Su from So Box office Day 5: ಬಾಕ್ಸಾಫೀಸ್‌ನಲ್ಲಿ ತಗ್ಗೋ ಮಾತೇ ಇಲ್ಲ.. 5ನೇ ದಿನ ಬಜೆಟ್‌ನ 5 ಪಟ್ಟು ಕಲೆಕ್ಷನ್!
ಕನ್ನಡದ ಸ್ಮಾಲ್ ಬಜೆಟ್ ಸಿನಿಮಾ 'ಸು ಫ್ರಮ್ ಸೋ' ಬಾಕ್ಸಾಫೀಸ್‌ನಲ್ಲಿ ಚಿಂದಿ ಉಡಾಯಿಸುತ್ತಿದೆ. ರಾಜ್ ಬಿ ಶೆಟ್ಟಿ ನಿರ್ಮಿಸಿರುವ ಈ ಸಿನಿಮಾದ ಕಲೆಕ್ಷನ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆಯೇ ಹೊರತು ಕಡಿಮೆ ಆಗುವ ಮಾತೇ ಇಲ್ಲ. ಈ ಸಿನಿಮಾ ಇಲ್ಲಿವರೆಗೂ ಕಲೆಕ್ಷನ್ ಮಾಡಿದ್ದಕ್ಕಿಂತ 5ನೇ ದಿನ ಅಂದರೆ, ನಿನ್ನೆ (ಜುಲೈ 29) ಅತೀ ಹೆಚ್ಚು ಕಲೆಕ್ಷನ್ ಮಾಡಿದೆ. ಬಾಕ್ಸಾಫೀಸ್ ಅನ್ನು ಕೊಳ್ಳೆ ಹೊಡೆದಿದೆ.
ಕನ್ನಡದ ಸ್ಮಾಲ್ ಬಜೆಟ್ ಸಿನಿಮಾ 'ಸು ಫ್ರಮ್ ಸೋ' ಈ ಮಟ್ಟಿಗೆ ಯಶಸ್ಸು ಕಾಣುತ್ತೆ ಅನ್ನೋ ನಿರೀಕ್ಷೆಯಿರಲಿಲ್ಲ. ಮತ್ತೊಂದು ದೇಸಿ ಸಿನಿಮಾ ದೇಶಾದ್ಯಂತ ಚರ್ಚೆ ಆಗುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಸಿನಿಮಾ ಬಗ್ಗೆನೇ ಟಾಕ್. ಪರಭಾಷೆಯ ಆಡಿಯನ್ಸ್‌ಗೂ ಈ ಸಿನಿಮಾ ಸಿಕ್ಕಾಪಟ್ಟೆ ಇಷ್ಟ ಆಗಿದೆ. ಯುಟ್ಯೂಬ್‌ನಲ್ಲಂತೂ ಕಂಟೆಂಟ್ ಮಾಡಿ ಮಾಡಿ ಪೋಸ್ಟ್ ಮಾಡುತ್ತಿದ್ದಾರೆ.

'ಸು ಫ್ರಮ್ ಸೋ' ಸಿಕ್ಕಿರೋ ರೆಸ್ಪಾನ್ಸ್ ನೋಡಿ ಈಗಾಗಲೇ ಮಲಯಾಳಂಗೆ ಡಬ್ ಮಾಡಲಾಗಿದೆ. ಆಗಸ್ಟ್ 1 ರಿಂದ ಕೇರಳದಲ್ಲಿ ಗ್ರ್ಯಾಂಡ್ ರಿಲೀಸ್ ಆಗುತ್ತಿದೆ. ಇನ್ನು ಹಿಂದಿ ಹಕ್ಕುಗಳು ಹೀಗಾಗಿ ಅನಿಲ್ ತಡಾನಿ ಖರೀದಿ ಮಾಡಿದ್ದಾರೆ. ತೆಲುಗು ಡಬ್ಬಿಂಗ್ ವರ್ಷನ್‌ಗೆ ವಿತರಕರು ಮುಗಿಬೀಳುತ್ತಿದ್ದಾರೆ. 'ಸು ಫ್ರಮ್ ಸೋ' ಎಲ್ಲಾ ಕಡೆಗೆ ಹೊಸ ಕ್ರೇಜ್ ಅನ್ನೇ ಹುಟ್ಟಾಕಿದೆ. ಇದೇ ಬೆನ್ನಲ್ಲೇ 5ನೇ ದಿನ ಅತೀ ಹೆಚ್ಚು ಬಾಕ್ಸಾಫೀಸ್ ಕಲೆಕ್ಷನ್ ಆಗಿದೆ.
5ನೇ ದಿನ ದಾಖಲೆ ಕಲೆಕ್ಷನ್
ಕರ್ನಾಟಕದಲ್ಲಿ 'ಸು ಫ್ರಮ್ ಸೋ' ಕ್ರೇಜ್ ಕಮ್ಮಿಯಾಗಿಲ್ಲ. ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಹೊರತು. ಕಡಿಮೆ ಅಂತೂ ಆಗುತ್ತಿಲ್ಲ. ಕಳೆದ ನಾಲ್ಕು ದಿನಗಳಗೆ ಹೋಲಿಕೆ ಮಾಡಿದರೆ, ಮಂಗಳವಾರ (ಜುಲೈ 30) ವೀಕೆಂಡ್‌ಗಿಂತಲೂ ಅತೀ ಹೆಚ್ಚು ಕಲೆಕ್ಷನ್ ಮಾಡಿದೆ. ಬಾಕ್ಸಾಫೀಸ್ ಕಲೆಕ್ಷನ್ ಅನ್ನು ವರದಿ ಮಾಡುವ ಸ್ಯಾಕ್ನಿಲ್ಕ್ ಪ್ರಕಾರ 5ನೇ ದಿನ ಈ ಸಿನಿಮಾ ಗಳಿಸಿದ್ದು ₹3.88 ಕೋಟಿ. ರಾಜ್ಯ ಮೂಲೆ ಮೂಲೆಯಲ್ಲಿ ಜನರು ಸಿನಿಮಾ ನೋಡಿ ನಕ್ಕು ನಕ್ಕು ಸುಸ್ತಾಗುತ್ತಿದ್ದಾರೆ.
ಒಂದೇ ದಿನ ಬಂತು ಬಂಡವಾಳ
5ನೇ ದಿನದ ಕಲೆಕ್ಷನ್ ನೋಡಿದರೆ, 'ಸು ಫ್ರಮ್ ಸೋ' ಸಿನಿಮಾಗೆ ಹಾಕಿದ ಬಜೆಟ್‌ನ ದುಪ್ಪಟ್ಟು ಹಣವನ್ನು ಕಲೆಕ್ಷನ್ ಮಾಡಿದೆ. ಇಂಡಸ್ಟ್ರಿ ಎಕ್ಸ್‌ಪರ್ಟ್‌ಗಳ ಪ್ರಕಾರ, ಈ ಸಿನಿಮಾವನ್ನು ಒಂದೂವರೆಯಿಂದ ಎರಡು ಕೋಟಿ ರೂಪಾಯಿಯಲ್ಲಿ ನಿರ್ಮಾಣ ಮಾಡಿದ್ದಾರೆ. ಸಿನಿಮಾದ ಪ್ರಚಾರಕ್ಕೂ ಹೆಚ್ಚು ಖರ್ಚು ಮಾಡಿಲ್ಲ. ಹೀಗಾಗಿ ಕೇವಲ 5ನೇ ದಿನದ ಕಲೆಕ್ಷನ್‌ನಲ್ಲಿ ಬಜೆಟ್ ಜೊತೆಗೆ ಲಾಭವನ್ನೂ ಗಳಿಸಿದೆ ಅನ್ನೋದು ಕನ್ನಡ ಚಿತ್ರರಂಗದ ಎಕ್ಸ್‌ಪರ್ಟ್‌ಗಳ ಲೆಕ್ಕಾಚಾರ.
5 ದಿನಗಳಲ್ಲಿ ಗಳಿಸಿದ್ದು ಇಷ್ಟು
'ಸು ಫ್ರಮ್ ಸೋ' ವೀಕೆಂಡ್‌ಗಿಂತಲೂ ವೀಕ್ ಡೇಸ್‌ನಲ್ಲಿ ಹೆಚ್ಚೆಚ್ಚು ಕಲೆಕ್ಷನ್ ಮಾಡುತ್ತಿದೆ. 5ನೇ ದಿನ ಕಲೆಕ್ಷನ್ ನೋಡಿದರೆ, ಇನ್ನೂ 'ಕೂಲಿ' ಸಿನಿಮಾ ರಿಲೀಸ್‌ವರೆಗೂ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡುತ್ತಲೇ ಇರುತ್ತೆ. ಕೇವಲ 5 ದಿನಗಳಲ್ಲಿ ಈ ಸಿನಿಮಾ ₹13.38 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಇನ್ನೆರಡು ವಾರಗಳಲ್ಲಿ ಇಷ್ಟೇ ಕಲೆಕ್ಷನ್ ಆದರೂ ಬಾಕ್ಸಾಫೀಸ್‌ನಲ್ಲಿ ಹೊಸ ದಾಖಲೆ ದೃಷ್ಟಿಯಾದಂತೆ.
ಮೊದಲನೇ ದಿನ ₹0.78 ಕೋಟಿ
2ನೇ ದಿನ ₹2.17 ಕೋಟಿ
3ನೇ ದಿನ ₹3.50 ಕೋಟಿ
4ನೇ ದಿನ ₹3.05 ಕೋಟಿ
5ನೇ ದಿನ ₹3.88 ಕೋಟಿ
ಒಟ್ಟು ₹13.38 ಕೋಟಿ
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications











