SU from So Box Office Day 16: 16ನೇ ದಿನವೂ 'ಸು ಫ್ರಮ್ ಸೋ' ರೆಕಾರ್ಡ್ ಬ್ರೇಕಿಂಗ್ ಕಲೆಕ್ಷನ್; ಏನಿದು ಮ್ಯಾಜಿಕ್?

ರಾಜ್ ಬಿ ಶೆಟ್ಟಿ ನಿರ್ಮಾಣ ಮಾಡಿರುವ 'ಸು ಫ್ರಮ್ ಸೋ' ಬಾಕ್ಸಾಫೀಸ್‌ ಕಲೆಕ್ಷನ್ ಸಿನಿಮಾ ಮಂದಿಗೆ ದೊಡ್ಡ ಮಿಸ್ಟರಿಯಾಗಿ ಬಿಟ್ಟಿದೆ. ದಿನದಿಂದ ದಿನಕ್ಕೆ ಗಳಿಕೆ ಏರಿಕೆಯಾಗುತ್ತಿದೆಯೇ ವಿನ: ಕಡಿಮೆಯಾಗುವ ಸೂಚನೆಗಳು ಕಾಣುತ್ತಿಲ್ಲ. ಜೆಪಿ ತುಮಿನಾಡ್ ನಿರ್ದೇಶಿಸಿದ ಸಿನಿಮಾ ಕರ್ನಾಟಕದಲ್ಲಿ ದೊಡ್ಡ ಮಟ್ಟಕ್ಕೆ ಸದ್ದು ಮಾಡುತ್ತಿದೆ. ಬೇರೆ ಭಾಷೆಗಳಲ್ಲೂ ಸಿನಿಮಾ ರಿಲೀಸ್ ಆಗಿದ್ದರಿಂದ ಅಲ್ಲಿಂದಲೂ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ.

ಕಾಮಿಡಿ ಸಿನಿಮಾ 'ಸು ಫ್ರಮ್ ಸೋ' ಜನರು ಚಿತ್ರಮಂದಿರದತ್ತ ಸೆಳೆಯುತ್ತಿದೆ. ಒಳ್ಳೆಯ ಕಂಟೆಂಟ್ ಇಟ್ಟುಕೊಂಡು ಸಿನಿಮಾ ಮಾಡಿದರೆ, ಪ್ರೇಕ್ಷಕರು ಥಿಯೇಟರ್‌ಗೆ ಬರುತ್ತಾರೆ ಅನ್ನೋದನ್ನು ಈ ಸಿನಿಮಾ ಸಾಬೀತು ಮಾಡಿದೆ. ಅದಕ್ಕೆ 16ನೇ ದಿನವೂ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸುತ್ತಿದೆ. ಅದರಲ್ಲೂ ವೀಕೆಂಡ್‌ನಲ್ಲಿ ಈ ಸಿನಿಮಾ ನೋಡುವುದಕ್ಕೆ ಜನರು ತುದಿಗಾಲಲ್ಲಿ ನಿಲ್ಲುತ್ತಾರೆ. ಅಕ್ಷರಶ: ಕಲೆಕ್ಷನ್ ಬಗ್ಗೆ ಈ ಸಿನಿಮಾ ಮಂದಿನೇ ತಲೆಕೆಡಿಸಿಕೊಂಡಿದ್ದಾರೆ.

Raj B Shetty produced Su from So Kannada film day 16 box office collection increased Here is the report

'ಸು ಫ್ರಮ್ ಸೋ' ವಿದೇಶದ ಹಲವು ಭಾಗಗಳಲ್ಲಿ ರಿಲೀಸ್ ಆಗಿದೆ. ಅಲ್ಲಿಂದಲೂ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ. ಮಲಯಾಳಂ ಹಾಗೂ ತೆಲುಗು ಭಾಷೆಗೆ ಡಬ್ ಆಗಿ ಸಿನಿಮಾ ರಿಲೀಸ್ ಆಗಿದ್ದು, ಅಲ್ಲಿಂದ ಪಾಸಿಟಿವ್ ರೆಸ್ಪಾನ್ಸ್ ಸಿಕ್ಕಿದೆ. ಹೀಗಾಗಿ ಕನ್ನಡ ಚಿತ್ರರಂಗಕ್ಕೆ ಹಿಡಿದಿರುವ ಗ್ರಹಣ ಒಂದು ರೀತಿಯಲ್ಲಿ ಕಳೆದಿದೆ ಎಂದೇ ಹೇಳಬಹುದು. ಇನ್ನು 16ನೇ ದಿನದ ಕಲೆಕ್ಷನ್ ರಿಪೋರ್ಟ್ ಏನಿದೆ ಅಂತ ನೋಡುವುದಾರೇ,

