SU from So Box Office Day 15: 15ನೇ 'ಸು ಫ್ರಮ್ ಸೋ' ಕಲೆಕ್ಷನ್ ₹50 ಕೋಟಿ ದಾಟಿತೇ? ತೆಲುಗಿನಲ್ಲಿ ಎಷ್ಟು?

'ಸು ಫ್ರಮ್ ಸೋ' ಕರ್ನಾಟಕದ ಬಾಕ್ಸಾಫೀಸ್‌ನಲ್ಲಿ ಅಬ್ಬರಿಸಿದ ಬಳಿಕ ಈಗ ತೆಲುಗು ಅಂಗಳಕ್ಕೂ ಕಾಲಿಟ್ಟಿದೆ. ಕನ್ನಡ ಸಿನಿಮಾವನ್ನು ತೆಲುಗಿನ ಜನಪ್ರಿಯ ನಿರ್ಮಾಣ ಸಂಸ್ಥೆ ಬಿಡುಗಡೆ ಮಾಡುತ್ತಿದೆ. ಕನ್ನಡದಲ್ಲಿ ಸೂಪರ್ ಹಿಟ್ ಆಗುತ್ತಿದ್ದಂತೆ ಮಲಯಾಳಂ ಹಾಗೂ ತೆಲುಗು ಭಾಷೆಯಲ್ಲಿಯೂ ರಿಲೀಸ್ ಮಾಡುವುದಕ್ಕೆ ರಾಜ್ ಬಿ ಶೆಟ್ಟಿ ಮುಂದಾಗಿದ್ದರು. ಸದ್ಯ ಮಲಯಾಳಂ ಹಾಗೂ ತೆಲುಗು ಭಾಷೆಗಳಲ್ಲಿ ಈ ಸಿನಿಮಾ ಡಬ್ ಆಗಿ ರಿಲೀಸ್ ಆಗಿದೆ.

ನಿನ್ನೆ (ಆಗಸ್ಟ್ 8)ಯಿಂದ 'ಸು ಫ್ರಮ್ ಸೋ' ತೆಲುಗು ವರ್ಷನ್ ರಿಲೀಸ್ ಆಗಿದೆ. ಅಲ್ಲೂ ಕೂಡ ಸಿನಿಮಾಗೆ ಸೂಪರ್‌ ರೆಸ್ಪಾನ್ಸ್ ಸಿಕ್ಕಿದೆ. ಈ ಮಧ್ಯೆ ಕರ್ನಾಟಕದಲ್ಲಿಯೂ 'ಸು ಫ್ರಮ್ ಸೋ' ಮೂರನೇ ವೀಕೆಂಡ್‌ನ ಲಾಭವನ್ನು ಪಡೆದುಕೊಳ್ಳುತ್ತಿದೆ. ಕರ್ನಾಟಕದ ವಿತರಕರ ಪ್ರಕಾರ, ಬುಧವಾರ ಹಾಗೂ ಗುರುವಾರ ಈ ಎರಡು ದಿನ ಬಾಕ್ಸಾಫೀಸ್ ಕಲೆಕ್ಷನ್‌ನಲ್ಲಿ ಕೊಂಚ ಮಟ್ಟಿಗೆ ಇಳಿಕೆ ಕಂಡಿತ್ತು. ಆದ್ರೀಗ ನಿನ್ನೆ ಶುಕ್ರವಾರದಿಂದ (ಆಗಸ್ಟ್ 8) ಮತ್ತೆ ಗಳಿಕೆಯಲ್ಲಿ ಏರಿಕೆಯಾಗಿದೆ.

Raj B Shetty produced Su from So Kannada film day 15 and Telugu day 1 box office collection report

ಒಂದ್ಕಡೆ 'ಸು ಫ್ರಮ್ ಸೋ' ತೆಲುಗು ವರ್ಷನ್ ರಿಲೀಸ್‌ ಆಗಿ ಅಲ್ಲೂ ಒಳ್ಳೆಯ ರೆಸ್ಪಾನ್ಸ್ ಸಿಗುತ್ತಿದೆ. ಇನ್ನೊಂದು ಕಡೆ ಕನ್ನಡ ವರ್ಷನ್ 15ನೇ ದಿನ ಮತ್ತೆ ಏರಿಕೆಯಾಗಿದೆ. ಹಾಗಿದ್ದರೆ, 15ನೇ ದಿನ ಈ ಸಿನಿಮಾ ಗಳಿಸಿದ್ದೆಷ್ಟು? ಎಲ್ಲೆಲ್ಲಿ ಹೇಗಿದೆ ರೆಸ್ಪಾನ್ಸ್? ತೆಲುಗು ವರ್ಷನ್ ಮೊದಲ ದಿನದ ಗಳಿಕೆ ಏನು? ಅಲ್ಲಿಗೆ ಹೇಗಿದೆ ಪ್ರತಿಕ್ರಿಯೆ ಅಂತ ತಿಳಿಯುವುದಕ್ಕೆ ಮುಂದೆ ಓದಿ.

15ನೇ ದಿನದ ಕಲೆಕ್ಷನ್ ಎಷ್ಟು?

'ಸು ಫ್ರಮ್ ಸೋ' ಮೊದಲ ದಿನದಿಂದಲೂ ಬಾಕ್ಸಾಫೀಸ್‌ನಲ್ಲಿ ಉತ್ತಮ ಗಳಿಕೆ ಕಾಣುತ್ತಿದೆ. ಸಿನಿಮಾ ಬಿಡುಗಡೆಯಾಗಿ ಮೂರನೇ ವಾರಕ್ಕೆ ಕಾಲಿಟ್ಟಿದ್ದರೂ, ಇನ್ನೂ ಕಲೆಕ್ಷನ್ ಡ್ರಾಪ್ ಆಗಿಲ್ಲ ಅನ್ನೋದು ಕನ್ನಡ ಚಿತ್ರರಂಗಕ್ಕೆ ಖುಷಿ ವಿಚಾರ. 13 ಹಾಗೂ 14ನೇ ದಿನ ರೆಗ್ಯೂಲರ್ ಆಗಿ ಆಗುತ್ತಿದ್ದ ಕಲೆಕ್ಷನ್‌ನಲ್ಲಿ ಹಿನ್ನಡೆಯಾಗಿದ್ದು ಬಿಟ್ಟರೆ, 15ನೇ ದಿನ ಮತ್ತೆ ಅಷ್ಟೇ ಗಳಿಕೆ ಮಾಡಿದೆ. ಸ್ಯಾಕ್ನಿಲ್ಕ್ ಪ್ರಕಾರ, 'ಸು ಫ್ರಮ್ ಸೋ' ಸಿನಿಮಾ 15ನೇ ದಿನ ಬರೋಬ್ಬರಿ ₹3 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.

₹50 ಕೋಟಿ ಕ್ಲಬ್ ಸೇರಿದ 'ಸು ಫ್ರಮ್ ಸೋ'

15ನೇ ದಿನಕ್ಕೆ 'ಸು ಫ್ರಮ್ ಸೋ' 50 ಕೋಟಿ ಕ್ಲಬ್ ಸೇರಿದೆ. ನಿನ್ನೆ (ಆಗಸ್ಟ್ 8) 3 ಕೋಟಿ ರೂಪಾಯಿ ಕಲೆಕ್ಷನ್ ಮಾಡುವ ಮೂಲಕ 50 ಕೋಟಿಯ ಗಡಿದಾಟಿದೆ ಎಂದು ಸ್ಯಾಕ್ನಿಲ್ಕ್ ವರದಿಯಲ್ಲಿ ಹೇಳಿದೆ. ಆದರೆ, ರಾಜ್‌ ಬಿ ಶೆಟ್ಟಿ ಸೇರಿದಂತೆ ಚಿತ್ರತಂಡ ಇನ್ನೂ ಈ ಬಗ್ಗೆ ಅಧಿಕೃತ ಮಾಹಿತಿಯನ್ನು ನೀಡಿಲ್ಲ. ಈ 15 ದಿನಗಳ ಒಟ್ಟು ಕಲೆಕ್ಷನ್ ಎಷ್ಟು ಅಂತ ನೋಡುವುದಾರೇ.

14 ದಿನಗಳ ಕಲೆಕ್ಷನ್

ಮೊದಲ ದಿನ ₹0.78 ಕೋಟಿ
2ನೇ ದಿನ ₹2.17 ಕೋಟಿ
3ನೇ ದಿನ ₹3.50 ಕೋಟಿ
4ನೇ ದಿನ ₹3.05 ಕೋಟಿ
5ನೇ ದಿನ ₹3.40 ಕೋಟಿ
6ನೇ ದಿನ ₹3.50 ಕೋಟಿ
7ನೇ ದಿನ ₹3.75 ಕೋಟಿ
8ನೇ ದಿನ ₹3.80 ಕೋಟಿ (ಕನ್ನಡ ₹3.7 ಕೋಟಿ+ ಮಲಯಾಳಂ ₹0.05 ಕೋಟಿ)
9ನೇ ದಿನ ₹5.40 ಕೋಟಿ (ಕನ್ನಡ ₹5.2 ಕೋಟಿ+ ಮಲಯಾಳಂ ₹0.20 ಕೋಟಿ)
10ನೇ ದಿನ ₹6.55 ಕೋಟಿ (ಕನ್ನಡ ₹6.15 ಕೋಟಿ+ ಮಲಯಾಳಂ ₹0.40 ಕೋಟಿ)
11ನೇ ದಿನ ₹3.70 ಕೋಟಿ (ಕನ್ನಡ ₹3.30 ಕೋಟಿ+ ಮಲಯಾಳಂ ₹0.20 ಕೋಟಿ)
12ನೇ ದಿನ ₹3.40 ಕೋಟಿ (ಕನ್ನಡ ₹3.00 ಕೋಟಿ+ ಮಲಯಾಳಂ ₹0.40 ಕೋಟಿ)
13ನೇ ದಿನ ₹2.80 ಕೋಟಿ (ಕನ್ನಡ ₹2.40 ಕೋಟಿ+ ಮಲಯಾಳಂ ₹0.40 ಕೋಟಿ)
14ನೇ ದಿನ ₹2.25 ಕೋಟಿ (ಕನ್ನಡ ₹1.85 ಕೋಟಿ+ ಮಲಯಾಳಂ ₹0.40 ಕೋಟಿ)
15ನೇ ದಿನ ₹3.00 ಕೋಟಿ
ಒಟ್ಟು ₹51.05 ಕೋಟಿ

Raj B Shetty produced Su from So Kannada film day 15 and Telugu day 1 box office collection report

ತೆಲುಗು ಮೊದಲ ದಿನದ ಕಲೆಕ್ಷನ್

ರಾಜ್ ಬಿ ಶೆಟ್ಟಿ 'ಸು ಫ್ರಮ್ ಸೋ' ಸಿನಿಮಾವನ್ನು ತೆಲುಗಿನಲ್ಲಿ ರಿಲೀಸ್ ಮಾಡಿದ್ದಾರೆ. ಮೊದಲ ದಿನ ತೆಲುಗಿನಲ್ಲೂ ದೊಡ್ಡ ಮಟ್ಟಕ್ಕೆ ಕಲೆಕ್ಷನ್ ಆಗದೇ ಹೋದರೂ, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಿನಿಮಾ ನೋಡಿದವರೆಲ್ಲ ಒಳ್ಳೆಯ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಹೀಗಾಗಿ ವೀಕೆಂಡ್‌ನಲ್ಲಿ ಸಖತ್ ಕಲೆಕ್ಷನ್ ಆಗುವ ಸಾಧ್ಯತೆಯಿದೆ. ಅಂದ್ಹಾಗೆ, ಟಾಲಿವುಡ್ ಮೂಲಗಳ ಪ್ರಕಾರ, ಮೊದಲ ದಿನ ಈ ಸಿನಿಮಾ 2 ಕೋಟಿ ರೂಪಾಯಿ ಕಲೆಕ್ಷನ್ ಮಾಡಿರಬಹುದು ಎಂದು ಅಂದಾಜಿಸಿದ್ದಾರೆ. ಇನ್ನೂ ಅಧಿಕೃತ ಮಾಹಿತಿ ಹೊರ ಬೀಳಬೇಕಿದೆ.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

More from Filmibeat

English summary
Raj B Shetty produced Su from So Kannada film day 15 and Telugu day 1 box office collection report.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X