ಕರ್ನಾಟಕದಲ್ಲೂ 'ಹರಿ ಹರ ವೀರಮಲ್ಲು' ಪ್ರೀಮಿಯರ್: 110 ಸ್ಕ್ರೀನ್‌ಗಳಿಂದ ಎಷ್ಟಾಯ್ತು ಕಲೆಕ್ಷನ್?

ತೆಲುಗಿನ ಪವರ್‌ಸ್ಟಾರ್ ಪವನ್ ಕಲ್ಯಾಣ್ ನಟಿಸಿರುವ ಐದು ವರ್ಷಗಳ ಬಳಿಕ ರಿಲೀಸ್ ಆಗುತ್ತಿದೆ. ಹೀಗಾಗಿ ಪವನ್ ಕಲ್ಯಾಣ್ ಅಭಿಮಾನಿಗಳು ಈ ಸಿನಿಮಾ ನೋಡುವುದಕ್ಕೆ ಥ್ರಿಲ್ ಆಗಿದ್ದಾರೆ. ಆಂಧ್ರ, ತೆಲಂಗಾಣದಲ್ಲಿ ಪ್ರೀಮಿಯರ್ ಶೋ ನಡೆಯುವಂತೆ ಕರ್ನಾಟಕದಲ್ಲಿ, ಅದರಲ್ಲೂ ಬೆಂಗಳೂರಿನಲ್ಲಿ ಅವರ ಫ್ಯಾನ್ಸ್‌ಗಾಗಿ ಪ್ರೀಮಿಯರ್ ಶೋ ಅನ್ನು ಹಮ್ಮಿಕೊಳ್ಳಲಾಗಿತ್ರು. ಈ ಪ್ರೀಮಿಯರ್ ಶೋಗೆ ರೆಸ್ಪಾನ್ಸ್ ಭರ್ಜರಿಯಾಗಿ ಸಿಕ್ಕಿದೆ.

ಪವನ್ ಕಲ್ಯಾಣ್ ಜೊತೆ ನಿಧಿ ಅಗರ್ವಾಲ್, ಬಾಬಿ ಡಿಯೋಲ್, ನರ್ಗಿಸ್ ಫಕ್ರಿ, ನೂರಾ ಫತೇಹಿ, ಸತ್ಯರಾಜ್, ವಿಕ್ರಂಜೀತ್, ಜಿಶು ಸೇನ್‌ ಗುಪ್ತಾ ಸೇರಿದಂತೆ ಹಲವು ಕಲಾವಿದರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾ ನಾಳೆ (ಜುಲೈ 24) ವಿಶ್ವದಾದ್ಯಂತ ಅದ್ಧೂರಿಯಾಗಿ ರಿಲೀಸ್ ಆಗುತ್ತಿದೆ. ಆದರೆ, ಅದಕ್ಕೂ ಮುನ್ನ ಅಭಿಮಾನಿಗಳಿಗಾಗಿ ಪೇಯ್ಡ್ ಪ್ರೀಮಿಯರ್ ಶೋಗಳನ್ನು ಅರೇಂಜ್ ಮಾಡಲಾಗಿತ್ತು. ಅದಕ್ಕೆ ಎಲ್ಲಾ ಕಡೆ ಮಸ್ತ್ ರೆಸ್ಪಾನ್ಸ್ ಸಿಕ್ಕಿದೆ.

Pawan Kalyan starrer Hari Hara Veeramallu premiere show box office collection in Karnataka

ತೆಲುಗು ಸಿನಿಮಾಗಳು ಮೊದಲು ಅಮೆರಿಕದಲ್ಲಿ ಪ್ರೀಮಿಯರ್ ಆಗುತ್ತವೆ. ಅಲ್ಲಿ ಸಿಗುವ ರೆಸ್ಪಾನ್ಸ್ ಮೇಲೆ ಭಾರತದಲ್ಲಿ ವಿಶೇಷ ಪ್ರದರ್ಶನಗಳನ್ನು ಇಡಲಾಗುತ್ತಿತ್ತು. ಈಗ ನೈಟ್‌ ಶೋಗಳನ್ನು ರದ್ದು ಮಾಡಿರುವುದರಿಂದ ಬೆಳ್ಳಂಬೆಳಗ್ಗೆ ಶೋಗಳನ್ನು ಹಮ್ಮಿಕೊಳ್ಳಲಾಗುತ್ತೆ. ಆದರೆ, 'ಹರಿ ಹರ ವೀರಮಲ್ಲು' ಸಿನಿಮಾ ತಂಡ ಪ್ರೀಮಿಯರ್ ಶೋ ಅನ್ನು ಹಮ್ಮಿಕೊಂಡಿತ್ತು. ಕರ್ನಾಟಕದಲ್ಲೇ ಪ್ರೀಮಿಯರ್ ಶೋ ಕೋಟಿಗೂ ಅಧಿಕ ಕಲೆಕ್ಷನ್ ಆಗುತ್ತೆ ಎಂದು ಅಂದಾಜಿಸಲಾಗಿದೆ.

ಕರ್ನಾಟಕದಲ್ಲಿ ಎಷ್ಟು ಸ್ಕ್ರೀನ್‌ನಲ್ಲಿ ಪ್ರೀಮಿಯರ್?

ಪವನ್ ಕಲ್ಯಾಣ್ ಸಿನಿಮಾಗಳು ಕರ್ನಾಟಕದ ಕೆಲವು ಜಿಲ್ಲೆಯಲ್ಲಿ ಉತ್ತಮ ಪ್ರದರ್ಶನ ಕಾಣುತ್ತವೆ. ಕರ್ನಾಟಕದಲ್ಲಾಗುವ ಕಲೆಕ್ಷನ್‌ಗಳಲ್ಲಿ ಬೆಂಗಳೂರಿನದ್ದು ಸಿಂಹಪಾಲು. ಇದರೊಂದಿಗೆ ಕೋಲಾರ, ತುಮಕೂರು, ಬಳ್ಳಾರಿಗಳಲ್ಲಿ ತೆಲುಗು ಸಿನಿಮಾ ಕ್ರೇಜ್ ನಿಜಕ್ಕೂ ಕ್ರೇಜಿಯಾಗಿರುತ್ತೆ. ಇನ್ನು ಐದು ವರ್ಷಗಳ ಬಳಿಕ ಪವನ್ ಕಲ್ಯಾಣ್ ಸಿನಿಮಾ ರಿಲೀಸ್ ಆಗುತ್ತಿರುವುದರಿಂದ ಕರ್ನಾಟಕದಾದ್ಯಂತ ಸುಮಾರು 110 ಸ್ಕ್ರೀನ್‌ಗಳಲ್ಲಿ ಪ್ರೀಮಿಯರ್ ಶೋವನ್ನು ಇಡಲಾಗಿತ್ತು. ಶೇ.90ರಷ್ಟು ಸ್ಕ್ರೀನ್‌ಗಳಲ್ಲಿ ಮಸ್ತ್ ರೆಸ್ಪಾನ್ ಸಿಕ್ಕಿದೆ ಎನ್ನಲಾಗಿದೆ.

ಪ್ರೀಮಿಯರ್ ಕಲೆಕ್ಷನ್ ಎಷ್ಟು?

ಕರ್ನಾಟಕದಲ್ಲಿ ಸುಮಾರು 110 ಸ್ಕ್ರೀನ್‌ಗಳಲ್ಲಿ ಪ್ರೀಮಿಯರ್ ಮಾಡಿರೋ ಬಗ್ಗೆ ವಿತರಕರ ವಲಯಕ್ಕೆ ಲೆಕ್ಕ ಸಿಕ್ಕಿದೆ. ಬಹುತೇಕ ಎಲ್ಲಾ ಸ್ಕ್ರೀನ್‌ಗಳಲ್ಲೂ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಹೀಗಾಗಿ ಫಸ್ಟ್ ಡೇ ಫಸ್ಟ್ ಶೋ ಆರಂಭಕ್ಕೂ ಮುನ್ನವೇ ಒಳ್ಳೆಯ ಕಲೆಕ್ಷನ್ ಮಾಡಿದ ಎಂದು ವಿತರಕರು ಲೆಕ್ಕ ಹಾಕಿದ್ದಾರೆ. ಕರ್ನಾಟಕದ ವಿತರಕರ ಪ್ರಕಾರ, 'ಹರಿ ಹರ ವೀರಮಲ್ಲು' ಸಿನಿಮಾ ಕರ್ನಾಟಕದಲ್ಲಿ ಪ್ರೀಮಿಯರ್‌ ಶೋನಿಂದ 1.5 ಕೋಟಿ ರೂಪಾಯಿವರೆಗೂ ಕಲೆಕ್ಷನ್ ಮಾಡಿದೆ.

Pawan Kalyan starrer Hari Hara Veeramallu premiere show box office collection in Karnataka

ಎಲ್ಲೆಲ್ಲಿ ಹೇಗಿದೆ ಕಲೆಕ್ಷನ್?

ಕರ್ನಾಟಕದಲ್ಲಿ ಪ್ರೀಮಿಯರ್ ಶೋಗೆ ಬೆಂಗಳೂರು, ಕೋಲಾರ, ತುಮಕೂರು, ಮೈಸೂರು, ಚಿತ್ರದುರ್ಗ ಹಾಗೂ ದಾವಣಗೆರೆ ಭಾಗಗಳಲ್ಲಿ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ. ಇನ್ನು ಆಂಧ್ರ ಪ್ರದೇಶ ಹಾಗೂ ತೆಲಂಗಾಣ ಸೇರಿ ವಿಶ್ವದಾದ್ಯಂತ ಸುಮಾರು ₹8 ಕೋಟಿ ಯಿಂದ ₹10 ಕೋಟಿ ಕಲೆಕ್ಷನ್ ಆಗಬಹುದೆಂದು ಅಂದಾಜಿಸಲಾಗಿದೆ. ವೆಂಕಿ ಬಾಕ್ಸಾಫೀಸ್ ಪ್ರಕಾರ, ಅಮೆರಿಕದಲ್ಲೇ ಸುಮಾರು 20 ಸಾವಿರ ಟಿಕೆಟ್‌ಗಳು ಸೇಲ್ ಆಗಿವೆ. ಇದರಿಂದ 5.65 ಲಕ್ಷ ಡಾಲರ್‌ ಗಳಿಕೆ ಕಂಡಿದೆ ಎನ್ನಲಾಗಿದೆ. ಇನ್ನು ಮೊದಲ ದಿನದ ಕಲೆಕ್ಷನ್ ಪ್ರೀಮಿಯರ್ ಶೋನೂ ಸೇರಿ ₹20 ರಿಂದ ₹25 ಕೋಟಿ ಆಗಬಹುದು ಎನ್ನಲಾಗಿದೆ.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

More from Filmibeat

English summary
Pawan Kalyan starrer Hari Hara Veeramallu premiere show box office collection in Karnataka.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X