OG Box Office Day 4: 4ನೇ ದಿನ ಪವನ್ ಕಲ್ಯಾಣ್ 'ಓಜಿ' ಗಳಿಸಿದ್ದೆಷ್ಟು? ವೀಕೆಂಡ್‌ನಲ್ಲಿ ಜಾದು ನಡೀತಾ?

ಟಾಲಿವುಡ್‌ನ ಪವರ್‌ಸ್ಟಾರ್ ಪವನ್ ಕಲ್ಯಾಣ್ ಸಿನಿಮಾ 'ಓಜಿ' ಮೊದಲ ದಿನವೇ ಬಾಕ್ಸಾಫೀಸ್‌ನಲ್ಲಿ ದೊಡ್ಡ ಮೊತ್ತದ ಹಣವನ್ನು ಕಲೆ ಹಾಕಿತ್ತು. ಪೇಯ್ಡ್ ಪ್ರೀಮಿಯರ್, ಅಡ್ವಾನ್ಸ್ ಬುಕಿಂಗ್‌ಗೂ ಕ್ರೇಜಿ ರೆಸ್ಪಾನ್ಸ್ ಸಿಕ್ಕಿತ್ತು. ಹೀಗಾಗಿ ಪವನ್ ಕಲ್ಯಾಣ್ ಸಿನಿಮಾಗೆ ಕ್ರೇಜ್ ಕಮ್ಮಿಯಾಗಿ ಅನ್ನೋದು ಫಸ್ಟ್ ಡೇ ಸಾಬೀತಾಗಿತ್ತು. ಪವರ್‌ಸ್ಟಾರ್ ಆಕ್ಷನ್, ಮ್ಯಾನಸರಿಂ ಪವನ್ ಕಲ್ಯಾಣ್‌ ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ಇಷ್ಟ ಆಗಿತ್ತು.

'ಓಜಿ' ಮೊದಲ ದಿನವೇನೋ ಕಲೆಕ್ಷನ್ ಭರ್ಜರಿಯಾಗಿತ್ತು. ಪೇಯ್ಡ್ ಪ್ರೀಮಿಯರ್ ಸೇರಿ 84 ಕೋಟಿ ರೂಪಾಯಿ ಕಲೆಕ್ಷನ್ ಆಗಿತ್ತು. ಆದರೆ, ಎರಡನೇ ದಿನದಿಂದ ಸಿನಿಮಾದ ಕಲೆಕ್ಷನ್ ಶೇ.71ರಷ್ಟು ಡ್ರಾಪ್ ಕಂಡಿತ್ತು. ಅಲ್ಲಿಂದ ನಾಲ್ಕನೇ ದಿನದವರೆಗೂ ಕಲೆಕ್ಷನ್ ಸ್ಟಡಿಯಾಗಿಯೇ ಮುಂದುವರೆದಿದೆ. ವೀಕೆಂಡ್‌ ಕಲೆಕ್ಷನ್ ಏರಿಕೆಯಾಗಬಹುದೆಂದು ನಿರೀಕ್ಷೆ ಮಾಡಲಾಗಿತ್ತು. ಆದರೆ, ಹೆಚ್ಚೇನು ವ್ಯತಾಸ ಆಗಿಲ್ಲವೆಂದು ಸ್ಯಾಕ್ನಿಲ್ಕ್ ವರದಿ ಹೇಳುತ್ತಿದೆ.

Pawan Kalyan Emraan Hashmi starrer OG movie Day 4 Box Office Collection Report

ಈ ಸಿನಿಮಾದಲ್ಲಿ ಪವನ್ ಕಲ್ಯಾಣ್, ಇಮ್ರಾನ್ ಹಶ್ಮಿ, ಪ್ರಿಯಾಂಕಾ ಮೋಹನ್, ಪ್ರಕಾಶ್ ರಾಜ್ ಸೇರಿದಂತೆ ಬಿಗ್ ಸ್ಟಾರ್‌ಕಾಸ್ಟ್ ಇದೆ. ಹೀಗಾಗಿ ಮೊದಲ ವೀಕೆಂಡ್‌ನಲ್ಲಿ ಪವನ್ ಕಲ್ಯಾಣ್ ಸಿನಿಮಾ 200 ಕೋಟಿಯ ಗಡಿ ದಾಟಬಹುದೆಂದು ನಿರೀಕ್ಷೆ ಮಾಡಲಾಗಿತ್ತು. ಆದರೆ, ಇಲ್ಲಿ 'ಓಜಿ' ಸಿನಿಮಾಗೆ ಸ್ವಲ್ಪ ಹಿನ್ನೆಡೆಯಾಗಿದೆ. ಹಾಗಿದ್ದರೆ, ನಾಲ್ಕು ದಿನಗಳ 'ಓಜಿ' ಕಲೆಕ್ಷನ್ ಎಷ್ಟು? ಕರ್ನಾಟಕದಲ್ಲಿ ಕಲೆಕ್ಷನ್ ಎಷ್ಟಾಗಿದೆ ಅನ್ನೋದನ್ನು ತಿಳಿಯಲು ಮುಂದೆ ಓದಿ.

4ನೇ ದಿನ 'ಓಜಿ' ಕಲೆಕ್ಷನ್ ಎಷ್ಟು?

'ಓಜಿ' ನಿರ್ದೇಶಕ ಸುಜಿತ್ ಟಾಲಿವುಡ್ ಪವರ್‌ಸ್ಟಾರ್ ಪವನ್ ಕಲ್ಯಾಣ್‌ಗೆ ಹೊಸ ಇಮೇಜ್ ಕೊಡುವಲ್ಲಿ ಯಶಸ್ವಿಯಾಗಿದ್ದರೆ. ಮತ್ತೆ ಮಾಸ್ ಅವತಾರದಲ್ಲಿ ಪವನ್‌ ಕಲ್ಯಾಣ್ ಅನ್ನು ಪ್ರೇಕ್ಷಕರ ಮುಂದೆ ಕರೆದುಕೊಂಡಿದ್ದರು. ಆದರೆ, ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದರಿಂದ ಬಿಡುಗಡೆಗೂ ಮುನ್ನ ಕ್ರೇಜ್ ತಗ್ಗಿರೋದು ನಾಲ್ಕನೇ ದಿನದ ಬಾಕ್ಸಾಫೀಸ್ ಗಳಿಕೆಯಿಂದ ಗೊತ್ತಾಗುತ್ತೆ. ಸ್ಯಾಕ್ನಿಲ್ಕ್ ಪ್ರಕಾರ, 'ಓಜಿ' ನಾಲ್ಕನ ದಿನದ ಕಲೆಕ್ಷನ್ 18.50 ಕೋಟಿ ರೂಪಾಯಿ ಆಗಿದೆ.

4 ದಿನಗಳ ಒಟ್ಟು ಕಲೆಕ್ಷನ್ ಎಷ್ಟು?

ಪವನ್ ಕಲ್ಯಾಣ್ 'ಓಜಿ' ಬಾಕ್ಸಾಫೀಸ್‌ನಲ್ಲಿ ಕಳೆದ ಮೂರು ದಿನಗಳಿಂದ ಕಲೆಕ್ಷನ್ ಸ್ಟಡಿಯಾಗಿದೆ. ಮೊದಲ ದಿನ ₹63 ಕೋಟಿ (ಪೇಯ್ಡ್ ಪ್ರೀಮಿಯರ್ ಬಿಟ್ಟು) ಆಗಿದ್ದ ಕಲೆಕ್ಷನ್ 2ನೇ ದಿನಕ್ಕೆ ₹18.45 ಕೋಟಿ ಆಗಿತ್ತು. ಅಲ್ಲಿಂದ ಮೂರು ಮತ್ತು ನಾಲ್ಕನೇ ದಿನ ಕೂಡ ಹೆಚ್ಚು ಕಡಿಮೆ ₹18 ಕೋಟಿ ಆಸುಪಾಸಿನಲ್ಲಿಯೇ ಕಲೆಕ್ಷನ್ ಮಾಡಿದೆ. ನಾಲ್ಕು ದಿನಗಳ ಒಟ್ಟು ಕಲೆಕ್ಷನ್ ನೋಡುವುದಾರೇ,

4 ದಿನಗಳ ಕಲೆಕ್ಷನ್ (India Net)

1ನೇ ದಿನ ₹84.75 ಕೋಟಿ (ಪೇಯ್ಡ್ ಪ್ರೀಮಿಯರ್)
2ನೇ ದಿನ ₹18.45 ಕೋಟಿ
3ನೇ ದಿನ ₹18.50 ಕೋಟಿ
4ನೇ ದಿನ ₹18.50 ಕೋಟಿ
ಒಟ್ಟು ₹140 ಕೋಟಿ (India Net)

Pawan Kalyan Emraan Hashmi starrer OG movie Day 4 Box Office Collection Report

ಕರ್ನಾಟಕದ ಕಲೆಕ್ಷನ್ ಎಷ್ಟು?

ಕರ್ನಾಟಕದಲ್ಲೂ 'ಓಜಿ' ಸಿನಿಮಾಗೆ ಒಳ್ಳೆಯ ಓಪನಿಂಗ್ ಸಿಕ್ಕಿತ್ತು. ಮೊದಲ ದಿನ ಈ ಸಿನಿಮಾ ₹7.55 ಕೋಟಿ ಕಲೆಕ್ಷನ್ ಆಗಿದ್ದರೆ, 2ನೇ ದಿನ ₹1.10 ಕೋಟಿ, 3ನೇ ದಿನ 1.24 ಕೋಟಿ, 4ನೇ ದಿನ ₹1.37 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ ಎಂದು ಕರ್ನಾಟಕದ ವಿತರಕರ ವಲಯದಲ್ಲಿ ಸುದ್ದಿ ಹರಿದಾಡುತ್ತಿದೆ. ಒಟ್ಟು ನಾಲ್ಕು ದಿನಗಳಲ್ಲಿ ಈ ಸಿನಿಮಾ ₹11 ಕೋಟಿ ಆಸುಪಾಸು ಕಲೆಕ್ಷನ್ ಆಗಿದೆ ಎಂದು ಹೇಳಲಾಗಿದೆ.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು ಬೇರೆ ಮೂಲಗಳು, https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

More from Filmibeat

English summary
Pawan Kalyan, Emraan Hashmi starrer OG movie Day 4 Box Office Collection Report.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X