Su From So Box office: ಕರ್ನಾಟಕದಲ್ಲಿ 8ನೇ ದಿನವೂ ದಾಖಲೆ ಕಲೆಕ್ಷನ್.. ಮಲಯಾಳಂನಲ್ಲಿ ಮೊದಲ ದಿನ ಹೇಗಿದೆ?

ಲೋಕಲ್ ಕಂಟೆಂಟ್ ಇಟ್ಕುಕೊಂಡು ಪ್ರೇಕ್ಷಕರನ್ನು ರಂಜಿಸಲೇಬೇಕು ಎನ್ನುವ ಹಠಕ್ಕೆ ಬಿದ್ದು ಮಾಡಿದ ಸಿನಿಮಾ 'ಸು ಫ್ರಮ್ ಸೋ'. ಕನ್ನಡಿಗರಿಗಷ್ಟೇ ಅಲ್ಲ, ಸ್ವತ: ಸಿನಿಮಾ ಮಂದಿಗೆ ಬಾಕ್ಸಾಫೀಸ್‌ನಲ್ಲಿ ಈ ಮಟ್ಟಿಗೆ ಚಿಂದಿ ಉಡಾಯಿಸಬಹುದೆಂಬ ನಿರೀಕ್ಷೆ ಕೂಡ ಇರಲಿಲ್ಲ. ಆದರೆ, ರಾಜ್ ಬಿ ಶೆಟ್ಟಿ ಸ್ಟ್ರಾಟಜಿ ವರ್ಕ್‌ ಔಟ್ ಆಗಿತ್ತು. ಅಬ್ಬರ ಪ್ರಚಾರ ಮಾಡದೆ, ಸಿನಿಮಾ ಬಿಡುಗಡೆಗೂ ಮುನ್ನವೇ ಕರ್ನಾಟಕದ ಹಲವು ನಗರಗಳಲ್ಲಿ ಪ್ರೀಮಿಯರ್ ಶೋ ಹಾಕಲಾಗಿತ್ತು. ಅಲ್ಲಿಂದ ಬಾಯಿಂದ ಬಾಯಿಗೆ ಸಿನಿಮಾ ಬಗ್ಗೆ ಹರಡಿ, 'ಸು ಫ್ರಮ್ ಸೋ' ಬ್ಲಾಕ್‌ ಬಸ್ಟರ್ ಲಿಸ್ಟ್ ಸೇರಿದೆ.

'ಸು ಫ್ರಮ್ ಸೋ' ಎರಡನೇ ವೀಕೆಂಡ್‌ಗೆ ಕಾಲಿಟ್ಟಿದೆ. ಈ ಸಿನಿಮಾ ಬಿಡುಗಡೆಯಾಗಿ ಇಂದಿಗೆ 9ನೇ ದಿನ. ಕಳೆದ 8 ದಿನಗಳಿಂದ ಕರ್ನಾಟಕದ ಕಲೆಕ್ಷನ್ ಜಗ್ಗುವ ಮತೇ ಇಲ್ಲ. ಸಿನಿಮಾ ಬಾಕ್ಸಾಫೀಸ್‌ನಲ್ಲಿ ಕೋಟಿ ಕೋಟಿ ಕೊಳ್ಳೆ ಹೊಡೆಯುವುದನ್ನು ಮುಂದೆವರೆಸಿದೆ. ಮುಗಿತಿದ್ದ ಚಿತ್ರರಂಗಕ್ಕೆ ಆಸರೆ ಸಿಕ್ಕಂತೆ ಆಗಿದೆ. ರಾಜ್ ಬಿ ಶೆಟ್ಟಿಯ ಲೆಕ್ಕಾಚಾರ ಮತ್ತೆ ಗೆದ್ದಿದೆ. ಸಿನಿಮಾದಲ್ಲಿ ಸಣ್ಣ ಪಾತ್ರದಲ್ಲಿ ನಟಿಸಿದರೂ, ನೆನಪಿನಲ್ಲಿ ಉಳಿಯುವಂತಿದೆ.

