Su From So’ Day 31: 31ನೇ ದಿನದ ಕಲೆಕ್ಷನ್ ನಂಬೋದಕ್ಕೆ ಆಗಲ್ಲ; ಬಾಕ್ಸಾಫೀಸ್‌ಗೆ 'ಸು ಫ್ರಮ್ ಸೋ' ದಾಳಿ

ರಾಜ್ ಬಿ ಶೆಟ್ಟಿ ನಿರ್ಮಾಣದ ' ಸು ಫ್ರಮ್ ಸೋ' ಕನ್ನಡ ಚಿತ್ರರಂಗದಲ್ಲಿ ಹೊಸ ಚರಿತ್ರೆಯನ್ನು ಸೃಷ್ಟಿಸಿದೆ. ಈ ಸಿನಿಮಾ ಬರೆದ ಅಪೂರ್ವ ದಾಖಲೆಗೆ ಸಿನಿಮಾ ಮಂದಿನೇ ಲೆಕ್ಕ ಸಿಗದೆ ಪರದಾಡುವಂತಾಗಿದೆ. ಇನ್ನೇನು ಈ ಸಿನಿಮಾದ ಆಟ ಬಾಕ್ಸಾಫೀಸ್‌ನಲ್ಲಿ ಮುಗೀತು ಎನ್ನುವಾಗಲೇ ವೀಕೆಂಡ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದೆ. 31ನೇ ದಿನವೂ ಬಾಕ್ಸಾಫೀಸ್‌ನಲ್ಲಿ ಸುನಾಮಿಯನ್ನೇ ಎಬ್ಬಿಸಿದೆ.

'ಸು ಫ್ರಮ್ ಸೋ' ಹಾರರ್-ಕಾಮಿಡಿ ಸಿನಿಮಾ ವೀಕೆಂಡ್‌ನಲ್ಲಿ ಮತ್ತೆ ಸದ್ದು ಮಾಡಿದೆ. ಹೊಸ ಸಿನಿಮಾಗಳ ಅಬ್ಬರವಿಲ್ಲ. ಸೂಪರ್‌ಸ್ಟಾರ್‌ಗಳ ಸಿನಿಮಾ ಸದ್ದು ಮಾಡುತ್ತಿಲ್ಲ. ಇವೆಲ್ಲವೂ ಈ ಸಿನಿಮಾಗೆ ಬಾಕ್ಸಾಫೀಸ್‌ನಲ್ಲಿ ವರವಾಗಿ ಪರಿಣಮಿಸಿದೆ. 31ನೇ ದಿನ ಅಂದರೆ, ಭಾನುವಾರ ಗಲ್ಲಾಪೆಟ್ಟಿಯಲ್ಲಿ ಭರ್ಜರಿ ಸದ್ದು ಮಾಡಿದೆ. ಕರ್ನಾಟಕದಲ್ಲಿ 'ಕೂಲಿ', 'ವಾರ್‌ 2'ಗೂ ಈ ಮಟ್ಟಿಗೆ ರೆಸ್ಪಾನ್ಸ್ ಸಿಕ್ಕಿಲ್ಲ.

Raj B Shetty Produced Su From So Day 31 Box Office Report Weekend Jump 113 Crore Worldwide Gross

ಸ್ಯಾಂಡಲ್‌ವುಡ್ ಬಾಕ್ಸಾಫೀಸ್‌ನಲ್ಲಿ ಚರಿತ್ರೆ ಸೃಷ್ಟಿಸಿದ 'ಸು ಫ್ರಮ್ ಸೋ' ಡೇ 29 ರಿಂದ ಡೇ 31ರವರೆಗೆ ಕಲೆಕ್ಷನ್‌ಗಳಲ್ಲಿ ಏರಿಕೆಯಾಗಿರುವುದು ಸ್ಪಷ್ಟವಾಗಿ ಕಾಣಿಸುತ್ತಿದೆ. ಅದರಲ್ಲೂ ವೀಕೆಂಡ್‌ ಕಲೆಕ್ಷನ್ ನೋಡಿದರೆ, ಇನ್ನೂ ಒಂದು ವಾರ ಈ ಸಿನಿಮಾ ಥಿಯೇಟರ್‌ನಲ್ಲಿ ಗಟ್ಟಿಯಾಗಿರುತ್ತೆ ಅನ್ನೋದನ್ನು ಕನ್ಫರ್ಮ್. ಹಾಗಿದ್ದರೆ, 31ನೇ ದಿನ ಬಾಕ್ಸಾಫೀಸ್‌ನಲ್ಲಿ 'ಸು ಫ್ರಮ್ ಸೋ' ಕಲೆಕ್ಷನ್ ಎಷ್ಟು? ತಿಳಿಯುವುದಕ್ಕೆ ಮುಂದೆ ಓದಿ.


31ನೇ ದಿನ 'ಸು ಫ್ರಮ್ ಸೋ' ಕಲೆಕ್ಷನ್

ನಿನ್ನೆ (ಆಗಸ್ಟ್ 24) ಭಾನುವಾರ, ಅಂದರೆ 31ನೇ ದಿನ 'ಸು ಫ್ರಮ್ ಸೋ' ಕಲೆಕ್ಷನ್ ಎಚ್ಚರಲ್ಲೂ ಅಚ್ಚರಿ ಮೂಡಿಸಿದೆ. ಸ್ಯಾಕ್ನಿಲ್ಕ್ ಪ್ರಕಾರ 'ಸು ಫ್ರಮ್ ಸೋ' ಕಲೆಕ್ಷನ್ ಶೇ.150ರಷ್ಟು ಏರಿಕೆಯಾಗಿದೆ. ಶನಿವಾರ 1.47 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ್ದ ಸಿನಿಮಾ, ನಿನ್ನೆ (ಆಗಸ್ಟ್ 24) 31ನೇ ದಿನ ಭಾನುವಾರದಂದು 1.75 ಕೋಟಿ ರೂಪಾಯಿ ಕಲೆಕ್ಷನ್ (ಕನ್ನಡ) ಮಾಡಿದೆ ಹೇಳಲಾಗಿದೆ. 31ನೇ ದಿನದಲ್ಲಿ ಕನ್ನಡ ಸಿನಿಮಾವೊಂದು ಈ ಮಟ್ಟಿಗೆ ಕಲೆಕ್ಷನ್ ಮಾಡಿಯೇ ಇರಲಿಲ್ಲ.

31 ದಿನಗಳಲ್ಲಿ 'ಸು ಫ್ರಮ್ ಸೋ' ಗಳಿಸಿದ್ದೆಷ್ಟು?

'ಸು ಫ್ರಮ್ ಸೋ' ಸಿನಿಮಾ ಕರ್ನಾಟಕದಲ್ಲಿ ದಾಖಲೆ ಬರೆಯುವುದಕ್ಕೆ ಆರಂಭಿಸುತ್ತಿದ್ದಂತೆ ಪರಭಾಷೆಯಲ್ಲಿ ರಿಲೀಸ್ ಮಾಡಲಾಗಿತ್ತು. ಮಲಯಾಳಂ ಹಾಗೂ ತೆಲುಗು ಭಾಷೆಯಲ್ಲಿ ಅಷ್ಟಾಗಿ ಸದ್ದು ಮಾಡಲಿಲ್ಲ. ಆದರೆ, ವಿದೇಶದಲ್ಲಿ ಬಿಡುಗಡೆಯಾಗಿದ್ದ ಕನ್ನಡ ವರ್ಷನ್‌ಗೆ ಅದ್ಭುತ ರೆಸ್ಪಾನ್ಸ್ ಸಿಕ್ಕಿದೆ. ಒಟ್ಟಾರೆ, 31 ದಿನಗಳಲ್ಲಿ ಕನ್ನಡದ ಮಟ್ಟಿಗೆ ದಾಖಲೆ ಕಲೆಕ್ಷನ್ ಮಾಡಿದೆ ಎಂದೇ ಹೇಳಬಹುದು.

31 ದಿನಗಳ 'ಸು ಫ್ರಮ್ ಸೋ' ಕಲೆಕ್ಷನ್

ಕನ್ನಡ ₹77.95 ಕೋಟಿ
ಮಲಯಾಳಂ ₹5.56 ಕೋಟಿ
ತೆಲುಗು ₹1.81 ಕೋಟಿ
ಒಟ್ಟು ₹85.32 ಕೋಟಿ

Raj B Shetty Produced Su From So Day 31 Box Office Report Weekend Jump 113 Crore Worldwide Gross

₹125 ಕೋಟಿ ಕ್ಲಬ್ ಸೇರಬಹುದೇ?

'ಸು ಫ್ರಮ್ ಸೋ' ಸಿನಿಮಾ 5ನೇ ವೀಕೆಂಡ್‌ನಲ್ಲಿ ಕನ್ನಡ ವರ್ಷನ್ 3.22 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಇದು ಕನ್ನಡದ ಮಟ್ಟಿಗೆ ಅದ್ಭುತ ಕಲೆಕ್ಷನ್ ಎನ್ನಬಹುದು. ಹೀಗಾಗಿ ಈ ವಾರದ ಕಲೆಕ್ಷನ್ ಹೇಗಾಗುತ್ತೆ ಅನ್ನೋದರ ಮೇಲೆ 125 ಕೋಟಿ ಕ್ಲಬ್ ಸೇರುತ್ತಾ? ಇಲ್ವಾ? ಅನ್ನೋದನ್ನು ಲೆಕ್ಕ ಹಾಕಬಹುದು. ಒಂದು ವೇಳೆ ತೆಲುಗು ಹಾಗೂ ಮಲಯಾಳಂ ಭಾಷೆಯಲ್ಲೂ ಹೀಗೆ ಮುಂದುವರೆದಿದ್ದರೆ, ₹125 ಕೋಟಿಯ ಗಡಿಯನ್ನು ಆರಾಮಾಗಿ ದಾಟುತ್ತಿತ್ತು. ಇಲ್ಲಿವರೆಗೂ ಎಷ್ಟು ಕಲೆಕ್ಷನ್ ಆಗಿದೆ ಎಂದು ನೋಡುವುದಾರೇ,

ಭಾರತದ ಕಲೆಕ್ಷನ್- ₹85.32 ಕೋಟಿ (Net)
ಓವರ್ ಸೀಸ್ ಕಲೆಕ್ಷನ್- ₹14.15 ಕೋಟಿ
ವಿಶ್ವದಾದ್ಯಂತ ಕಲೆಕ್ಷನ್- 113.37 ಕೋಟಿ (Gross)

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

More from Filmibeat

English summary
Raj B Shetty produced Kannada movie Su From So continues its blockbuster run. On Day 31, the film saw another weekend boost in India and pushing its worldwide gross past ₹113 crore. Check box office report, verdict, and week-end analysis.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X