Su from So Box office Day 6: ದಿನದಿಂದ ದಿನಕ್ಕೆ ಏರಿಕೆ.. 6ನೇ ₹3 ಕೋಟಿ ದಾಟಿ 'ಸು ಪ್ರಮ್ ಸೋ' ಕಲೆಕ್ಷನ್
ಹೊಸಬರ ಸಿನಿಮಾವೊಂದು ಕರ್ನಾಟಕದಲ್ಲಿ ಸಂಚಲನವನ್ನು ಸೃಷ್ಟಿಸುತ್ತಿದೆ. ರಾಜ್ ಬಿ ಶೆಟ್ಟಿ ನಿರ್ಮಾಣದ 'ಸು ಫ್ರಮ್ ಸೋ' ಸಿನಿಮಾ ಕಲೆಕ್ಷನ್ ಕನ್ನಡ ಫಿಲ್ಮ್ ಮೇಕರ್ಸ್‌ಗೆ ಕಿಕ್ ಕೊಡುತ್ತಿದೆ. ಕಾಮಿಡಿ ಸಿನಿಮಾವೊಂದು ಬಾಕ್ಸಾಫೀಸ್‌ನಲ್ಲಿ ಈ ಮಟ್ಟಿಗೆ ಸದ್ದು ಮಾಡುತ್ತಿರುವುದನ್ನು ಕಂಡು ಸಿನಿಮಾ ಮಂದಿಗೆ ಮರು ಜೀವ ಬಂದಿರೋದು ಮಾತ್ರ ಸುಳ್ಳಲ್ಲ. ಸತತ ಸೋಲುಗಳಿಂದ ಕಂಗೆಟ್ಟಿದ್ದ 'ಸು ಫ್ರಮ್ ಸೋ' ಗಲ್ಲಾಪೆಟ್ಟಿಗೆಯಲ್ಲಿ ಈಗ ಹೊಸ ಇತಿಹಾಸವನ್ನು ಬರೆಯುತ್ತಿದೆ.
'ಸು ಫ್ರಮ್ ಸೋ' ಸಿನಿಮಾ ಬಾಕ್ಸಾಫೀಸ್‌ನಲ್ಲಿ ನಗ್ಗುತ್ತಿರುವ ವೇಗಕ್ಕೆ ಪರಭಾಷೆಯ ಫಿಲ್ಮ್ ಮೇಕರ್ಸ್ ಕಂಗಾಲಾಗಿದ್ದಾರೆ. ಈಗಾಗಲೇ ಬೇರೆ ಬೇರೆ ಭಾಷೆಯಲ್ಲಿ ಈ ಸಿನಿಮಾ ಸದ್ದು ಮಾಡುವುದಕ್ಕೆ ಶುರು ಮಾಡಿದೆ. ನಾಳೆಯಿಂದ (ಆಗಸ್ಟ್ 1) ಬೇರೆ ಬೇರೆ ಭಾಷೆಗಳಲ್ಲಿಯೂ ಈ ಸಿನಿಮಾ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ. ಹೀಗಾಗಿ ಬಾಕ್ಸಾಫೀಸ್‌ನಲ್ಲಿ ಇನ್ನೂ ದೊಡ್ಡ ಕಲೆಕ್ಷನ್ ಆಗುವ ಸಾಧ್ಯತೆಯಿದೆ.

ಸಿನಿಮಾ ರಿಲೀಸ್ ಆದಲ್ಲಿಂದ 'ಸು ಫ್ರಮ್ ಸೋ' ಕಲೆಕ್ಷನ್ ಏರಿಕೆ ಆಗುತ್ತಲೇ ಇದೆ. ವೀಕೆಂಡ್‌ನಲ್ಲಿ ಮಾತ್ರವಲ್ಲದೆ ವೀಕ್‌ಡೇಸ್‌ನಲ್ಲೂ ಅದಕ್ಕಿಂಗ ಹೆಚ್ಚು ಕಲೆಕ್ಷನ್ ಆಗುತ್ತಿರೋದು ಮತ್ತೆ ಕನ್ನಡ ಚಿತ್ರರಂಗಕ್ಕೆ ಹೊಸ ಹುರುಪು ಸಿಕ್ಕಿರೋದಂತೂ ನಿಜ. ಇನ್ನು 5ನೇ ದಿನಕ್ಕೆ ಹೋಲಿಕೆ ಮಾಡಿದರೆ, ಆರನೇ ದಿನ ಇನ್ನೂ ಹೆಚ್ಚು ಕಲೆಕ್ಷನ್ ಆಗಿದೆ ಎಂದು ಟ್ರೇಡ್ ಎಕ್ಸ್‌ಪರ್ಟ್‌ಗಳು ಲೆಕ್ಕ ಹಾಕಿದ್ದಾರೆ. ಹಾಗಿದ್ದರೆ, 6ನೇ ದಿನದ ಕಲೆಕ್ಷನ್ ಎಷ್ಟು?
6ನೇ ದಿನ 'ಸು ಫ್ರಮ್ ಸೋ' ಕಲೆಕ್ಷನ್
ಕರಾವಳಿ ಭಾಗದ ಮತ್ತೊಂದು ಕಥೆ ಪ್ರೇಕ್ಷಕರಿಗೆ ಇಷ್ಟ ಆಗಿದೆ. ಆ ಭಾಗದ ಕಲಾವಿದರೇ ಸೇರಿಕೊಂಡು ಸಿನಿಮಾ ಮಾಡಿದ್ದು ಇನ್ನೊಂದು ಹೈಲೈಟ್. ವೀಕೆಂಡ್‌ನಲ್ಲಿ ಈ ಸಿನಿಮಾ ಕಲೆಕ್ಷನ್ ಮಾಡಿದ್ದಕ್ಕಿಂತ ವೀಕ್ ಡೇಸ್‌ನಲ್ಲಿ ಹೆಚ್ಚು ಕಲೆಕ್ಷನ್ ಮಾಡುತ್ತಿದೆ. 5ನೇ ದಿನಕ್ಕಿಂತ ಹೆಚ್ಚಾಗಿ 6ನೇ ದಿನ ಅತೀ ಹೆಚ್ಚು ಕಲೆಕ್ಷನ್ ಮಾಡಿದೆ. ಸ್ಯಾಕ್ನಿಲ್ಕ್ ಪ್ರಕಾರ ಈ ಸಿನಿಮಾ 6ನೇ ದಿನ ಬರೋಬ್ಬರಿ 3.83 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. 5ನೇ ದಿನಕ್ಕಿಂತಲೂ 6ನೇ ದಿನದ ಕಲೆಕ್ಷನ್ ಏರಿಕೆಯಾಗಿದೆ.
6 ದಿನಗಳ ಒಟ್ಟು ಕಲೆಕ್ಷನ್ ಎಷ್ಟು?
'ಸು ಫ್ರಮ್ ಸೋ' ಕ್ರೇಜ್ ನೋಡುತ್ತಿದ್ದರೆ, ಕರ್ನಾಟಕದಲ್ಲಿ ಇನ್ನೂ ಎರಡು ವಾರ ಈ ಸಿನಿಮಾದ ಹವಾ ಇರುತ್ತೆಂದು ಲೆಕ್ಕಾಚಾರ ಹಾಕುತ್ತಿದ್ದಾರೆ. ಯಾಕಂದ್ರೆ ಕಳೆದ ಆರು ದಿನಗಳಲ್ಲಿ ಈ ಸಿನಿಮಾ ಗಳಿಕೆ ಏರಿಕೆಯಾಗುತ್ತಿದೆಯೇ ಹೊರತು ಇಳಿಕೆಯಾಗುತ್ತಿಲ್ಲ. ಹೀಗಾಗಿ ಎರಡನೇ ವೀಕೆಂಡ್‌ನಲ್ಲಿ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ ಎಂದು ಲೆಕ್ಕ ಹಾಕಲಾಗಿದೆ. ರಜನಿಕಾಂತ್ ಕೂಲಿ ಸಿನಿಮಾ ಬರೋವರೆಗೂ ಈ ಸಿನಿಮಾವನ್ನು ಅಲ್ಲಾಡಿಸುವುದಕ್ಕೆ ಆಗುವುದಿಲ್ಲ ಎಂದು ವಿತರಕರು ಭವಿಷ್ಯ ನುಡಿಯುತ್ತಿದ್ದಾರೆ. ಸದ್ಯ ಆರು ದಿನಗಳಲ್ಲಿ ಈ ಸಿನಿಮಾ 16.74 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ.

ಮೊದಲನೇ ದಿನ ₹0.78 ಕೋಟಿ
2ನೇ ದಿನ ₹2.17 ಕೋಟಿ
3ನೇ ದಿನ ₹3.50 ಕೋಟಿ
4ನೇ ದಿನ ₹3.05 ಕೋಟಿ
5ನೇ ದಿನ ₹3.40 ಕೋಟಿ
6ನೇ ದಿನ ₹3.83 ಕೋಟಿ
ಒಟ್ಟು ₹16.74 ಕೋಟಿ
ಬೇರೆ ಭಾಷೆಯಲ್ಲೂ ರೆಕಾರ್ಡ್ ಮಾಡುತ್ತಾ?
ಈ ಸಿನಿಮಾ ಕರ್ನಾಟಕ ಬಾಕ್ಸಾಫೀಸ್‌ನಲ್ಲಿ ಕಮ್ಮಿ ಅಂದರೂ ಮೂವತ್ತು ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡುವ ಸಾಧ್ಯತೆಯಿದೆ ಎಂದು ಲೆಕ್ಕ ಹಾಕಲಾಗಿದೆ. ಹಾಗೇನಾದರೂ ಆದರೆ, ಅತೀ ಹೆಚ್ಚು ಪ್ರಾಫಿಟ್ ಮಾಡಿದ ಕನ್ನಡ ಸಿನಿಮಾಗಳ ಪಟ್ಟಿ ಸೇರಿಕೊಳ್ಳಲಿದೆ. ಇನ್ನು ಆಗಸ್ಟ್ 1ರಿಂದ ಮಲಯಾಳಂ ಹಾಗೂ ವಿದೇಶದಲ್ಲಿ ರಿಲೀಸ್ ಆಗುತ್ತಿದೆ. ಹೀಗಾಗಿ ಬಾಕ್ಸಾಫೀಸ್‌ನಲ್ಲಿ ಮತ್ತಷ್ಟು ಏರಿಕೆ ಆಗುವ ಸಾಧ್ಯತೆಯಿದೆ.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications











