SU from So Box Office Day 17: ಬಿಡುಗಡೆಯಾದಲ್ಲಿಂದ ಇಷ್ಟೊಂದು ಕಲೆಕ್ಷನ್ ಮಾಡಿದ್ದು ಇದೇ ಮೊದಲು.. ಶನಿವಾರ ಗೊತ್ತೇ?

'ಸು ಫ್ರಮ್ ಸೋ' ಕನ್ನಡ ಚಿತ್ರರಂಗದ ಎಲ್ಲಾ ದಾಖಲೆಗಳನ್ನೂ ಉಡೀಸ್ ಮಾಡುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ. ದಿನದಿಂದ ದಿನಕ್ಕೆ ಈ ಸಿನಿಮಾ ಬಾಕ್ಸಾಫೀಸ್ ಕಲೆಕ್ಷನ್ ದುಪ್ಪಟ್ಟಾಗುತ್ತಲೇ ಇದೆ. ಅದರಲ್ಲೂ ವೀಕೆಂಡ್‌ ಕಲೆಕ್ಷನ್ ಮಾತ್ರ ಚಿಂದಿಯಾಗಿದೆ. ಮೂರನೇ ವೀಕೆಂಡ್‌ನಲ್ಲೂ ಈ ಸಿನಿಮಾ ಕರ್ನಾಟಕದಲ್ಲಿಯೇ ಅತೀ ಹೆಚ್ಚು ಕಲೆಕ್ಷನ್ ಮಾಡಿದೆ. ಮೇಲ್ನೋಟಕ್ಕೆ ರಜನಿಕಾಂತ್ 'ಕೂಲಿ'ಗೂ ಕ್ಯಾರೆ ಅನ್ನೋದಿಲ್ಲ ಅನ್ನೋ ಮುನ್ಸೂಚನೆ ಕೊಟ್ಟಿದೆ.

ರಾಜ್ ಬಿ ಶೆಟ್ಟಿ ನಿರ್ಮಾಣದ 'ಸು ಫ್ರಮ್ ಸೋ' ಕನ್ನಡದಲ್ಲಿ ಮೆಗಾ ಬ್ಲಾಕ್‌ಬಸ್ಟರ್ ಅಂತ ಈಗಾಗಲೇ ಸಾಬೀತಾಗಿದೆ. ಮೂರನೇ ವಾರವೂ ಥಿಯೇಟರ್‌ಗಳು ತುಂಬಿ ತುಳುಕುತ್ತಿವೆ. ಅಷ್ಟೇ ಅಲ್ಲದೆ ಇತ್ತೀಚೆಗೆ ತೆಲುಗು ಭಾಷೆಗೆ ಡಬ್ ಆಗಿ ಕೂಡ ರಿಲೀಸ್ ಆಗಿತ್ತು. ಅವರಿಗೂ ಈ ಸಿನಿಮಾ ಸಿಕ್ಕಾಪಟ್ಟೆ ಇಷ್ಟ ಆಗಿದೆ. ತೆಲುಗು ಹಾಗೂ ಮಲಯಾಳಂ ಎರಡೂ ಭಾಷೆಯಲ್ಲಿಯೂ ದಿನದಿಂದ ದಿನಕ್ಕೆ ಕಲೆಕ್ಷನ್ ಏರಿಕೆಯಾಗುತ್ತಿದೆ.

Raj B Shetty s Su from So Kannada film day 17 box office collection all time high Here is the report

ಮೂರನೇ ವೀಕೆಂಡ್‌ನಲ್ಲಿ 'ಸು ಫ್ರಮ್ ಸೋ' ಕಲೆಕ್ಷನ್ ನೋಡಿ ಸಿನಿಮಾ ಮಂದಿನೇ ಬೆಚ್ಚಿ ಬಿದ್ದಿದ್ದಾರೆ. ಅದರಲ್ಲೂ ಶನಿವಾರ ಹಾಗೂ ಭಾನುವಾರ ಎರಡೂ ದಿನವೂ ಥಿಯೇಟರ್‌ಗಳು ತುಂಬಿ ತುಳುಕಿವೆ. ಹಾಗಿದ್ದರೆ, ಕನ್ನಡ, ಮಲಯಾಳಂ ಹಾಗೂ ತೆಲುಗು ಭಾಷೆಯಿಂದ ಈ ಸಿನಿಮಾ ಗಳಿಸಿದ್ದೆಷ್ಟು? ಅನ್ನೋದನ್ನು ನೋಡುವುದಕ್ಕೆ ಮುಂದೆ ಓದಿ.

17ನೇ ದಿನ ₹6.50 ಕೋಟಿ ಕಲೆಕ್ಷನ್

ಜೆಪಿ ತುಮಿನಾಡ್ ನಿರ್ದೇಶಿಸಿದ ಈ ಸಿನಿಮಾ 17ನೇ ದಿನದ ಕಲೆಕ್ಷನ್ ಎಲ್ಲರನ್ನು ಬೆಚ್ಚಿಬೀಳಿಸಿದೆ. ಸ್ಯಾಕ್ನಿಲ್ಕ್ ಪ್ರಕಾರ ಈ ಸಿನಿಮಾ 17ನೇ ದಿನ (ಆಗಸ್ಟ್ 10) ಅಂದರೆ, ಮೂರನೇ ಭಾನುವಾರ ಮೂರು ಭಾಷೆಗಳಿಂದ ಬರೋಬ್ಬರಿ 6.50 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಈ ಮೂರು ಭಾಷೆಯಲ್ಲಿ ಕನ್ನಡದ್ದೇ ಸಿಂಹಪಾಲು ಅನ್ನೋದು ಮತ್ತೊಂದು ವಿಶೇಷ.

17ನೇ ದಿನದ ಕಲೆಕ್ಷನ್

ಕನ್ನಡ ವರ್ಷನ್ ₹5.10 ಕೋಟಿ (ಅಂದಾಜು)
ಮಲಯಾಳಂ ವರ್ಷನ್ ₹1.10 ಕೋಟಿ (ಅಂದಾಜು)
ತೆಲುಗು ವರ್ಷನ್ ₹0.30 ಕೋಟಿ (ಅಂದಾಜು)
ಒಟ್ಟು ₹6.50 ಕೋಟಿ (ಅಂದಾಜು)


17 ದಿನಗಳ ಒಟ್ಟು ಕಲೆಕ್ಷನ್ ಎಷ್ಟು?

ರಜನಿಕಾಂತ್ 'ಕೂಲಿ'ಯನ್ನು ಮೀರಿಸಿ ಮುಂದಕ್ಕೆ ಹೋದರೆ, 'ಸು ಫ್ರಮ್ ಸೋ' ಬಾಕ್ಸಾಫೀಸ್ ಅಲ್ಲಾಡಿಸೋದು ಗ್ಯಾರಂಟಿ. ಅದರಲ್ಲೂ 'ಕೂಲಿ' ಕ್ರೇಜ್ ಮಧ್ಯೆ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ದಿನದಿಂದ ದಿನಕ್ಕೆ ಹೆಚ್ಚು ಕಲೆಕ್ಷನ್ ಮಾಡುತ್ತಾ ಮುನ್ನುಗ್ಗುತ್ತಿದೆ. ಈ 17 ದಿನಗಳ ಕಲೆಕ್ಷನ್ ಎಷ್ಟು ಅನ್ನೋದನ್ನು ನೋಡುವುದಾರೇ,

17 ದಿನಗಳ ಕಲೆಕ್ಷನ್

ಮೊದಲ ದಿನ ₹0.78 ಕೋಟಿ
2ನೇ ದಿನ ₹2.17 ಕೋಟಿ
3ನೇ ದಿನ ₹3.50 ಕೋಟಿ
4ನೇ ದಿನ ₹3.05 ಕೋಟಿ
5ನೇ ದಿನ ₹3.40 ಕೋಟಿ
6ನೇ ದಿನ ₹3.50 ಕೋಟಿ
7ನೇ ದಿನ ₹3.75 ಕೋಟಿ
8ನೇ ದಿನ ₹3.80 ಕೋಟಿ (ಕನ್ನಡ ₹3.7 ಕೋಟಿ+ ಮಲಯಾಳಂ ₹0.05 ಕೋಟಿ)
9ನೇ ದಿನ ₹5.40 ಕೋಟಿ (ಕನ್ನಡ ₹5.2 ಕೋಟಿ+ ಮಲಯಾಳಂ ₹0.20 ಕೋಟಿ)
10ನೇ ದಿನ ₹6.55 ಕೋಟಿ (ಕನ್ನಡ ₹6.15 ಕೋಟಿ+ ಮಲಯಾಳಂ ₹0.40 ಕೋಟಿ)
11ನೇ ದಿನ ₹3.70 ಕೋಟಿ (ಕನ್ನಡ ₹3.30 ಕೋಟಿ+ ಮಲಯಾಳಂ ₹0.20 ಕೋಟಿ)
12ನೇ ದಿನ ₹3.40 ಕೋಟಿ (ಕನ್ನಡ ₹3.00 ಕೋಟಿ+ ಮಲಯಾಳಂ ₹0.40 ಕೋಟಿ)
13ನೇ ದಿನ ₹2.80 ಕೋಟಿ (ಕನ್ನಡ ₹2.40 ಕೋಟಿ+ ಮಲಯಾಳಂ ₹0.40 ಕೋಟಿ)
14ನೇ ದಿನ ₹2.25 ಕೋಟಿ (ಕನ್ನಡ ₹1.85 ಕೋಟಿ+ ಮಲಯಾಳಂ ₹0.40 ಕೋಟಿ)
15ನೇ ದಿನ ₹3.10 ಕೋಟಿ (ಕನ್ನಡ ₹2.55 ಕೋಟಿ+ ಮಲಯಾಳಂ ₹0.40 ಕೋಟಿ+ ತೆಲುಗು 0.15 ಕೋಟಿ)
16ನೇ ದಿನ ₹6.00 ಕೋಟಿ (ಕನ್ನಡ ₹4.95 ಕೋಟಿ+ ಮಲಯಾಳಂ ₹0.80 ಕೋಟಿ+ ತೆಲುಗು 0.25 ಕೋಟಿ)
17ನೇ ದಿನ ₹6.50 ಕೋಟಿ

ಒಟ್ಟು ₹63.65 ಕೋಟಿ

Raj B Shetty s Su from So Kannada film day 17 box office collection all time high Here is the report

ವೀಕ್‌ಡೇಸ್‌ನಲ್ಲೂ ಹೀಗೆ ಇರುತ್ತಾ ಕಲೆಕ್ಷನ್?

'ಸು ಪ್ರಮ್ ಸೋ' ಮೂರನೇ ಸೋಮವಾರಕ್ಕೆ ಕಾಲಿಟ್ಟಿದೆ. ಒಂದು ವೇಳೆ ಇಂದು (ಆಗಸ್ಟ್ 11) ಕೂಡ ಬಾಕ್ಸಾಫೀಸ್ ಕಲೆಕ್ಷನ್ ಹೀಗೆ ಮುಂದುವರೆದರೆ, ಯಾವ ಸಿನಿಮಾ ಬಂದರೂ 'ಸು ಫ್ರಮ್ ಸೋ' ಮುನ್ನುಗೋದು ಗ್ಯಾರಂಟಿ. ಕನ್ನಡದ ಜೊತೆಗೆ ಮಲಯಾಳಂ ಹಾಗೂ ತೆಲುಗು ಭಾಷೆಯಲ್ಲೂ ನಿಧಾನವಾಗಿ ಕಲೆಕ್ಷನ್ ಏರಿಕೆಯಾಗುತ್ತಿದೆ.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

More from Filmibeat

English summary
Raj B Shetty's Su from So Kannada film day 17 box office collection all time high. Here is the report.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X