಯ, ಮೈಸೂರು, ಚಾಮರಾಜನಗರ, ಕೊಳ್ಳೆಗಾಲ ದಂತಹ ಏರಿಯಾಗಳಲ್ಲಿ ಈ ಸಿನಿಮಾದ ಕಲೆಕ್ಷನ್ ಉತ್ತಮವಾಗಿದೆ. ಕಳೆದ 5 ದಿನಗಳಲ್ಲಿ ಈ ಏರಿಯಾಗಳಲ್ಲಿ ಎಷ್ಟು ಕಲೆಕ್ಷನ್ ಮಾಡಿದೆ ಅನ್ನೋದನ್ನು ತಿಳಿಯುವುದಕ್ಕೆ ಮುಂದೆ ಓದಿ.

'ಲೋ ನವೀನ' ಸರ್ಪ್ರೈಸ್ ಕಲೆಕ್ಷನ್

ಗಾಯಕ ನವೀನ್ ಸಜ್ಜು ಹೀರೋ ಆಗಿ ನಟಿಸಿರುವ ಸಿನಿಮಾ 'ಲೋ ನವೀನ' ಮಾರ್ಚ್ 15ರಂದು ಅದ್ಧೂರಿಯಾಗಿ ರಿಲೀಸ್ ಆಗಿತ್ತು. ಮೂಲಗಳ ಪ್ರಕಾರ ರಾಜ್ಯದಾದ್ಯಂತ ಸುಮಾರು 130ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಸಿನಿಮಾ ರಿಲೀಸ್ ಆಗಿದೆ. ಕಳೆದ 5 ದಿನಗಳಲ್ಲಿ ಮಂಡ್ಯ ಭಾಗ ಬಿಟ್ಟು, ಬೆಂಗಳೂರು ಹಾಗೂ ಸುತ್ತಮುತ್ತ ಸೇರಿದಂತೆ ಉಳಿದ ಭಾಗಗಳಲ್ಲಿ ಉತ್ತಮ ಪ್ರತಿಕ್ರಿಯೆ ಸಿಕ್ಕಿಲ್ಲ. ಆದರೆ, ಮಂಡ್ಯ, ಮೈಸೂರು ಭಾಗದಲ್ಲಿ ಉತ್ತಮ ಪ್ರದರ್ಶನ ಕಂಡಿದೆ.

ಮಂಡ್ಯ, ಮೈಸೂರು ಭಾಗದಲ್ಲಿ ಹೇಗಿದೆ ಕಲೆಕ್ಷನ್?

'ಲೋ ನವೀನ' ಮಂಡ್ಯದ ಹಳ್ಳಿ ಸೊಗಡಿನ ಕಥೆ. ಹಳ್ಳಿ ಹುಡುಗ ಹಾಗೂ ಗೆಳಯರು, ಅವನ ಮೋಜು-ಮಸ್ತಿ, ಆತನ ಪ್ರೀತಿಯ ಸುತ್ತ ಸಿನಿಮಾ ಸಾಗುತ್ತೆ. ಪಕ್ಕಾ ಕಾಮಿಡಿ ಕಮ್ ಲವ್ ಸ್ಟೋರಿ ಸಿನಿಮಾವನ್ನು ಮಂಡ್ಯ, ಮೈಸೂರು, ಚಾಮರಾಜನಗರ ಹಾಗೂ ಕೊಳ್ಳೆಗಾಲದ ಏರಿಯಾಗಳಲ್ಲಿ ಜನರು ಥಿಯೇಟರ್‌ಗೆ ಬಂದು ಸಿನಿಮಾ ನೋಡುತ್ತಿದ್ದಾರೆ. ವಿತರಕರ ವಲಯಕ್ಕೆ ಸಿಕ್ಕಿರೋ ಲೆಕ್ಕದ ಪ್ರಕಾರ 'ಲೋ ನವೀನ' ಈ ಏರಿಯಾಗಳಲ್ಲಿ ಸುಮಾರು 50 ಲಕ್ಷದಷ್ಟು ಶೇರ್ ಬರುತ್ತೆ ಎಂದು ಅಂದಾಜಿಸಲಾಗುತ್ತಿದೆ.

ಶುಕ್ರವಾರ - ₹12 ಲಕ್ಷ
ಶನಿವಾರ - ₹10 ಲಕ್ಷ
ಭಾನುವಾರ - ₹12 ಲಕ್ಷ
ಸೋಮವಾರ - ₹8 ಲಕ್ಷ
ಮಂಗಳವಾರ - ₹9 ಲಕ್ಷ
ಒಟ್ಟು - ₹51 ಲಕ್ಷ (Net)

Naveen Sajju movie Lo Naveena doing good Mandya region here is 5 days box office collection

ಈ ಏರಿಯಾಗಳ ಕಲೆಕ್ಷನ್ ಹೀಗಿದೆ

ಮಂಡ್ಯ, ಮೈಸೂರು, ಚಾಮರಾಜನಗರ, ಕೊಳ್ಳೆಗಾಲದ ಚಿತ್ರಮಂದಿಗಳಲ್ಲಿ ಕಳೆದ ಐದು ದಿನಗಳಲ್ಲಿ ಉತ್ತಮ ಕಲೆಕ್ಷನ್ ಆಗಿದೆ. ವಿತರಕರ ವಲಯದಿಂದ ಬಂದಿರೋ ಅಂಕಿ ಅಂಶಗಳ ಪ್ರಕಾರ, ಕಳೆದ ಐದು ದಿನಗಳಲ್ಲಿ ಅಂದಾಜು ಕಲೆಕ್ಷನ್ ಲೆಕ್ಕ ಹೀಗಿದೆ.

ಮಂಡ್ಯ -ಗುರುಶ್ರೀ

ಶುಕ್ರವಾರ - ₹2.50 ಲಕ್ಷ
ಶನಿವಾರ - ₹1.50 ಲಕ್ಷ
ಭಾನುವಾರ - ₹1.50 ಲಕ್ಷ
ಸೋಮವಾರ - ₹1 ಲಕ್ಷ
ಮಂಗಳವಾರ - ₹1 ಲಕ್ಷ
ಒಟ್ಟು - ₹7.50 ಲಕ್ಷ (Net)

ಮೈಸೂರು ಸಿಟಿ

ಶುಕ್ರವಾರ - ₹5.50 ಲಕ್ಷ
ಶನಿವಾರ - ₹4 ಲಕ್ಷ
ಭಾನುವಾರ - ₹4 ಲಕ್ಷ
ಸೋಮವಾರ - ₹3 ಲಕ್ಷ
ಮಂಗಳವಾರ - ₹3 ಲಕ್ಷ
ಒಟ್ಟು - ₹19.50 ಲಕ್ಷ (Net)

ಚಾಮರಾಜನಗರ

ಶುಕ್ರವಾರ - ₹1.50 ಲಕ್ಷ
ಶನಿವಾರ - ₹1 ಲಕ್ಷ
ಭಾನುವಾರ - ₹1 ಲಕ್ಷ
ಸೋಮವಾರ - ₹70 ಸಾವಿರ
ಮಂಗಳವಾರ - ₹55 ಸಾವಿರ
ಒಟ್ಟು ₹4.75 ಲಕ್ಷ (Net)

ಕೊಳ್ಳೆಗಾಲ

ಶುಕ್ರವಾರ - ₹1.50 ಲಕ್ಷ
ಶನಿವಾರ - ₹1 ಲಕ್ಷ
ಭಾನುವಾರ - ₹80 ಸಾವಿರ
ಸೋಮವಾರ - ₹60 ಸಾವಿರ
ಮಂಗಳವಾರ - ₹60 ಸಾವಿರ
ಒಟ್ಟು - ₹3.50 ಲಕ್ಷ (Net)

English summary
Naveen Sajju movie Lo Naveena doing good Mandya region here is 5 days box office collection. Lo Naveena movie collected good collection at Mandya, Mysuru, Chamarajanagar, Kollegala region.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X