Obsession Box Office: ಭಾರತದ 'ಅಬ್ಸೆಷನ್' ಕ್ರೇಜ್; 16 ದಿನ.. ಬಾಕ್ಸಾಫೀಸ್‌ನಲ್ಲಿ ಧೂಳೀಪಟ
ಭಾರತದಲ್ಲಿ ಹಾರರ್-ಥ್ರಿಲ್ಲರ್ ಸಿನಿಮಾಗಳಿಗೆ ಬೇಡಿಕೆ ಹೆಚ್ಚಾಗಿದೆ. ಈ ಶೈಲಿಯ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸುತ್ತಿವೆ. ಭಾರತದ ಸಿನಿಮಾಗಳು ಅಷ್ಟೇ ಅಲ್ಲ, ವಿದೇಶಿ ಸಿನಿಮಾಗಳನ್ನು ಭಾರತೀಯ ಬಿಡದಂತೆ ನೋಡುತ್ತಿದ್ದಾರೆ. ಈ ಸಾಲಿನಲ್ಲಿ ಇತ್ತೀಚೆಗೆ ಸದ್ದು ಮಾಡುತ್ತಿರುವ ಹಾಲಿವುಡ್ ಸಿನಿಮಾ 'ಅಬ್ಸೆಷನ್' ಕೂಡ ಸೇರಿಕೊಂಡಿದೆ.
ಹಾರರ್ ಮತ್ತು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾಗಳನ್ನು ಪ್ರೇಕ್ಷಕರು ಬಂದೇ ಬರುತ್ತಾರೆ ಅನ್ನೋದು ಫಿಲ್ಮ್ ಮೇಕರ್ಸ್‌ಗೆ ಗ್ಯಾರಂಟಿಯಾಗಿದೆ. ಹೀಗಾಗಿ ಹಾರರ್ ಶೈಲಿಯ ಸಿನಿಮಾಗಳನ್ನೇ ಹೆಚ್ಚು ಇಷ್ಟ ಪಡುತ್ತಿದ್ದಾರೆ. ಅದಕ್ಕೆ ಉತ್ತಮ ಸಾಕ್ಷಿ ಅಂದರೆ, 'ಅಬ್ಸೆಷನ್'. ಈ ಸಿನಿಮಾ ವಿಶ್ವದಾದ್ಯಂತ ಬಾಕ್ಸಾಫೀಸ್‌ನಲ್ಲಿ ದಾಖಲೆಗಳನ್ನು ಬರೆಯುತ್ತಿದೆ. ಅದರಲ್ಲೂ ಭಾರತದಲ್ಲಿ ರೆಕಾರ್ಡ್ ಬ್ರೇಕ್ ಮಾಡುತ್ತಿದೆ.

ಕರಿ ಬೇಕರ್ (Curry Baker) ನಿರ್ದೇಶಿಸಿದ ಈ ಹಾರರ್ ಥ್ರಿಲ್ಲರ್ ಸಿನಿಮಾ 'ಅಬ್ಸೆಷನ್' (Obsession) ಬಾಕ್ಸಾಫೀಸ್‌ನಲ್ಲಿ ಹೊಸ ಹೊಸ ದಾಖಲೆಗಳನ್ನು ಬರೆಯುತ್ತಿದೆ. ರಿಲೀಸ್ ಆದ ದಿನದಿಂದಲೇ ಪ್ರೇಕ್ಷಕರ ನಿದ್ದೆಗೆಡಿಸಿದ ಈ ಸಿನಿಮಾ ಕಲೆಕ್ಷನ್‌ನಲ್ಲೂ ಸೌಂಡ್ ಮಾಡುತ್ತಿದೆ. ಅದರಲ್ಲೂ ಭಾರತದ ಬಾಕ್ಸಾಫೀಸ್‌ನಲ್ಲಿ ಹೊಸ ದಾಖಲೆಯನ್ನೇ ಬರೆದಿದೆ.
ಭಾರತದಲ್ಲಿ 16 ದಿನಕ್ಕೆ ₹70 ಕೋಟಿ
ಹಾರರ್-ಥ್ರಿಲ್ಲರ್ ಜೆನ್‌ಜಿ ಸಿನಿಮಾ 'ಅಬ್ಸೆಷನ್' ಭಾರತ ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಸಿನಿಮಾ ರಿಲೀಸ್ ಆದ ಕೇವಲ 16 ದಿನಗಳಲ್ಲಿ ಸುಮಾರು ₹70 ಕೋಟಿ ಕಲೆಕ್ಷನ್ ಮಾಡಿದೆ. ಈ ಮೂಲಕ ಬಾಕ್ಸಾಫೀಸ್‌ನಲ್ಲಿ ದೊಡ್ಡ ಸುನಾಮಿಯನ್ನೇ ಎಬ್ಬಿಸಿದೆ. ಈ ಸಿನಿಮಾ ಪ್ರೇಕ್ಷಕರನ್ನು ಸೀಟಿನ ತುತ್ತ ತುದಿಗೆ ತಂದು ನಿಲ್ಲಿಸುತ್ತಿದೆ. ಅಂತಹ ಸ್ಕ್ರೀನ್‌ಪ್ಲೇ ಪ್ರೇಕ್ಷಕರನ್ನು ಸೆಳೆಯುತ್ತಿದೆ. ಇನ್ನೊಂದು ವಾರದಲ್ಲಿ ಸಿನಿಮಾ ₹100 ಕೋಟಿ ದಾಟಬಹುದೆಂದು ಅಂದಾಜಿಸಲಾಗಿದೆ.
ವಿಶ್ವಾದ್ಯಂತ ₹₹2,240 ಕೋಟಿ
'ಅಬ್ಸೆಷನ್' ಅತೀ ಕಡಿಮೆ ಬಜೆಟ್‌ನಲ್ಲಿ ನಿರ್ಮಾಣಗೊಂಡಿರುವ ಸಿನಿಮಾ. ಜಾಗತಿಕ ಮಟ್ಟದಲ್ಲಿ ಈ ಸಿನಿಮಾಗೆ ಸಿಕ್ಕಿರೋ ರೆಸ್ಪಾನ್ಸ್ ಫಿಲ್ಮ್ ಮೇಕರ್ಸ್ ಅನ್ನು ಬೆಚ್ಚಿಬೀಳಿಸಿದೆ. ಗ್ಲೋಬಲ್ ಬಾಕ್ಸಾಫೀಸ್‌ನಲ್ಲಿ ಈ ಸಿನಿಮಾ ಗಳಿಸಿದ್ದು ಬರೋಬ್ಬರು ₹2,240 ಕೋಟಿ ಎಂದು ಅಂದಾಜಿಸಲಾಗಿದೆ. ಕಡಿಮೆ ಬಜೆಟ್‌ನಲ್ಲಿ ಮೂಡಿಬಂದ ಪ್ರೀಮಿಯಂ ಕಂಟೆಂಟ್ ವಿಶ್ವದಾದ್ಯಂತ ಸದ್ದು ಮಾಡಬಲ್ಲದು ಅನ್ನೋದಕ್ಕೆ ಈ ಸಿನಿಮಾ ಅತ್ಯುತ್ತಮ ಉದಾಹರಣೆ.

ಬಾಕ್ಸ್ ಆಫೀಸ್ ರಿಪೋರ್ಟ್ ಹೀಗಿದೆ
ಬಾಕ್ಸಾಫೀಸ್‌ನಲ್ಲಿ 'ಅಬ್ಸೆಷನ್' ಅಬ್ಬರಿಸುತ್ತಿದೆ. ಹಾಗಂತ ಭಾರತ ಅಷ್ಟೇ ಅಲ್ಲ, ವಿಶ್ವದಾದ್ಯಂತ ಸದ್ದು ಮಾಡುತ್ತಿದೆ. ಅದರ ಕಂಪ್ಲೀಟ್ ಡಿಟೈಲ್ಸ್ ಇಲ್ಲಿದೆ.
ಭಾರತದ ಬಾಕ್ಸ್ ಆಫೀಸ್- ₹70 ಕೋಟಿ
ಗ್ಲೋಬಲ್ ಬಾಕ್ಸ್ ಆಫೀಸ್ - ₹2,240 ಕೋಟಿ
ಸಿನಿಮಾ ಶೈಲಿ: ಹಾರರ್-ಥ್ರಿಲ್ಲರ್
ನಿರ್ದೇಶನ: ಕರಿ ಬೇಕರ್
ಕರಿ ಬೇಕರ್ ಮ್ಯಾಜಿಕ್
'ಅಬ್ಸೆಷನ್' ಸಿನಿಮಾ ಮೂಲಕ ಕರಿ ಬೇಕರ್ ಸಿಕ್ಕಾಪಟ್ಟೆ ಸದ್ದು ಮಾಡಿದ್ದರು. ಈ ಹಿಂದೆ ಮೈಕ್ರೋ-ಕಂಟೆಂಟ್ ಹಾಗೂ ಸ್ವತಂತ್ರ ಸಿನಿಮಾಗಳ ಮೂಲಕ ಚಿತ್ರರಂಗದ ಗಮನ ಸೆಳೆದಿದ್ದರು. 'ಅಬ್ಸೆಷನ್' ಸಿನಿಮಾದ ಮೂಲಕ ಅವರ ಕರಿಯರ್‌ಗೆ ದೊಡ್ಡ ಬ್ರೇಕ್ ಸಿಕ್ಕಿದೆ. ಈ ಸಿನಿಮಾದ ಹೈಲೈಟ್ ಅಂದರೆ, ಸೌಂಡ್ ಎಫೆಕ್ಟ್ಸ್, ಮೈ ಜುಂ ಎನ್ನಿಸುವಂತಹ ಸನ್ನಿವೇಶಗಳು, ಅನಿರೀಕ್ಷಿತ ಟ್ವಿಸ್ಟ್‌ಗಳು ಪ್ರೇಕ್ಷಕರಿಗೆ ಅತ್ಯುತ್ತಮ ಅನುಭವ ನೀಡುತ್ತಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಸಿನಿಮಾ ಕಲೆಕ್ಷನ್ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು ಬೇರೆ ಮೂಲಗಳು ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications
