Su From So Box Office Day 11: ತಗ್ಗೋ ಮಾತೇ ಇಲ್ಲ.. 11ನೇ ದಿನವೂ ಬಂತು 6ನೇ ದಿನದ ಕಲೆಕ್ಷನ್!
'ಸು ಫ್ರಮ್ ಸೋ' ಆಟ ಇನ್ನೂ ನಿಂತಿಲ್ಲ. ಹೊಸ ಪ್ರತಿಭೆಗಳ ಈ ಸಿನಿಮಾ ಕರ್ನಾಟಕ ಬಾಕ್ಸಾಫೀಸ್ ಅನ್ನೇ ಶೇಕ್ ಮಾಡಿದೆ. ಮೊದಲ ಸೋಮವಾರವೇ ಬಾಕ್ಸಾಫೀಸ್‌ನಲ್ಲಿ ಶೇಕ್ ಆಗುವ ಸಿನಿಮಾಗಳನ್ನು ನೋಡಿರುವ ಸಿನಿಮಾ ಮಂದಿಗೆ ಅಚ್ಚರಿಯಾಗಿದೆ. ಯಾಕಂದ್ರೆ 2ನೇ ಸೋಮವಾರವೂ 'ಸು ಫ್ರಮ್ ಸೋ' ಬಾಕ್ಸಾಫೀಸ್‌ನಲ್ಲಿ ಅಲ್ಲಾಡುತ್ತಿಲ್ಲ. ಯಾವುದೇ ಸಿನಿಮಾ ಬಂದರೂ ಏನೂ ವ್ಯತ್ಯಾಸವೇ ಆಗುತ್ತಿಲ್ಲ.
ರಾಜ್ ಬಿ ಶೆಟ್ಟಿ ತನ್ನ ವೃತ್ತಿ ಬದುಕಿನಲ್ಲಿ ನಟಿಸಿದ ಸಿನಿಮಾಗಿಂತ ನಿರ್ಮಾಣ ಮಾಡಿದ ಚಿತ್ರವೇ ಅತೀ ಕಲೆಕ್ಷನ್ ಮಾಡಿದೆ. 'ಸು ಫ್ರಮ್ ಸೋ' 11ನೇ ದಿನವೂ ಬಾಕ್ಸಾಫೀಸ್‌ನಲ್ಲಿ ಕಲೆಕ್ಷನ್ ಕೋಟಿಗಳ ಲೆಕ್ಕದಲ್ಲಿಯೇ ಕಲೆಕ್ಷನ್ ಮಾಡಿದೆ. ಇದು ಕನ್ನಡ ಚಿತ್ರರಂಗಕ್ಕೆ ಮತ್ತೆ ಹೊಸ ಹುರುಪು ಕೊಟ್ಟಿದೆ. ಕಳೆದ ಎರಡು ಮೂರು ವರ್ಷಗಳಿಂದ ಹಿಂತಿರುಗಿ ನೋಡದವರನ್ನೂ ಬೆಚ್ಚಿ ಬೀಳಿಸಿರುವುದಂತೂ ಸತ್ಯ.

ಈ ಸಿನಿಮಾಗೆ ವೀಕೆಂಡ್ ಯಾವುದು? ವೀಕ್‌ಡೇಸ್ ಯಾವುದು? ಅನ್ನೋದೆ ಗೊತ್ತಿಲ್ಲ. ಹಾಗೇ ಚಿತ್ರಮಂದಿರಕ್ಕೆ ನುಗ್ಗಿ ಸಿನಿಮಾವನ್ನು ನೋಡುತ್ತಿದ್ದಾರೆ. ಹಾಗಿದ್ದರೆ, 11ನೇ ದಿನ 'ಸು ಫ್ರಮ್ ಸೋ' ಗಳಿಸಿದ್ದೆಷ್ಟು? ಈ 11 ದಿನಗಳ ಒಟ್ಟು ಕಲೆಕ್ಷನ್ ಎಷ್ಟು? ಮಲಯಾಳಂನಲ್ಲಿ 'ಸು ಫ್ರಮ್ ಸೋ'ಗೆ ಹೇಗಿದೆ ರೆಸ್ಪಾನ್ಸ್? ತಿಳಿಯುವುದಕ್ಕೆ ಮುಂದೆ ಓದಿ.
11ನೇ ದಿನ 'ಸು ಫ್ರಮ್ ಸೋ' ಕಲೆಕ್ಷನ್
2ನೇ ಸೋಮವಾರದ ಪರೀಕ್ಷೆಯಲ್ಲೂ ರಾಜ್ ಬಿ ಶೆಟ್ಟಿ ನಿರ್ಮಾಣದ 'ಸು ಫ್ರಮ್ ಸೋ' ಸಿನಿಮಾ ಡಿಸ್ಟಿಂಕ್ಷನ್‌ನಲ್ಲಿ ಪಾಸ್ ಆಗಿದೆ. ಮೊದಲ ದಿನ ಬಿಟ್ಟು, ಕಳೆದ 10 ದಿನಗಳಿಂದ ಈ ಸಿನಿಮಾದ ಕಲೆಕ್ಷನ್ ಕೋಟಿ ದಾಟಿದೆ. ಸ್ಯಾಕ್ನಿಲ್ಕ್ ನೀಡಿದ ವರದಿ ಪ್ರಕಾರ, 'ಸು ಫ್ರಮ್ ಸೋ' ಕಲೆಕ್ಷನ್ ಕನ್ನಡ ಫಿಲ್ಮ್ ಮೇಕರ್ಸ್ ನಿದ್ದೆ ಕೆಡಿಸುತ್ತಿರೋದಂತೂ ಸತ್ಯ. ಈ ವರದಿ ಪ್ರಕಾರ 11ನೇ ದಿನ 'ಸು ಫ್ರಮ್ ಸೋ' ₹3.50 ಕೋಟಿ ಕಲೆಕ್ಷನ್ ಮಾಡಿದೆ. ಇದು ಆರಂಭದಲ್ಲಿ ಹಾಕಿದ ಲೆಕ್ಕಾಚಾರ ಆಗಿದ್ದು, ಈ ಅಂಕಿ ಸಂಖ್ಯೆಗಳಲ್ಲಿ ಏರಿಳಿತಗಳಾಗುವ ಸಾಧ್ಯತೆಯಿದೆ.
11 ದಿನಗಳ ಒಟ್ಟು ಕಲೆಕ್ಷನ್ ಎಷ್ಟು?
'ಸು ಫ್ರಮ್ ಸೋ' ರಿಲೀಸ್ ಆಗಿ 11 ದಿನಗಳಾದರೂ ಕೋಟಿಗಳ ಲೆಕ್ಕದಲ್ಲಿ ನಿರ್ಮಾಪಕ ಜೇಬು ತುಂಬುತ್ತಿದೆ. ಟ್ರೇಡ್ ಎಕ್ಸ್‌ಪರ್ಟ್‌ಗಳ ಪ್ರಕಾರ, 11ನೇ ದಿನವೂ ದೊಡ್ಡ ಮೊತ್ತದ ಕಲೆಕ್ಷನ್ ಆಗುತ್ತಿರುವುದಕ್ಕೆ ವಿದೇಶದಲ್ಲಿ ಸಿನಿಮಾ ರಿಲೀಸ್ ಆಗಿದ್ದೂ ಕೂಡ ಕಾರಣ. ವಿದೇಶದಲ್ಲೂ ಒಳ್ಳೆಯ ರೆಸ್ಪಾನ್ಸ್ ಸಿಗುತ್ತಿದೆ ಎನ್ನಲಾಗಿದೆ. ಒಟ್ಟಾರೆ, 11 ದಿನಗಳಲ್ಲಿ ಈ ಸಿನಿಮಾ ಎಲ್ಲಾ ಕಡೆಯಿಂದನೂ ಕಲೆ ಹಾಕಿದ್ದು ₹39.40 ಕೋಟಿ. ಇದೂ ಕೂಡ ಆರಂಭದ ಲೆಕ್ಕಾಚಾರ ಆಗಿದ್ದು, ಮುಂದಿನ ದಿನಗಳಲ್ಲಿ ಏರಿಕೆಯಾಗುವ ಸಾಧ್ಯತೆಯಿದೆ.
11 ದಿನಗಳ ಕಲೆಕ್ಷನ್
ಮೊದಲ ದಿನ ₹0.78 ಕೋಟಿ
2ನೇ ದಿನ ₹2.17 ಕೋಟಿ
3ನೇ ದಿನ ₹3.50 ಕೋಟಿ
4ನೇ ದಿನ ₹3.05 ಕೋಟಿ
5ನೇ ದಿನ ₹3.40 ಕೋಟಿ
6ನೇ ದಿನ ₹3.50 ಕೋಟಿ
7ನೇ ದಿನ ₹3.75 ಕೋಟಿ
8ನೇ ದಿನ ₹3.80 ಕೋಟಿ (ಕನ್ನಡ 3.7 ಕೋಟಿ+ ಮಲಯಾಳಂ 0.05 ಕೋಟಿ)
9ನೇ ದಿನ ₹5.40 ಕೋಟಿ (ಕನ್ನಡ 5.2 ಕೋಟಿ+ ಮಲಯಾಳಂ 0.20 ಕೋಟಿ)
10ನೇ ದಿನ ₹6.55 ಕೋಟಿ (ಕನ್ನಡ 6.15 ಕೋಟಿ+ ಮಲಯಾಳಂ 0.40 ಕೋಟಿ)
11ನೇ ದಿನ ₹3.50 ಕೋಟಿ (ಕನ್ನಡ 3.30 ಕೋಟಿ+ ಮಲಯಾಳಂ 0.20 ಕೋಟಿ)
ಒಟ್ಟು ₹39.40 ಕೋಟಿ

ಎಲ್ಲಿವರೆಗೂ ಈ ಅಬ್ಬರ?
'ಸು ಫ್ರಮ್ ಸೋ' ಪರಭಾಷೆಯ ಸೂಪರ್‌ಸ್ಟಾರ್‌ಗಳ ಸಿನಿಮಾಗಳನ್ನು ಕ್ಯಾರೇ ಎನ್ನಲಿಲ್ಲ. ಈ ಸಿನಿಮಾ ಜೊತೆ ಕಂಡಿದ್ದ ಪವನ್ ಕಲ್ಯಾಣ್ ಸಿನಿಮಾ 'ಹರಿ ಹರ ವೀರಮಲ್ಲು' ಹೇಳ ಹೆಸರಿಲ್ಲದೆ ಹೋಯ್ತು. ಹಾಗೇ ವಿಜಯ್ ದೇವರಕೊಂಡ ಸಿನಿಮಾ 'ಕಿಂಗ್‌ಡಮ್' ಹೇಳ ಹೆಸರಿಲ್ಲದೆ ಹೋಯ್ತು. ಇನ್ನೇನು ಆಗಸ್ಟ್ 8 ರಿಂದ ತೆಲುಗು ರಾಜ್ಯಗಳಲ್ಲೂ ರಿಲೀಸ್ ಆಗಲಿದೆ. ಆದರೆ, ನಿರೀಕ್ಷೆ ಮಾಡಿದಷ್ಟು ಕಲೆಕ್ಷನ್ ಮಲಯಾಳಂ ವರ್ಷನ್‌ನಿಂದ ಆಗಿಲ್ಲ ಅನ್ನೋದು ಅಚ್ಚರಿ ಮೂಡಿಸಿದೆ.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications











