Akash Box Office Day 1: ಮೊದಲನೇ ದಿನ ಪುನೀತ್ ರಾಜ್‌ಕುಮಾರ್ 'ಆಕಾಶ್'ಗೆ ಭರ್ಜರಿ ಕಲೆಕ್ಷನ್

ಪವರ್‌ಸ್ಟಾರ್ ಪುನಿತ್ ರಾಜ್‌ಕುಮಾರ್ ಅಪಾರ ಅಭಿಮಾನಿಗಳನ್ನು ಅಗಲಿ 5 ವರ್ಷಗಳಾಗಿದೆ. ಆದರೂ, ಅವರ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಆರಾಧನೆಯನ್ನು ದುಪ್ಪಟ್ಟು ಮಾಡಿದ್ದಾರೆ. ಅದಕ್ಕೆ 'ಆಕಾಶ್' ಸಿನಿಮಾವೇ ಸಾಕ್ಷಿ. ನಿನ್ನೆ (ಮಾರ್ಚ್ 13) ತೆರೆಕಂಡಿದ್ದ ಈ ಸಿನಿಮಗೆ ಅಪ್ಪು ಅಭಿಮಾನಿಗಳಿಂದ, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.

2005ರಲ್ಲಿ ತೆರೆಕಂಡಾಗ ಪುನೀತ್ ರಾಜ್‌ಕುಮಾರ್, ರಮ್ಯಾ ಕಾಂಬಿನೇಷನ್ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಜಾದುನೇ ಮಾಡಿತ್ತು. ಈ ಸಿನಿಮಾ ಕರ್ನಾಟಕದಲ್ಲಿ 25 ವಾರಗಳ ಕಾಲ ಪ್ರದರ್ಶನ ಕಂಡು ಸಿಲ್ವರ್ ಜುಬಿಲಿ ಸಂಭ್ರಮವನ್ನು ಆಚರಿಸಿಕೊಂಡಿತ್ತು. ಮೆಗಾಸ್ಟಾರ್ ಚಿರಂಜೀವಿ ಈ ಸಂಭ್ರಮದಲ್ಲಿ ಭಾಗಿಯಾಗಿ ಸಿನಿಮಾ ತಂಡದ ಉತ್ಸಾಹವನ್ನು ದುಪ್ಪಟ್ಟು ಮಾಡಿದ್ದಾರೆ.

Puneeth Rajkumar Ramya film Akash Re-Release day 1 Box Office collection report

ಈಗ ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ (ಮಾರ್ಚ್ 17) 'ಆಕಾಶ್' ಸಿನಿಮಾವನ್ನು ರಿ-ರಿಲೀಸ್ ಮಾಡಲಾಗಿದೆ. ಮೊದಲೇ ನಿರ್ಧರಿಸಿದಂತೆ ಸಿನಿಮಾ ಮರುಬಿಡುಗಡೆಯಾಗಿದ್ದು, ಮೊದಲ ದಿನದ ಕಲೆಕ್ಷನ್ ಭರ್ಜರಿಯಾಗಿದೆ. ನಿನ್ನೆ (ಮಾರ್ಚ್ 13) ಬೆಳಗ್ಗೆಯಿಂದಲೇ ಚಿತ್ರಮಂದಿರಗಳು ಹೌಸ್‌ಪುಲ್ ಪ್ರದರ್ಶನ ಕಂಡಿವೆ. ಹೊಸಬರ ಸಿನಿಮಾಗಳಿಗೆ ಸಿಗುವ ಕಲೆಕ್ಷನ್ ಸಿಕ್ಕಿದೆ ಎಂದು ಟ್ರೇಡ್ ಎಕ್ಸ್‌ಪರ್ಟ್‌ಗಳು ಅಭಿಪ್ರಾಯ ಪಟ್ಟಿದ್ದಾರೆ.

'ಆಕಾಶ್' ಫಸ್ಟ್ ಡೇ ಕಲೆಕ್ಷನ್ ಎಷ್ಟು?

ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಸಿನಿಮಾ ರೀ-ರಿಲೀಸ್ ಆಗಿದ್ದೆಲ್ಲ ಉತ್ತಮ ಪ್ರದರ್ಶನ ಕಂಡಿದೆ. ಆ ಸಾಲಿನಲ್ಲಿ 'ಆಕಾಶ್' ಕೂಡ ಸೇರಿಕೊಂಡಿದೆ. ಮೊದಲ ದಿನ ಬಿಡುಗಡೆಯಾದ ಸುಮಾರು 18ಕ್ಕೂ ಅಧಿಕ ಸ್ಕ್ರೀನ್‌ಗಳು ಹೌಸ್‌ಫುಲ್ ಆಗಿದ್ದವು ಎಂದು ವಿತರಕರ ವಲಯಕ್ಕೆ ಸಿಕ್ಕಿರುವ ಲೆಕ್ಕಾಚಾರ. ಈ ಲೆಕ್ಕಾಚಾರದ ಪ್ರಕಾರ, 'ಆಕಾಶ್' ಸಿನಿಮಾ ಮೊದಲ ದಿನ ಗಳಿಸಿದ್ದು ಬರೋಬ್ಬರಿ ₹60 ಲಕ್ಷ ರೂಪಾಯಿ ಎಂದು ಹೇಳಲಾಗುತಿದೆ. ಇದು ರಿ-ರಿಲೀಸ್ ಆದ ಸಿನಿಮಾಗಳ ಲೆಕ್ಕದಲ್ಲಿ ನೋಡುವುದಾರೇ ಒಳ್ಳೆಯ ಕಲೆಕ್ಷನ್ ಎಂದೇ ಹೇಳಬಹುದು.

Also Read
Akash Box Office Day 1 Prediction: ಅಪ್ಪು ಸಿನಿಮಾ 'ಆಕಾಶ್‌'ಗೆ ಭರ್ಜರಿ ರೆಸ್ಪಾನ್ಸ್; ಮೊದಲ ಕಲೆಕ್ಷನ್ ಎಷ್ಟು?
Akash Box Office Day 1 Prediction: ಅಪ್ಪು ಸಿನಿಮಾ 'ಆಕಾಶ್‌'ಗೆ ಭರ್ಜರಿ ರೆಸ್ಪಾನ್ಸ್; ಮೊದಲ ಕಲೆಕ್ಷನ್ ಎಷ್ಟು?

ಯಾವ್ಯಾವ ಥಿಯೇಟರ್ ಕಲೆಕ್ಷನ್ ಹೇಗಿದೆ?

'ಆಕಾಶ್' ಬೆಳಗ್ಗೆಯ ಶೋನಿಂದಲೇ ಪ್ರೇಕ್ಷಕರು ಥಿಯೇಟರ್ ಮುಂದೆ ಜಮಾಯಿಸಿದ್ದರು. ಬೆಂಗಳೂರು, ಮೈಸೂರು, ಮಂಡ್ಯ ಹಾಗೂ ಮೈಸೂರು ಭಾಗದಲ್ಲಿ ಅಪ್ಪು ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಆದರೆ, ತಾಲೂಕು ಸೆಂಟರ್‌ಗಳಲ್ಲಿ ಕೊಂಚ ನೀರಸ ಪ್ರತಿಕ್ರಿಯೆ ಇದೆಯೆಂದು ವಿತರಕರ ವಲಯಕ್ಕೆ ಸಿಕ್ಕಿರೋ ಲೆಕ್ಕ. ಹೀಗಾಗಿ ಮೊದಲ ದಿನ ಉತ್ತಮ ಕಲೆಕ್ಷನ್ ಆಗಿದೆ. ಇನ್ನು ಕೆಲವು ಪ್ರಮುಖ ಥಿಯೇಟರ್‌ಗಳ ಕಲೆಕ್ಷನ್ ಲೆಕ್ಕಾಚಾರ ಹೀಗಿದೆ.

ಬೆಂಗಳೂರು

ನರ್ತಕಿ ₹3.45 ಲಕ್ಷ
ವೀರೇಶ್ ₹2 ಲಕ್ಷ
ಸಿದ್ದೇಶ್ವರ ₹2 ಲಕ್ಷ (ಜೆಪಿ ನಗರ)

ಮಂಡ್ಯ

ಗುರುಶ್ರೀ ₹65 ಸಾವಿರ

ಮೈಸೂರು

ಗಾಯತ್ರಿ ₹2.30 ಲಕ್ಷ

Puneeth Rajkumar Ramya film Akash Re-Release day 1 Box Office collection report

'ಆಕಾಶ್' ಬಾಕ್ಸಾಫೀಸ್ ಲೆಕ್ಕಾಚಾರವೇನು?

ಅಪ್ಪು ಬರ್ತ್‌ಡೇ ಹಿನ್ನೆಲೆಯಲ್ಲಿ ರಿ-ರಿಲೀಸ್ ಆಗಿರೋ 'ಆಕಾಶ್' ಸಿನಿಮಾದ ಬಾಕ್ಸಾಫೀಸ್ ಕಲೆಕ್ಷನ್ ಬಗ್ಗೆ ಲೆಕ್ಕಾಚಾರಗಳು ಶುರುವಾಗಿವೆ. ಸುಮಾರು 108 ಸ್ಕ್ರೀನ್‌ಗಲ್ಲಿ ತೆರೆಕಂಡಿರುವ ಈ ಸಿನಿಮಾ ಮೊದಲ ದಿನ ಭರ್ಜರಿ ಕಲೆಕ್ಷನ್ ಮಾಡಿದೆ. ಅದೇ ಕಲೆಕ್ಷನ್ ಮುಂದಿನ ದಿನಗಳಲ್ಲೂ ಮುಂದುವರೆಯುತ್ತಾ? ಇದಕ್ಕೆ ಮುಂದಿನ ದಿನಗಳಲ್ಲಿ ಉತ್ತರ ಸಿಗಲಿದೆ. ಕರ್ನಾಟಕದ ವಿತರಕರ ಪ್ರಕಾರ, ಈ ಸಿನಿಮಾ ಅಪ್ಪು ಬರ್ತ್‌ಡೇ ವೇಳೆಗೆ ₹1 ಕೋಟಿಯಷ್ಟು ಕಲೆಕ್ಷನ್ ಮಾಡಬಹುದೆಂದು ಅಂದಾಜಿಸಿದ್ದಾರೆ. ಒಂದು ವೇಳೆ 1 ಕೋಟಿ ರೂಪಾಯಿ ಕಲೆಕ್ಷನ್ ಆದರೆ, 'ಆಕಾಶ್' ರಿ-ರಿಲೀಸ್ ಆದ ಸಿನಿಮಾಗಳ ಪೈಕಿ ಬಾಕ್ಸಾಫೀಸ್ ಹಿಟ್ ಅಂತ ಸಾಬೀತಾಗುತ್ತೆ.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು ಬೇರೆ ಮೂಲಗಳು ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

More from Filmibeat

English summary
Puneeth Rajkumar, Ramya film Akash Re-Release day 1 Box Office collection report.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X