Su from So Box office: 25 ದಿನ ಪೂರೈಸಿದ 'ಸು ಫ್ರಮ್ ಸೋ'; ಬಾಕ್ಸಾಫೀಸ್‌ನಲ್ಲಿ ₹100 ಕೋಟಿ..ಕರ್ನಾಟಕದಲ್ಲಿ ಎಷ್ಟು ಕಲೆಕ್ಷನ್?

ಕನ್ನಡ ಚಿತ್ರರಂಗಕ್ಕೆ ಕಷ್ಟದಲ್ಲಿದ್ದಾಗ ನಿರೀಕ್ಷೆಗಳೇ ಇಲ್ಲದೆ ಗ್ರ್ಯಾಂಡ್ ಎಂಟ್ರಿ ಕೊಟ್ಟ ಸಿನಿಮಾ 'ಸು ಫ್ರಮ್ ಸೋ'. ಬಿಗ್ ಸ್ಟಾರ್‌ಕಾಸ್ಟ್ ಇಲ್ಲ. ದೊಡ್ಡ ನಿರ್ದೇಶಕ, ತಂತ್ರಜ್ಞರು ಯಾರೂ ಇಲ್ಲದೆ ನಿರ್ಮಾಣ ಮಾಡಿದ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಹೊಸ ಇತಿಹಾಸವನ್ನೇ ಬರೆದಿದೆ. ಕಳೆದ ಎರಡು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಬರೀ ಸೋಲುಗಳನ್ನೇ ಕಂಡಿದ್ದು ಒಂದು ಬಿಗ್ ಸಕ್ಸಸ್‌ಗಾಗಿ ಚಿತ್ರರಂಗ ಎದುರು ನೋಡುತ್ತಲೇ ಇತ್ತು. ಕೊನೆಗೂ ಅಂತಹದ್ದೊಂದು ಯಶಸ್ಸು ಸಿಕ್ಕೇ ಬಿಟ್ಟಿದೆ.

ಸ್ನೇಹಿತರ ಜೊತೆ ಕೂಡಿ ರಾಜ್ ಬಿ ಶೆಟ್ಟಿ 'ಸು ಫ್ರಮ್ ಸೋ' ಸಿನಿಮಾವನ್ನು ನಿರ್ಮಾಣ ಮಾಡಿದ್ದರು. ಈ ಸಿನಿಮಾದಲ್ಲಿ ಒಂದು ಪಾತ್ರದಲ್ಲಿ ನಟಿಸಿದ್ದರೂ, ಬಿಡುಗಡೆಗೂ ಮುನ್ನ ಹೇಳಿಕೊಂಡಿರಲಿಲ್ಲ. ಸಿನಿಮಾ ಕಂಟೆಂಟ್ ಅನ್ನು ಇಟ್ಟುಕೊಂಡೇ ಥಿಯೇಟರ್‌ಗೆ ನುಗ್ಗಿದ್ದರು. ಒಮ್ಮೆ ಸಿನಿಮಾ ಚಿತ್ರಮಂದಿರಕ್ಕೆ ಎಂಟ್ರಿ ಕೊಡುತ್ತಿದ್ದಂತೆ ಪ್ರೇಕ್ಷಕರಿಂದ ಸಿಕ್ಕಿದ ರೆಸ್ಪಾನ್ಸ್ ನೋಡಿ ಚಿತ್ರತಂಡವೇ ದಂಗಾಗಿ ಹೋಗಿತ್ತು.

Raj B Shetty produced Su from So movie day 25 box office collection report

ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಹೊಸ ಇತಿಹಾಸವನ್ನು ಸೃಷ್ಟಿಸಿದ 'ಸು ಫ್ರಮ್ ಸೋ' 25 ದಿನಗಳನ್ನು ಪೂರೈಸಿದೆ. ಕಳೆದ 25 ದಿನಗಳಿಂದ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಜಗ್ಗದೆ ಮುನ್ನುಗ್ಗುತ್ತಿದೆ. ಮೊದಲ ಮೂರು ವಾರ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದೆ. ಅದರಲ್ಲೂ ವೀಕೆಂಡ್‌ನಲ್ಲಿ 'ಸು ಫ್ರಮ್ ಸೋ' ಕಲೆಕ್ಷನ್ ನೋಡಿ ಚಿತ್ರರಂಗವೇ ಬೆಚ್ಚಿ ಬಿದ್ದಿದೆ. ಹಾಗಿದ್ದರೆ, 25ನೇ ದಿನ ಈ ಸಿನಿಮಾ ಗಳಿಸಿದ್ದೆಷ್ಟು? ಕರ್ನಾಟಕದಲ್ಲಿ ಎಷ್ಟು ಕಲೆಕ್ಷನ್? ತಿಳಿಯುವುದಕ್ಕೆ ಮುಂದೆ ಓದಿ.

25ನೇ ದಿನ 'ಸು ಫ್ರಮ್ ಸೋ' ಕಲೆಕ್ಷನ್

ನಿನ್ನೆ (ಆಗಸ್ಟ್ 18) 'ಸು ಫ್ರಮ್ ಸೋ' ರಿಲೀಸ್ ಆಗಿ 25 ದಿನಗಳನ್ನು ಪೂರೈಸಿದೆ. ಇತ್ತೀಚೆಗೆ ಕನ್ನಡ ಸಿನಿಮಾಗಳು 25 ದಿನಗಳನ್ನು ಪೂರೈಸುವುದೇ ದೊಡ್ಡ ವಿಷಯ ಆಗಿತ್ತು. ಆದರೆ, 25ನೇ ದಿನವೂ 'ಸು ಫ್ರಮ್ ಸೋ' ಕಲೆಕ್ಷನ್ ಉತ್ತಮವಾಗಿದೆ. ಸ್ಯಾಕ್ನಿಲ್ಕ್ ವರದಿ ಪ್ರಕಾರ, 25ನೇ ದಿನ ಮೂರು ಭಾಷೆಗಳಿಂದ ₹96 ಲಕ್ಷ ಕಲೆಕ್ಷನ್ ಮಾಡಿದೆ. ಅದರಲ್ಲಿ ಕನ್ನಡದಲ್ಲಿಯೇ ಹೆಚ್ಚು ಗಳಿಸಿದ್ದು, ಮಲಯಾಳಂ ಹಾಗೂ ತೆಲುಗು ಭಾಷೆಯಲ್ಲಿ ಡ್ರಾಪ್ ಕಾಣಿಸಿಕೊಂಡಿದೆ.

25 ದಿನಗಳ ಒಟ್ಟು ಕಲೆಕ್ಷನ್

'ಸು ಫ್ರಮ್ ಸೋ'ಗೆ 25 ದಿನಗಳಲ್ಲಿ ಕರ್ನಾಟಕದಾದ್ಯಂತ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಕರ್ನಾಟಕ ಎಲ್ಲಾ ಭಾಗಗಳಲ್ಲಿಯೂ ಈ ಸಿನಿಮಾವನ್ನು ನೋಡಿ ಮೆಚ್ಚುಕೊಂಡಿದ್ದಾರೆ. ಬೆಂಗಳೂರು, ಮೈಸೂರು, ಶಿವಮೊಗ್ಗ, ಮಂಗಳೂರು ಸೇರಿದಂತೆ ವಿದೇಶದ ಹಲವು ಏರಿಯಾಗಳಲ್ಲಿ ಈ ಸಿನಿಮಾ ಸಖತ್ ಕಲೆಕ್ಷನ್ ಮಾಡಿದೆ. ಸ್ಯಾಕ್ನಿಲ್ಕ್ ವರದಿ ಪ್ರಕಾರ 25 ದಿನಗಳಲ್ಲಿ ಈ ಸಿನಿಮಾ ವಿಶ್ವದಾದ್ಯಂತ 106.08 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.

Raj B Shetty produced Su from So movie day 25 box office collection report

25 ದಿನಗಳ ಕಲೆಕ್ಷನ್

ಮೊದಲ ದಿನ ₹0.78 ಕೋಟಿ
2ನೇ ದಿನ ₹2.17 ಕೋಟಿ
3ನೇ ದಿನ ₹3.50 ಕೋಟಿ
4ನೇ ದಿನ ₹3.05 ಕೋಟಿ
5ನೇ ದಿನ ₹3.40 ಕೋಟಿ
6ನೇ ದಿನ ₹3.50 ಕೋಟಿ
7ನೇ ದಿನ ₹3.75 ಕೋಟಿ
8ನೇ ದಿನ ₹3.80 ಕೋಟಿ
9ನೇ ದಿನ ₹5.40 ಕೋಟಿ
10ನೇ ದಿನ ₹6.55 ಕೋಟಿ
11ನೇ ದಿನ ₹3.70 ಕೋಟಿ
12ನೇ ದಿನ ₹3.40 ಕೋಟಿ
13ನೇ ದಿನ ₹2.80 ಕೋಟಿ
14ನೇ ದಿನ ₹2.25 ಕೋಟಿ
15ನೇ ದಿನ ₹3.10 ಕೋಟಿ
16ನೇ ದಿನ ₹6.00 ಕೋಟಿ
17ನೇ ದಿನ ₹6.95 ಕೋಟಿ
18ನೇ ದಿನ ₹2.05 ಕೋಟಿ
19ನೇ ದಿನ ₹1.70 ಕೋಟಿ
20ನೇ ದಿನ ₹1.60 ಕೋಟಿ
21ನೇ ದಿನ ₹1.10 ಕೋಟಿ
22ನೇ ದಿನ ₹2.55 ಕೋಟಿ
23ನೇ ದಿನ ₹2.20 ಕೋಟಿ
24ನೇ ದಿನ ₹2.56 ಕೋಟಿ
25ನೇ ದಿನ ₹0.96 ಕೋಟಿ
ಒಟ್ಟು ₹78.82 ಕೋಟಿ (India Net)


ಕನ್ನಡ ವರ್ಷನ್ ಗಳಿಸಿದ್ದೆಷ್ಟು?

'ಸು ಫ್ರಮ್ ಸೋ' ಕನ್ನಡ ವರ್ಷನ್‌ನಿಂದ ಅಧಿಕ ಹಣ ಗಳಿಸಿದೆ. ಸುಮಾರು 72.27 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು ಸ್ಯಾಕ್ನಿಲ್ಕ್ ಅಂಕಿ ಅಂಶಗಳನ್ನು ನೋಡಿದೆ. ಇನ್ನು ಮಲಯಾಳಂ ಭಾಷೆಯಿಂದ 5.27 ಕೋಟಿ ರೂಪಾಯಿ, ತೆಲುಗು ಭಾಷೆಯಿಂದ 1.28 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಭಾರತದಲ್ಲಿ ಈ ಸಿನಿಮಾ ಗಳಿಸಿದ್ದು, ₹78.82 ಕೋಟಿ ಆದರೆ, ವಿದೇಶದಿಂದ ಬಂದಿದ್ದು 14.15 ಕೋಟಿ ರೂಪಾಯಿ.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

More from Filmibeat

English summary
Raj B Shetty produced Su from So movie day 25 box office collection report.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X