Su From So Vs Coolie: ರಜನಿಕಾಂತ್ 'ಕೂಲಿ' ಜಗ್ಗಲಿಲ್ಲ 'ಸು ಫ್ರಮ್ ಸೋ'; ಕಲೆಕ್ಷನ್ ಎಷ್ಟು ಅಂತಿರಾ?
ಕನ್ನಡ ಚಿತ್ರರಂಗಕ್ಕೆ ದೊಡ್ಡ ರಿಲೀಫ್ ಕೊಟ್ಟ ಸಿನಿಮಾ 'ಸು ಫ್ರಮ್ ಸೋ'. ಈ ಲೆವೆಲ್‌ಗೆ ಬಾಕ್ಸಾಫೀಸ್ ಅನ್ನು ಕೊಳ್ಳೆ ಹೊಡೆಯುತ್ತೆ ಅನ್ನೋದನ್ನು ಯಾರೂ ನಿರೀಕ್ಷೆ ಮಾಡಿರಲಿಲ್ಲ. ಇದೊಂತರ ಸರ್ಪ್ರೈಸ್ ಹಿಟ್ ಅಂತ ಹೇಳಬಹುದು. ಈ ಕಾಮಿಡಿ-ಡ್ರಾಮಾ 'ಸು ಫ್ರಮ್ ಸೋ' ಬಾಕ್ಸಾಫೀಸ್‌ನಲ್ಲಿ ಅಸಲಿ ಬ್ಲಾಕ್ ಬಸ್ಟರ್ ಅಂತ ಸಾಬೀತಾಗಿದೆ. ರಾಜ್ ಬಿ ಶೆಟ್ಟಿ ನಿರ್ಮಿಸಿದ ಈ ಸಿನಿಮಾವನ್ನು ಜೆಪಿ ತುಮಿನಾಡ್ ನಿರ್ದೇಶನ ಮಾಡಿದ್ದಾರೆ.
ಜುಲೈ 25ರಂದು ಯಾವುದೇ ಪ್ರಚಾರವೇ ಇಲ್ಲದೆ ತೆರೆಕಂಡಿದ್ದ ಸಿನಿಮಾ ಮೂರು ವಾರಗಳ ಕಾಲ ಬಾಕ್ಸಾಫೀಸ್‌ನಲ್ಲಿ ಮೆರೆದಿತ್ತು. ನಾಲ್ಕನೇ ವಾರದ ಹೊತ್ತಿಗೆ ಬಹುತಾರಾಗಣದ ಬಿಗ್ ಬಜೆಟ್ ಸಿನಿಮಾ 'ಕೂಲಿ' ಅಖಾಡಕ್ಕೆ ಇಳಿದಿದೆ. ರಜನಿಕಾಂತ್, ನಾಗಾರ್ಜುನ, ಆಮಿರ್ ಖಾನ್, ಉಪೇಂದ್ರ ಅಂತಹ ದಿಗ್ಗಜರೇ ಇರುವ ಸಿನಿಮಾದ ಮುಂದೆ 'ಸು ಫ್ರಮ್ ಸೋ' ಆಟ ನಿಲ್ಲುತ್ತೆ ಎಂದುಕೊಂಡಿದ್ದವರೇ ಹೆಚ್ಚು. ಆದರೆ, ಇನ್ನು ಕೆಲವು ದಿನಗಳಲ್ಲಿ ಈ ಸಿನಿಮಾ 100 ಕೋಟಿ ಕ್ಲಬ್ ಸೇರಲಿದೆ.

