Su From So: ಓಟಿಟಿಗೆ ಲಗ್ಗೆ ಇಡುವುದಕ್ಕೂ ಮುನ್ನ 'ಸು ಫ್ರಮ್ ಸೋ' ಕಲೆಕ್ಷನ್ ಏನು? ಯಾವ್ಯಾವ ಥಿಯೇಟರ್‌ನಲ್ಲೆಷ್ಟು?
'ಸು ಫ್ರಮ್ ಸೋ' ಕರ್ನಾಟಕದ ಬಾಕ್ಸಾಫೀಸ್‌ನಲ್ಲಿ ಇತಿಹಾಸ ಸೃಷ್ಟಿಸಿದ ಸಿನಿಮಾ. ಒಂದು ಸ್ಮಾಲ್ ಬಜೆಟ್ ಸಿನಿಮಾ ಈ ಮಟ್ಟಿಗೆ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಬಹುದೆಂಬ ಸಣ್ಣದೊಂದು ಅಂದಾಜು ಕೂಡ ಸಿನಿಮಾ ಮಂದಿಗೆ ಇರಲಿಲ್ಲ. ಥಿಯೇಟರ್‌ಗೆ ಲಗ್ಗೆ ಇಡುತ್ತಿದ್ದಂತೆ ಬಾಕ್ಸಾಫೀಸ್‌ನಲ್ಲಿ ಗದ್ದಲ ಎಬ್ಬಿಸುವುದಕ್ಕೆ ಶುರು ಮಾಡಿತ್ತು. ಇನ್ನೇನು ಸಿನಿಮಾ ಬಿಡುಗಡೆಯಾಗಿ 50 ದಿನಗಳನ್ನೂ ಕೂಡ ಪೂರೈಸಲಿದೆ.
ರಾಜ್ ಬಿ ಶೆಟ್ಟಿ ಹಾಗೂ ಸ್ನೇಹಿತರು ಸೇರಿ ನಿರ್ಮಿಸಿದ 'ಸು ಫ್ರಮ್ ಸೋ' ಸೋಲುಗಳಿಂದ ಸೊರಗಿ ಹೋಗಿದ್ದ ಕನ್ನಡ ಚಿತ್ರರಂಗಕ್ಕೆ ಮತ್ತೊಮ್ಮೆ ಚೈತನ್ಯ ತಂದು ಕೊಟ್ಟಿದೆ. ಈ ಸಿನಿಮಾ ಬಳಿಕ ಒಂದರ ಹಿಂದೊಂದು ಕಂಟೆಂಟ್ ಸಿನಿಮಾಗಳು ಥಿಯೇಟರ್‌ಗೆ ಲಗ್ಗೆ ಇಡುತ್ತಿವೆ. ಇದೇ ವೇಳೆ ಜೆ ಪಿ ತುಮಿನಾಡ್ ನಿರ್ದೇಶನದ ಸಿನಿಮಾ ಓಟಿಟಿಗೆ ಗ್ರ್ಯಾಂಡ್ ಎಂಟ್ರಿ ಕೊಡುವುದಕ್ಕೆ ಸಜ್ಜಾಗಿದೆ.

ಈ ಸಿನಿಮಾ ರಿಲೀಸ್ ಆಗಿ 45 ದಿನಗಳಾಗಿದ್ದರೂ, ಬಾಕ್ಸಾಫೀಸ್‌ನಲ್ಲಿ ಡಿಸೆಂಟ್ ಕಲೆಕ್ಷನ್ ಮಾಡುತ್ತಿದೆ. 44ನೇ ದಿನದ ಬಾಕ್ಸಾಫೀಸ್ ಕಲೆಕ್ಷನ್ ಕೂಡ ಉತ್ತಮವಾಗಿಯೇ ಇದೆ. ಹಾಗಿದ್ದರೆ, ಓಟಿಟಿಗೆ ಲಗ್ಗೆ ಇಡುವುದಕ್ಕೂ ಮುನ್ನ 'ಸು ಫ್ರಮ್ ಸೋ' ಬಾಕ್ಸಾಫೀಸ್‌ನಲ್ಲಿ ಗಳಿಸಿದ್ದು ಎಷ್ಟು? ಯಾವ್ಯಾವ ಚಿತ್ರಮಂದಿರದಲ್ಲಿ ಎಷ್ಟೆಷ್ಟು ಕಲೆಕ್ಷನ್ ಆಗಿದೆ? ಅನ್ನೋ ಲಿಸ್ಟ್ ಅನ್ನು ತಿಳಿಯುವುದಕ್ಕೆ ಮುಂದೆ ಓದಿ.
'ಸು ಫ್ರಮ್ ಸೋ' ಓಟಿಟಿ ಎಂಟ್ರಿ ಯಾವಾಗ?
ರಾಜ್ ಬಿ ಶೆಟ್ಟಿ ನಿರ್ಮಾಣದ 'ಸು ಫ್ರಮ್ ಸೋ' ಸಿನಿಮಾ ಓಟಿಟಿಗೆ ಲಗ್ಗೆ ಇಡುವುದಕ್ಕೆ ಸಜ್ಜಾಗಿದೆ. ಇದೇ ಸೆಪ್ಟೆಂಬರ್ 9ರಂದು ಜಿಯೋ ಹಾಟ್‌ಸ್ಟಾರ್‌ನಲ್ಲಿ ಈ ಸಿನಿಮಾ ಸ್ಟ್ರೀಮಿಂಗ್ ಆಗುತ್ತಿದೆ. ಕನ್ನಡ, ತೆಲುಗು ಹಾಗೂ ಮಲಯಾಳಂ ಭಾಷೆಯಲ್ಲಿ 'ಸು ಫ್ರಮ್ ಸೋ' ಸಿನಿಮಾವನ್ನು ನೋಡಬಹುದು. ಈ ಸಿನಿಮಾ ಕೇವಲ ಥಿಯೇಟರ್‌ನಲ್ಲಷ್ಟೇ ಅಲ್ಲ, ಓಟಿಟಿಗೂ ಒಳ್ಳೆಯ ಮೊತ್ತಕ್ಕೆ ಮಾರಾಟ ಆಗಿದೆ. ಓಟಿಟಿಯ ಮೂರು ಭಾಷೆ ಹಾಗೂ ಸ್ಯಾಟಲೈಟ್ ಹಕ್ಕುಗಳು ಸೇರಿ ₹6.75 ಕೋಟಿಗೆ ಸೇಲ್ ಮಾಡಲಾಗಿದೆ ಎಂದು ಮೂಲಗಳು ರಿವೀಲ್ ಮಾಡಿದ್ದವು. ಓಟಿಟಿ ಪ್ರಿಯರು ಮತ್ತೊಂದು ಈ ಸಿನಿಮಾ ನೋಡುವುದಕ್ಕೆ ಕಾತುರದಿಂದ ಕಾಯುತ್ತಿದ್ದಾರೆ.
44ನೇ ದಿನದ ಕಲೆಕ್ಷನ್ ಎಷ್ಟು?
'ಸು ಫ್ರಮ್ ಸೋ' ಸಿನಿಮಾ 44ನೇ ದಿನವೂ ಕಲೆಕ್ಷನ್ ಉತ್ತಮ ಅಂತಲೇ ಹೇಳಬಹುದು. ಸ್ಯಾಕ್ನಿಲ್ಕ್ ವರದಿ ಮಾಡಿರುವಂತೆ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ 44ನೇ ದಿನ ಕರ್ನಾಟಕದಲ್ಲಿ 22 ಲಕ್ಷ ರೂಪಾಯಿ ಕಲೆಕ್ಷನ್ ಮಾಡಿದೆ. ಈಗಾಗಲೇ ಸ್ಕ್ರೀನ್‌ಗಳ ಸಂಖ್ಯೆ ಕಡಿಮೆ ಆಗಿದ್ದರೂ ಈ ಕಲೆಕ್ಷನ್ ಉತ್ತಮವೆಂದೇ ಟ್ರೇಡ್ ಎಕ್ಸ್‌ಪರ್ಟ್‌ಗಳು ಹೇಳುತ್ತಿದ್ದಾರೆ. ಈ 44 ದಿನಗಳಲ್ಲಿ 'ಸು ಫ್ರಮ್ ಸೋ' ಭಾರತದಲ್ಲಿ ಮೂರು ಭಾಷೆಗಳಿಂದ ₹91.38 ಕೋಟಿ (Net) ಕಲೆಕ್ಷನ್ ಮಾಡಿದ್ದರೆ, ವಿಶ್ವದಾದ್ಯಂತ ₹121.78 ಕೋಟಿ ಕಲೆಕ್ಷನ್ ಮಾಡಿದೆ.

ಕರ್ನಾಟಕ ಕೆಲ ಥಿಯೇಟರ್‌ಗಳ ಕಲೆಕ್ಷನ್
'ಸು ಫ್ರಮ್ ಸೋ' ಸಿನಿಮಾದಿಂದ ಕರ್ನಾಟಕದ ಸಿಂಗಲ್ ಸ್ಕ್ರೀನ್ ಹಾಗೂ ಮಲ್ಟಿಪ್ಲೆಕ್ಸ್‌ನಲ್ಲಿ ಭರ್ಜರಿ ಕಲೆಕ್ಷನ್ ಆಗಿದೆ. ಕೆಲವು ಸಿಂಗಲ್ ಸ್ಕ್ರೀನ್‌ಗಳಂತೂ ಈ ಸಿನಿಮಾಗಳಿಂದ ಮತ್ತೆ ಮರುಜೀವ ಪಡೆದುಕೊಂಡಿದೆ. ಅಂತಹ ಕೆಲವು ಥಿಯೇಟರ್‌ಗಳ ಕಲೆಕ್ಷನ್ ರಿಪೋರ್ಟ್ ಇಲ್ಲಿದೆ. ಇದು ವಿತರಕರ ವಲಯದಲ್ಲಿ ಹರಿದಾಡುತ್ತಿರುವ ಕಲೆಕ್ಷನ್ ಆಗಿದ್ದು, ಚಿತ್ರತಂಡ ಅಧಿಕೃತವಾಗಿ ಅಂಕಿ ಅಂಶಗಳನ್ನು ಹೊರ ಹಾಕಬೇಕಿದೆ.
ನರ್ತಕಿ (ಬೆಂಗಳೂರು) ₹80 ಲಕ್ಷ
ವೀರೇಶ್ (ಬೆಂಗಳೂರು) ₹90 ಲಕ್ಷ
ಮಾರುತಿ (ತುಮಕೂರು) ₹47 ಲಕ್ಷ
ಮಲ್ಟಿಪ್ಲೆಕ್ಸ್ (ತುಮಕೂರು) ₹70 ಲಕ್ಷ
ಮಹಾವೀರ್ (ಮಂಡ್ಯ) ₹44 ಲಕ್ಷ
ಶ್ರೀಗುರು (ಹಾಸನ) ₹70 ಲಕ್ಷ
ಸುಚಿತ್ರ (ಮಂಗಳೂರು) ₹40 ಲಕ್ಷ
ಮಲ್ಟಿಪ್ಲೆಕ್ಸ್ (ಮಂಗಳೂರು) ₹1.70 ಕೋಟಿ
ಮಲ್ಟಿಪ್ಲೆಕ್ಸ್ (ಉಡುಪಿ) ₹1.25 ಕೋಟಿ
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications











