Raja Saab Box Office Day 2:2ನೇ ದಿನಕ್ಕೆ ಕುಸಿದ ರಾಜಾ ಸಾಬ್.. ಪ್ಯಾನ್ ಇಂಡಿಯಾ ಸ್ಟಾರ್‌ಗೆ ಕುತ್ತು?

ತೆಲುಗಿನ ರೆಬಲ್ ಸ್ಟಾರ್ ಪ್ರಭಾಸ್ ನಟಿಸಿರುವ 'ದಿ ರಾಜಾಸಾಬ್' ಬಹಳಷ್ಟು ನಿರೀಕ್ಷೆಗಳನ್ನಿಟ್ಟುಕೊಂಡು ರಿಲೀಸ್ ಆಗಿತ್ತು. ಐದು ಭಾಷೆಗಳಲ್ಲಿ ವಿಶ್ವದಾದ್ಯಂತ ರಿಲೀಸ್ ಆಗಿದ್ದ ಸಿನಿಮಾ ಬಿಡುಗಡೆಗೂ ಮುನ್ನ ಬಾಕ್ಸಾಫೀಸ್‌ನಲ್ಲಿ ಜಾದು ಮಾಡಬಹುದೆಂಬ ನಿರೀಕ್ಷೆಯಿತ್ತು. ಪ್ರೀಮಿಯರ್‌ ಶೋಗಳಿಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಆದರೆ, ಫಸ್ಟ್ ಡೇ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು.

'ದಿ ರಾಜಾ ಸಾಬ್' ತೆಲುಗು ಚಿತ್ರರಂಗಕ್ಕೆ ಒಂದೊಳ್ಳೆ ಓಪನಿಂಗ್ ಸಿಗಬಹುದೆಂಬ ನಿರೀಕ್ಷೆಯಿತ್ತು. ನಿರೀಕ್ಷೆ ಮಾಡಿದಂತೆ ಸಿನಿಮಾ ಮೊದಲ ದಿನದ ಕಲೆಕ್ಷನ್ ₹50 ಕೋಟಿ ದಾಟಿತ್ತು. ಆದರೆ, ಸಿನಿಮಾ ನೋಡಿದ ಬಳಿಕ ವಿತರಕರು ಆತಂಕದಲ್ಲಿ ಇದ್ದಾರೆಂಬ ಅಭಿಪ್ರಾಯಗಳು ವ್ಯಕ್ತವಾಗಿವೆ. ಯಾಕಂದ್ರೆ ಸೋಶಿಯಲ್ ಮೀಡಿಯಾಗಳಲ್ಲಿ ಈ ಸಿನಿಮಾ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದೆ.

Prabhas starrer Raja Saab movie Day 2 Box office collection report

ಮೊದಲ ದಿನ ಒಂದು ಹಂತಕ್ಕೆ ಕಲೆಕ್ಷನ್ ಆಗಿದ್ದರೂ, ಅದು ಪ್ರಭಾಸ್ ಲೆವೆಲ್‌ಗೆ ಅಲ್ಲ ಅನ್ನೋ ಮಾತುಗಳು ಕೂಡ ಕೇಳಿ ಬರುತ್ತಿವೆ. ಇನ್ನೊಂದು ಕಡೆ 2ನೇ ದಿನವೇ ಸಿನಿಮಾದ ಕಲೆಕ್ಷನ್‌ ಸಿಕ್ಕಾಪಟ್ಟೆ ಡ್ರಾಪ್ ಆಗಿದೆ. ಇದು ತೆಲುಗು ಮಂದಿಯ ನಿದ್ದೆ ಕೆಡಿಸಿದೆ. ಸಂಕ್ರಾಂತಿಗೆ ಸಿನಿಮಾ ದಾಖಲೆ ಕಲೆಕ್ಷನ್ ಮಾಡುತ್ತೆ ಎಂಬ ನಿರೀಕ್ಷೆ ಇಟ್ಟುಕೊಂಡಿದ್ದವರು ಕಂಗಾಲಾಗಿದ್ದಾರೆ. ಹಾಗಿದ್ದರೆ, 2ನೇ ದಿನದ ಬಾಕ್ಸಾಫೀಸ್ ಕಲೆಕ್ಷನ್ ಎಷ್ಟು? ವೀಕೆಂಡ್ ಲೆಕ್ಕಾಚಾರವೇನು? ತಿಳಿಯುವುದಕ್ಕೆ ಮುಂದೆ ಓದಿ.

2ನೇ ದಿನ 'ರಾಜಾ ಸಾಬ್' ಕಲೆಕ್ಷನ್ ಎಷ್ಟು?

ತೆಲುಗು ವಿತರಕರ ಪ್ರಕಾರ, 'ರಾಜಾಸಾಬ್' ಮೇಲೆ ಸಾಕಷ್ಟು ನಿರೀಕ್ಷೆಗಳಿದ್ದವು. ಪೀಪಲ್ಸ್ ಮೀಡಿಯಾ ನಿರ್ಮಿಸಿದ್ದ ಈ ಸಿನಿಮಾ ರಿಲೀಸ್‌ ಬಳಿಕ ನೆಗೆಟಿವ್ ಕಮೆಂಟ್‌ಗಳು ಬರುವುದಕ್ಕೆ ಶುರುವಾಗಿದ್ದವು. ಹೀಗಾಗಿ ಸಿನಿಮಾದ ಕಲೆಕ್ಷನ್‌ನಲ್ಲಿ ಎರಡನೇ ದಿನ ಡ್ರಾಪ್ ಆಗಿದೆ. ಟ್ರೇಡ್ ಎಕ್ಸ್‌ಪರ್ಟ್‌ ಸ್ಯಾಕ್ನಿಲ್ಕ್ ಪ್ರಕಾರ ಭಾರತದ ಬಾಕ್ಸಾಫೀಸ್ (Net) 2ನೇ ದಿನ ಕೇವಲ ₹27.83 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆಯಷ್ಟೇ. ಇದು ಪ್ರಭಾಸ್ ಸಿನಿಮಾಗಾದ ಭಾರೀ ಹಿನ್ನಡೆ ಎಂದು ಹೇಳಲಾಗಿದೆ.

2 ದಿನಗಳ ಬಾಕ್ಸಾಫೀಸ್ ಕಲೆಕ್ಷನ್

'ರಾಜಾ ಸಾಬ್' ಸಿನಿಮಾ ಮೊದಲನೇ ದಿನ ಸುಮಾರು ₹53.75 ಕೋಟಿ ರೂಪಾಯಿ ಕಲೆಕ್ಷನ್ ಆಗಿತ್ತು. ಇದೂ ಕೂಡ ಪ್ರಭಾಸ್ ಪ್ಯಾನ್ ಇಂಡಿಯಾ ಇಮೇಜ್‌ಗಿರುವ ಕಲೆಕ್ಷನ್ ಅಲ್ಲ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ. ನಿನ್ನೆ 2ನೇ ದಿನ (ಜನವರಿ 10) ಅಂದರೆ, ಶನಿವಾರದಂದು ದೊಡ್ಡ ಮಟ್ಟಕ್ಕೆ ಕಲೆಕ್ಷನ್ ಆಗಬೇಕಿತ್ತು. ಆದರೆ, ಅದು ಆಗಲಿಲ್ಲ. ಹೀಗಾಗಿ 'ರಾಜಾ ಸಾಬ್' ವಿತರಕರು ಆತಂಕದಲ್ಲಿದ್ದಾರೆ ಎನ್ನಲಾಗಿದೆ. ಹಾಗಿದ್ದರೆ, 2 ದಿನಗಳ ಭಾರತದ ಬಾಕ್ಸಾಫೀಸ್‌ ಕಲೆಕ್ಷನ್ ಹೀಗಿದೆ.

2 ದಿನಗಳ ಕಲೆಕ್ಷನ್ ಹೀಗಿದೆ (Net)

1ನೇ ದಿನ ₹53.75 ಕೋಟಿ
2ನೇ ದಿನ ₹27.83 ಕೋಟಿ
ಒಟ್ಟು ₹90.73 ಕೋಟಿ (Net)

Prabhas starrer Raja Saab movie Day 2 Box office collection report

ಯಾವ್ಯಾವ ರಾಜ್ಯಗಳಲ್ಲಿ ಎಷ್ಟೆಷ್ಟು ಕಲೆಕ್ಷನ್?

ಇತ್ತೀಚೆಗೆ ತೆರೆಕಂಡಿರುವ ಪ್ರಭಾಸ್ ನಟಿಸಿದ ಸಿನಿಮಾಗಳಲ್ಲಿಯೇ 2ನೇ ದಿನ ಕಡಿಮೆ ಕಲೆಕ್ಷನ್ ಆಗಿದೆ. ತೆಲುಗು ರಾಜ್ಯಗಳಲ್ಲಿ ಅಷ್ಟೇ ಅಲ್ಲ. ದಕ್ಷಿಣ ಭಾರತದಲ್ಲಿಯೇ ಈ ಸಿನಿಮಾದ ಕಲೆಕ್ಷನ್ ಅಷ್ಟಕ್ಕಷ್ಟೇ ಎನ್ನಲಾಗಿದೆ. ಸ್ಯಾಕ್ನಿಲ್ಕ್ ಪ್ರಕಾರ ನೀಡಿರುವ ರಾಜ್ಯವಾರು ಅಂಕಿ ಅಂಶಗಳು ಹೀಗಿವೆ.

ಕರ್ನಾಟಕ ₹10.94 ಕೋಟಿ
ಆಂಧ್ರ-ತೆಲಂಗಾಣ ₹81.3 ಕೋಟಿ
ತಮಿಳುನಾಡು ₹2.13 ಕೋಟಿ
ಕೇರಳ ₹23 ಲಕ್ಷ
ಉತ್ತರ ಭಾರತ+ವಿದೇಶ ₹13.81 ಕೋಟಿ

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು ಬೇರೆ ಮೂಲಗಳು, https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

More from Filmibeat

English summary
Prabhas starrer Raja Saab movie Day 2 Box office collection report.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X