ನೂರಾರು ಕೋಟಿ ಹಾಕಿ ಸಿನಿಮಾ ಮಾಡಿ ಸಾವಿರ ಕೋಟಿ ಗಳಿಸುವುದಕ್ಕೂ, ಕೆಲವೇ ಕೋಟಿಗಳಲ್ಲಿ ನಿರ್ಮಾಣ ಮಾಡಿ ನೂರು ಕೋಟಿ ಗಳಿಸುವುದಕ್ಕೂ ತುಂಬಾನೇ ವ್ಯತ್ಯಾಸವಿದೆ. ಈ ಸ್ಮಾಲ್ ಬಜೆಟ್ ಸಿನಿಮಾ ರಿಲೀಸ್ ಆಗಿ 22 ದಿನ ಆಗಿದೆ. ಸದ್ಯ 21ನೇ ದಿನ ಅಂದರೆ, 'ಕೂಲಿ' ಸಿನಿಮಾ ಬಿಡುಗಡೆಯಾದ ದಿನ 'ಸು ಫ್ರಮ್ ಸೋ' ಎಷ್ಟು ಕಲೆಕ್ಷನ್ ಮಾಡಿದೆ ಗೊತ್ತೇ? 'ಕೂಲಿ'ಗೆ ಸೆಡ್ಡು ಹೊಡೆದು ನಿಂತಿತೇ 'ಸು ಫ್ರಮ್ ಸೋ'? ತಿಳಿಯುವುದಕ್ಕೆ ಮುಂದೆ ಓದಿ.
'ಸು ಫ್ರಮ್ ಸೋ' Vs 'ಕೂಲಿ'
ಸೂಪರ್‌ಸ್ಟಾರ್ ರಜನಿಕಾಂತ್ ಸಿನಿಮಾ ರಿಲೀಸ್ ವೇಳೆ ಬೇರೆ ಯಾವುದೇ ಸಿನಿಮಾದ ಹವಾನೂ ಇರುವುದಿಲ್ಲ. ಅದೆಷ್ಟೇ ದೊಡ್ಡ ಸಿನಿಮಾ ಆಗಿದ್ದರೂ ಥಿಯೇಟರ್‌ಗಳಲ್ಲಿ ಸಿನಿಮಾಗಳು ಸೈಲೆಂಟ್ ಆಗುತ್ತವೆ. ಬಾಕ್ಸಾಫೀಸ್‌ನಲ್ಲಿ ಕಲೆಕ್ಷನ್ ಡ್ರಾಪ್ ಆಗುತ್ತವೆ. 'ಸು ಫ್ರಮ್ ಸೋ' ಸಿನಿಮಾ ಮೇಲೂ ಅಂತಹದ್ದೇ ನಿರೀಕ್ಷೆಯನ್ನು ಇಟ್ಟುಕೊಳ್ಳಲಾಗಿತ್ತು. ಆದರೆ, 'ಕೂಲಿ' ಕ್ರೇಜ್ ಮಧ್ಯೆಯೂ 'ಸು ಫ್ರಮ್ ಸೋ' ಬಾಕ್ಸಾಫೀಸ್‌ನಲ್ಲಿ ಸ್ಟಡಿಯಾಗಿ ಮುನ್ನುಗ್ಗುತ್ತಿದೆ.

21ನೇ ದಿನದ ಕಲೆಕ್ಷನ್ ಎಷ್ಟು?
ರಾಜ್ ಬಿ ಶೆಟ್ಟಿ, ಶಶಿಧರ್ ಶೆಟ್ಟಿ ಹಾಗೂ ರವಿ ರೈ ಕಳಸ ಲೈಟರ್ ಬುದ್ಧ ಫಿಲ್ಮ್ಸ್ ಬ್ಯಾನರ್‌ನಲ್ಲಿ ಸಿನಿಮಾವನ್ನು ನಿರ್ಮಾಣ ಮಾಡಿದ್ದರು. ಶನೀಲ್ ಗೌತಮ್, ಜೆಪಿ ತುಮಿನಾಡ್, ರಾಜ್ ಬಿ ಶೆಟ್ಟಿ, ಪ್ರಕಾಶ್ ತುಮಿನಾಡ್, ದೀಪಕ್ ರೈ ಪಣಜೆ, ಮೈಮ್ ರಾಮದಾಸ್, ಸಂಧ್ಯಾ ಅರಕೆರೆ ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಹಾಸ್ಯವನ್ನೇ ಪ್ರಧಾನವಾಗಿಸಿಕೊಂಡಿದ್ದ ಈ ಸಿನಿಮಾ ಸ್ಯಾಕ್ನಿಲ್ಕ್ ಪ್ರಕಾರ, 21ನೇ ದಿನ 1.34 ಕೋಟಿ ರೂಪಾಯಿಯನ್ನು ಕಲೆ ಹಾಕಿದೆ. ಕನ್ನಡದಲ್ಲಿ ₹1.07 ಕೋಟಿ, ಮಲಯಾಳಂ ವರ್ಷನ್ ₹7 ಲಕ್ಷ, ತೆಲುಗು ವರ್ಷನ್ ₹20 ಲಕ್ಷ ಕಲೆಕ್ಷನ್ ಮಾಡಿದೆ.
