Su from So Box office Day 2: ಕೊನೆಗೂ ಒಂದು ಹಿಟ್ ಸಿನಿಮಾ ಸಿಕ್ಕೇಬಿಡ್ತು; 2ನೇ ದಿನದ ಕಲೆಕ್ಷನ್ ಕೋಟಿ ದಾಟಿತು!
ಆರು ತಿಂಗಳು ಮೇಲಾಗಿತ್ತು. ಸ್ಯಾಂಡಲ್‌ವುಡ್‌ನಲ್ಲಿ ಹೊಗಳಿಕೊಂಡಾಡುವಂತಹ ಸಿನಿಮಾ ಬಂದಿರಲಿಲ್ಲ. ಪ್ರತಿ ಬಾರಿನೂ ಜನರು ನಿರಾಸೆ ಮಾಡಿಕೊಂಡಿದ್ದಷ್ಟೇ ಆಗಿತ್ತು. ಕಂಟೆಂಟ್ ಅನ್ನು ಹೊತ್ತು ಕೆಲವು ಸಿನಿಮಾಗಳು ರಿಲೀಸ್ ಆಗಿದ್ದರೂ, ಅವು ಬಾಕ್ಸಾಫೀಸ್‌ನಲ್ಲಿ ಕಚ್ಚಿಕೊಳ್ಳಲಿಲ್ಲ. ಹೀಗಾಗಿ ಕಂಟೆಂಟ್ ಇದ್ದು, ಬಾಕ್ಸಾಫೀಸ್‌ನಲ್ಲೂ ಸದ್ದು ಮಾಡುತ್ತಿರುವ ಸಿನಿಮಾ 'ಸು ಫ್ರಮ್ ಸೋ'.
'ಸು ಫ್ರಮ್ ಸೋ' ಸಿನಿಮಾ ನೋಡಿ ಪ್ರೇಕ್ಷಕರು ಮನಸಾರೆ ಮೆಚ್ಚಿಕೊಂಡಿದ್ದಾರೆ. ಬಹಳ ವರ್ಷಗಳಾದ್ಮೇಲೆ ಜನರು ಥಿಯೇಟರ್‌ಗೆ ಲಗ್ಗೆ ಇಟ್ಟು ಇಡುತ್ತಿದ್ದಾರೆ. ಸಿನಿಮಾ ನೋಡಿ ಹೊಟ್ಟೆ ಹುಣ್ಣಾಗಿಸುವಷ್ಟು ನಗುತ್ತಿದ್ದಾರೆ. ಸಿನಿಮಾ ಬಿಡುಗಡೆಗೂ ಮುನ್ನ ಪ್ರಮುಖ ನಗರಗಳಲ್ಲಿ ಪ್ರೀಮಿಯರ್ ಮಾಡಿದ್ದರು. ಅಲ್ಲಿಗೆ ತಂಡದ ಪ್ರತಿಯೊಬ್ಬರೂ ಹೋಗಿ ಅಭಿಪ್ರಾಯ ಸಂಗ್ರಹಿಸಿದ್ದರು.

ರಾಜ್ ಬಿ ಶೆಟ್ಟಿ ಹಾಗೂ ತಂಡ ಮಾಡಿದ ಈ ಸ್ಟ್ರಾಟಜಿ ವರ್ಕ್ ಆಗಿದೆ. ಮೌತ್ ಪಬ್ಲಿಸಿಟಿ ಮೂಲಕವೇ ಸಿನಿಮಾ ಜನರನ್ನು ತಲುಪಿದೆ. ಹೀಗಾಗಿ ಮೊದಲನೇ ದಿನಕ್ಕಿಂತ ಎರಡನೇ ದಿನ ಸಿನಿಮಾದ ಸ್ಕ್ರೀನ್‌ಗಳ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ಮೊದಲನೇ ದಿನಕ್ಕಿಂತ ಎರಡನೇ ದಿನದ ಕಲೆಕ್ಷನ್ ಭರ್ಜರಿಯಾಗಿದೆ. ಹಾಗಿದ್ದರೆ, ಸೋಮೇಶ್ವರದ ಸುಲೋಚನದ ಕಥೆ ಗಳಿಸಿದ್ದೆಷ್ಟು? ತಿಳಿಯುವುದಕ್ಕೆ ಮುಂದೆ ಓದಿ.
ಸಿಕ್ಕಾಪಟ್ಟೆ ರೆಸ್ಪಾನ್ಸ್.. ಗಲ್ಲಾಪೆಟ್ಟಿಗೆ ಗಲಗಲ
'ಸು ಫ್ರಮ್ ಸೋ' ಆರಂಭದಲ್ಲಿ ಹೆಸರು ಹೇಳುವುದಕ್ಕೆ ಕಷ್ಟ ಪಡಬೇಕಲ್ಲ ಎನ್ನುವ ಭಾವವಿತ್ತು. ಈಗೀಗ ಸಿನಿಮಾದ ಟೈಟಲ್ ಸಿನಿ ಪ್ರಿಯರ ಬಾಯಲ್ಲಿ ಕೂತು ಬಿಟ್ಟಿದೆ. ಫಸ್ಟ್ ಡೇ ಸಿಕ್ಕಿ ರೆಸ್ಪಾನ್ಸ್‌ಗೆ ವಿತರಕರು ಸ್ಕ್ರೀನ್‌ಗಳ ಸಂಖ್ಯೆಯನ್ನು ದುಪ್ಪಟ್ಟು ಮಾಡಿದ್ದಾರೆ. ಬಹುತೇಕ ಸ್ಕ್ರೀನ್‌ಗಳು ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಸ್ಯಾಂಡಲ್‌ವುಡ್ ಮಂದಿಯರ ಪ್ರಕಾರ, ಈ ಸಿನಿಮಾ ಎಲ್ಲಾ ಕಡೆಗಳಲ್ಲಿ ಸ್ಕ್ರೀನ್‌ಗಳ ಸಂಖ್ಯೆ ಹೆಚ್ಚಾಗಿದೆ. ಎಲ್ಲೆಲ್ಲಿ ಅಂತ ನೋಡುವುದಾರೇ,
ಬೆಂಗಳೂರು
ಮಲ್ಟಿಪ್ಲೆಕ್ಸ್ 55 ಶೋಗಳು
ಸಿಂಗಲ್ ಸ್ಕ್ರೀನ್ 23 ಶೋಗಳು
ಎಂಎಂಸಿಎಚ್
ಮಲ್ಟಿಪ್ಲೆಕ್ಸ್ 11 ಶೋಗಳು
ಸಿಂಗಲ್ ಸ್ಕ್ರೀನ್ 11 ಶೋಗಳು
ಶಿವಮೊಗ್ಗ-ಮಂಗಳೂರು
ಮಲ್ಟಿಪ್ಲೆಕ್ಸ್ 22 ಶೋಗಳು
ಸಿಂಗಲ್ ಸ್ಕ್ರೀನ್ 08 ಶೋಗಳು
ಚಿತ್ರದುರ್ಗ-ದಾವಣಗೆರೆ
ಮಲ್ಟಿಪ್ಲೆಕ್ಸ್ 6 ಶೋಗಳು
ಸಿಂಗಲ್ ಸ್ಕ್ರೀನ್ 9 ಶೋಗಳು
ಮುಂಬೈ ಕರ್ನಾಟಕ
ಮಲ್ಟಿಪ್ಲೆಕ್ಸ್ 10 ಶೋಗಳು
ಸಿಂಗಲ್ ಸ್ಕ್ರೀನ್ 13 ಶೋಗಳು
2ನೇ ದಿನದ ಕಲೆಕ್ಷನ್ ಎಷ್ಟು?
'ಸು ಫ್ರಮ್ ಸೋ' ಸಿನಿಮಾದ 2ನೇ ದಿನದ ಕಲೆಕ್ಷನ್ ಗಾಂಧಿನಗರದ ಪಂಡಿತರ ಲೆಕ್ಕಚಾರ ದೊಡ್ಡದಿದೆ. ಮೊದಲ ದಿನ ಈ ಸಿನಿಮಾ ಗಳಿಸಿದ್ದಕ್ಕಿಂತ ದುಪ್ಪಟ್ಟು ಕಲೆಕ್ಷನ್ ಮಾಡಿದೆ ಎನ್ನುತ್ತಿದ್ದಾರೆ. ಮೊದಲ ದಿನ ಈ ಸಿನಿಮಾ 88 ಲಕ್ಷ ರೂಪಾಯಿ ಕಲೆಕ್ಷನ್ ಮಾಡಿತ್ತು. ಅದೇ ಎರಡನೇ ದಿನ ₹1.70 ಲಕ್ಷದಿಂದ ₹2 ಕೋಟಿವರೆಗೂ ಗಳಿಕೆ ಮಾಡಿರಬಹುದೆಂದು ಅಂದಾಜಿಸಿದ್ದಾರೆ. ಈ ಮೂಲಕ ಎರಡು ದಿನಗಳ ಕಲೆಕ್ಷನ್ 2.60 ಕೋಟಿಯಿಂದ 2.90 ಕೋಟಿ ಆಗಿರಬಹುದೆಂದು ಹೇಳಲಾಗುತ್ತಿದೆ. ಬಾಕ್ಸಾಫೀಸ್ ಲೆಕ್ಕಾಚಾರಗಳನ್ನು ನೀಡುವ ಸ್ಯಾಕ್ನಿಲ್ಕ್.ಕಾಮ್ ಇನ್ನೂ ಅಧಿಕೃತ ಅಂಕಿ ಅಂಶಗಳನ್ನು ನೀಡಬೇಕಿದೆ.

3ನೇ ದಿನ ಉಡೀಸ್ ಆಗುತ್ತಾ ದಾಖಲೆ?
ಇನ್ನು ಮೂರನೇ ದಿನ ಮತ್ತಷ್ಟು ಶೋಗಳನ್ನು ಏರಿಕೆ ಮಾಡಲಾಗುತ್ತಿದೆ. ಮಲ್ಟಿಪ್ಲೆಕ್ಸ್ ಸೇರಿದಂತೆ ಹಲವು ಚಿತ್ರಮಂದಿರಗಳಲ್ಲಿ ಬೆಳಗ್ಗೆ 6 ಗಂಟೆಯಿಂದಲೇ ಒಂದು ಹೆಚ್ಚುವರಿ ಶೋಗಳನ್ನು ಹಾಕಲಾಗಿದೆ. ಸ್ಯಾಂಡಲ್‌ವುಡ್‌ನ ವಿತರಕರು ಹೇಳುವ ಮೂರನೇ ದಿನ 'ಸು ಫ್ರಮ್ ಸೋ' ಸಿನಿಮಾ 2.50 ಕೋಟಿಯಿಂದ 3 ದಾಟಿದರೂ ಅಚ್ಚರಿ ಪಡಬೇಕಿಲ್ಲ ಎಂದೂ ಹೇಳುತ್ತಿದ್ದಾರೆ. ಹೀಗಾಗಿ ಎಲ್ಲರ ಕಣ್ಣು 'ಸು ಫ್ರಮ್ ಸೋ' ಮೇಲೆ ನಿಂತಿದೆ.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications











