OG Karnataka Box Office: 2025ರ ಮೊದಲ ದಿನದ ದಾಖಲೆ ಉಡೀಸ್ ಮಾಡಿದ 'ಓಜಿ';ಕರ್ನಾಟಕದಲ್ಲಿ ಗಳಿಸಿದ್ದೆಷ್ಟು?
ಪವನ್ ಕಲ್ಯಾಣ್ ಪಾಲಿಟಿಕ್ಸ್‌ಗೆ ಎಂಟ್ರಿ ಕೊಡುತ್ತಿದ್ದಂತೆ ಸಿನಿಮಾದಲ್ಲಿ ಕ್ರೇಜ್ ಕಮ್ಮಿ ಆಯ್ತು ಅಂತ ಟೀಕಿಸಿದವರಿಗೇನು ಕಮ್ಮಿಯಿರಲಿಲ್ಲ. ಅದರಲ್ಲೂ 'ಹರಿಹರಿ ವೀರಮಲ್ಲು' ಬಾಕ್ಸಾಫೀಸ್‌ನಲ್ಲಿ ಹೀನಾಯವಾಗಿ ಸೋಲುತ್ತಿದ್ದಂತೆ ಟೀಕೆಗಳು ಮತ್ತಷ್ಟು ಹೆಚ್ಚಾಗಿದ್ದವು. ಆದ್ರೀಗ 'ಓಜಿ'(OG) ಆ ಎಲ್ಲಾ ಟೀಕೆಗಳನ್ನು, ಲೆಕ್ಕಾಚಾರಗಳನ್ನು ತಲೆ ಕೆಳಗೆ ಮಾಡಿದೆ. ಮೊದಲ ದಿನವೇ ಬಾಕ್ಸಾಫೀಸ್‌ನಲ್ಲಿ ದಾಖಲೆ ಬರೆದಿದೆ.
ಪವನ್ ಕಲ್ಯಾಣ್, ಪ್ರಿಯಾಂಕಾ ಮೋಹನ್ ಹಾಗೂ ಇಮ್ರಾನ್ ಹಾಶ್ಮಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಆದರೂ 'ಓಜಿ' ಇಷ್ಟೊಂದು ಸದ್ದು ಮಾಡುತ್ತೆ ಎಂದು ಯಾರೂ ಎಣಿಸಿರಲಿಲ್ಲ. ಟ್ರೇಡ್ ಎಕ್ಸ್‌ಪೆರ್ಟ್‌ಗಳು ಹಾಕಿರುವ ಎಲ್ಲಾ ಲೆಕ್ಕಾಚಾರಗಳು ತಲೆಕೆಳಗಾಗಿವೆ. ಮೊದಲ ದಿನ ಪವನ್ ಕಲ್ಯಾಣ್ ಸಿನಿಮಾದ ಕಲೆಕ್ಷನ್ ನೋಡಿ ಭಾರತೀಯ ಚಿತ್ರರಂಗವೇ ಬೆಚ್ಚಿಬಿದ್ದಿದೆ. ಮೊದಲ ದಿನ ಭಾರತದಾದ್ಯಂತ ಈ ಸಿನಿಮಾದ ಕಲೆಕ್ಷನ್ ₹84 ಕೋಟಿ ದಾಟಿದೆ (Net). ಇದರಲ್ಲಿ ಪೇಯ್ಡ್ ಪ್ರೀಮಿಯರ್ ಕಲೆಕ್ಷನ್ ಕೂಡ ಸೇರಿದೆ.

'ಓಜಿ' ಬಿಡುಗಡೆಗೂ ಮುನ್ನವೇ ಅಡ್ವಾನ್ಸ್ ಬುಕಿಂಗ್ ಹಾಗೂ ಪೇಯ್ಡ್ ಪ್ರೀಮಿಯರ್ ಮೂಲಕ ಸದ್ದು ಮಾಡಿತ್ತು. ಆಂಧ್ರ, ತೆಲಂಗಾಣದಲ್ಲಿ ಸಿನಿಮಾದ ಕಲೆಕ್ಷನ್ ನಿರೀಕ್ಷೆಗೂ ಮೀರಿ ಗಳಿಸಿದೆ. ಹಾಗೇ ಕರ್ನಾಟಕದಲ್ಲೂ ಕಲೆಕ್ಷನ್ ಏನೂ ಕಮ್ಮಿಯಿಲ್ಲ. ಪೇಯ್ಡ್ ಪ್ರೀಮಿಯರ್‌ನಿಂದಲೇ ಬಾಕ್ಸಾಫೀಸ್‌ನಲ್ಲಿ ದೂಳೆಬ್ಬಿಸುತ್ತಿದೆ. ಕರ್ನಾಟಕದಲ್ಲಿ 'ಓಜಿ' ಮೊದಲ ದಿನ ಗಳಿಸಿದ್ದೆಷ್ಟು? ಎಲ್ಲೆಲ್ಲಿ ಎಷ್ಟು ಕಲೆಕ್ಷನ್ ಆಗಿದೆ? ಅನ್ನೋದನ್ನು ತಿಳಿಯುವುದಕ್ಕೆ ಮುಂದೆ ಓದಿ.
ಕರ್ನಾಟಕದಲ್ಲೂ 'ಓಜಿ' ಚಿಂದಿ ಕಲೆಕ್ಷನ್
ಪವನ್ ಕಲ್ಯಾಣ್‌ಗೆ ಕರ್ನಾಟಕದಲ್ಲೂ ಫ್ಯಾನ್ಸ್ ಇದ್ದಾರೆ. ಬೆಂಗಳೂರು ಸೇರಿದಂತೆ ರಾಜ್ಯದ ಗಡಿ ಭಾಗದಲ್ಲಿ ಸಿನಿಮಾ ಕಲೆಕ್ಷನ್ ಸಖತ್ ಆಗಿ ಆಗಿದೆ. ಪೇಯ್ಡ್ ಪ್ರೀಮಿಯರ್‌ಗೂ ಕೂಡ ಉತ್ತಮ ಪ್ರತಿಕ್ರಿಯ ಸಿಕ್ಕಿತ್ತು. 344 ಪೇಯ್ಡ್ ಪ್ರೀಮಿಯರ್ ಶೋಗಳಿಂದ ಕರ್ನಾಟಕದಲ್ಲಿ ಸುಮಾರು ₹3 ಕೋಟಿಗೂ ಅಧಿಕ ಕಲೆಕ್ಷನ್ ಆಗಿದೆ ಎಂದು ವಿತರಕರ ವಲಯದಿಂದ ಮಾಹಿತಿ ಸಿಕ್ಕಿತ್ತು. ಈಗ ಮೊದಲ ದಿನ ಕೂಡ ಕರ್ನಾಟಕದಲ್ಲಿ ಕೋಟಿ ಲೆಕ್ಕದಲ್ಲಿ ಕಲೆಕ್ಷನ್ ಮಾಡಿದೆಯೆಂದು ವರದಿಯಾಗಿದೆ.
ಮೊದಲ ದಿನದ ಕಲೆಕ್ಷನ್ ಎಷ್ಟು?
'ಓಜಿ' ಸಿನಿಮಾ ಮೊದಲ ದಿನ ಕರ್ನಾಟಕದಲ್ಲೂ ಕಲೆಕ್ಷನ್ ಸಖತ್ತಾಗಿದೆ. ಕನ್ನಡದ ವಿತರಕರ ಪ್ರಕಾರ, ಈ ಸಿನಿಮಾ ಪವನ್ ಕಲ್ಯಾಣ್ ಕರಿಯರ್‌ನಲ್ಲೇ ಅತೀ ದೊಡ್ಡ ಕಲೆಕ್ಷನ್ ಆಗುವ ಸಿನಿಮಾ ಆಗುತ್ತೆ. ಮೊದಲ ದಿನ ಪೇಯ್ಡ್ ಪ್ರೀಮಿಯರ್ ಸೇರಿ 7.44 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ ಎಂದು ಮಾಹಿತಿ ನೀಡಿವೆ. ಪೇಯ್ಡ್ ಪ್ರೀಮಿಯರ್‌ನಿಂದ ₹3.17 ಕೋಟಿ ಹಾಗೂ ಮೊದಲ ದಿನದ ಕಲೆಕ್ಷನ್ ₹4.27 ಕೋಟಿ ಕಲೆಕ್ಷನ್ ಆಗಿದೆ.

ಬೆಂಗಳೂರಿನಲ್ಲಿ ಥಿಯೇಟರ್‌ಗಳಿಗೆ ಹಬ್ಬ
ಪವನ್ ಕಲ್ಯಾಣ್ 'ಓಜಿ' ಬೆಂಗಳೂರಿನ ತೆಲುಗು ಸೆಂಟರ್‌ಗಳಲ್ಲಿ ಮಸ್ತ್ ಕಲೆಕ್ಷನ್ ಮಾಡಿದೆ. ಮೊದಲ ದಿನ ಕೆಲವು ಚಿತ್ರಮಂದಿರಗಳು ಲಕ್ಷಗಳ ಲೆಕ್ಕದಲ್ಲಿ ಕಲೆಕ್ಷನ್ ಮಾಡಿವೆ. ವಿತರಕರ ವಲಯದಲ್ಲಿ ಬೆಂಗಳೂರಿನ ಪ್ರಮುಖ ಚಿತ್ರಮಂದಿರಗಳ ಮೊದಲ ದಿನದ ಅಂದಾಜು ಗಳಿಕೆ ಹೀಗಿದೆ.
ಊರ್ವಶಿ ₹7.48 ಲಕ್ಷ (ಅಂದಾಜು)
ಮಾನಸ ₹3.20 ಲಕ್ಷ (ಅಂದಾಜು)
ಸಂಧ್ಯಾ ₹4.70 ಲಕ್ಷ (ಅಂದಾಜು)
ರಾಧಾಕೃಷ್ಣ ₹4.10 ಲಕ್ಷ (ಅಂದಾಜು)
ವಿನಾಯಕ ₹4.70 ಲಕ್ಷ (ಅಂದಾಜು)
ಯಾವ್ಯಾವ ಏರಿಯಾದಲ್ಲಿ ಎಷ್ಟೆಷ್ಟು ಕಲೆಕ್ಷನ್?
ಪವನ್ ಕಲ್ಯಾಣ್ ಸೇರಿದಂತೆ ತೆಲಗು ಹೀರೋಗಳ ಸಿನಿಮಾಗಳಿಗೆ ಬೆಂಗಳೂರಿನಿಂದಲೇ ಹೆಚ್ಚು ಕಲೆಕ್ಷನ್ ಆಗುತ್ತೆ. ಹಾಗೇ ಗಡಿ ಭಾಗಗಳಾದ ಕೋಲಾರ, ಬಳ್ಳಾರಿ, ಸೇರಿದಂತೆ ಹಲವು ಜಿಲ್ಲೆಗಳಿಂದಲೂ ಭರ್ಜರಿ ಕಲೆಕ್ಷನ್ ಆಗುತ್ತೆ. ಎಲ್ಲಾ ಏರಿಯಾಗಳಿಗಿಂತ ಬೆಂಗಳೂರಿನಲ್ಲಿಯೇ ಹೆಚ್ಚು ಕಲೆಕ್ಷನ್ ಆಗಿದೆ. ಯಾವ್ಯಾವ ಏರಿಯಾದಲ್ಲಿ ಎಷ್ಟೆಷ್ಟು ಕಲೆಕ್ಷನ್ ಅಂತ ನೋಡುವುದಾರೇ,
ಬಿಕೆಟಿ ಶೇ.65
ಎಂಎಂಸಿಎಚ್ ಶೇ.16
ಚಿತ್ರದುರ್ಗ-ದಾವಣಗೆರೆ ಶೇ.9
ಹುಬ್ಬಳಿ ಶೇ.5
ಶಿವಮೊಗ್ಗ-ಮಂಗಳೂರು ಶೇ.5
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು ಬೇರೆ ಮೂಲಗಳು, https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications











