Su From So Box Office Day 12: 12ನೇ ದಿನ 'ಸು ಫ್ರಮ್ ಸೋ' ಕಥೆಯೇನು? ಇನ್ನೆಷ್ಟು ದಿನ ಈ ಅಬ್ಬರ?

'ಸು ಫ್ರಮ್ ಸೋ' ಗುಂಗಿನಿಂದ ಜನರು ಹೊರ ಬರೋಕೆ ರೆಡಿನೇ ಇಲ್ಲ ಅನಿಸುತ್ತಿದೆ. ಸಿನಿಮಾ ರಿಲೀಸ್ ಆಗಿ 12 ದಿನಗಳಲಾದರೂ ಕ್ರೇಜ್ ಮಾತ್ರ ಹಾಗೇ ಇದೆ. ರಾಜ್ ಬಿ ಶೆಟ್ಟಿ ನಿರ್ಮಿಸಿರುವ ಈ ಸಿನಿಮಾದ ಕಲೆಕ್ಷನ್ ಕರ್ನಾಟಕ ಬಾಕ್ಸಾಫೀಸ್‌ ಅನ್ನೇ ನಡುಗಿಸಿದೆ. ರಿಲೀಸ್ ಆದಲ್ಲಿಂದ ಇಲ್ಲಿವರೆಗೂ 'ಸು ಫ್ರಮ್ ಸೋ' ಕಲೆಕ್ಷನ್ ಸ್ಯಾಂಡಲ್‌ವುಡ್‌ ಫಿಲ್ಮ್ ಮೇಕರ್ಸ್‌ಗೆ ಅಚ್ಚರಿಯನ್ನು ಮೂಡಿಸುತ್ತಿದೆ. ಕನ್ನಡ ಚಿತ್ರರಂಗ ಮತ್ತೆ ಟ್ರ್ಯಾಕ್‌ಗೆ ಮರಳಿದೆ.

ಕನ್ನಡದಲ್ಲಿ ಉತ್ತಮ ರೆಸ್ಪಾನ್ಸ್ ಸಿಕ್ಕಿದ ಬಳಿಕ 'ಸು ಫ್ರಮ್ ಸೋ' ಸಿನಿಮಾವನ್ನು ವಿದೇಶದಲ್ಲಿಯೂ ರಿಲೀಸ್ ಮಾಡಲಾಗಿದೆ. ಅಮೆರಿಕ, ಕೆನಡಾ ಹಾಗೂ ಜರ್ಮನಿಯಲ್ಲಿ ಈ ಸಿನಿಮಾವನ್ನು ರಿಲೀಸ್ ಮಾಡಲಾಗಿದೆ. ಅಲ್ಲಿಂದಲೂ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಈಗಾಗಲೇ ಮಲಯಾಳಂ ಚಿತ್ರರಂಗಕ್ಕೂ ಲಗ್ಗೆ ಇಟ್ಟಿದೆ. ಅಲ್ಲೂ ಕೂಡ ಪ್ರೇಕ್ಷಕರನ್ನು ಸೆಳೆಯುತ್ತಿದೆ. ಹೀಗಾಗಿ ಎಲ್ಲಿ ನೋಡಿದರೂ 'ಸು ಫ್ರಮ್ ಸೋ' ಬಗ್ಗೆನೇ ಚರ್ಚೆ ಆಗುತ್ತಿದೆ.

Raj B Shetty produced Su From So gain good response in day 12 box office here is the collection report

ಕರ್ನಾಟಕದಲ್ಲಿ ಈ ಸಿನಿಮಾ ರಿಲೀಸ್ ಆಗಿ ಎರಡು ವಾರಗಳಾಗುತ್ತಿದೆ. ಸಾಮಾನ್ಯವಾಗಿ ಮೂರೇ ದಿನಕ್ಕೆ ಸೈಲೆಂಟ್ ಆಗುವ ಜಮಾನದಲ್ಲಿ 'ಸು ಫ್ರಮ್ ಸೋ' 12ನೇ ದಿನವೂ ₹3 ಕೋಟಿ ಮೇಲೆನೇ ಕಲೆಕ್ಷನ್ ಮಾಡಿದೆ. ಈ ಮೂಲಕ 50 ಕೋಟಿ ಕ್ಲಬ್ ಸೇರುವುದಕ್ಕೆ ಇನ್ನೇನು ಕೆಲವೇ ಕೋಟಿಗಳು ಬಾಕಿ ಉಳಿದಿವೆ. ಒಂದು ವೇಳೆ ಇನ್ನೂ ಒಂದು ವಾರ ಹೀಗೆ ಮುಂದುವರೆದರೆ ₹75 ಕೋಟಿ ಕ್ಲಬ್ ಅನ್ನೂ ಸೇರಬಹುದು. ಹಾಗಿದ್ರೆ ಕನ್ನಡ ಹಾಗೂ ಮಲಯಾಳಂ ಭಾಷೆಯಲ್ಲಿ ಈ ಸಿನಿಮಾದ ಕಲೆಕ್ಷನ್ ಎಷ್ಟು ತಿಳಿಯುವುದಕ್ಕೆ ಮುಂದೆ ಓದಿ.


'ಸು ಫ್ರಮ್ ಸೋ' 12ನೇ ದಿನದ ಕಲೆಕ್ಷನ್

ಕನ್ನಡ ಚಿತ್ರರಂಗದ ಮಟ್ಟಿಗೆ 'ಸು ಫ್ರಮ್ ಸೋ' ಜೀವ ಕೊಟ್ಟ ಸಿನಿಮಾ. ಸೋತು ಸೋತು ಸುಣ್ಣವಾಗಿದ್ದ ಸ್ಯಾಂಡಲ್‌ವುಡ್ ಮತ್ತೆ ಹೆಮ್ಮೆಯಿಂದ ಬೀಗುತ್ತಿದೆ. 12ನೇ ದಿನ ಗಳಿಕೆಯಲ್ಲಿ ಡ್ರಾಪ್ ಆಗಿದೆ. ಆದರೆ, ಅದು ಕೇವಲ ಶೇ.8ರಷ್ಟು ಮಾತ್ರ. ಸ್ಯಾಕ್ನಿಲ್ಕ್ ಪ್ರಕಾರ ಈ ಸಿನಿಮಾ 12ನೇ ದಿನ ಕನ್ನಡ ಹಾಗೂ ಮಲಯಾಳಂ ಎರಡೂ ಭಾಷೆಯಿಂದ 3.4 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಇದರಲ್ಲಿ ಕನ್ನಡದ ಪಾಲು 3 ಕೋಟಿ ರೂಪಾಯಿ ಆದರೆ, ಮಲಯಾಳಂ ಪಾಲು 40 ಲಕ್ಷ ರೂಪಾಯಿ.

12 ದಿನಗಳ ಒಟ್ಟು ಕಲೆಕ್ಷನ್ ಎಷ್ಟು?

ಸಿನಿಮಾ ರಿಲೀಸ್ ಆದ ಮೊದಲು ಎರಡು ದಿನ ಬಿಟ್ಟರೆ, ಇನ್ನು 10 ದಿನಗಳು ಸಿನಿಮಾದ ಕಲೆಕ್ಷನ್‌ 3 ಕೋಟಿ ರೂಪಾಯಿಗಿಂತ ಕಮ್ಮಿನೇ ಇಲ್ಲ. ಹೊಸಬರ ಸಿನಿಮಾಗೆ ಈ ಮಟ್ಟಿಗೆ ರೆಸ್ಪಾನ್ಸ್ ಇತ್ತೀಚೆಗೆ ಸಿಕ್ಕಿರಲಿಲ್ಲ. ಒಟ್ಟು 12 ದಿನಗಳಲ್ಲಿ 'ಸು ಫ್ರಮ್ ಸೋ' ₹43 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು ಸ್ಯಾಕ್ನಿಲ್ಕ್ ವರದಿ ಮಾಡಿದೆ.

12 ದಿನಗಳ ಕಲೆಕ್ಷನ್

ಮೊದಲ ದಿನ ₹0.78 ಕೋಟಿ
2ನೇ ದಿನ ₹2.17 ಕೋಟಿ
3ನೇ ದಿನ ₹3.50 ಕೋಟಿ
4ನೇ ದಿನ ₹3.05 ಕೋಟಿ
5ನೇ ದಿನ ₹3.40 ಕೋಟಿ
6ನೇ ದಿನ ₹3.50 ಕೋಟಿ
7ನೇ ದಿನ ₹3.75 ಕೋಟಿ
8ನೇ ದಿನ ₹3.80 ಕೋಟಿ (ಕನ್ನಡ ₹3.7 ಕೋಟಿ+ ಮಲಯಾಳಂ ₹0.05 ಕೋಟಿ)
9ನೇ ದಿನ ₹5.40 ಕೋಟಿ (ಕನ್ನಡ ₹5.2 ಕೋಟಿ+ ಮಲಯಾಳಂ ₹0.20 ಕೋಟಿ)
10ನೇ ದಿನ ₹6.55 ಕೋಟಿ (ಕನ್ನಡ ₹6.15 ಕೋಟಿ+ ಮಲಯಾಳಂ ₹0.40 ಕೋಟಿ)
11ನೇ ದಿನ ₹3.70 ಕೋಟಿ (ಕನ್ನಡ ₹3.30 ಕೋಟಿ+ ಮಲಯಾಳಂ ₹0.20 ಕೋಟಿ)
12ನೇ ದಿನ ₹3.40 ಕೋಟಿ (ಕನ್ನಡ ₹3.00 ಕೋಟಿ+ ಮಲಯಾಳಂ ₹0.40 ಕೋಟಿ)

ಒಟ್ಟು ₹43 ಕೋಟಿ (ಕನ್ನಡ ₹41.65 + ಮಲಯಾಳಂ ₹1.35 ಕೋಟಿ)

Raj B Shetty produced Su From So gain good response in day 12 box office here is the collection report

₹100 ಕೋಟಿ ಕ್ಲಬ್ ಸೇರಬಹುದೇ?

'ಸು ಫ್ರಮ್ ಸೋ' ಸಿನಿಮಾಗೆ ಸಿಗುತ್ತಿರುವ ರೆಸ್ಪಾನ್ಸ್ ನೋಡಿದರೆ, ಇನ್ನು ಎರಡರಿಂದ ಮೂರು ದಿನಗಳಲ್ಲಿ 50 ಕೋಟಿ ರೂಪಾಯಿ ಕ್ಲಬ್ ಸೇರಿಕೊಳ್ಳಲಿದೆ. ಇನ್ನು 10 ಕೋಟಿ ಕ್ಲಬ್ ಸೇರಿತ್ತಾ? ಎನ್ನುವ ಬಗ್ಗೆ ಟ್ರೇಡ್‌ ಎಕ್ಸ್‌ಪರ್ಟ್‌ಗಳು ಅನುಮಾನ ವ್ಯಕ್ತಪಡಿಸಿದ್ದಾರೆ. ಒಂದು ವೇಳೆ ತೆಲುಗು ಹಾಗೂ ಮಲಯಾಳಂ ಭಾಷೆಯಲ್ಲಿ ಕೋಟಿ ಲೆಕ್ಕದಲ್ಲಿ ಕಲೆಕ್ಷನ್ ಮಾಡಿದರೆ, 'ಸು ಫ್ರಮ್ ಸೋ' 100 ಕೋಟಿ ಕ್ಲಬ್ ಸೇರುವುದರಲ್ಲಿ ಅನುಮಾನ ಪಡೆಬೇಕಿಲ್ಲ. ಆದರೆ, ಟ್ರೇಡ್ ಎಕ್ಸ್‌ಪರ್ಟ್‌ಗಳ ಪ್ರಕಾರ ಈ ಸಿನಿಮಾ 75 ಕೋಟಿ ಕಲೆಕ್ಷನ್ ಮಾಡುವುದರಲ್ಲಿ ಅನುಮಾನವಿಲ್ಲ.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

More from Filmibeat

English summary
Raj B Shetty produced Su From So gain good response in day 12 box office here is the collection report.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X