ಬಾಕ್ಸಾಫೀಸ್‌ನಲ್ಲಿ '777 ಚಾರ್ಲಿ'ಯನ್ನು ಹಿಂದಿಕ್ಕಿದ 'ಸು ಫ್ರಮ್ ಸೋ'; ಈ ಸಿನಿಮಾ ಸೃಷ್ಟಿಸಿದ 3 ದಾಖಲೆಗಳ್ಯಾವುವು?

'ಸು ಫ್ರಮ್ ಸೋ' ಭಾರತೀಯ ಚಿತ್ರರಂಗದಲ್ಲಿ ಹೊಸ ಹೊಸ ದಾಖಲೆಗಳನ್ನು ಬರೆದಿದೆ. ಕನ್ನಡದಲ್ಲಿ ನಿರ್ಮಾಣ ಆಗಿದ್ದ ಈ ಸ್ಮಾಲ್ ಬಜೆಟ್ ಸಿನಿಮಾ ಐದನೇ ವಾರದಲ್ಲೂ ಥಿಯೇಟರ್‌ಗಳಲ್ಲಿ ಗಟ್ಟಿಯಾಗಿ ನಿಂತಿದೆ. ವೀಕೆಂಡ್‌ನಲ್ಲಿ ಸೂಪರ್‌ಸ್ಟಾರ್ ರಜನಿಕಾಂತ್ ಸಿನಿಮಾ 'ಕೂಲಿ', ಹೃತಿಕ್-ಜೂ.ಎನ್‌ಟಿಆರ್‌ 'ವಾರ್ 2' ಅಂತಹ ಸಿನಿಮಾಗಳ ಜೊತೆ ಪೈಪೋಟಿ ಕೊಟ್ಟು ಗೆದ್ದಿದೆ.

ಕನ್ನಡದಲ್ಲಿ ನಿರ್ಮಾಣ ಆಗಿರುವ ಈ ಹೊಸಬರ ಸಿನಿಮಾ 'ಸು ಫ್ರಮ್ ಸೋ' ದೇಶಾದ್ಯಂತ ಇನ್ನೂ ಚರ್ಚೆಯಾಗುತ್ತಿದೆ. ಐದನೇ ವಾರಕ್ಕೆ ಕಾಲಿಟ್ಟಿರುವ 'ಸು ಫ್ರಮ್ ಸೋ' 4ನೇ ವೀಕೆಂಡ್‌ನಲ್ಲೂ ದಾಖಲೆ ಕಲೆಕ್ಷನ್ ಮಾಡಿತ್ತು. ಶನಿವಾರ ಹಾಗೂ ಭಾನುವಾರ 4 ಕೋಟಿ ರೂಪಾಯಿಗೂ ಅಧಿಕ ಗಳಿಕೆ ಕಂಡಿತ್ತು. ಈ ಮೂಲಕ ಇನ್ನೂ ಒಂದು ವಾರ ಥಿಯೇಟರ್‌ನಲ್ಲಿ ಸದ್ದು ಮಾಡುವ ಲಕ್ಷಣಗಳು ಎದ್ದು ಕಾಣುತ್ತಿವೆ.

Raj B Shetty s Su From So Box Office Collection Surpasses Rakshit Shetty s 777 Charlie

ಇತ್ತೀಚೆಗೆ ಕನ್ನಡ ಸಿನಿಮಾಗಳು ಥಿಯೇಟರ್‌ನಲ್ಲಿ ಒಂದೆರಡು ವಾರಕ್ಕೆ ಸೀಮಿತವಾಗಿರುವಾಗ ಬಹಳ ದಿನಗಳ ನಂತರ ಈ ಚಿತ್ರ ಪ್ರಾಮಾಣಿಕವಾಗಿ 50 ದಿನಗಳನ್ನು ಸಂಭ್ರಮಿಸುವತ್ತ ಮುನ್ನುಗುತ್ತಿದೆ. ಹಾಗೇ ಒಂದೊಂದು ದಾಖಲೆಗಳನ್ನು ಬ್ರೇಕ್ ಮಾಡುತ್ತಾ ಮುಂದೆ ಸಾಗುತ್ತಿದೆ. ಸದ್ಯಕ್ಕೀಗ ರಕ್ಷಿತ್ ಶೆಟ್ಟಿಯ '777 ಚಾರ್ಲಿ' ಸಿನಿಮಾದ ಬಾಕ್ಸಾಫೀಸ್ ದಾಖಲೆಯನ್ನು ಹಿಂದಿಕ್ಕಿದೆ. ನೆನಪಿನಲ್ಲಿ ಉಳಿಯುವಂತಹ ಮೂರು ದಾಖಲೆಗಳನ್ನು ಬರೆದಿದೆ. ಅದೇನು ಅಂತ ನೋಡುವುದಾರೇ..

'777 ಚಾರ್ಲಿ' ದಾಖಲೆ ಉಡೀಸ್

'ಸು ಫ್ರಮ್ ಸೋ' ಬಾಕ್ಸಾಫೀಸ್‌ನಲ್ಲಿ ಲೂಟಿ ಮಾಡೋದು ಇನ್ನೂ ನಿಂತಿಲ್ಲ. 5ನೇ ವಾರದಲ್ಲೂ ಉತ್ತಮ ಕಲೆಕ್ಷನ್ ಮಾಡುತ್ತಿದೆ. ಸ್ಯಾಕ್ನಿಲ್ಕ್ ವರದಿ ಪ್ರಕಾರ, 33ನೇ ದಿನದ ವೇಳೆಗೆ ಈ ಸಿನಿಮಾ ಗಲ್ಲಾಪಟ್ಟಿಗೆಯಲ್ಲಿ 115.89 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಈ ಮೂಲಕ ರಕ್ಷಿತ್ ಶೆಟ್ಟಿ ನಟಿಸಿದ '777 ಚಾರ್ಲಿ' ಗಳಿಸಿದ 115 ಕೋಟಿ ರೂಪಾಯಿ ಕಲೆಕ್ಷನ್ ಅನ್ನು ಹಿಂದಿಕ್ಕಿದೆ.

'ಸು ಫ್ರಮ್ ಸೋ' ಬರೆದ ದಾಖಲೆಗಳೇನು?

ರಾಜ್ ಬಿ ಶೆಟ್ಟಿ ನಿರ್ಮಾಣದ 'ಸು ಫ್ರಮ್ ಸೋ' ಕೇವಲ ಬಾಕ್ಸಾಫೀಸ್‌ನಲ್ಲಿ ಕಲೆಕ್ಷನ್ ಅಷ್ಟೇ ಮಾಡಿಲ್ಲ. ಹೊಸ ಹೊಸ ದಾಖಲೆಗಳನ್ನು ಬರೆದಿದೆ. ಅದರಲ್ಲೂ ಈ ಸಿನಿಮಾ ಮಾಡಿದ ಮೂರು ಹೊಸ ದಾಖಲೆಗಳು ಗಮನ ಸೆಳೆದಿವೆ. ಕನ್ನಡ ಚಿತ್ರರಂಗದಲ್ಲಿ ಹೊಸ ಭರವಸೆಯನ್ನು ಮೂಡಿಸಿದ 'ಸು ಫ್ರಮ್ ಸೋ' ಸಿನಿಮಾ ಮಂದಿಗೆ ಮಾದರಿಯಾಗಿದೆ. ಅಷ್ಟಕ್ಕೂ 'ಸು ಫ್ರಮ್ ಸೋ' ಬರೆದ ದಾಖಲೆಗಳೇನು? ಅಂತ ನೋಡುವುದಾರೇ..

Raj B Shetty s Su From So Box Office Collection Surpasses Rakshit Shetty s 777 Charlie

2025ರಲ್ಲಿ ಅತೀ ಹೆಚ್ಚು ಗಳಿಸಿದ ಸಿನಿಮಾ

'ಸು ಫ್ರಮ್ ಸೋ' 2025ರಲ್ಲಿ ಅತೀ ಕಲೆಕ್ಷನ್ ಮಾಡಿದ ಸಿನಿಮಾ ಎನಿಸಿ ಕೊಂಡಿದೆ. ಅದರಲ್ಲೂ ಹೊಸ ಪ್ರತಿಭೆಗಳ ಸಿನಿಮಾ ಬಾಕ್ಸಾಫೀಸ್‌ನಲ್ಲಿ ₹100 ಕೋಟಿ ಕಲೆಕ್ಷನ್ ಮಾಡಿದ ಉದಾಹರಣೆಗಳು ಇಲ್ಲ. ಆ ಸಾಲಿಗೆ 'ಸು ಫ್ರಮ್ ಸೋ' ಸೇರಿಕೊಂಡಿದೆ. ₹115 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿರುವ ಈ ಸಿನಿಮಾ 5ನೇ ವಾರದಲ್ಲಿ ಒಳ್ಳೆಯ ಕಲೆಕ್ಷನ್ ಮಾಡಿದ್ದು ₹125 ಕೋಟಿ ಕ್ಲಬ್ ಸೇರುವತ್ತ ಮುನ್ನುಗ್ಗುತ್ತಿದೆ.

ಅತೀ ಹೆಚ್ಚು ಲಾಭ ಮಾಡಿದ ಸಿನಿಮಾ

ಈ ಸಿನಿಮಾ ಭಾರತೀಯ ಚಿತ್ರರಂಗದ ಇತಿಹಾಸದಲ್ಲಿಯೇ ಅತೀ ಹೆಚ್ಚು ಲಾಭ ಮಾಡಿದ ಸಿನಿಮಾಗಳ ಸಾಲಿಗೆ ಸೇರಿಕೊಂಡಿದೆ. ₹4 ರಿಂದ ₹5 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಈ ಸಿನಿಮಾ ಭಾರತದ ಬಾಕ್ಸಾಫೀಸ್‌ನಲ್ಲಿ ₹86.92 ಕೋಟಿ ರೂಪಾಯಿ ಗಳಿಸಿದೆ. ಕೊಯ್‌ಮೊಯ್‌.ಕಾಮ್ ಲೆಕ್ಕಾಚಾರದ ಪ್ರಕಾರ, ಶೇ.1630.2ರಷ್ಟು ಲಾಭವನ್ನು ಪಡೆದಿದೆ. ಹಾರರ್ ಕಾಮಿಡಿ ಜಾನರ್‌ನಲ್ಲಿ ಅತೀ ಹೆಚ್ಚು ಕಲೆಕ್ಷನ್ ಮಾಡಿರುವ 'ಸ್ತ್ರೀ 2' ಸಿನಿಮಾದ ಲಾಭದ ಪ್ರಮಾಣವನ್ನೂ ಮೀರಿಸಿದೆ.

5ನೇ ಅತೀ ಹೆಚ್ಚು ಗಳಿಸಿದ ಸಿನಿಮಾ

'ಸು ಫ್ರಮ್ ಸೋ' ಕನ್ನಡ ಚಿತ್ರರಂಗದಲ್ಲಿ ಅತೀ ಕಲೆಕ್ಷನ್ ಮಾಡಿದ ಸಿನಿಮಾಗಳಲ್ಲಿ 4ನೇ ಸ್ಥಾನದಲ್ಲಿದೆ. 'ಕೆಜಿಎಫ್ 2', 'ಕಾಂತಾರ', 'ವಿಕ್ರಾಂತ್ ರೋಣ', 'ಜೇಮ್ಸ್' ಸಿನಿಮಾದ ಬಳಿಕ 'ಸು ಫ್ರಮ್ ಸೋ' ಸ್ಥಾನ ಪಡೆದುಕೊಂಡಿದೆ. ಇನ್ನೂ ಥಿಯೇಟರ್‌ಗಳಲ್ಲಿ ಪ್ರದರ್ಶನ ಕಾಣುತ್ತಿರುವ ಈ ಸಿನಿಮಾ ಇನ್ನೂ ಹೊಸ ದಾಖಲೆಗಳನ್ನು ಸೃಷ್ಟಿ ಮಾಡಬಹುದು.

More from Filmibeat

English summary
Raj B Shetty’s Su From So Box Office Collection Surpasses Rakshit Shetty’s 777 Charlie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X