16ನೇ ದಾಖಲೆ ಕಲೆಕ್ಷನ್

ಸಾಮಾನ್ಯವಾಗಿ ಮೊದಲ ವಾರ ಕಳೆಯುತ್ತಿದ್ದಂತೆ ಸಿನಿಮಾ ಕಲೆಕ್ಷನ್ ಡ್ರಾಪ್ ಆಗುತ್ತಾ ಹೋಗುತ್ತೆ. ಅದೇ ಸಿನಿಮಾ ಏನಾದರೂ ಪ್ರೇಕ್ಷಕರಿಗೆ ಹಿಡಿಸಿಬಿಟ್ಟರೆ ಈ ಸಿನಿಮಾ ಮೂರನೇ ವಾರವೂ ಕಲೆಕ್ಷನ್ ದುಪ್ಪಟ್ಟು ಆಗುತ್ತೆ. ಬಾಕ್ಸಾಫೀಸ್ ಕಲೆಕ್ಷನ್ ಅನ್ನು ಕಲೆ ಹಾಕುವ ಸ್ಯಾಕ್ನಿಲ್ಕ್ 16ನೇ ದಿನ ಗಳಿಕೆಯನ್ನು ವರದಿ ಮಾಡಿದೆ. ಇದರ ಪ್ರಕಾರ, 'ಸು ಫ್ರಮ್ ಸೋ' ಸಿನಿಮಾ 16ನೇ ದಿನ 5.50 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಇದೂವರೆಗೂ ಈ ಸಿನಿಮಾ ಗಳಿಸಿದ ಎರಡನೇ ಅತೀ ದೊಡ್ಡ ಕಲೆಕ್ಷನ್ ಇದು.

16 ದಿನಗಳಲ್ಲಿ ಗಳಿಸಿದ್ದು ಎಷ್ಟು?

ಸ್ಮಾಲ್ ಬಜೆಟ್ ಸಿನಿಮಾವೊಂದು ಬಾಕ್ಸಾಫೀಸ್‌ನಲ್ಲಿ ಕ್ರೇಜಿ ಕಲೆಕ್ಷನ್ ಮಾಡುತ್ತಿದೆ. ಇದು ಕೇವಲ ಕನ್ನಡಿಗರಿಗಷ್ಟೇ ಅಲ್ಲ. ಪರಭಾಷೆಯ ಸಿನಿಮಾ ಮಂದಿಯಲ್ಲೂ ಅಚ್ಚರಿ ಮೂಡಿಸಿದೆ. ಇನ್ನು ಮೂರನೇ ವಾರದಲ್ಲಿಯೂ ಸದ್ದು ಮಾಡುತ್ತಿರುವುದಕ್ಕೆ ವಿದೇಶದಲ್ಲೂ ಉತ್ತಮ ರೆಸ್ಪಾನ್ಸ್ ಸಿಕ್ಕಿರುವುದಕ್ಕೆ ಕಲೆಕ್ಷನ್‌ನಲ್ಲಿ ಏರಿಕೆಯಾಗಿದೆ ಎಂದು ಅಂದಾಜಿಸಲಾಗುತ್ತಿದೆ. 16 ದಿನಗಳಲ್ಲಿ ಸುಮಾರು ₹56.65 ಕೋಟಿ ಕಲೆಕ್ಷನ್ ಮಾಡಿದೆ.

16 ದಿನಗಳ ಕಲೆಕ್ಷನ್

ಮೊದಲ ದಿನ ₹0.78 ಕೋಟಿ
2ನೇ ದಿನ ₹2.17 ಕೋಟಿ
3ನೇ ದಿನ ₹3.50 ಕೋಟಿ
4ನೇ ದಿನ ₹3.05 ಕೋಟಿ
5ನೇ ದಿನ ₹3.40 ಕೋಟಿ
6ನೇ ದಿನ ₹3.50 ಕೋಟಿ
7ನೇ ದಿನ ₹3.75 ಕೋಟಿ
8ನೇ ದಿನ ₹3.80 ಕೋಟಿ (ಕನ್ನಡ ₹3.7 ಕೋಟಿ+ ಮಲಯಾಳಂ ₹0.05 ಕೋಟಿ)
9ನೇ ದಿನ ₹5.40 ಕೋಟಿ (ಕನ್ನಡ ₹5.2 ಕೋಟಿ+ ಮಲಯಾಳಂ ₹0.20 ಕೋಟಿ)
10ನೇ ದಿನ ₹6.55 ಕೋಟಿ (ಕನ್ನಡ ₹6.15 ಕೋಟಿ+ ಮಲಯಾಳಂ ₹0.40 ಕೋಟಿ)
11ನೇ ದಿನ ₹3.70 ಕೋಟಿ (ಕನ್ನಡ ₹3.30 ಕೋಟಿ+ ಮಲಯಾಳಂ ₹0.20 ಕೋಟಿ)
12ನೇ ದಿನ ₹3.40 ಕೋಟಿ (ಕನ್ನಡ ₹3.00 ಕೋಟಿ+ ಮಲಯಾಳಂ ₹0.40 ಕೋಟಿ)
13ನೇ ದಿನ ₹2.80 ಕೋಟಿ (ಕನ್ನಡ ₹2.40 ಕೋಟಿ+ ಮಲಯಾಳಂ ₹0.40 ಕೋಟಿ)
14ನೇ ದಿನ ₹2.25 ಕೋಟಿ (ಕನ್ನಡ ₹1.85 ಕೋಟಿ+ ಮಲಯಾಳಂ ₹0.40 ಕೋಟಿ)
15ನೇ ದಿನ ₹3.10 ಕೋಟಿ (ಕನ್ನಡ ₹2.55 ಕೋಟಿ+ ಮಲಯಾಳಂ ₹0.40 ಕೋಟಿ+ ತೆಲುಗು 0.15 ಕೋಟಿ)
16ನೇ ದಿನ ₹5.50 ಕೋಟಿ
ಒಟ್ಟು ₹56.65 ಕೋಟಿ

Raj B Shetty produced Su from So Kannada film day 16 box office collection increased Here is the report

ತೆಲುಗು ಬಾಕ್ಸಾಫೀಸ್ ಕಲೆಕ್ಷನ್ ಎಷ್ಟು?

ಈ ವಾರ ತೆಲುಗು ಡಬ್ಬಿಂಗ್ ವರ್ಷನ್ ರಿಲೀಸ್ ಆಗಿದೆ. ಅಲ್ಲೂ ರಿಪೋರ್ಟ್ ಚೆನ್ನಾಗಿದೆ. ಆದರೆ, ನಿರೀಕ್ಷೆ ಮಾಡಿಸಿದಷ್ಟು ಕಲೆಕ್ಷನ್ ಆಗಿಲ್ಲ. ಮೊದಲ ದಿನ ₹15 ಲಕ್ಷ ಕಲೆಕ್ಷನ್ ಮಾಡಿದೆ ಎಂದು ಸ್ಯಾಕ್ನಿಲ್ಕ್ ವರದಿ ಮಾಡಿದೆ. ಎರಡನೇ ದಿನ ₹30 ಲಕ್ಷ ಕಲೆಕ್ಷನ್ ಮಾಡಿರಬಹುದೆಂದು ಅಂದಾಜಿಸಲಾಗಿದೆ. ಒಂದು ವೇಳೆ ತೆಲುಗು ರಾಜ್ಯಗಳಲ್ಲಿ ವೀಕೆಂಡ್‌ನಲ್ಲಿ ಉತ್ತಮ ಗಳಿಕೆ ಆದರೆ, 100 ಕೋಟಿ ಕ್ಲಬ್ ಸೇರಬಹುದು.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

More from Filmibeat

English summary
Raj B Shetty produced Su from So Kannada film day 16 box office collection increased. Here is the report.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X