Coolie Box Office Day 1: ಮೊದಲ ದಿನವೇ ರಜನಿ ಕರಿಯರ್ ರೆಕಾರ್ಡ್ ಬ್ರೇಕ್ ಮಾಡಿತೇ 'ಕೂಲಿ'?

ತಮಿಳು ಚಿತ್ರರಂಗದ ಹ್ಯಾಪನಿಂಗ್ ಡೈರೆಕ್ಟರ್ ಲೋಕೇಶ್ ಕನಕರಾಜ್ ಒಂದ್ಕಡೆ. ಸೂಪರ್‌ಸ್ಟಾರ್‌ ರಜನಿಕಾಂತ್‌ ಇನ್ನೊಂದು ಕಡೆ. ಇಬ್ಬರ ಕಾಂಬಿನೇಷನ್ ಅಂದ್ಮೇಲೆ 'ಕೂಲಿ' ಸಿನಿಮಾದ ಬಗ್ಗೆ ಕ್ರೇಜ್‌ ಹುಟ್ಟಿಕೊಂಡಿಲ್ಲ ಅಂದರೆ ಹೇಗೆ? ಫಸ್ಟ್ ಡೇ ತಲೈವಾ ಸಿನಿಮಾ ನೋಡುವುದಕ್ಕೆ ಜನರು ಮುಗಿಬಿದ್ದಿದ್ದರು. ವಿಶ್ವದಾದ್ಯಂತ 'ಕೂಲಿ' ಭರ್ಜರಿ ಕಲೆಕ್ಷನ್ ಆಗುತ್ತೆ ಅನ್ನೋದು ಬಿಡುಗಡೆಗೂ ಮುನ್ನವೇ ತಿಳಿದಿತ್ತು. ಆದ್ರೀಗ ಕಲೆಕ್ಷನ್ ಎಷ್ಟು ಅನ್ನೋ ಅಂದಾಜು ಲೆಕ್ಕ ಸಿಕ್ಕಿದೆ.

ಸ್ವಾತಂತ್ರ್ಯ ದಿನಾಚರಣೆಗೂ ಒಂದು ದಿನ ಮುನ್ನ ರಿಲೀಸ್ ಆಗಿರುವ 'ಕೂಲಿ' ಬಾಕ್ಸಾಫೀಸ್ ಕಿಕ್ ಜೋರಾಗಿಯೇ ಇದೆ. ಇದರೊಟ್ಟಿಗೆ ಬಾಲಿವುಡ್ ಹ್ಯಾಂಡ್‌ಸಮ್ ಹಂಕ್ ಹೃತಿಕ್ ರೋಷನ್ ಹಾಗೂ ಯಂಗ್ ಟೈಗರ್ ಜೂನಿಯರ್ ಎನ್‌ಟಿಆರ್ ಕಾಂಬಿನೇಷನ್ ಸಿನಿಮಾ 'ವಾರ್ 2' ಕೂಡ ರಿಲೀಸ್ ಆಗಿದೆ. ಈ ಎರಡು ಸಿನಿಮಾಗಳಲ್ಲಿ ಯಾವ ಸಿನಿಮಾ ಬಾಕ್ಸಾಫೀಸ್ ಕ್ಲಾಶ್‌ನಲ್ಲಿ ಗೆಲ್ಲುತ್ತೆ ಅನ್ನೋದನ್ನು ಎದುರು ನೋಡುತ್ತಿದ್ದರು. ಅದಕ್ಕೀಗ ಉತ್ತರ ಸಿಕ್ಕಿದೆ.

Rajinikanth Lokesh Kanagaraj movie Coolie Box Office Collection Day 1 Record-Breaking Opening report

ಫಸ್ಟ್ ಬಾಕ್ಸಾಫೀಸ್ ಕದನದಲ್ಲಿ 'ವಾರ್ 2' ಅನ್ನು ನಿರೀಕ್ಷೆಯಂತೆ ರಜನಿಕಾಂತ್ ಸಿನಿಮಾ ಹಿಂದಿಕ್ಕಿದೆ. ಸ್ಯಾಕ್ನಿಲ್ಕ್ ಅಂದಾಜು ಲೆಕ್ಕಾಚಾರವೇ ದೊಡ್ಡ ಮೊತ್ತದೆಡೆ ಸಾಗಿದೆ. ಇದು ರಜನಿಕಾಂತ್ ವೃತ್ತಿ ಬದುಕಿನಲ್ಲೇ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ ಅಂತ ಹೇಳಲಾಗುತ್ತಿದೆ. ಹಾಗಿದ್ದರೆ, 'ಕೂಲಿ' ಫಸ್ಟ್ ಡೇ (early estimates) ಅಂದಾಜು ಕಲೆಕ್ಷನ್ ಎಷ್ಟು? ಎಲ್ಲೆಲ್ಲಿ ಎಷ್ಟೆಷ್ಟು ಆಕ್ಯೂಪೆನ್ಸಿ ಇತ್ತು. ಅನ್ನೋದನ್ನು ತಿಳಿಯುವುದಕ್ಕೆ ಮುಂದೆ ಓದಿ.

