'ಹರಿ ಹರ ವೀರಮಲ್ಲು' ಪ್ರೀಮಿಯರ್ ಶೋ. ಬೆಂಗಳೂರಿನ ಊರ್ವಶಿ ಥಿಯೇಟರ್‌ನಲ್ಲಿ ದಾಖಲೆ ಕಲೆಕ್ಷನ್; 'ಕೆಜಿಎಫ್ 2' ಹಿಂದಿಕ್ಕಲಿಲ್ಲ ಪವನ್
ಐದು ವರ್ಷಗಳ ಬಳಿಕ ಪವನ್ ಕಲ್ಯಾಣ್ ನಟಿಸಿರುವ ಸಿನಿಮಾ ರಿಲೀಸ್ ಆಗಿದೆ. ತೆಲುಗಿನ ಪವರ್‌ಸ್ಟಾರ್ ಅಭಿಮಾನಿಗಳು ಇದೊಂದು ಸಿನಿಮಾಗಾಗಿ ತಪಸ್ಸಿನಂತೆ ಕಾದು ಕೂತಿದ್ದರು. ಕೊನೆಗೂ ಅವರ ಆಸೆ ಈಡೇರಿದೆ. ಪವನ್ ನಟಿಸಿದ ಐತಿಹಾಸಿಕ ಸಿನಿಮಾ 'ಹರಿ ಹರ ವೀರಮಲ್ಲು' ವಿಶ್ವದಾದ್ಯಂತ ಅದ್ಧೂರಿಯಾಗಿ ರಿಲೀಸ್ ಆಗಿದೆ. ಒಂದು ದಿನ ಮುನ್ನವೇ ಬಹುತೇಕ ಕಡೆಗಳಲ್ಲಿ ಪ್ರೀಮಿಯರ್ ಶೋ ಅನ್ನೂ ಹಮ್ಮಿಕೊಳ್ಳಲಾಗಿತ್ತು. ಆಂಧ್ರ, ತೆಲಂಗಾಣ ಅಷ್ಟೇ ಅಲ್ಲ, ಕರ್ನಾಟಕದಲ್ಲೂ ಸಖತ್ ರೆಸ್ಪಾನ್ಸ್ ಸಿಕ್ಕಿತ್ತು.
'ಹರಿ ಹರ ವೀರಮಲ್ಲು' ಬೆಂಗಳೂರಿನ ಹಲವು ಚಿತ್ರಮಂದಿರಗಳಲ್ಲಿ ಪ್ರೀಮಿಯರ್ ಶೋ ಇಟ್ಟುಕೊಂಡಿದ್ದರು. ಅಭಿಮಾನಿಗಳಿಗಾಗಿ ಪೇಯ್ಡ್ ಪ್ರೀಮಿಯರ್ ಶೋ ಆಯೋಜಿಸಲಾಗಿತ್ತು. ಕರ್ನಾಟಕದ ಬಹುತೇಕ ಚಿತ್ರಮಂದಿರಗಳಲ್ಲಿ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿತ್ತು. ಅದರಲ್ಲಿ ಬೆಂಗಳೂರಿನ ಐಕಾನಿಕ್ ಥಿಯೇಟರ್ ಊರ್ವಶಿ ಭರ್ಜರಿ ಕಲೆಕ್ಷನ್ ಮಾಡಿದೆ. ಒಂದೇ ಒಂದು ಶೋನಿಂದ ಐದು ಲಕ್ಷಕ್ಕೂ ಅಧಿಕ ಕಲೆಕ್ಷನ್ ಮಾಡಿದೆ.

ಪವನ್ ಕಲ್ಯಾಣ್ ಸಿನಿಮಾಗಳಿಗೆ ಬೆಂಗಳೂರಿನಲ್ಲಿ ಸಿಕ್ಕಾಪಟ್ಟೆ ಫ್ಯಾನ್ಸ್ ಇದ್ದಾರೆ. ಆದರೆ, ರಾಜಕೀಯ ಅಂತ ಬ್ಯುಸಿಯಾದ್ಮೇಲೆ ಸಿನಿಮಾ ಮಾಡುವುದನ್ನು ಕಮ್ಮಿ ಮಾಡಿದ್ದರು. ಈಗ ಆಂಧ್ರ ಪ್ರದೇಶದ ಉಪ ಮುಖ್ಯಮಂತ್ರಿ ಆದ್ಮೇಲೆ ಸಿನಿಮಾದಿಂದ ಬಹುತೇಕ ದೂರವೇ ಉಳಿದುಕೊಂಡಿದ್ದಾರೆ. ಹೀಗಿದ್ದೂ ಈಗಾಗಲೇ ಒಪ್ಪಿಕೊಂಡಿರುವ ಸಿನಿಮಾವನ್ನು ಮುಗಿಸುತ್ತಿದ್ದಾರೆ. ಈ ಕಾರಣಕ್ಕೆ ತಮ್ಮ ನೆಚ್ಚಿನ ನಟನ ಸಿನಿಮಾದ ಪ್ರೀಮಿಯರ್ ಶೋವನ್ನು ಮುಗಿಬಿದ್ದು ನೋಡಿದ್ದಾರೆ. ಹಾಗಿದ್ದರೆ, ಊರ್ವಶಿ ಚಿತ್ರಮಂದಿರದಲ್ಲಿ ಆದ ಕಲೆಕ್ಷನ್ ಎಷ್ಟು? ಯಾವ್ಯಾವ ಸಿನಿಮಾ ಪ್ರೀಮಿಯರ್ ಶೋನಲ್ಲಿ ಹೆಚ್ಚು ಕಲೆಕ್ಷನ್ ಮಾಡಿದೆ? ತಿಳಿಯುವುದಕ್ಕೆ ಮುಂದೆ ಓದಿ.
'ಹರಿ ಹರ ವೀರಮಲ್ಲು' ಊರ್ವಶಿ ಕಲೆಕ್ಷನ್ ಎಷ್ಟು?
ಪವನ್ ಕಲ್ಯಾಣ್ ಸಿನಿಮಾದ ಪ್ರೀಮಿಯರ್ ಶೋನಿಂದಲೇ ಉತ್ತಮ ಕಲೆಕ್ಷನ್ ಆಗುತ್ತೆ ಎನ್ನುವ ನಿರೀಕ್ಷೆಯಿತ್ತು. ಬಹುತೇಕ ಚಿತ್ರಮಂದಿರಗಳು ಹೌಸ್‌ಫುಲ್ ಪ್ರದರ್ಶನವನ್ನು ಕಂಡಿವೆ. ಬೆಂಗಳೂರಿನ ಜನಪ್ರಿಯ ಚಿತ್ರಮಂದಿರ ಊರ್ವಶಿ ಕೂಡ ಪ್ರೀಮಿಯರ್ ಶೋ ಅನ್ನು ಹಮ್ಮಿಕೊಂಡಿತ್ತು. ಈ ಥಿಯೇಟರ್ ಕೂಡ ಹೌಸ್‌ಫುಲ್ ಪ್ರದರ್ಶನ ಕಂಡಿತ್ತು. ಕೇವಲ ಪ್ರೀಮಿಯರ್ ಒಂದು ಶೋನಿಂದಲೇ ಊರ್ವಶಿ ಚಿತ್ರಮಂದಿರ 5.10 ಲಕ್ಷ ರೂಪಾಯಿ ಕಲೆಕ್ಷನ್ ಮಾಡಿದೆ. ಈ ಮೂಲಕ ಬೆಂಗಳೂರಿನ ಚಿತ್ರಮಂದಿರಗಳಲ್ಲೇ ಅತೀ ಹೆಚ್ಚು ಕಲೆಕ್ಷನ್ ಮಾಡಿದೆ ಎಂದು ವಿತರಕರ ವಲಯದಲ್ಲಿ ಚರ್ಚೆಯಾಗುತ್ತಿವೆ.
ಊರ್ವಶಿ ಚಿತ್ರಮಂದಿರದ ಪ್ರೀಮಿಯರ್ ಕಲೆಕ್ಷನ್
ಬೆಂಗಳೂರಿನ ಊರ್ವಶಿ ಚಿತ್ರಮಂದಿರದಲ್ಲಿ ಹಲವು ಸಿನಿಮಾಗಳ ಪ್ರೀಮಿಯರ್ ಶೋ ನಡೆದಿದೆ. ಅಷ್ಟೇ ದೊಡ್ಡ ಮಟ್ಟಕ್ಕೆ ಕಲೆಕ್ಷನ್ ಅನ್ನು ಮಾಡಿದೆ. 'ಹರಿ ಹರಿ ವೀರಮಲ್ಲು' ಸಿನಿಮಾಗಿಂತಲೂ ದೊಡ್ಡ ಮಟ್ಟದ ಕಲೆಕ್ಷನ್ ಮಾಡಿದೆ. ಅದರಲ್ಲಿ ಯಶ್ ನಟನೆಯ 'ಕೆಜಿಎಫ್ 2', ಅಲ್ಲು ಅರ್ಜುನ್ ಅವರ 'ಪುಷ್ಪ 2', ಸೂಪರ್‌ಸ್ಟಾರ್ ರಜನಿಕಾಂತ್ 'ಜೈಲರ್' ಸಿನಿಮಾ ಅತೀ ಹೆಚ್ಚು ಪ್ರೀಮಿಯರ್ ಕಲೆಕ್ಷನ್ ಆಗಿವೆ. ಈ ಸಿನಿಮಾಗಳು ಎಷ್ಟು ಕಲೆಕ್ಷನ್ ಮಾಡಿತ್ತು? ಎಂದು ನೋಡುವುದಾದರೆ,
ಊರ್ವಶಿ ಪ್ರೀಮಿಯರ್ ಕಲೆಕ್ಷನ್
ಕೆಜಿಎಫ್ 2 ₹7.88 ಲಕ್ಷ
ಪುಷ್ಪ 2 ₹7.19 ಲಕ್ಷ
ಜೈಲರ್ ₹3.22 ಲಕ್ಷ
ಹರಿ ಹರ ವೀರಮಲ್ಲು ₹5.10 ಲಕ್ಷ
ಟಿಕೆಟ್ ಬೆಲೆ ₹200 ಆದರೆ..?
ಸ್ಪೆಷಲ್ ಪ್ರೀಮಿಯರ್ ಶೋಗಳಿಗೆ ಟಿಕೆಟ್‌ಗಳ ಬೆಲೆ ದುಬಾರಿ ಆಗಿರುತ್ತೆ. ಸಾಮಾನ್ಯವಾಗಿ ಟಿಕೆಟ್ ಬೆಲೆ ಡಬಲ್ ಆಗಿರುತ್ತೆ. ಹೀಗಾಗಿ ಕಲೆಕ್ಷನ್ ಕೂಡ ಚೆನ್ನಾಗಿಯೇ ಆಗುತ್ತಿದೆ. ಆದರೆ, ಟಿಕೆಟ್ ಬೆಲೆ 200 ರೂಪಾಯಿಗೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಆಗ ಪ್ರೀಮಿಯರ್ ಶೋಗಳಿಂದ ಈ ಮಟ್ಟಿಗೆ ಹಣ ಬರುವುದಿಲ್ಲ ಎಂದು ಟ್ರೇಡ್ ಎಕ್ಸ್‌ಪರ್ಟ್‌ಗಳು ಅಭಿಪ್ರಾಯ ಪಟ್ಟಿದ್ದಾರೆ.ಅಲ್ಲದೇ ಚಿತ್ರಮಂದಿರಗಳಿಗೆ ಸಿಕ್ಕಾಪಟ್ಟೆ ನಷ್ಟ ಆಗುತ್ತೆ. ವಿದ್ಯುತ್ ಬಿಲ್, ಸಿಬ್ಬಂದಿಗಳಿಗೆ ಸಂಬಳ, ಥಿಯೇಟರ್ ಅಪ್‌ಗ್ರೇಡ್ ಮಾಡೋದು ಕಷ್ಟ ಆಗುತ್ತೆ ಎನ್ನುವ ಅಭಿಪ್ರಾಯವಿದೆ. ಇವೆಲ್ಲ ಏನೇ ಇದ್ದರೂ 'ಹರಿ ಹರ ವೀರಮಲ್ಲು' ಪ್ರೀಮಿಯರ್‌ನಿಂದ ಭರ್ಜರಿ ಕಲೆಕ್ಷನ್ ಮಾಡಿದೆ.


Click it and Unblock the Notifications











