Raja Saab Day 3 Box office: ಭಾನುವಾರವೂ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡ್ಲಿಲ್ಲ; ಶೇ.22ರಷ್ಟು ಕುಸಿದ 'ರಾಜಾ ಸಾಬ್'
ಪ್ಯಾನ್ ಇಂಡಿಯಾ ಸೂಪರ್‌ಸ್ಟಾರ್ ಪ್ರಭಾಸ್ ಮತ್ತೊಂದು ಸಿನಿಮಾ ನೆಲಕ್ಕಚ್ಚುವ ಲಕ್ಷಣಗಳು ಕಾಣುತ್ತಿದೆ. 'ಬಾಹುಬಲಿ' ಬಳಿಕ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಮೆರೆಯುತ್ತಿರುವ ನಟನಿಗೆ ಒಂದೊಳ್ಳೆ ಸಿನಿಮಾ ಸಿಗುತ್ತಿಲ್ಲ. ಪ್ರಭಾಸ್ ಇಮೇಜ್‌ಗೆ ಸರಿ ಹೊಂದುವ ಸಿನಿಮಾವನ್ನು ನಿರ್ಮಾಣ ಮಾಡುವಲ್ಲಿ ಫಿಲ್ಮ್ ಮೇಕರ್ಸ್ ಸೋಲುತ್ತಿದ್ದಾರೆ. ಹೀಗಾಗಿ ಬ್ಯಾಕ್ ಟು ಬ್ಯಾಕ್ ಪ್ಲಾಪ್ ಸಿನಿಮಾಗಳು ದಾಖಲಾಗುತ್ತಲೇ ಇವೆ.
ಪ್ರಶಾಂತ್ ನೀಲ್ ನಿರ್ದೇಶಿಸಿದ 'ಸಲಾರ್'ನಿಂದ ಪ್ರಭಾಸ್ ಮತ್ತೆ ಯಶಸ್ಸಿನ ರುಚಿಯನ್ನು ನೋಡಿದ್ದರು. ಬಳಿಕ ನಾಗ ಅಶ್ವಿನ್ ನಿರ್ದೇಶಿಸಿದ 'ಕಲ್ಕಿ' ಕೂಡ ಕೈ ಹಿಡಿದಿತ್ತು. ಈ ಎರಡು ಸಿನಿಮಾಗಳ ಯಶಸ್ಸಿನ ಬೆನ್ನಲ್ಲೇ ರಿಲೀಸ್ ಆದ ಸಿನಿಮಾ 'ರಾಜಾ ಸಾಬ್'. ಹಾರರ್-ಕಾಮಿಡಿ ಜಾನರ್ ಕಡೆಗೆ ಪ್ರಭಾಸ್ ಮನಸ್ಸು ಮಾಡಿದ್ದರು. ಆದರೆ, ಸಿನಿಮಾ ರಿಲೀಸ್ ಆದ ಮೊದಲ ಮೂರು ದಿನ ಬಾಕ್ಸಾಫೀಸ್‌ನಲ್ಲಿ ಚಮತ್ಕಾರ ಮಾಡಿಲ್ಲ.

ಪ್ರಭಾಸ್ 'ರಾಜಾ ಸಾಬ್' ಬಾಕ್ಸಾಫೀಸ್‌ನಲ್ಲಿ ಮೋಡಿ ಮಾಡುತ್ತಿಲ್ಲ. ತೆಲುಗು ರೆಬೆಲ್ ಸ್ಟಾರ್‌ಗೆ ಇರುವ ಇಮೇಜ್‌ಗೆ ಮೊದಲ ಮೂರು ದಿನಗಳಲ್ಲಿ ನೂರು ಕೋಟಿಗೂ ಅಧಿಕ ಕಲೆಕ್ಷನ್ ಆಗಬೇಕಿತ್ತು. ಆದರೆ, 100 ಕೋಟಿ ಕ್ಲಬ್ ಸೇರುವಲ್ಲಿ ಹಿಂದೆ ಬಿದ್ದಿದೆ. ಹಾಗಿದ್ದರೆ, 'ರಾಜಾ ಸಾಬ್' ಮೂರನೇ ದಿನ ಗಳಿಸಿದ್ದು ಎಷ್ಟು? ಎಷ್ಟು ಪರ್ಸೆಂಟ್ ಡ್ರಾಪ್ ಆಗಿದೆ? ಸಂಕ್ರಾಂತಿಗೆ ಸಂಭ್ರಮದಲ್ಲಿ ಸಿನಿಮಾ ಗೆಲ್ಲಬಹುದಾ? ತಿಳಿಯುವುದಕ್ಕೆ ಮುಂದೆ ಓದಿ..