Raj B Shetty produced Su From So movie day 8 Karnataka box office collection and day 1 Malayalam

ಅಬ್ಬರದ ಪ್ರಚಾರವಿಲ್ಲದೆ, ದುಬಾರಿ ಆಕ್ಷನ್ ಸೀನ್‌ಗಳು ಇಲ್ಲದೆ, ನೀಟ್ ಅಂಡ್ ಕ್ಲೀನ್ ಸಿನಿಮಾ ಮಾಡಿ ಕನ್ನಡಿಗರ ಮುಂದೆ ಬಂದು ಗೆದ್ದಿದ್ದಾರೆ. ಇನ್ನೊಂದು ಕಡೆ ಮಲಯಾಳಂ ಬಾಕ್ಸಾಫೀಸ್‌ಗೂ ಲಗ್ಗೆ ಇಟ್ಟಿದ್ದಾಗಿದೆ. ಕರ್ನಾಟಕದಲ್ಲಿ 8ನೇ ದಿನವೂ ಓಟ ನಿಂತಿಲ್ಲ. ಗಲ್ಲಾ ಪೆಟ್ಟಿಗೆ ಗಲಗಲ ಎನ್ನುತ್ತಿದೆ. ಹಾಗಿದ್ದರೆ, ಮಲಯಾಳಂ ವರ್ಷನ್‌ಗೂ ಅದೇ ರೆಸ್ಪಾನ್ಸ್ ಸಿಕ್ಕಿದೆಯೇ? ಟ್ರೇಡ್‌ ಎಕ್ಸ್‌ಪರ್ಟ್‌ಗಳ ಲೆಕ್ಕಾಚಾರವೇನು? ತಿಳಿಯುವುದಕ್ಕೆ ಮುಂದೆ ಓದಿ.

'ಸು ಫ್ರಮ್ ಸೋ' 8ನೇ ದಿನದ ಕಲೆಕ್ಷನ್

ಕನ್ನಡಿಗರಿಗೆ 'ಸು ಫ್ರಮ್ ಸೋ' ಸಿಕ್ಕಾಪಟ್ಟೆ ಮನರಂಜನೆ ಕೊಡುತ್ತಿದೆ. 7ನೇ ದಿನ ಕಲೆಕ್ಷನ್ ಡ್ರಾಪ್ ಆಗಿದೆ ಎನ್ನಲಾಗಿತ್ತು. ಆದರೆ, ಸಿನಿಮಾಗಳ ಬಾಕ್ಸಾಫೀಸ್‌ ಟ್ರ್ಯಾಕ್ ಮಾಡುವ ಸ್ಯಾಕ್ನಿಲ್ಕ್ 7ನೇ ದಿನ ಬಾಕ್ಸಾಫೀಸ್‌ ಕಲೆಕ್ಷನ್‌ ಅನ್ನು ತಿದ್ದುಪಡಿ ಮಾಡಿದೆ. ಆರಂಭದಲ್ಲಿ ₹1.22 ಕೋಟಿ ಎಂದು ಹೇಳಲಾಗಿತ್ತಾದರೂ, ಬಳಿಕ ₹3.75 ಕೋಟಿ ಎಂದು ವರದಿ ಮಾಡಿದೆ. ಇನ್ನು 8ನೇ ದಿನವೂ ಕೂಡ ₹3.75 ಕೋಟಿ ಕಲೆಕ್ಷನ್ ಆಗಿದೆ ಎಂದು ಸ್ಯಾಕ್ನಿಲ್ಕ್ ವರದಿ ಮಾಡಿದೆ. ಇದಕ್ಕೆ ಕಾರಣ ನಿನ್ನೆಯಿಂದ (ಆಗಸ್ಟ್ 1) ವಿದೇಶದಲ್ಲೂ ಈ ಸಿನಿಮಾ ರಿಲೀಸ್ ಆಗಿದ್ದು, ಅಲ್ಲಿಂದಲೂ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ ಎನ್ನಲಾಗಿದೆ.

Raj B Shetty produced Su From So movie day 8 Karnataka box office collection and day 1 Malayalam

ಮೊದಲ ದಿನ ಮಲಯಾಳಂ ರೆಸ್ಪಾನ್ಸ್ ಹೇಗಿದೆ?

ಮಲಯಾಳಂ ಮಂದಿಗೆ ರಾಜ್ ಬಿ ಶೆಟ್ಟಿ ಪರಿಚಯವಿದೆ. ಅಲ್ಲದೆ, 'ಸು ಫ್ರಮ್ ಸೋ'ನಲ್ಲಿ ಮಲಯಾಳಂ ಫ್ಲೇವರ್ ಇದೆ ಅನ್ನೋ ಅಭಿಪ್ರಾಯ ಕನ್ನಡಿಗರಿಂದಲೇ ವ್ಯಕ್ತವಾಗಿದ್ದರಿಂದ ಅಲ್ಲೂ ಒಳ್ಳೆಯ ಕಲೆಕ್ಷನ್ ಆಗಬಹುದೆಂಬ ನಿರೀಕ್ಷೆಯಿದೆ. ಮೊದಲ ದಿನ ಸಿನಿಮಾ ನೋಡಿದವರಿಂದ ಒಳ್ಳೆಯ ಅಭಿಪ್ರಾಯ ವ್ಯಕ್ತವಾಗಿದೆ. ಆದರೆ, ಕಲೆಕ್ಷನ್‌ ಹೇಳಿಕೊಳ್ಳುವಂತೇನೂ ಇಲ್ಲ. ಮೊದಲ ದಿನ ಆಗಿದ್ದರಿಂದ ಈ ಸಿನಿಮಾ 5 ಲಕ್ಷ ರೂಪಾಯಿ ಕಲೆಕ್ಷನ್ ಮಾಡಿದೆಯಂದು ಸ್ಯಾಕ್ನಿಲ್ಕ್ ವರದಿಯಲ್ಲಿ ಹೇಳಿದೆ. ವೀಕೆಂಡ್‌ನಲ್ಲಿ ಕಲೆಕ್ಷನ್ ಗಣನೀಯ ಏರಿಕೆ ಕಾಣಬಹುದು.

8 ದಿನಗಳ ಒಟ್ಟು ಕಲೆಕ್ಷನ್ ಎಷ್ಟು?

ಸ್ಯಾಂಡಲ್‌ವುಡ್‌ ಮಟ್ಟಿಗೆ ಈ ಸಿನಿಮಾ ಗಳಿಸಿದ್ದು ದಾಖಲೆ ಕಲೆಕ್ಷನ್. ಯಾಕಂದ್ರೆ, ಕೇವಲ 8 ದಿನಗಳಲ್ಲಿ ಈ ಸಿನಿಮಾ ಗಳಿಸಿದ್ದು ಬರೋಬ್ಬರಿ ₹23.9 ಕೋಟಿ. ಸಿನಿಮಾಗೆ ಅಂತ ಖರ್ಚಾಗಿದ್ದು ₹1.50 ಕೋಟಿಯಿಂದ ₹2 ಕೋಟಿ ಎಂದು ಕನ್ನಡ ಫಿಲ್ಮ್ ಮೇಕರ್ಸ ಅಭಿಪ್ರಾಯ ಪಟ್ಟಿದ್ದಾರೆ. ಹೀಗಾಗಿ ಬಜೆಟ್ ಬಿಟ್ಟು ಸುಮಾರು 20 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದ್ದು, ದೊಡ್ಡ ಸಕ್ಸಸ್ ಎಂದು ಹೇಳಲಾಗುತ್ತಿದೆ. 2ನೇ ವೀಕೆಂಡ್‌ನಲ್ಲೂ ಅದೇ ಜೋಷ್ ಮುಂದುವರೆಯುತ್ತಾ? ನೋಡಬೇಕಿದೆ.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

More from Filmibeat

English summary
Raj B Shetty produced Su From So movie day 8 Karnataka box office collection and day 1 Malayalam;
Read more about: kannada movie raj b shetty
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X