Su From So Box Office day 34: ಗಣೇಶನ ಹಬ್ಬದಂದು ಬಾಕ್ಸಾಫೀಸ್‌ನಲ್ಲಿ ಅಬ್ಬರಿಸಿತೇ 'ಸು ಫ್ರಮ್ ಸೋ'?
'ಸು ಫ್ರಮ್ ಸೋ' ರಿಲೀಸ್ ಆಗಿ 50 ದಿನಗಳತ್ತ ಮುನ್ನುಗ್ಗುತ್ತಿದೆ. ರಾಜ್ ಬಿ ಶೆಟ್ಟಿ ನಿರ್ಮಿಸಿದ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಹೊಸ ಚರಿತ್ರೆಯನ್ನು ಬರೆದಿದೆ. ನಷ್ಟದಲ್ಲಿದ್ದ ಕನ್ನಡ ಚಿತ್ರರಂಗವನ್ನು ಮತ್ತೆ ಮೇಲಕ್ಕೆತ್ತಿದೆ. ಮತ್ತೆ ಸಿನಿಮಾ ಮಂದಿಯಲ್ಲಿ ಹೊಸ ಭರವಸೆಯನ್ನು ಮೂಡಿಸಿದೆ. ಕಳೆದ ಐದು ವಾರಗಳಿಂದ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಅಬ್ಬರಿಸಿ ಬೊಬ್ಬೆರಿಯುತ್ತಿದೆ. ಹೊಸ ಹೊಸ ದಾಖಲೆಗಳನ್ನು ಸೃಷ್ಟಿಸಿದೆ.
ಕನ್ನಡದಲ್ಲಿ ಮರೆಯಾಗಿದ್ದ ಹಾರರ್ ಕಾಮಿಡಿ ಜಾನರ್ ಅನ್ನು ಇಟ್ಟುಕೊಂಡು ಜೆಪಿ ತುಮಿನಾಡ್ ಆಕ್ಷನ್ ಕಟ್ ಹೇಳಿದ ಸಿನಿಮಾ ಈ ಮಟ್ಟಿಗೆ ಸದ್ದು ಮಾಡುತ್ತೆ ಅನ್ನೋದು ಯಾರ ಊಹೆಗೂ ಇರಲಿಲ್ಲ. ಐದು ವಾರಗಳಿಂದ ಬಾಕ್ಸಾಫೀಸ್‌ನಲ್ಲಿ ಚಿಂದಿ ಕಲೆಕ್ಷನ್ ಮಾಡಿ, ನೂರು ಕೋಟಿ ಕ್ಲಬ್‌ಗೆ ಲಗ್ಗೆ ಇಟ್ಟಿದೆ. ಈಗ 125 ಕೋಟಿ ರೂಪಾಯಿ ಕ್ಲಬ್ ಸೇರುವತ್ತ ಮುನ್ನುಗ್ಗುತ್ತಿದೆ.

ಆದರೆ, ಐದನೇ ವಾರದ ಹೊತ್ತಿಗೆ ವೀಕ್ ಡೇಸ್‌ನಲ್ಲಿ 'ಸು ಫ್ರಮ್ ಸೋ' ಬಾಕ್ಸಾಫೀಸ್ ಕಲೆಕ್ಷನ್ ಡ್ರಾಪ್ ಕಂಡಿದೆ. ಆದರೆ, ವೀಕೆಂಡ್‌ನಲ್ಲಿ ಕಲೆಕ್ಷನ್ ಜೋರಾಗಿದೆ. ಇನ್ನು ನಿನ್ನೆ (ಆಗಸ್ಟ್ 27) ಅಂದರೆ, ಗಣೇಶ್ ಹಬ್ಬದಂದೂ ಮತ್ತೆ ಕಲೆಕ್ಷನ್‌ನಲ್ಲಿ ಏರಿಕೆಯಾಗಿದೆ. ಹಾಗಿದ್ರೆ, ಗಣೇಶ ಹಬ್ಬದಲ್ಲಿ 'ಸು ಫ್ರಮ್ ಸೋ' ಸಿನಿಮಾ ಗಳಿಸಿದ್ದೆಷ್ಟು? ₹125 ಕೋಟಿ ಕ್ಲಬ್ ಸೇರುವುದಕ್ಕೆ ಇನ್ನೆಷ್ಟು ಬೇಕು?
ಗಣೇಶ್ ಹಬ್ಬದಲ್ಲಿ ಮಿಂಚಿದ 'ಸು ಫ್ರಮ್ ಸೋ'
ರಾಜ್ ಬಿ ಶೆಟ್ಟಿ ನಿರ್ಮಾಣದ 'ಸು ಫ್ರಮ್ ಸೋ' ಈಗಾಗಲೇ ಖರ್ಚು ಮಾಡಿದ್ದಕ್ಕಿಂತ 20 ಪಟ್ಟು ಹೆಚ್ಚು ಹಣವನ್ನು ಕಲೆಕ್ಷನ್ ಮಾಡಿದೆ. ಸ್ಯಾಂಡಲ್‌ವುಡ್‌ನಲ್ಲಿ 'ಸು ಫ್ರಮ್ ಸೋ' ಗಳಿಕೆಯಲ್ಲಿ ದೊಡ್ಡ ಸಾಧನೆಯನ್ನು ಮಾಡಿದೆ. 34ನೇ ದಿನ ಈ ಸಿನಿಮಾ ಕಲೆಕ್ಷನ್‌ನಲ್ಲಿ ಏರಿಕೆಯಾಗಿದೆ. ಗಣೇಶ ಹಬ್ಬದ ಸಂಭ್ರಮದಲ್ಲಿ ಜನರು ಮತ್ತೆ ಥಿಯೇಟರ್‌ಗೆ ನುಗ್ಗಿದ್ದಾರೆ. ಹಬ್ಬದ ರಜೆ 'ಸು ಫ್ರಮ್ ಸೋ ಪಾಸಿಟಿವ್ ಆಗಿ ಕನ್ವರ್ಟ್ ಆಗಿದೆ.
34ನೇ ದಿನ ಗಳಿಸಿದ್ದೆಷ್ಟು?
'ಸು ಫ್ರಮ್ ಸೋ' 34ನೇ ದಿನ ಹೆಚ್ಚು ಕಡಿಮೆ 1 ಕೋಟಿ ಆಸು ಪಾಸಿನಲ್ಲಿ ಕಲೆಕ್ಷನ್ ಆಗಿದೆ. ಸ್ಯಾಕ್ನಿಲ್ಕ್ ವರದಿ ಪ್ರಕಾರ ಗಣೇಶ ಹಬ್ಬದಂದು ಈ ಸಿನಿಮಾ ಕನ್ನಡದಲ್ಲಿ 93 ಲಕ್ಷ ರೂಪಾಯಿ ಕಲೆಕ್ಷನ್ ಮಾಡಿದೆ. ಹಾಗೇ ಮಲಯಾಳಂನಲ್ಲಿ ಎರಡು ಲಕ್ಷ ರೂಪಾಯಿ ಕಲೆಕ್ಷನ್ ಮಾಡಿದರೆ, ತೆಲುಗಿನಲ್ಲಿ ಈ ಸಿನಿಮಾ 10 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಇನ್ನೊಂದು ವೀಕೆಂಡ್‌ನಲ್ಲಿ ಕೋಟಿ ಲೆಕ್ಕದಲ್ಲಿ ಕಲೆಕ್ಷನ್ ಆದರೆ, ₹125 ಕೋಟಿ ಕಲೆಕ್ಷನ್ ಆಗಲಿದೆ.

₹125 ಕೋಟಿಗೆ ಇನ್ನೆಷ್ಟು ಬೇಕು?
'ಸು ಫ್ರಮ್ ಸೋ' ವೀಕೆಂಡ್‌ನಲ್ಲಿ ಉತ್ತಮ ಗಳಿಕೆ ಕಾಣುತ್ತಿದೆ. ಅಲ್ಲದೆ ದೊಡ್ಡ ಸಿನಿಮಾಗಳು ಸದ್ಯದಲ್ಲಿ ಯಾವುದೂ ರಿಲೀಸ್ ಆಗುತ್ತಿಲ್ಲ. ಈ ಕಾರಣಕ್ಕೆ ಈ ವೀಕೆಂಡ್‌ನಲ್ಲಿ ಭರ್ಜರಿ ಕಲೆಕ್ಷನ್ ಆಗುತ್ತೆ ಎಂದು ನಂಬಲಾಗಿದೆ. ಈ 34 ದಿನಗಳಲ್ಲಿ ಕೇವಲ ಕರ್ನಾಟಕದಲ್ಲಿ ₹80.33 ಕೋಟಿ ಗಳಿಸಿದರೆ, ಭಾರತದಲ್ಲಿ ಈ ಸಿನಿಮಾ ₹87.97 ಕೋಟಿ (Net) ಕಲೆಕ್ಷನ್ ಮಾಡಿದೆ. ಹಾಗೇ ವಿಶ್ವದಾದ್ಯಂತ ₹117 ಕೋಟಿ ಗಳಿಕೆ ಕಂಡಿದೆ.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications











