Su From So Box Office: ₹5 ಕೋಟಿ ದಾಟಿದ 9ನೇ ದಿನದ ಕಲೆಕ್ಷನ್; ಮಲಯಾಳಂ ಭಾಷೆಯ ಪಾಲೆಷ್ಟು?

ರಾಜ್ ಬಿ ಶೆಟ್ಟಿ ನಿರ್ಮಾಣದ 'ಸು ಫ್ರಮ್ ಸೋ' ಕರ್ನಾಟಕದ ಬಾಕ್ಸಾಫೀಸ್‌ ಅನ್ನು ಧೂಳಿಪಟ ಮಾಡುತ್ತಿದೆ. ದಿನದಿಂದ ದಿನಕ್ಕೆ ಸ್ಕ್ರೀನ್‌ಗಳ ಸಂಖ್ಯೆನೂ ಏರಿಕೆಯಾಗುತ್ತಿದೆ. ಹಾಗೇ ಕಲೆಕ್ಷನ್‌ ಕೂಡ ದುಪ್ಪಟ್ಟಾಗುತ್ತಿದೆ. ಹೊಸಬರ ಸಿನಿಮಾ ಮತ್ತೆ ಕನ್ನಡ ಸಿನಿಮಾವನ್ನು ಪರಭಾಷೆಗೂ ಹೋಗುವಂತೆ ಮಾಡುತ್ತಿದೆ. ಸದ್ಯ ಸ್ಯಾಂಡಲ್‌ವುಡ್ ಈಗ 'ಕಾಂತಾರ' ಫೀಲಿಂಗ್‌ನಲ್ಲಿದೆ.

'ಸು ಫ್ರಮ್ ಸೋ' ಸೊರಗಿ ಕೈ ಚೆಲ್ಲಿ ಕೂತಿದ್ದ ಸ್ಯಾಂಡಲ್‌ವುಡ್‌ ಫಿಲ್ಮ್‌ಮೇಕರ್‌ಗಳಿಗೆ ಮತ್ತೆ ಧೈರ್ಯ ತುಂಬಿದೆ. ಬಿಗ್ ಬಜೆಟ್ ಸಿನಿಮಾಗಳ ಹಿಂದೆ ಹೋಗದೇ ಕಡಿಮೆ ಬಜೆಟ್‌ನಲ್ಲಿ ಒಳ್ಳೆಯ ಕಂಟೆಂಟ್ ಇರುವ ಸಿನಿಮಾ ಕೊಟ್ಟರೆ, ಜನರು ಥಿಯೇಟರ್‌ಗೆ ಬಂದು ಸಿನಿಮಾ ನೋಡುತ್ತಾರೆ ಅನ್ನೋದನ್ನು 'ಸು ಫ್ರಮ್ ಸೋ' ಪ್ರೂವ್ ಮಾಡಿದ್ದಾಗಿದೆ. ಆರಂಭದಲ್ಲಿ ಕನ್ನಡದಲ್ಲಷ್ಟೇ ರಿಲೀಸ್ ಆಗಿದ್ದ ಸಿನಿಮಾವೀಗ ವಿದೇಶದಲ್ಲೂ ರಿಲೀಸ್ ಆಗಿದ್ದು, ಸಿಕ್ಕಾಪಟ್ಟೆ ಸೌಂಡ್ ಮಾಡುತ್ತಿದೆ.

Raj B Shetty produced Su From So movie day 9 huge box office collection and day 10 prediction

ಈ ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಹೊಸ ಇತಿಹಾಸವನ್ನು ಸೃಷ್ಟಿಸುವತ್ತ ಮುನ್ನುಗುತ್ತಿದೆ. ಮಲಯಾಳಂನಲ್ಲಿ ಈಗಾಗಲೇ ಸಿನಿಮಾ ರಿಲೀಸ್ ಆಗಿದೆ. ಹಾಗೇ ತೆಲುಗು ಹಾಗೂ ಹಿಂದಿ ಭಾಷೆಯಲ್ಲಿಯೂ ಈ ಸಿನಿಮಾ ರಿಲೀಸ್‌ಗೆ ತಯಾರಿ ನಡೆಸುತ್ತಿದೆ. ಕನ್ನಡದಲ್ಲಿ 'ಸು ಫ್ರಮ್ ಸೋ' ಬ್ಲಾಕ್‌ಬಸ್ಟರ್ ಅಂತ ಸಾಬೀತಾಗಿದೆ. ಹಾಗಿದ್ದರೆ, ಮಲಯಾಳಂನಲ್ಲಿ ಹೇಗಿದೆ ರೆಸ್ಪಾನ್ಸ್? 10ನೇ ದಿನದ ಕಲೆಕ್ಷನ್ ಪ್ರಿಡಿಕ್ಷನ್ ಏನು? ತಿಳಿಯುವುದಕ್ಕೆ ಮುಂದೆ ಓದಿ.

9ನೇ ದಿನ 'ಸು ಫ್ರಮ್ ಸೋ' ಕಲೆಕ್ಷನ್

'ಸು ಫ್ರಮ್ ಸೋ' ಬಿಡುಗಡೆಯಾಗಿ ಇಂದಿಗೆ (ಆಗಸ್ಟ್ 3) 10 ದಿನಗಳನ್ನು ಪೂರೈಸಿದೆ. ಅದರಲ್ಲಿ ಕಳೆದ 9 ದಿನಗಳಿಂದ ಬಾಕ್ಸಾಫೀಸ್‌ನಲ್ಲಿ ಒಂದೇ ಒಂದು ದಿನವೂ ಕುಗ್ಗಿಲ್ಲ. ನಿನ್ನೆ (ಆಗಸ್ಟ್ 2) ಈ ಸಿನಿಮಾದ ಕಲೆಕ್ಷನ್ ಪೀಕ್‌ಗೆ ಹೋಗಿದೆ. ಸ್ಯಾಕ್ನಿಲ್ಕ್ ಪ್ರಕಾರ, ಈ ಸಿನಿಮಾ ನಿನ್ನೆ ₹5.4 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಕನ್ನಡದಲ್ಲೇ ₹5.2 ಕೋಟಿ ಕಲೆಕ್ಷನ್ ಮಾಡಿದರೆ, ಮಲಯಾಳಂನಿಂದ ₹20 ಕಲೆಕ್ಷನ್ ಆಗಿದೆ ಎಂದು ಹೇಳಲಾಗುತ್ತಿದೆ.

Raj B Shetty produced Su From So movie day 9 huge box office collection and day 10 prediction

9 ದಿನಗಳಲ್ಲಿ ಎಷ್ಟು ಕೋಟಿ ಕಲೆಕ್ಷನ್?

'ಸು ಫ್ರಮ್ ಸೋ' ಮೊದಲ ವಾರವೇ ₹20 ಕೋಟಿ ಕ್ಲಬ್ ಸೇರಿತ್ತು. ಈಗ ಎರಡನೇ ವಾರವೂ ಯಶಸ್ವಿಯಾಗಿ ಮುನ್ನುಗುತ್ತಿದೆ. ಅದರಲ್ಲೂ ಎರಡನೇ ವೀಕೆಂಡ್‌ನಲ್ಲಿ ಕಲೆಕ್ಷನ್ ದುಪ್ಪಟ್ಟಾಗಿದೆ. ಈ ಸಿನಿಮಾದ ಕ್ರೇಜ್ ಹೀಗೆ ಮುಂದುವರೆದರೆ, ಕಲೆಕ್ಷನ್ 50 ಕೋಟಿ ದಾಟುವ ಎಲ್ಲಾ ಸಾಧ್ಯತೆಗಳೂ ಇವೆ ಎಂಬುವುದು ಟ್ರೇಡ್ ಎಕ್ಸ್‌ಪರ್ಟ್‌ಗಳ ಲೆಕ್ಕಾಚಾರ. ಈಗ 9 ದಿನಗಳಲ್ಲಿ ಕನ್ನಡ ಹಾಗೂ ಮಲಯಾಳಂ ಎರಡೂ ಭಾಷೆಗಳಲ್ಲೂ ಈ ಸಿನಿಮಾ ಗಳಿಸಿದ್ದು, ₹29 ಕೋಟಿ ರೂಪಾಯಿ.

9 ದಿನಗಳ ಕಲೆಕ್ಷನ್

ಮೊದಲ ದಿನ ₹0.78 ಕೋಟಿ
2ನೇ ದಿನ ₹2.17 ಕೋಟಿ
3ನೇ ದಿನ ₹3.50 ಕೋಟಿ
4ನೇ ದಿನ ₹3.05 ಕೋಟಿ
5ನೇ ದಿನ ₹3.40 ಕೋಟಿ
6ನೇ ದಿನ ₹3.50 ಕೋಟಿ
7ನೇ ದಿನ ₹3.75 ಕೋಟಿ
8ನೇ ದಿನ ₹3.80 ಕೋಟಿ (ಕನ್ನಡ 3.7 ಕೋಟಿ+ ಮಲಯಾಳಂ 0.05 ಕೋಟಿ)
9ನೇ ದಿನ ₹5.40 ಕೋಟಿ (ಕನ್ನಡ 5.2 ಕೋಟಿ+ ಮಲಯಾಳಂ 0.20 ಕೋಟಿ)
ಒಟ್ಟು ₹29.35 ಕೋಟಿ

10ನೇ ದಿನದ ಲೆಕ್ಕಾಚಾರವೇನು?

'ಸು ಫ್ರಮ್ ಸೋ' ನಿನ್ನೆ (ಆಗಸ್ಟ್ 2) ಅಂದರೆ, ಶನಿವಾರದ ಕಲೆಕ್ಷನ್ ದಾಖಲೆ ಅಂತಲೇ ಹೇಳಬಹುದು. ಕೇವಲ ಕನ್ನಡ ಭಾಷೆಯಿಂದಲೇ 5.2 ಕೋಟಿ ಕಲೆಕ್ಷನ್ ಆಗಿದ್ದು ಹೊಸ ದಾಖಲೆ. ಇದು ಕರ್ನಾಟಕ ಹಾಗೂ ವಿದೇಶದ ಗಳಿಕೆಯನ್ನೂ ಸೇರಿದೆ. ಹೀಗಾಗಿ 10ನೇ ದಿನವಾದ ಇಂದು (ಆಗಸ್ಟ್ 3) ಕೂಡ ಕಲೆಕ್ಷನ್ ಜೋರಾಗಿದೆ. ಒಂದು ಲೆಕ್ಕಾಚಾರದ ಪ್ರಕಾರ ಇವತ್ತು ಕೂಡ ₹5 ಕೋಟಿ ಮೇಲೆ ಕಲೆಕ್ಷನ್ ಅಗುತ್ತೆ ಎನ್ನಲಾಗುತ್ತಿದೆ.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

More from Filmibeat

English summary
Raj B Shetty produced Su From So movie day 9 huge box office collection and day 10 prediction.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X