Su from So Box office Day 7: 7ನೇ ದಿನ ಬಾಕ್ಸಾಫೀಸ್‌ನಲ್ಲಿ ಡ್ರಾಪ್ ಕಂಡ 'ಸು ಫ್ರಮ್ ಸೋ'; ಇಳಿಕೆಯ ಲೆಕ್ಕಾಚಾರವೇನು?

ರಾಜ್‌ ಬಿ ಶೆಟ್ಟಿ ನಿರ್ಮಾಣದ 'ಸು ಫ್ರಮ್ ಸೋ' ಕನ್ನಡ ಚಿತ್ರರಂಗಕ್ಕೆ ಮರುಜೀವವ ಕೊಟ್ಟಿದೆ. ಲೋಕಲ್ ಕಂಟೆಂಟ್ ಇಟ್ಟುಕೊಂಡು ಹೆಣೆದ ಕಥೆ ಬಾಕ್ಸಾಫೀಸ್‌ನಲ್ಲಿ ಗೆಲ್ಲುತ್ತೆ ಅನ್ನೋದನ್ನು ಸಾಬೀತು ಮಾಡಿದೆ. ಕಳೆದ ಒಂದು ವಾರದಿಂದ 'ಸು ಫ್ರಮ್ ಸೋ' ಬಾಕ್ಸಾಫೀಸ್‌ನಲ್ಲಿ ಕೋಟಿ ಲೆಕ್ಕದಲ್ಲಿ ಹಣವನ್ನು ದೋಚಿದೆ. ಆದರೆ, ಅದು 7ನೇ ದಿನ ಮುಂದುವರೆದಿಲ್ಲ. ಕೋಟಿ ರೇಂಜ್‌ನಲ್ಲಿ ಕಲೆಕ್ಷನ್ ಆಗಿದ್ದರೂ, ದೊಡ್ಡ ಮಟ್ಟದಲ್ಲಿ ಡ್ರಾಪ್ ಕಂಡಿದೆ.

ಕರಾವಳಿ ಭಾಗದಲ್ಲಿ ಹೊಸಬರೇ ಸೇರಿಕೊಂಡು ಮಾಡಿದ ಈ ಸಿನಿಮಾ ಪ್ರೇಕ್ಷಕರ ಮನಗೆದ್ದಿದೆ. ಕರ್ನಾಟಕದ ಬಹುತೇಕ ಎಲ್ಲಾ ಭಾಗಗಳಲ್ಲಿಯೂ ಒಳ್ಳೆಯ ಅಭಿಪ್ರಾಯ ಸಿಕ್ಕಿತ್ತು. ಹೀಗಾಗಿ ಕಳೆದ ಆರು ದಿನಗಳೂ 'ಸು ಫ್ರಮ್ ಸೋ' ಗಲ್ಲಾಪಟ್ಟೆಯಲ್ಲಿ ಸೂಪರ್ ಕಲೆಕ್ಷನ್ ಮಾಡಿದೆ. ಆದರೆ, ಏಳನೇ ದಿನ ಶೇ.50ರಷ್ಟು ಇಳಿಕೆ ಕಂಡಿದೆ ಎಂದು ಟ್ರೇಡ್‌ ಎಕ್ಸ್‌ಪರ್ಟ್‌ಗಳು ವರದಿ ಮಾಡಿದ್ದಾರೆ.

Raj B Shetty produced Su from So movie Box office collection day 7 report

ಹಲವು ತಿಂಗಳ ಬಳಿಕ ಕನ್ನಡದ ಸಿನಿಮಾವೊಂದು ವೀಕ್‌ ಡೇಸ್‌ನಲ್ಲೂ ಹೌಸ್‌ಫುಲ್ ಪ್ರದರ್ಶನ ಕಂಡಿತು. ಈ ಕ್ರೇಜ್ ನೋಡಿದ ಬಳಿಕ ಇನ್ನೂ ಎರಡು ವಾರ ಥಿಯೇಟರ್‌ನಲ್ಲಿ ಕಟ್ಟಿಯಾಗಿರುತ್ತೆ ಎಂದು ಸಿನಿಮಾ ಪಂಡಿತರು ಭವಿಷ್ಯ ನುಡಿದಿದ್ದಾರೆ. ಆದರೆ, 7 ದಿನ ಕೊಂಚ ಇಳಿಕೆ ಕಂಡಿದ್ದು, ವೀಕೆಂಡ್‌ನಲ್ಲಿ ಕಲೆಕ್ಷನ್ ಮತ್ತಷ್ಟು ಏರಿಕೆ ಆಗುವ ಎಲ್ಲಾ ಸಾಧ್ಯತೆಗಳೂ ಇವೆ. ಹಾಗಿದ್ದರೆ, 7ನೇ ದಿನದ ಕಲೆಕ್ಷನ್ ಎಷ್ಟು?

7ನೇ ದಿನದ ಕಲೆಕ್ಷನ್ ಎಷ್ಟು?

ದೇಶಾದ್ಯಂತ ಸಂಚಲನ ಸೃಷ್ಟಿಸಿರುವ 'ಸು ಫ್ರಮ್ ಸೋ' ಇಂದಿನಿಂದ ಪರಭಾಷೆಯಲ್ಲಿ ಬಿಡುಗಡೆಯಾಗಿದೆ. ವಿದೇಶದಲ್ಲಿಯೂ ಪ್ರದರ್ಶನ ಕಾಣುತ್ತಿದೆ. ಆದರೆ, 7ನೇ ದಿನವಾದ ನಿನ್ನೆ ಈ ಸಿನಿಮಾದ ಕಲೆಕ್ಷನ್‌ನಲ್ಲಿ ಮೊದಲ ಬಾರಿಗೆ ಇಳಿಕೆ ಕಂಡಿದೆ. ಸ್ಯಾಕ್ನಿಲ್ಕ್ ಪ್ರಕಾರ ಈ ಸಿನಿಮಾ 7ನೇ ದಿನ ಕಲೆಕ್ಷನ್ ಮಾಡಿದ್ದು 1. 22 ಕೋಟಿ ರೂಪಾಯಿ. 6ನೇ ದಿನಕ್ಕೆ ಹೋಲಿಕೆ ಮಾಡಿದರೆ 7ನೇ ದಿನ ಶೇ. 55ಕ್ಕಿಂತಲೂ ಕಡಿಮೆ ಕಲೆಕ್ಷನ್ ಮಾಡಿದೆ. ಹಾಗಂತ ವೀಕ್‌ ಡೇಸ್‌ನಲ್ಲಿ ಇದು ಡಿಸೆಂಟ್ ಕಲೆಕ್ಷನ್ ಅಂತಲೇ ಹೇಳಬಹುದು.

Raj B Shetty produced Su from So movie Box office collection day 7 report

7ನೇ ದಿನ ಎಲ್ಲೆಲ್ಲಿ ಹೇಗಿದೆ ರೆಸ್ಪಾನ್ಸ್?

ಮೊದಲ ದಿನದಿಂದಲೇ 'ಸು ಫ್ರಮ್ ಸೋ'ಗೆ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿತ್ತು. ಟೀಮ್ ಮೊದಲೇ ಬೇರೆ ಬೇರೆ ಜಿಲ್ಲೆಗಳಲ್ಲಿ ಪ್ರೀಮಿಯರ್ ಶೋ ಮಾಡಿದ್ದರಿಂದ ಒಳ್ಳೆಯ ಪಬ್ಲಿಸಿ ಸಿಕ್ಕಿತ್ತು. ಸಿನಿಮಾ ರಿಲೀಸ್ ಆಗಿ 7 ದಿನವಾದರೂ ಈ ಸಿನಿಮಾ ನೋಡುವುದಕ್ಕೆ ಜನರು ಥಿಯೇಟರ್‌ಗೆ ಬರುತ್ತಿದ್ದಾರೆ. ಮಧ್ಯಾಹ್ನ, ಸಂಜೆ ಹಾಗೂ ರಾತ್ರಿ ಶೋಗಳಲ್ಲಿ ಒಳ್ಳೆಯ ರೆಸ್ಪಾನ್ಸ್ ಸಿಗುತ್ತಿವೆ. ಮೈಸೂರು, ಶಿವಮೊಗ್ಗ, ಕುಂದಾಪುರ, ತುಮಕೂರು, ಮಣಿಪಾಲ್, ರಾಯಚೂರು ಹಾಗೂ ಹೈದರಾಬಾದ್‌ನಲ್ಲಿ ರೆಸ್ಪಾನ್ಸ್ ಚೆನ್ನಾಗಿತ್ತು ಎಂದು ಸ್ಯಾಕ್ನಿಲ್ಕ್ ವರದಿ ಮಾಡಿದೆ.

7ನೇ ಡ್ರಾಪ್‌ಗೆ ಕಾರಣವೇನು?

7 ದಿನಗಳಲ್ಲಿ 'ಸು ಫ್ರಮ್ ಸೋ' ಸುಮಾರು 18 ಕೋಟಿ ರೂಪಾಯಿ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ. ವೀಕೆಂಡ್‌ನಲ್ಲಿ ಹೆಚ್ಚು ಕಲೆಕ್ಷನ್ ಆಗುವ ನಿರೀಕ್ಷೆಯಿದೆ. ಇನ್ನು ಆರು ದಿನ ಭರ್ಜರಿ ಕಲೆಕ್ಷನ್ ಮಾಡಿದ್ದ ಸಿನಿಮಾ ಏಳನೇ ದಿನ ಡ್ರಾಪ್ ಕಂಡಿದ್ದಕ್ಕೆ ಕೆಲವು ಕಾರಣಗಳಿವೆ. ಆರಂಭದ ಆರು ದಿನಗಳಲ್ಲಿ ರಾಜ್ಯದ ಪ್ರಮುಖ ಜಿಲ್ಲೆಗಳಲ್ಲಿನ ಜನರು ಥಿಯೇಟರ್‌ಗೆ ನುಗ್ಗಿ ಸಿನಿಮಾ ನೋಡಿದ್ದಾರೆ. ಉತ್ತರ ಕರ್ನಾಟಕ ಭಾಗದಲ್ಲಿ ಸ್ವಲ್ಪ ಕಲೆಕ್ಷನ್‌ನಲ್ಲಿ ಡ್ರಾಪ್ ಕಂಡು ಬಂದಿದೆ. ಆದರೆ, ಇದನ್ನು ಡ್ರಾಪ್ ಅಂತ ಗಣನೆಗೆ ತೆಗೆದುಕೊಳ್ಳುವ ಹಾಗಿಲ್ಲ. ಯಾಕಂದ್ರೆ, ಈ ವೀಕ್‌ ಡೇಸ್‌ನಲ್ಲಿ ಸೂಪರ್‌ಸ್ಟಾರ್ ಸಿನಿಮಾಗಳು ಇಷ್ಟು ಮೊತ್ತ ಕಲೆ ಹಾಕುವಲ್ಲಿ ಪರದಾಡುತ್ತವೆ. ಆದರೆ, ಇದು ಇಂದಿನಿಂದ (ಆಗಸ್ಟ್ 1) ಮತ್ತೆ ಏರಿಕೆಯಾಗುವ ಸಾಧ್ಯತೆಯಿದೆ.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

More from Filmibeat

English summary
Raj B Shetty produced Su from So movie Box office collection day 7 report;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X