'ಕೂಲಿ' ಫಸ್ಟ್ ಡೇ ಕಲೆಕ್ಷನ್ ಎಷ್ಟು?

ರಜನಿಕಾಂತ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಮತ್ತೊಂದು ಮಲ್ಟಿಸ್ಟಾರರ್ ಸಿನಿಮಾ 'ಕೂಲಿ' ಮೊದಲ ದಿನದ ಉತ್ತಮ ಕಲೆಕ್ಷನ್ ಆಗಿದೆ. 'ಕೂಲಿ' ನಿರೀಕ್ಷೆ ಮಾಡಿದಂತೆ ಬಾಕ್ಸಾಫೀಸ್‌ನಲ್ಲಿ ಆರಾಮಾಗಿ ₹50 ಕೋಟಿ ದಾಟಿದೆ. ಸ್ಯಾಕ್ನಿಲ್ಕ್ ಪ್ರಕಾರ, ರಜನಿ ಸಿನಿಮಾ ಮೊದಲ ದಿನ ₹65 ಕೋಟಿ ಕಲೆಕ್ಷನ್ ಮಾಡಿದೆ. ಇದು ಪ್ರಾಥಮಿಕ ಲೆಕ್ಕಾಚಾರ ಅಷ್ಟೇ. ಈ ಗಳಿಕೆಯಲ್ಲಿ ಇನ್ನೂ ಏರಿಕೆಯಾಗಬಹುದು. ಒಂದು ಅಂದಾಜಿನ ಪ್ರಕಾರ ಕೂಲಿ ₹68 ಕೋಟಿಯಿಂದ ₹70 ಕೋಟಿ ದಾಟಬಹುದೆಂದು ಅಂದಾಜಿಸಲಾಗಿದೆ.

Rajinikanth Lokesh Kanagaraj movie Coolie Box Office Collection Day 1 Record-Breaking Opening report

ರಜನಿ ಬಿಗ್ ಓಪನಿಂಗ್ ಸಿಕ್ಕ ಸಿನಿಮಾ?

ಒಂದು ಲೆಕ್ಕಾಚಾರದ ಪ್ರಕಾರ, 'ಕೂಲಿ' ಮೊದಲ ದಿನದ ಕಲೆಕ್ಷನ್ ರಜನಿಕಾಂತ್ ವೃತ್ತಿ ಬದುಕಿನಲ್ಲೇ ಅತೀ ದೊಡ್ಡ ಓಪನಿಂಗ್ ಪಡೆದುಕೊಂಡ ಸಿನಿಮಾ. ಈ ಹಿಂದೆ ರಜನಿಕಾಂತ್ ನಟಿಸಿದ '2.0' ಬಾಕ್ಸಾಫೀಸ್‌ನಲ್ಲಿ ಮೊದಲ ದಿನ ₹60.25 ಕೋಟಿ ಕಲೆಕ್ಷನ್ ಮಾಡಿತ್ತು. ಅದನ್ನು ರಜನಿಕಾಂತ್ 'ಕೂಲಿ' ಮೂಲಕ ದೂಳೀಪಟ ಮಾಡಿದ್ದಾರೆ. ಇನ್ನೂ ಓವರ್‌ಸೀಸ್ ಕಲೆಕ್ಷನ್ ಬಗ್ಗೆ ಮಾಹಿತಿ ಹೊರಬೀಳಬೇಕಿದೆ. ಒಂದು ಲೆಕ್ಕಾಚಾರದ ಪ್ರಕಾರ ₹85 ಕೋಟಿಯಿಂದ ₹90 ಕೋಟಿವರೆಗೂ ಕಲೆಕ್ಷನ್ ಆಗಿರಬಹುದೆಂದು ಹೇಳಲಾಗುತ್ತಿದೆ.

ಎಲ್ಲೆಲ್ಲಿ ಹೇಗಿತ್ತು ರೆಸ್ಪಾನ್ಸ್?

ರಜನಿಕಾಂತ್ ಜೊತೆ ನಾಗಾರ್ಜುನ ಖಳನಾಯಕನಾಗಿ ನಟಿಸಿದ್ದರೆ, ಆಮಿರ್ ಖಾನ್, ಉಪೇಂದ್ರ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹೀಗಾಗಿ ಭಾರತದಾದ್ಯಂತ ಸೂಪರ್ ಓಪನಿಂಗ್ ಸಿಕ್ಕಿದೆ. ತಮಿಳುನಾಡಿನ ಚೆನ್ನೈ, ಮಧುರೈ, ಕೊಯಮತ್ತೂರು, ಪಾಂಡಿಚೇರಿ, ವೆಲ್ಲೂರು, ದಂಡಿಗಲ್, ಸೇಲಂ ಏರಿಯಾಗಳಲ್ಲಿ ಶೇ.89ಕ್ಕಿಂತಲೂ ಹೆಚ್ಚು ಆಕ್ಯೂಪೆನ್ಸಿ ಇತ್ತು. ಬೆಂಗಳೂರು ಶೇ.97ರಷ್ಟು ಅಕ್ಯೂಪೆನ್ಸಿ ಇತ್ತು.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X