'ರಾಜಾ ಸಾಬ್' 3ನೇ ದಿನದ ಕಲೆಕ್ಷನ್
'ರಾಜಾ ಸಾಬ್' ಪ್ಯಾನ್ ಇಂಡಿಯಾ ರಿಲೀಸ್ ಆಗಿತ್ತು. ತೆಲುಗು ಪ್ರಮುಖ ಭಾಷೆಯಾಗಿದ್ದರೂ, ಕನ್ನಡ, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ರಿಲೀಸ್ ಆಗಿತ್ತು. ಏಕಕಾಲಕ್ಕೆ ಐದು ಭಾಷೆಯಲ್ಲಿ ತೆರೆಕಂಡರೂ ಸಿನಿಮಾ ಕಲೆಕ್ಷನ್ ಅಷ್ಟಕ್ಕಷ್ಟೇ. ಸ್ಯಾಕ್ನಿಲ್ಕ್ ಪ್ರಕಾರ ಈ ಸಿನಿಮಾ 3ನೇ ದಿನ ಶೇ. 22ರಷ್ಟು ಡ್ರಾಪ್ ಕಂಡಿದ್ದು, ಭಾರತದ ಬಾಕ್ಸಾಫೀಸ್‌ನಲ್ಲಿ ಕೇವಲ ₹20.12 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ವೀಕೆಂಡ್‌ನಲ್ಲೂ ಸಿನಿಮಾ ಕಲೆಕ್ಷನ್ ಡ್ರಾಪ್ ಆಗಿದ್ದು, ಪ್ರಭಾಸ್‌ಗೆ ದೊಡ್ಡ ಹಿನ್ನೆಡೆ ಅಂತಲೇ ಹೇಳಬಹುದು.
3 ದಿನಗಳ ಬಾಕ್ಸಾಫೀಸ್ ಕಲೆಕ್ಷನ್ ಎಷ್ಟು?
'ರಾಜಾ ಸಾಬ್' ರಿಲೀಸ್ ಆದ ದಿನವೇ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಹೀಗಾಗಿ ಫಸ್ಟ್ ಡೇ ಬಾಕ್ಸಾಫೀಸ್‌ನಲ್ಲಿ ಅಬ್ಬರಿಸಿದ್ದು ಬಿಟ್ಟರೆ, 2ನೇ ದಿನದಿಂದ ಸಿನಿಮಾದ ಕಲೆಕ್ಷನ್ ನಿರಂತರವಾಗಿ ಡ್ರಾಪ್ ಆಗುತ್ತಲೇ ಇತ್ತು. ಮೊದಲನೇ ದಿನಕ್ಕೆ ಹೋಲಿಕೆ ಮಾಡಿದರೆ, 2ನೇ ದಿನ ಶೇ. 51.63ರಷ್ಟು ಡ್ರಾಪ್ ಆಗಿತ್ತು. ಅದೇ ರೀತಿ 2ನೇ ದಿನಕ್ಕೆ ಹೋಲಿಕೆ ಮಾಡಿದರೆ, 3ನೇ ದಿನ ಶೇ.22.62 ಇಳಿಕೆ ಕಂಡಿದೆ.
3 ದಿನಗಳ ಭಾರತದ ಬಾಕ್ಸಾಫೀಸ್ ಕಲೆಕ್ಷನ್
ಪ್ರಿಮೀಯರ್ ₹9.15 ಕೋಟಿ
1ನೇ ದಿನ ₹53.75 ಕೋಟಿ
2ನೇ ದಿನ ₹26 ಕೋಟಿ
3ನೇ ದಿನ ₹20.12 ಕೋಟಿ
ಒಟ್ಟು ₹109.02 ಕೋಟಿ

ಪ್ರಭಾಸ್ ಸಿನಿಮಾ ವೀಕೆಂಡ್‌ನಲ್ಲಿ ಜಾದು ಮಾಡುವಲ್ಲಿ ಸೋತಿದೆ. ಹೀಗಾಗಿ ಸಂಕ್ರಾಂತಿ ಹಬ್ಬದ ಮೇಲೆ ಕಣ್ಣಿಟ್ಟಿದ್ದಾರೆ. ವೀಕೆಂಡ್ ಕಲೆಕ್ಷನ್ ಹೀಗಾದರೆ, ಇನ್ನು ಸೋಮವಾರದ ಕಲೆಕ್ಷನ್ ಎಷ್ಟಾಗಬಹುದೆಂಬ ಲೆಕ್ಕಾಚಾರ ಶುರುವಾಗಿದೆ. ಹಾಗೇ ಒಂದು ವೇಳೆ ಸಂಕ್ರಾಂತಿ ಹಬ್ಬದಂದು ಬಾಕ್ಸಾಫೀಸ್‌ನಲ್ಲಿ ಮೋಡಿ ಮಾಡಬಹುದೆಂಬ ನಿರೀಕ್ಷೆಯಿದೆ. ಈ ವೇಳೆಯಾದರೂ ಸಿನಿಮಾ ಜಾದು ಮಾಡಬಹುದೇ? ಎಂಬ ನಿರೀಕ್ಷೆಯಲ್ಲಿ ಸಿನಿಮಾ ತಂಡವಿದೆ.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು ಬೇರೆ ಮೂಲಗಳು, https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications











