Su from So Box office Day 4: 4ನೇ ದಿನವೂ ಬಾಕ್ಸಾಫೀಸ್ ಚಿಂದಿ..ಸೋಮವಾರದ ಪರೀಕ್ಷೆಯಲ್ಲಿ 'ಸು ಫ್ರಮ್ ಸೋ' ಡಿಸ್ಟಿಂಕ್ಷನ್

ಪರಭಾಷೆಯ ಸಿನಿಮಾವನ್ನು ಎದುರಿಸಿ ನಿಲ್ಲುವುದಕ್ಕೆ ಹಿಂದಿನಿಂದಲೂ ಕನ್ನಡದ ಫಿಲ್ಮ್‌ ಮೇಕರ್ಸ್ ಹಿಂದೇಟು ಹಾಕುತ್ತಾರೆ. ಕನ್ನಡದ ಸೂಪರ್‌ಸ್ಟಾರ್‌ಗಳಿಂದ ಹಿಡಿದು ಯುವ ಪ್ರತಿಭೆವರೆಗೂ ಒಂದು ಭಯ ಇದ್ದೇ ಇದೆ. ಇದು ಹಿಂದಿನಿಂದಲೂ ಬೆಳೆದುಕೊಂಡು ಬಂದಿದೆ. ಆಗಾಗ ಹೊಸಬರು ಧೈರ್ಯ ತೋರಿದ್ದು ಬಿಟ್ಟರೆ, ಸವಾಲುಗಳನ್ನು ಎದುರಿಸಿದ್ದು ತೀರಾ ವಿರಳ. ಈಗ ಇಂತಹದ್ದೇ ಸವಾಲನ್ನು ಎದುರಿಸಿ ನಿಂತಿದ್ದು 'ಸು ಫ್ರಮ್ ಸೋ'.

ಸೂಪರ್‌ಸ್ಟಾರ್‌ಗಳಿಲ್ಲ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸೂಪರ್ ಕಲೆಕ್ಷನ್ ಮಾಡುತ್ತಿದೆ. ಕೋಟಿ ಲೆಕ್ಕದಲ್ಲಿ ಬಾಚಿಕೊಳ್ಳುತ್ತಿದೆ. ವೀಕ್‌ ಡೇಸ್‌ನಲ್ಲೂ ಈ ಸಿನಿಮಾದ ಕಲೆಕ್ಷನ್ ಎರಡರಿಂದ ಮೂರು ಕೋಟಿ ದಾಟುತ್ತಿದೆ. ನಾಲ್ಕನೇ ದಿನವೂ 'ಸು ಫ್ರಮ್ ಸೋ' ಬಾಕ್ಸಾಫೀಸ್‌ನಲ್ಲಿ 'ಸೋ' ಅಗ್ರೆಸಿವ್ ಆಗಿದೆ. ಈ ಕ್ರೇಜ್‌ ಈಗ ಪರಭಾಷೆಯ ಕಡೆಗೂ ಮುನ್ನುಗ್ಗುತ್ತಿದೆ.

Raj B Shetty movie Su from So day 4 Box office collection increased here is report

'ಸು ಫ್ರಮ್ ಸೋ' ಸೋಮವಾರದ ಪರೀಕ್ಷೆಯಲ್ಲಿ ಗೆದ್ದಿದೆ. ಪ್ರತಿಯೊಂದು ಸಿನಿಮಾಗೂ ಇದೊಂದು ದಿನ ತುಂಬಾನೇ ಮುಖ್ಯ. ಸಾಮಾನ್ಯವಾಗಿ ವೀಕೆಂಡ್‌ನಲ್ಲಿ ಅರ್ಧದಷ್ಟು ಕಲೆಕ್ಷನ್ ಆದರೂ, ಸಿನಿಮಾ ಮಂದಿ ಖುಷಿ ಪಡುತ್ತಾರೆ. ಆದರೆ, 'ಸು ಫ್ರಮ್ ಸೋ' ವೀಕೆಂಡ್‌ಗಿಂತಲೂ ಹೆಚ್ಚು ಕಲೆಕ್ಷನ್ ಆಗಿದೆ ಎಂದು ಟ್ರೇಡ್ ಎಕ್ಸ್‌ಪರ್ಟ್‌ಗಳು ಹೇಳುತ್ತಿದ್ದಾರೆ. ಹಾಗಿದ್ದರೆ, 'ಸು ಫ್ರಮ್ ಸೋ' 4ನೇ ದಿನದ ಕಲೆಕ್ಷನ್ ಎಷ್ಟು? ತಿಳಿಯುವುದಕ್ಕೆ ಮುಂದೆ ಓದಿ.

4ನೇ 'ಸು ಫ್ರಮ್ ಸೋ' ಕಲೆಕ್ಷನ್?

ರಾಜ್ ಬಿ ಶೆಟ್ಟಿ, ರವಿ ರೈ ಕಳಸ ಹಾಗೂ ಶಶಿಧರ್ ಶೆಟ್ಟಿ ಬರೋಡ ಈ ಸಿನಿಮಾವನ್ನು ನಿರ್ಮಾಣ ಮಾಡಿರುವ 'ಸು ಫ್ರಮ್ ಸೋ' ನಾಲ್ಕನೇ ದಿನವೂ ಬಾಕ್ಸಾಫೀಸ್‌ ಚಿಂದಿ ಉಡಾಯಿಸಿದೆ. ನಾಲ್ಕು ದಿನಕ್ಕೆ ನಿರ್ಮಾಪಕರು ಲಾಭದಲ್ಲಿ ಇದ್ದಾರೆ. ನಾಲ್ಕನೇ ದಿನವಾದ ನಿನ್ನೆ (ಜುಲೈ 28) ಸೋಮವಾರದ ಪರೀಕ್ಷೆಯಲ್ಲಿ ಸಿನಿಮಾ ತಂಡ ಗೆದ್ದಿದೆ. ಸ್ಯಾಕ್ನಿಲ್ಕ್.ಕಾಮ್ ಪ್ರಕಾರ 'ಸು ಫ್ರಮ್ ಸೋ' 4ನೇ ದಿನ 3.55 ಕೋಟಿ ರೂಪಾಯಿ. ಇದು ಭಾನುವಾರ ಕೆಲಕ್ಷನ್‌ಗಿಂತಲೂ 5 ಲಕ್ಷ ರೂಪಾಯಿ ಹೆಚ್ಚು ಕಲೆಕ್ಷನ್ ಆಗಿದೆ ಎಂದು ವರದಿಯಲ್ಲಿ ಹೇಳಿದೆ.

ಕರ್ನಾಟಕದ ವಿತರಕರ ಲೆಕ್ಕಾಚಾರವೇನು?

ಕರ್ನಾಟಕದ ವಿತರಕರು ಕೂಡ 'ಸು ಫ್ರಮ್ ಸೋ' ಕಲೆಕ್ಷನ್‌ಗೆ ಹರ್ಷ ವ್ಯಕ್ತಪಡಿಸುತ್ತಿದ್ದಾರೆ. ಸೋಮವಾರವೂ ಈ ಸಿನಿಮಾದ ಪರ್ಫಾಮೆನ್ಸ್‌ಗೆ ಪ್ರೇಕ್ಷಕರು ಥ್ರಿಲ್ ಆಗಿದ್ದಾರೆ. ಕರ್ನಾಟಕದ ವಿತರಕರ ವಲಯದಲ್ಲೂ ಈ ಸಿನಿಮಾದ ಕಲೆಕ್ಷನ್ ಬಗ್ಗೆ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. ಇವರ ಲೆಕ್ಕ ಸ್ಯಾಕ್ನಿಲ್ಕ್.ಕಾಮ್‌ಗಿಂತ ಕೊಂಚ ಮಟ್ಟಿಗೆ ಭಿನ್ನವಾಗಿದೆ. ಕರ್ನಾಟಕದ ವಿತರಕರು ಕೊಡುವ ಲೆಕ್ಕದ ಪ್ರಕಾರ, 'ಸು ಫ್ರಮ್ ಸೋ' 4ನೇ ದಿನ 2.50 ಕೋಟಿಯಿಂದ 2.80 ಕೋಟಿವರೆಗೂ ಕಲೆಕ್ಷನ್ ಮಾಡಿರಬಹುದೆಂದು ಚರ್ಚೆ ಮಾಡುತ್ತಿದ್ದಾರೆ.

Raj B Shetty movie Su from So day 4 Box office collection increased here is report

4 ದಿನದಲ್ಲೇ 10 ಕೋಟಿ ಕ್ಲಬ್‌ಗೆ ಎಂಟ್ರಿ

'ಸು ಫ್ರಮ್ ಸೋ' ಕಲೆಕ್ಷನ್ ನೋಡಿ ಪರಭಾಷೆಯ ಫಿಲ್ಮ್‌ ಮೇಕರ್ಸ್‌ ಬೆಚ್ಚಿಬಿದ್ದಿದ್ದಾರೆ. ಕಳೆದ ಮೂರು ನಾಲ್ಕು ವರ್ಷಗಳಿಂದ ಕನ್ನಡ ಚಿತ್ರರಂಗದ ಕಡೆಗೆ ತಿರುಗಿಯೂ ನೋಡದವರೆಲ್ಲ ಕಣ್ಣು ಅರಳಿಸಿ ನೋಡುವಂತಾಗಿದೆ. 'ಸು ಫ್ರಮ್ ಸೋ' ಸಿನಿಮಾ ನಾಲ್ಕು ದಿನಗಳಲ್ಲಿ ಬರೋಬ್ಬರಿ 10 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು ಸ್ಯಾಕ್ನಿಲ್ಕ್ ಲೆಕ್ಕಚಾರ ಹಾಕಿದೆ. ಈ ನಾಲ್ಕು ದಿನದ ಕಲೆಕ್ಷನ್ ಹೇಗಿದೆ ಎಂದು ನೋಡುವುದಾರೇ,

ಮೊದಲನೇ ದಿನ ₹0.78 ಕೋಟಿ
2ನೇ ದಿನ ₹2.17 ಕೋಟಿ
3ನೇ ದಿನ ₹3.5 ಕೋಟಿ
4ನೇ ದಿನ ₹3.55 ಕೋಟಿ
ಒಟ್ಟು ₹10.00 ಕೋಟಿ

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

More from Filmibeat

English summary
Raj B Shetty movie Su from So day 4 Box office collection increased here is report.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X