₹100 ಕೋಟಿಗೆ ಇನ್ನೆಷ್ಟು ಬೇಕು?
ಸ್ಯಾಕ್ನಿಲ್ಕ್ ಪ್ರಕಾರ, 'ಸು ಫ್ರಮ್ ಸೋ' ಈ ವೀಕೆಂಡ್‌ನಲ್ಲಿ ₹100 ಕೋಟಿ ಕ್ಲಬ್ ಸೇರಬಹುದು. ವಿಶ್ವದಾದ್ಯಂತ ಈ ಸಿನಿಮಾ ₹90 ಕೋಟಿಯನ್ನು ಈಗಾಗಲೇ ಕಲೆ ಹಾಕಿದೆ. ಈಗ ವಿದೇಶದಲ್ಲಿ ರಿಲೀಸ್ ಆಗಿದ್ದು, ಅಲ್ಲಿಂದಲೇ ಹೆಚ್ಚು ಹಣ ಹರಿದು ಬರುತ್ತಿದೆ ಎನ್ನಲಾಗಿದೆ. 'ಕೂಲಿ' ಅಂತಹ ಸಿನಿಮಾ ಜೊತೆ 'ಸು ಫ್ರಮ್ ಸೋ' ಪೈಪೋಟಿ ಮಾಡುತ್ತಿದೆ. ಈ 21 ದಿನಗಳ ಕಲೆಕ್ಷನ್ ಹೀಗಿದೆ.
21 ದಿನಗಳ ಕಲೆಕ್ಷನ್
ಮೊದಲ ದಿನ ₹0.78 ಕೋಟಿ
2ನೇ ದಿನ ₹2.17 ಕೋಟಿ
3ನೇ ದಿನ ₹3.50 ಕೋಟಿ
4ನೇ ದಿನ ₹3.05 ಕೋಟಿ
5ನೇ ದಿನ ₹3.40 ಕೋಟಿ
6ನೇ ದಿನ ₹3.50 ಕೋಟಿ
7ನೇ ದಿನ ₹3.75 ಕೋಟಿ
8ನೇ ದಿನ ₹3.80 ಕೋಟಿ
9ನೇ ದಿನ ₹5.40 ಕೋಟಿ
10ನೇ ದಿನ ₹6.55 ಕೋಟಿ
11ನೇ ದಿನ ₹3.70 ಕೋಟಿ
12ನೇ ದಿನ ₹3.40 ಕೋಟಿ
13ನೇ ದಿನ ₹2.80 ಕೋಟಿ
14ನೇ ದಿನ ₹2.25 ಕೋಟಿ
15ನೇ ದಿನ ₹3.10 ಕೋಟಿ
16ನೇ ದಿನ ₹6.00 ಕೋಟಿ
17ನೇ ದಿನ ₹6.95 ಕೋಟಿ
18ನೇ ದಿನ ₹2.05 ಕೋಟಿ
19ನೇ ದಿನ ₹1.70 ಕೋಟಿ
20ನೇ ದಿನ ₹1.60 ಕೋಟಿ
21ನೇ ದಿನ ₹1.34 ಕೋಟಿ
ಒಟ್ಟು ₹77.79 ಕೋಟಿ
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications











