Su from So Box office Day 28: ₹125 ಕೋಟಿ ಕ್ಲಬ್ ಸೇರಬಹುದೇ 'ಸು ಫ್ರಮ್ ಸೋ'? 28ನೇ ದಿನ ಹೇಗಿದೆ ಕಲೆಕ್ಷನ್?

ಕನ್ನಡ ಚಿತ್ರರಂಗದ ದಿಕ್ಕನ್ನು ಬದಲಿಸಿದ ಸಿನಿಮಾ 'ಸು ಫ್ರಮ್ ಸೋ' ಬಾಕ್ಸಾಫೀಸ್‌ನಲ್ಲಿ ತನ್ನ ಓಟವನ್ನು ಮುಂದುವರೆಸಿದೆ. 25 ದಿನಗಳನ್ನು ಪೂರೈಸಿದ ಬಳಿಕ ಗಳಿಕೆಯಲ್ಲಿ ಇಳಿಕೆ ಕಾಣುತ್ತಿದ್ದರೂ, ಚಿತ್ರತಂಡಕ್ಕೆ ನಷ್ಟವಿಲ್ಲ. ಯಾಕಂದ್ರೆ ಈಗಾಗಲೇ 'ಸು ಫ್ರಮ್ ಸೋ' ಮೆಗಾ ಬ್ಲಾಕ್‌ಬಸ್ಟರ್ ಅಂತ ಸಾಬೀತಾಗಿದೆ. 'ಹರಿ ಹರ ವೀರ ಮಲ್ಲು', 'ಕೂಲಿ', 'ವಾರ್ 2' ಅಂತಹ ಸೂಪರ್‌ಸ್ಟಾರ್‌ಗಳ ಮುಂದಿನೂ ಜಗ್ಗದೆ ನಿಂತು 'ಕಂಟೆಂಟ್ ಕಿಂಗ್' ಅನ್ನೋದನ್ನು ಪ್ರೂವ್ ಮಾಡಿದೆ.

'ಸು ಫ್ರಮ್ ಸೋ' ಕನ್ನಡದಲ್ಲಿ ದಾಖಲೆ ಕಲೆಕ್ಷನ್ ಮಾಡಿದ ಬಳಿಕ ಮತ್ತೆರಡು ಭಾಷೆಗೆ ಡಬ್ ಮಾಡಲಾಗಿತ್ತು. ಮಲಯಾಳಂ ಹಾಗೂ ತೆಲುಗು ಎರಡೂ ಭಾಷೆಯಲ್ಲಿ ನಿರೀಕ್ಷೆ ಮಾಡಿದಷ್ಟು ಕಲೆಕ್ಷನ್ ಬರಲಿಲ್ಲ. ಮಲಯಾಳಂ ವರ್ಷನ್‌ನಿಂದ ಉತ್ತಮ ಕಲೆಕ್ಷನ್ ಆಗಬಹುದೆಂಬ ನಿರೀಕ್ಷೆಯಿತ್ತು. ಆದ್ರಿಲ್ಲಿ ರಾಜ್‌ ಬಿ ಶೆಟ್ಟಿಯ ಲೆಕ್ಕಾಚಾರ ಕೈಕೊಟ್ಟಿದೆ. ಇನ್ನು ತೆಲುಗಿನಲ್ಲೂ 'ಸು ಫ್ರಮ್ ಸೋ' ಅಷ್ಟೊಂದು ಮೋಡಿ ಮಾಡಿಲ್ಲ.

Raj B Shetty produced Su from So movie day 28 box office collection report

ಮಲಯಾಳಂ ಹಾಗೂ ತೆಲುಗು ವರ್ಷನ್ ಕೈಕೊಟ್ಟರೂ ಕನ್ನಡಿಗರು ಕೈ ಬಿಡಲಿಲ್ಲ. ಸೋತು ಸುಣ್ಣವಾಗಿ ಕನ್ನಡ ಚಿತ್ರರಂಗಕ್ಕೆ ಒಂದು ಮೆಗಾಹಿಟ್ ಸಿನಿಮಾ ಸಿಕ್ಕಿದೆ. 'ಸು ಫ್ರಮ್ ಸೋ' ರಿಲೀಸ್ ಆಗಿ 29ನೇ ದಿನಕ್ಕೆ ಕಾಲಿಟ್ಟಿದೆ. ಮತ್ತೊಂದು ವೀಕೆಂಡ್‌ ಶುರುವಾಗಿದ್ದು, ಮತ್ತೆ ಬಾಕ್ಸಾಫೀಸ್‌ನಲ್ಲಿ ಜಾದು ಮಾಡುವ ನಿರೀಕ್ಷೆಯಿದೆ. ಯಾಕಂದ್ರೆ, ಕರ್ನಾಟಕದಲ್ಲಿ 'ಕೂಲಿ' ಕ್ರೇಜ್ ಕಮ್ಮಿಯಾಗಿದೆ. 'ವಾರ್ 2' ಸದ್ದಡಗಿದೆ. ಇದೆಲ್ಲದಕ್ಕೂ ಮುನ್ನ 28ನೇ ದಿನ ಈ ಸಿನಿಮಾ ಗಳಿಸಿದ್ದೆಷ್ಟು? ಅನ್ನೋದನ್ನು ನೋಡುವುದಕ್ಕೆ ಮುಂದೆ ಓದಿ.


28ನೇ ದಿನ 'ಸು ಫ್ರಮ್ ಸೋ' ಕಲೆಕ್ಷನ್ ಎಷ್ಟು?

ರಾಜ್ ಬಿ ಶೆಟ್ಟಿ ನಿರ್ಮಾಣದ 'ಸು ಫ್ರಮ್ ಸೋ' ರೆಸ್ಪಾನ್ಸ್ ಬಗ್ಗೆ ವಿಶೇಷವಾಗಿ ಹೇಳಬೇಕಿಲ್ಲ. ಆದರೆ, ಸಿನಿಮಾ ರಿಲೀಸ್ ಆಗಿ ಹೆಚ್ಚು ಕಡಿಮೆ ಒಂದು ತಿಂಗಳಾಗುತ್ತಾ ಬರುತ್ತಿದೆ. ಹೀಗಿದ್ದರೂ ಈ ಸಿನಿಮಾದ ಕ್ರೇಜ್ ಕಮ್ಮಿಯಾಗಿಲ್ಲ. ಒಂದೊಂದೇ ದಾಖಲೆಗಳನ್ನು ಮುರಿದು ಮುನ್ನುಗ್ಗುತ್ತಿದೆ. ಸ್ಯಾಕ್ನಿಲ್ಕ್ ಪ್ರಕಾರ, 'ಸು ಫ್ರಮ್ ಸೋ' 28ನೇ ದಿನ ಕನ್ನಡ ವರ್ಷನ್‌ನಿಂದ ₹53 ಲಕ್ಷ ಕಲೆಕ್ಷನ್ ಮಾಡಿದರೆ, ಮಲಯಾಳಂ ಹಾಗೂ ತೆಲುಗು ವರ್ಷನ್‌ನಿಂದ ₹4 ಲಕ್ಷದಂತೆ ಕಲೆಕ್ಷನ್ ಆಗಿದೆ. ಒಟ್ಟು ₹61 ಲಕ್ಷ ಆಗಿದೆ. ಟ್ರೇಡ್‌ ಎಕ್ಸ್‌ಪರ್ಟ್‌ಗಳ ಪ್ರಕಾರ 28ನೇ ದಿನಕ್ಕೆ ಇದು ಒಳ್ಳೆಯ ಕಲೆಕ್ಷನ್ ಎಂದು ಭಾವಿಸಲಾಗಿದೆ.

28 ದಿನಗಳ ಕಲೆಕ್ಷನ್ ಎಷ್ಟು?

ಸೂಪರ್‌ಸ್ಟಾರ್ ಸಿನಿಮಾಗಳಿಗೆ ಜಗ್ಗದೆ ನಿಂತಿದ್ದ 'ಸು ಫ್ರಮ್ ಸೋ' ನಿರ್ಮಾಪಕರಿಗೆ ದೊಡ್ಡ ಸಕ್ಸಸ್ ಸಿಕ್ಕಿದೆ. ಥಿಯೇಟರ್‌ನಲ್ಲಿ ಸಿನಿಮಾ ಒಂದು ವಾರ ಓಡಿದರೆ ಸಾಕು ಎನ್ನುವಂತೆ ಇದ್ದ ಪರಿಸ್ಥಿತಿಯಲ್ಲಿ ನಾಲ್ಕು ವಾರ ಅದ್ಭುತ ಪ್ರದರ್ಶನ ಕಂಡಿತ್ತು. ಪ್ರೇಕ್ಷಕರು ಕೂಡ ಮುಗಿಬಿದ್ದು ಸಿನಿಮಾ ನೋಡಿದ್ದರ ಪರಿಣಾಮ 'ಸು ಫ್ರಮ್ ಸೋ' 28ನೇ ದಿನಕ್ಕೆ 108.49 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಹಾಗೇ ಭಾರತದ ₹80.95 ಕೋಟಿ ಎಂದು ಸ್ಯಾಕ್ನಿಲ್ಕ್ ವರದಿ ಮಾಡಿದೆ.

28 ದಿನಗಳ ಕಲೆಕ್ಷನ್

ಮೊದಲ ದಿನ ₹0.78 ಕೋಟಿ
2ನೇ ದಿನ ₹2.17 ಕೋಟಿ
3ನೇ ದಿನ ₹3.50 ಕೋಟಿ
4ನೇ ದಿನ ₹3.05 ಕೋಟಿ
5ನೇ ದಿನ ₹3.40 ಕೋಟಿ
6ನೇ ದಿನ ₹3.50 ಕೋಟಿ
7ನೇ ದಿನ ₹3.75 ಕೋಟಿ
8ನೇ ದಿನ ₹3.80 ಕೋಟಿ
9ನೇ ದಿನ ₹5.40 ಕೋಟಿ
10ನೇ ದಿನ ₹6.55 ಕೋಟಿ
11ನೇ ದಿನ ₹3.70 ಕೋಟಿ
12ನೇ ದಿನ ₹3.40 ಕೋಟಿ
13ನೇ ದಿನ ₹2.80 ಕೋಟಿ
14ನೇ ದಿನ ₹2.25 ಕೋಟಿ
15ನೇ ದಿನ ₹3.10 ಕೋಟಿ
16ನೇ ದಿನ ₹6.00 ಕೋಟಿ
17ನೇ ದಿನ ₹6.95 ಕೋಟಿ
18ನೇ ದಿನ ₹2.05 ಕೋಟಿ
19ನೇ ದಿನ ₹1.70 ಕೋಟಿ
20ನೇ ದಿನ ₹1.60 ಕೋಟಿ
21ನೇ ದಿನ ₹1.10 ಕೋಟಿ
22ನೇ ದಿನ ₹2.55 ಕೋಟಿ
23ನೇ ದಿನ ₹2.20 ಕೋಟಿ
24ನೇ ದಿನ ₹2.56 ಕೋಟಿ
25ನೇ ದಿನ ₹0.96 ಕೋಟಿ
26ನೇ ದಿನ ₹0.83 ಕೋಟಿ
27ನೇ ದಿನ ₹0.69 ಕೋಟಿ
28ನೇ ದಿನ ₹0.61 ಕೋಟಿ
ಒಟ್ಟು ₹80.95 ಕೋಟಿ (India Net)

Raj B Shetty produced Su from So movie day 28 box office collection report

₹125 ಕೋಟಿ ಕ್ಲಬ್ ಸೇರಬಹುದೇ?

28ನೇ ದಿನಕ್ಕೆ 'ಸು ಫ್ರಮ್ ಸೋ' ಕಲೆಕ್ಷನ್ ಕೋಟಿಯಿಂದ ಲಕ್ಷಕ್ಕೆ ಇಳಿದಿದೆ. ಈ ವೀಕೆಂಡ್‌ನಲ್ಲಿ ಸಿನಿಮಾದ ಕಲೆಕ್ಷನ್ ಮತ್ತೆ ಕೋಟಿ ಲೆಕ್ಕದಲ್ಲಿ ಆದರೆ, 125 ಕೋಟಿ ಕ್ಲಬ್ ಸೇರುವ ಎಲ್ಲಾ ಅವಕಾಶವೂ ಇದೆ. ಆದರೆ, ಸದ್ಯಕ್ಕೆ ಅಂತ ಲಕ್ಷಣ ಕಾಣುತ್ತಿಲ್ಲ. 50 ದಿನ ಪೂರೈಸುವ ಹೊತ್ತಿಗೆ ಈ ಸಿನಿಮಾದ ಕಲೆಕ್ಷನ್ ₹120 ಕೋಟಿ ದಾಖಬಹುದೆಂದು ಅಂದಾಜಿಸಲಾಗಿದೆ. ಮುಂದಿನ ತಿಂಗಳು ಕೂಡ ದೊಡ್ಡ ಸಿನಿಮಾಗಳು ಇಲ್ಲದೇ ಇರುವುದಿಂದ 'ಸು ಫ್ರಮ್ ಸೋ'ಗೆ ಈ ಅವಕಾಶವಿದೆ.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

More from Filmibeat

English summary
Raj B Shetty produced Su from So movie day 28 box office collection report.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X